Asianet Suvarna News Asianet Suvarna News

ತುಕಾಲಿ ಸಂತೋಷ್, ಸಿರಿ ಸೇವ್ ಮಾಡಿದ್ದೇ ತಪ್ಪಾಯ್ತು; ಪವಿ ಪೂವಯ್ಯ

ಜಿಯೊ ಸಿನಿಮಾ ಫನ್ ಫ್ರೈಡೆ: ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್ ಎರಡು ಇತ್ತು. ನನಗೆ ಈ ಸಲ ಆಡಿರುವ ಕಾಟನ್ ಟಾಸ್ಕ್ ತುಂಬ ಮಜವಾಗಿತ್ತು. ಟಾಪ್‌2ದಲ್ಲಿಯೂ ಇದ್ದೆ. 

I saved Siri and tukali Santhosh is the mistake says Pavi Poovappa in jiocinemas interview srb
Author
First Published Dec 18, 2023, 1:41 PM IST

ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದ ಪವಿ ಪೂವಪ್ಪ ಅವರ ಮೇಲಿನ ನಿರೀಕ್ಷೆಗಳೂ ಜಾಸ್ತಿಯೇ ಇದ್ದವು. ಹಳೆಯ ಎಪಿಸೋಡ್‌ಗಳನ್ನು ನೋಡಿಕೊಂಡು, ಸದಸ್ಯರ ವರ್ತನೆಗಳನ್ನು ಅರಿತುಕೊಂಡು ಲೆಕ್ಕಾಚಾರ ಮಾಡಿ ಆಡುವ ಅವಕಾಶ ಇರುವುದರಿಂದ ಅವರಿಂದ ಮನೆಯ ಪರಿಸ್ಥಿತಿಯೇ ಬದಲಾಗುತ್ತದೆ ಎಂದುಕೊಳ್ಳಲಾಗಿತ್ತು. ಆದರೆ ಮನೆಯೊಳಗೆ ಪವಿತ್ರಾ ಅಂದುಕೊಂಡಷ್ಟೇನೂ ಸದ್ದು ಮಾಡಲಿಲ್ಲ. ಒಂದು ವಾರ ಉತ್ತಮ ಪಡೆದುಕೊಂಡು ಇನ್ನೊಂದು ವಾರ ಜೈಲುಶಿಕ್ಷೆಯನ್ನೂ ಅನುಭವಿಸಿದ್ದು ಅವರ ಆಟದ ಏರಿಳಿತವನ್ನು ಸೂಚಿಸುವಂತಿದೆ. 

ಒಳಗೆ ಹೋಗಿ ಮೂರೇ ವಾರಕ್ಕೆ ಮರಳಿ ಬಂದಿರುವ ಅವರು ಮನೆಯಿಂದ ಹೊರಬಿದ್ದಿದ್ದೇ JioCinemaಗೆ ಎಕ್ಸ್‌ಕ್ಲ್ಯೂಸಿವ್ ಸಂದರ್ಶನ ನೀಡಿದ್ದಾರೆ. ಮೂರು ವಾರಗಳ ಪುಟ್ಟ ಜರ್ನಿಯ ಕುರಿತು ಅವರು ಹಂಚಿಕೊಂಡ ಅಭಿಪ್ರಾಯಗಳು ಇಲ್ಲಿವೆ. ‘ನಾನು ಪವಿ ಪೂವಪ್ಪ. ಈವಾಗ ಜಸ್ಟ್ ಬಿಗ್‌ಬಾಸ್‌ ಸೀಸನ್‌ 10 ಮನೆಯಿಂದ ಹೊರಗೆ ಬಂದಿದ್ದೇನೆ. 
ಸಣ್ಣ ಸುಳಿವು ಇತ್ತು: ಮನೆಯಿಂದ ಹೊರಬರುವ ನಿರೀಕ್ಷೆ ಸಣ್ಣದಾಗಿ ಇತ್ತು. ಆದರೆ ಖಚಿತವಾಗಿ ಗೊತ್ತಿರಲಿಲ್ಲ. 80% ಹೊರಗೆ ಬರಬಹುದು ಅಂದುಕೊಂಡಿದ್ದೆ. 

ಎಲ್ಲರೂ ನನ್ನ ಟಾರ್ಗೆಟ್ ಮಾಡುತ್ತಿರುವುದನ್ನು ನೋಡಿ, ಈ ವಾರ ಹೊಗಬಹುದು ಅಂದುಕೊಂಡಿದ್ದೆ. ಈ ವಾರ ನಾನು ಸ್ವಲ್ಪ ಲ್ಯಾಕ್ ಆದೆ. ಸ್ವಲ್ಪ ಕಮ್ಮಿ ಪ್ರಯತ್ನಪಟ್ಟಿದ್ದೂ ಇದಕ್ಕೆ ಕಾರಣವಾಯ್ತು. ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಾಗ ಸಡನ್‌ ಆಗಿ ಯಾರನ್ನೂ ಫ್ರೆಂಡ್ಸ್ ಮಾಡ್ಕೊಂಡಿಲ್ಲ. ಎಲ್ಲರ ಜೊತೆಗೂ ಚೆನ್ನಾಗೇ ಇದ್ದೆ. ಒಂದು ಸೆಟ್‌ ಆಫ್‌ ಪೀಪಲ್‌, ನನಗೆ ಕಂಪರ್ಟಬಲ್ ಅನಿಸಿದ್ರು. ಹಾಗಾಗಿ ಅವರ ಜೊತೆಗೆ ಚೆನ್ನಾಗಿದ್ದೆ. ಸಂಗೀತಾ, ಕಾರ್ತಿಕ್ ತಂಡ ನನ್ನನ್ನು ಟಾರ್ಗೆಟ್ ಮಾಡುತ್ತಿದ್ರು. ಅವಿನಾಶ್‌ ಅವರನ್ನು ಅವರ ಕಡೆ ಎಳ್ಕೊಂಡು, ವಿನಯ್ ತಂಡದಲ್ಲಿದ್ದೀನಿ ಅಂದ್ಕೊಂಡು ನನ್ನ ಮೇಲೆ ಟಾರ್ಗೆಟ್ ಮಾಡ್ಕೊಂಡು ಬಂದ್ರು. ವಿನಯ್ ಮೇಲಿರುವ ಕೋಪಕ್ಕೆ ನಾನು ಬಲಿಯಾದೆ ಅನಿಸುತ್ತದೆ.

ರಕ್ಕಸ-ಗಂಧರ್ವರ ಬಗ್ಗೆ: ಮೊದಲು ರಾಕ್ಷಸರು ಸಂಗೀತಾ ತಂಡದವರಾಗಿದ್ದರು. ಆಗ ಅವರು ಹೇಳಿದ್ದೆಲ್ಲವನ್ನೂ ನಾವು ಕೇಳಿದ್ದೆವು. ಆದರೆ ನಂತರ ನಾವು ರಕ್ಕಸರಾದಾಗ ಅವರು ನಮ್ಮ ಯಾವ ಮಾತನ್ನೂ ಕೇಳಲಿಲ್ಲ. ಅದರಿಂದ ನಾವು ಪ್ರವೋಕ್ ಆಗುವ ಹಾಗಾಯ್ತು. ನನಗೆ ನೀರು ಹಾಕಬೇಕಾದರೂ, ‘ನನಗೆ ಉಸಿರಾಡಲು ಆಗುತ್ತಿಲ್ಲ’ ಎಂದು ಹೇಳುತ್ತಿದ್ದೆ. ಆದರೆ ಕಾರ್ತಿಕ್, ಸಂಗೀತಾ ಮತ್ತು ತನಿಷಾ ಮೂವರೂ ನನಗೆ ಉಸಿರಾಡಲೂ ಅವಕಾಶ ಕೊಡದ ಹಾಗೆ ನೀರು ಎರೆಚಿದರು. ಅದು ಸ್ವಲ್ಪ ಕೋಪ ಇತ್ತು. ಮರುದಿನ ಆ ಟಾಸ್ಕ್ ಮತ್ತೆ ಬಂದಾಗ, ಅವರಿಗೂ ಆ ಪೇನ್ ಗೊತ್ತಾಗ್ಲಿ ಎಂದು ನಾನು ಅವರಿಗೆ ಎರೆಚಿದೆವು. ಅವರಿಗೆ ಹದಿನೈದು ನಿಮಿಷವೂ ಮಾಡಲು ಸಾಧ್ಯವಾಗಲಿಲ್ಲ. ನಾನು ಎರಡು ತಾಸು ಕೂತ್ತಿದ್ದೆ. ಸಂಗೀತಾ ಮತ್ತು ಕಾರ್ತಿಕ್‌ಗೆ ತೊಂದರೆಯಾಯ್ತು. ಅದರ ಬಗ್ಗೆ ನನಗೆ ವಿಷಾದವಿದೆ.

ಕಳಪೆ-ಉತ್ತಮ: ಉತ್ತಮ ಪಡೆದುಕೊಂಡಿದ್ದಕ್ಕೆ ನನಗೆ ಹೆಮ್ಮೆಯಿದೆ. ನಾನು ನನ್ನನ್ನು ಆ ವಾರದಲ್ಲಿ ಪ್ರೂವ್ ಮಾಡಿಕೊಂಡಿದ್ದೆ. ಚೆನ್ನಾಗಿ ಆಡಿದ್ದೆ. ಹಾಗೆಯೇ ಕಳಪೆಯನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಜೈಲಿನಲ್ಲಿದ್ದುಕೊಂಡೂ ಸುದೀಪ್‌ ಸರ್ ಊಟ ತಿಂದಿದ್ದು ನನಗೆ ತುಂಬ ಖುಷಿಯಾದ ವಿಷಯ. ನನಗೆ ಜೈಲಿನಲ್ಲಿದ್ದೇನೆ ಎಂದೇ ಅನಿಸಲಿಲ್ಲ.

ಯಾರು ಜೆನ್ಯೂನ್-ಯಾರು ಫೇಕ್?: ಮನೆಯಲ್ಲಿ ನಮ್ರತಾ ಹೆಚ್ಚು ಜೆನ್ಯೂನ್ ಅನಿಸುತ್ತಾರೆ ನನಗೆ. ಹಾಗೆಯೇ ಸಂಗೀತಾ ಕೂಡ ಓಕೆ. ಆದ್ರೆ ನನಗೆ ಒಂಥರಾ ಪ್ಲಿಪ್ ಆಗ್ತಾರೆ ಅಲ್ಲಿ ಇಲ್ಲಿ ಅನಿಸುತ್ತದೆ. ಕಾರ್ತೀಕ್ ಕೂಡ ಓಕೆ. ತನಿಷಾ ಫೇಕ್ ಅನಿಸುತ್ತಾರೆ ನನಗೆ. ಟಾಸ್ಕ್‌ ಟೈಮ್‌ನಲ್ಲಿಯೇ ಒಂದು ಥರ ಇರ್ತಾರೆ. ಮನೆಯೊಳಗೇ ಒಂಥರ ಇರುತ್ತಾರೆ. ಟಾಸ್ಕ್‌ ಅನ್ನು ಮನೆಯಲ್ಲಿಯೇ ಬಿಟ್ಟುಬಿಡೋಣ ಅಂತಾರೆ. ಅದೇ ಬೇರೆಯವರು ಹಾಗೆ ಮಾಡಿದಾಗ ಅದನ್ನು ಒಂದೆರಡು ವಾರವಾದರೂ ಮರೆಯದೇ ಅದೇ ರೀಸನ್ ಹೇಳುತ್ತಿರುತ್ತಾರೆ.

ಟಾಪ್‌ 5: ನನಗೆ ಟಾಪ್‌ 5ನಲ್ಲಿ ಇರಬೇಕಾದ ಸ್ಪರ್ಧಿಗಳು ಅಂತಿರುವುದು, ಕಾರ್ತಿಕ್, ವಿನಯ್, ನಮ್ರತಾ, ಸಂಗೀತಾ ಇರಬೇಕು ಎಂದಿತ್ತು. ಆದರೆ ಈಗ ಆಡುತ್ತಿರುವ ರೀತಿ ನೋಡಿದರೆ ನನಗೆ ಅನುಮಾನ. ಮುಂದೆ ಹೇಗೆ ಆಡುತ್ತಾರೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿದೆ. ಕಾರ್ತಿಕ್ ವಿನ್ನರ್ ಆಗಬಹುದು ಅನಿಸುತ್ತದೆ. ವಿನಯ್ ಮತ್ತು ನಮ್ರತಾ ನನ್ನ ಫ್ರೆಂಡ್ ಆಗಿದ್ದರೂ, ಕಾರ್ತೀಕ್ ಏನೋ ಪಾಸಿಟಿವ್ ವೈಬ್ ಕೊಡ್ತಾರೆ. ಬಹುಶಃ ನೋಡುವವರಿಗೂಹಾಗೆಯೇ ಅನಿಸಬಹುದು. ಎಷ್ಟೇ ಚೆನ್ನಾಗಿ ಆಡಿದರೂ, ಅಗ್ರೆಸಿವ್ ಆಗಿ ಆಡಿದರೂ ಕುಟುಂಬಕ್ಕೆ ಹೋಲುತ್ತಾರೆ. ಆದರೆ ವಿನಯ್‌ ಅವರನ್ನು ಎಲ್ಲರೂ ಅಗ್ರೆಸಿವ್ ಆಗುತ್ತಾರೆ ಎನ್ನುತ್ತಾರೆ. ಆದರೆ ಅವರು ಹಾಗೆ ಇಲ್ಲ.

ನಾವು ಮನೆಯೊಳಗೆ ಹೋಗುವಾಗ ನಮಗೊಂದು ವಿಶೇಷಾಧಿಕಾರ ಸಿಕ್ಕಿತ್ತು. ಯಾರನ್ನಾದರೂ ಸೇವ್ ಮಾಡಬಹುದು ಎಂದು. ಆಗ ನಾವು ಸಿರಿ ಮತ್ತು ತುಕಾಲಿ ಅವರನ್ನು ಸೇವ್ ಮಾಡಿದ್ವಿ. ನಾವು ಮಾಡಿರುವ ಮೊದಲ ತಪ್ಪು ಅದು. ಅವರನ್ನು ಸೇವ್ ಮಾಡಿರದಿದ್ದರೆ ಅವರು ಈ ಜಾಗದಲ್ಲಿರುತ್ತಿದ್ರು. ನಾವು ಮಾಡಿದ ಮೊದಲ ತಪ್ಪು ಅದು. 
ಅವಿನಾಶ್ ಒಳ್ಳೆಯ ಮನುಷ್ಯ. ಗೊಂದಲ ತುಂಬ ಇದೆ. ಸೋಲೋ ಆಗಿ ಆಟಕ್ಕೆ ಟ್ರೈ ಮಾಡ್ತಿಲ್ಲ. ಯಾವ ಗ್ರೂಪಿನಲ್ಲಿ ಸೇರಿಕೊಳ್ಳಲಿ ಎಂದು ಯೋಚಿಸುತ್ತಿದ್ದಾರೆ. ಏನೋ ಭಯ ಕಾಡುತ್ತಿರುವ ಹಾಗಿದೆ ಅವರಿಗೆ. ಇನ್ನೂ ಟೈಮ್ ಬೇಕು ಅನಿಸುತ್ತದೆ. ಆದರೆ ಅವರಿಗೆ ಅಷ್ಟು ಟೈಮ್ ಇಲ್ಲ. ಈಗ ಚೆನ್ನಾಗಿ ಆಡಿದ್ರೆ ಇರ್ತಾರೆ. ಇಲ್ಲಾಂದ್ರೆ ಅಲ್ಲಿರೋರೆಲ್ರೂ ಅವ್ರನ್ನು ತಿಂದ್ಕೊಂಡುಬಿಡ್ತಾರೆ.

ಜಿಯೊ ಸಿನಿಮಾ ಫನ್ ಫ್ರೈಡೆ: ಜಿಯೊ ಸಿನಿಮಾ ಫನ್ ಫ್ರೈಡೆ ಟಾಸ್ಕ್ ಎರಡು ಇತ್ತು. ನನಗೆ ಈ ಸಲ ಆಡಿರುವ ಕಾಟನ್ ಟಾಸ್ಕ್ ತುಂಬ ಮಜವಾಗಿತ್ತು. ಟಾಪ್‌2ದಲ್ಲಿಯೂ ಇದ್ದೆ. ಅದಕ್ಕಿಂತ ಮೊದಲಿನ ಟಾಸ್ಕ್‌ನಲ್ಲಿ ನನಗೆ ಕಾಲು ತೊಂದರೆ ಇತ್ತು. ಹಾಗಾಗಿ ಸರಿಯಾಗಿ ಆಡಕ್ಕಾಗಿಲ್ಲ. ಮಿಸ್ ಮಾಡಿಕೊಳ್ಳುವುದೇನು?

ಬಿಗ್‌ಬಾಸ್ ಮನೆಯಲ್ಲಿ ರಾತ್ರಿ ಎಲ್ಲರಿಗೂ ಅಡುಗೆ ಮಾಡಿಕೊಡ್ತಿದ್ದೆ. ತುಕಾಲಿ ಅವರ ಜೊತೆಗೆ ಅಡುಗೆ ವಿಷಯದಲ್ಲಿ ಜಗಳ ಆಡ್ತಿದ್ವಿ. ಅದು ಬಿಟ್ರೆ, ಪ್ರತಿದಿನ ಊಟ ಆದ್ಮೇಲೆ ನಾನು, ನಮ್ರತಾ, ವಿನಯ್, ಮೈಕಲ್ ಆಚೆ ಬಂದು ಒಂದು ತಾಸು ಗಾಳಿಯಲ್ಲಿ ಕೂತು ಮಾತಾಡ್ತಿದ್ವಿ. ಅದನ್ನು ಮಿಸ್ ಮಾಡ್ಕೋತೀನಿ. ಬಿಗ್‌ಬಾಸ್ ಈ ಜರ್ನಿಯನ್ನು ನಾನು ಯಾವತ್ತೂ ಮರೆಯಲ್ಲ. ಮರೆಯಲು ಯತ್ನಿಸಿದರೂ ಮರೆಯಲಾಗುವುದಿಲ್ಲ. ಅಷ್ಟು ಅಮೂಲ್ಯವಾಗಿದೆ ಇದು.
 

Latest Videos
Follow Us:
Download App:
  • android
  • ios