ಮದುವೆಯೇ ಮುರಿದುಬಿತ್ತು ಆದರೆ ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡಿಲ್ಲ: ವೈಷ್ಣವಿ ಗೌಡ
ಪ್ರೀತಿ ಹಾಗೂ ಸಂಬಂಧಗಳ ಮೇಲೆ ನಂಬಿಕೆ ಹೆಚ್ಚಾಗಿದೆ. ಮತ್ತೊಮ್ಮೆ ಮುರಿದು ಬಿದ್ದ ಸಂಬಂಧದ ಬಗ್ಗೆ ಸ್ಪಷ್ಟನೆ ಕೊಟ್ಟ ಕಿರುತೆರೆ ನಟಿ ವೈಷ್ಣವಿ...
2022ರ ನವೆಂಬರ್‌ನಲ್ಲಿ ಕಿರುತೆರೆ ನಟಿ ವೈಷ್ಣವಿ ಗೌಡ ಮದುಮಗಳಂತೆ ಅಲಂಕಾರ ಮಾಡಿಕೊಂಡು ಹುಡುಗನ ಪಕ್ಕ ನಿಂತುಕೊಂಡು ಕ್ಯಾಮೆರಾಗೆ ನಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಇದು ಲವ್ ಮ್ಯಾರೇಜ್ ಇಲ್ಲ ಇಲ್ಲ ಅರೇಜ್ಡ್ ಎಂದು ಏನ್ ಏನೋ ಗಾಸಿಪ್ ಹಬ್ಬಿತ್ತು. ಮಾಧ್ಯಮ ಸ್ನೇಹಿತರನ್ನು ಕರೆಸಿ ವೈಷ್ಣವಿ ತಂದೆ ತಾಯಿ ಸ್ಪಷ್ಟನೆ ಕೊಟ್ಟರು. ಅದಾದ ಮೇಲೆ ಸಿನಿಮಾ ಮತ್ತು ಯುಟ್ಯೂಬ್ ಕೆಲಸಗಳಲ್ಲಿ ವೈಷ್ಣವಿ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟರು.
ಘಟನೆ ನಡೆದು ತಿಂಗಳು ಕಳೆದರೂ ವೈಷ್ಣವಿ ಸ್ಪಷ್ಟನೆ ಕೊಡುತ್ತಲೇ ಇದ್ದಾರೆ. 'ನಮ್ಮ ಕುಟುಂಬಕ್ಕೆ ಅದೊಂದು ಕಷ್ಟದ ಸಮಯ' ಎಂದು ವೈಷ್ಣವಿ ಹೇಳಿದ್ದರು. 'ನನ್ನ ತಾಯಿ ಆ ಮದುವೆ ಸಂಬಂಧವನ್ನು ಮುಂದೆ ತಂದಿಟ್ಟರು.ಕೆಲವು ದಿನಗಳಲ್ಲಿ ಏನ್ ಏನೋ ಸತ್ಯಗಳು ತಿಳಿದು ಬಂದು ಕೊನೆಗೆ ಸಂಬಂಧ ಮುರಿದು ಬಿತ್ತು. ನಮ್ಮಲ್ಲಿ ಈ ಮದುವೆ ಸಂಬಂಧ ಮಾತುಕಥೆ ಇದೆ ಎಂದುಕೊಂಡೆವು ಆದರೆ ಇಷ್ಟರ ಮಟ್ಟಕ್ಕೆ ದೊಡ್ಡದಾಗಿ ನಾವು ಕಲ್ಪನೆ ಮಾಡಿಕೊಳ್ಳದ ರೀತಿಯಲ್ಲಿ ತಿರುವುದು ಪಡೆದುಕೊಂಡಿತ್ತು. ಹೊರಗಿರುವ ಕ್ಯಾಮೆರಾ ವ್ಯಕ್ತಿಗಳ ಜೊತೆ ಡೇಲ್ ಮಾಡಿಕೊಳ್ಳುವುದು ತುಂಬಾ ದೊಡ್ಡ ಕೆಲಸ ಆಗಿತ್ತು.ಸದ್ಯ ಸಮಯ ಮುಂದೆ ಸಾಗಿದೆ' ಎಂದು ವೈಷ್ಣವಿ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಪಬ್ಲಿಕ್‌ನಲ್ಲಿ ನಾನು ಗುರುತಿಸಿಕೊಂಡಾಗ ನನ್ನ ಕುಟುಂಬ ಕೂಡ ಜನರ ಗಮನಕ್ಕೆ ಸಿಲುಕಿಕೊಂಡಿತ್ತು. ನನ್ನ ಕೈಯಲ್ಲಿ ಏನೂ ಇರಲಿಲ್ಲ. ಹೀಗಾಗಿ ಸುಮ್ಮನಿದ್ದು ಕೂಲ್ ಆಗಿ ಮ್ಯಾನೇಜ್ ಮಾಡಿದ್ದೀವಿ' ಎಂದಿದ್ದಾರೆ ವೈಷ್ಣವಿ.
ಈ ವಯಸ್ಸಲ್ಲಿ ನಿಮ್ಮ ಸಾಧನೆಗೆ ಹೆಮ್ಮೆ ಆಗುತ್ತೆ; ಕಾನೂನು ಪದವಿ ಪಡೆದ ತಾಯಿಗೆ ವೈಷ್ಣವಿ ಗೌಡ ಮೆಚ್ಚುಗೆ
'ಏನೇ ಆಗಿದ್ದರು ಒಳ್ಳೆಯದಕ್ಕೆ ಆಗಿದೆ. ಆ ಸಂಬಂಧ ಮುರಿದು ಬಿತ್ತು ಎಂದು ನಾನು ಬೇಸರ ಮಾಡಿಕೊಂಡಿಲ್ಲ. ಇನ್ನು ಸಂಬಂಧಗಳ ಮೇಲೆ ನಂಬಿಕೆ ಹೆಚ್ಚಾಗಿದೆ.ಈ ರೀತಿ ಘಟನೆಗಳಿಂದ ನನ್ನ ಮನಸ್ಸು ಬದಲಾಗುವುದಿಲ್ಲ' ಎಂದು ವೈಷ್ಣವಿ ಹೇಳಿದ್ದಾರೆ.
'ನನ್ನ ಪರ್ಸನಲ್ ವಿಚಾರವನ್ನು ನೀವೆಲ್ಲರೂ ನ್ಯೂಸ್‌ನಲ್ಲಿ ನೋಡಿದ್ದೀರಿ. ಕೆಲವೊಂದು ವಿಚಾರಗಳನ್ನು ನಾನು ಮಾತನಾಡಬೇಕಿತ್ತು. ಕ್ಲಾರಿಟಿ ಅಂತ ಹೇಳೋಕೆ ಆಗಲ್ಲ ಒಂದಷ್ಟು ವಿಚಾರಗಳನ್ನ ಅಡ್ರೆಸ್ ಮಾಡಬೇಕಿತ್ತು. ಈ ವಿಡಿಯೋ ಮಾಡ್ಬೇಕಾ ಬೇಡ ಅಂತ ನಾನು ಯೊಚನೆ ಮಾಡುತ್ತಿದ್ದೆ ಏಕೆಂದರೆ ಮುಗಿದು ಹೋಗಿದೆ ನಾನು ಮತ್ತೆ ಅದರ ಬಗ್ಗೆ ಮಾತನಾಡಿದಂತೆ ಇರುತ್ತೆ ಅಂತ. ಏನೇ ಇರಲಿ ಕೆಲವೊಂದು ವಿಚಾರಗಳನ್ನು ಅಡ್ರೆಸ್ ಮಾಡಲೇ ಬೇಕು' ಎಂದು ತಮ್ಮ ಯುಟ್ಯೂಬ್ ಚಾನೆಲ್ ಮೂಲಕವೂ ಸ್ಪಷ್ಟನೆ ಕೊಟ್ಟರು.
ಜನವರಿಯಲ್ಲಿ ನಿಶ್ಚಿತಾರ್ಥ, ಮಾರ್ಚ್‌ನಲ್ಲಿ ಮದುವೆ ನಡೆಯಬೇಕಿತ್ತು: ವೈಷ್ಣವಿ- ವಿದ್ಯಾಭರಣ್ ಬಗ್ಗೆ ತಂದೆ ಕ್ಲಾರಿಟಿ
'ಜೀವನದಲ್ಲಿ ನಾನು ಖುಷಿಯಾಗಿರುವೆ. ಜೀವನಕ್ಕೆ ಗೊತ್ತು ಅನಿಸುತ್ತದೆ ಏನು ಕೊಡಬೇಕು ಏನು ಕೊಡಬಾರದು, ಏನ್ ಮಾಡ್ಬೇಕು ಏನ್ ಮಾಡ್ಬಾರದು ಅಂತ. ಜೀವನ ನಮಗಿಂತ ಇಂಟಲಿಜೆಂಟ್ ಯಾವಾಗಲೂ ಸರಿ ದಾರಿಗೆ ಕರೆದುಕೊಂಡು ಹೋಗುತ್ತದೆ ಯಾವುದೇ ರೀತಿಯಲ್ಲಿ ಕೆಟ್ಟದನ್ನು ಬಯಸುವುದಿಲ್ಲ. ನನ್ನ ಜೀವನದ ಮೇಲೆ ನನಗೆ ಹೆಚ್ಚಿನ ನಂಬಿಕೆ ಇದೆ. ಇನ್ನೊಂದು ವಿಚಾರ ಹೇಳಬೇಕು ಮದುವೆ ಈಗಲ್ಲೂ ನನ್ನ ಬಿಗ್ ಡ್ರೀಮ್. ಯಾವ ಕಾರಣಕ್ಕೂ give up ಮಾಡುವುದಿಲ್ಲ. ನಾನಾ ಜೀವನನಾ ಅಂತ ನೋಡೇ ಬಿಡುತ್ತೀನಿ ನನ್ನ ಕನಸು ನನಸು ಮಾಡೇ ಮಾಡ್ತೀನಿ. ಈ ಸಮಯದಲ್ಲಿ ನನ್ನ ಪರ ಇದ್ದವರೆಗೆ ಥ್ಯಾಂಕ್ಸ್. ಸ್ವಲ್ಪ ದಿನಗಳಲ್ಲಿ ನನ್ನ ಕೆಲಸ ಶುರುವಾಗಲಿದೆ. ನನ್ನ ಹೊಸ ಸೀರಿಯಲ್ ಶುರುವಾಗಲಿದೆ, ಯೂಟ್ಯೂಬ್‌ನಲ್ಲಿ ಹೊಸ ವೀಡಿಯೋಗಳು ಅಪ್ಲೋಡ್ ಆಗುತ್ತೆ. ನನ್ನ ಕೆಲಸದ ಮೂಲಕ ಎಲ್ಲರನ್ನು ಮನೋರಂಜಿಸುತ್ತೀನಿ.