ಕಲರ್ಸ್ ಕನ್ನಡದ ಲಕ್ಷ್ಮಿ ಬಾರಮ್ಮ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಟಿ ಭೂಮಿಕಾ ಪ್ರೀತಿ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ. ತನಗೆ ಪ್ರೀತಿ ಮಾಡಲು ಸಮಯವಿಲ್ಲ, ಬಾಲ್ಯದಿಂದಲೂ ಬ್ಯುಸಿಯಾಗಿದ್ದೆ ಎಂದಿದ್ದಾರೆ. ವಕೀಲರಾದ ತಂದೆಯಿಂದಾಗಿ ಪ್ರಪೋಸಲ್‌ಗಳು ಬಂದಿಲ್ಲ. ಜೀವನದಲ್ಲಿ ಸಾಧನೆ ಮಾಡಬೇಕೆಂಬ ಗುರಿಯಿದೆ ಎಂದು ಅವರು ಹೇಳಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ಬಾರಮ್ಮ ಧಾರಾವಾಹಿ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೈಷ್ಣವ್‌ ಮತ್ತು ಲಕ್ಷ್ಮಿ ಕೆಮಿಸ್ಟ್ರಿ ಕಾಂಬಿನೇಷನ್‌ ಜನರು ಇಷ್ಟ ಪಟ್ಟಿದ್ದಾರೆ. ಈಗ ವೈಷ್ಣವ್ ರಿಯಲ್ ಲೈಫ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಜ್ಜಾಗುತ್ತಿದ್ದಾರೆ. ಹೀಗಾಗಿ ಭೂಮಿಕಾ ಮದುವೆ ಯಾವಾಗ? ಯಾರೂ ಪ್ರಪೋಸ್ ಮಾಡಿಲ್ವಾ? ಯಾಕೆ ಇಷ್ಟು ವರ್ಷ ಆದರೂ ಲವ್ ಮಾಡಿಲ್ಲ ಎಂದು ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರವಿದು. 

'ನಾನು ಇನ್ನು ಸಿಂಗಲ್ ಲವ್ ಮಾಡುವುದಕ್ಕೆ ಬಾಯ್‌ಫ್ರೆಂಡ್ ಮಾಡಿಕೊಳ್ಳುವುದಕ್ಕೆ ಸಮಯ ಇಲ್ಲ. ಸಾಮಾನ್ಯವಾಗಿ ನನ್ನ ಬಳಿ ಮೊಬೈಲ್ ಇರುವುದಿಲ್ಲ ಅಲ್ಲದೆ ಇವತ್ತು ಯಾಕೆ ಮೊಬೈಲ್ ಇದೆ ಅಂದ್ರೆ ಅಮ್ಮ ಮೈಸೂರ್‌ಗೆ ಹೋಗಿದ್ದಾರೆ. ಯಾರೇ ಕಾಲ್ ಮಾಡಿದ್ದರೂ ಅಮ್ಮ ಮನೆಯಲ್ಲಿ ಇಲ್ಲ ಮೈಸೂರ್‌ಗೆ ಹೋಗಿದ್ದಾರೆ ಅಂತ ಹೇಳಬೇಕು, ಅದು ಬಿಟ್ಟರೆ ನನ್ನ ಬಳಿ ಪೋನ್ ಇರುವುದಿಲ್ಲ. ಇದುವರೆಗೂ ನಾನು ಪರ್ಸನಲ್ ಮೊಬೈಲ್‌ ಇಟ್ಟುಕೊಂಡಿಲ್ಲ. ಪ್ರೀತಿ ಮಾಡುವುದಕ್ಕೆ ಸಮಯ ಸಿಕ್ಕಿಲ್ಲ. ಈಗ ಪ್ರೀತಿಯಲ್ಲಿ ಎಲ್ಲರೂ ಟೈಮ್ ಕೊಡಬೇಕು ಕಾಲ್ ಮಾಡಬೇಕು ಹಾಗೂ ಸ್ಪೇಸ್ ಕೊಡಬೇಕು ಎನ್ನುತ್ತಾರೆ ಆದರೆ ನನ್ನ ಜೀವನದಲ್ಲಿ ಆ ಸ್ಪೇಷ್‌ ಇಲ್ವೇ ಇಲ್ಲ. ಚಿಕ್ಕ ವಯಸ್ಸಿನಿಂದ ನನ್ನನ್ನು ಬ್ಯುಸಿಯಾಗಿ ಇಟ್ಟರು, ಸ್ಕೂಲ್‌ನಿಂದ ಬಂದು ಡ್ಯಾನ್ಸ್ ಕ್ಲಾಸ್‌ಗೆ ಹೋಗಬೇಕಿತ್ತು ಆನಂತರ ಜಿಮ್‌ನ್ಯಾಸ್ಟಿಕ್ ಕ್ಲಾಸ್‌ಗೆ ಹೋಗಬೇಕಿತ್ತು. ರಾತ್ರಿ ಬಂದು ಮಲಗಿಕೊಂಡರೆ ಮತ್ತೆ ಬೆಳಗ್ಗೆ ಸ್ಕೂಲ್ ಶುರು. ಕಾಲೇಜ್‌ನಲ್ಲಿ ಇದ್ದಾಗ ಲಿಟಮ್‌ ಮಿಸ್ ಮೋನಾಲಿಸಾ ಅವಾರ್ಡ್‌ ಬಂದು ಈ ಶೋಗೆ ತಯಾರಿ ಮಾಡಿಕೊಳ್ಳಲು ಓಡಿಶಾಗೆ ಪ್ರಯಾಣ ಮಾಡಬೇಕಿತ್ತು. ಸಮಯ ಇಲ್ಲದ ಕಾರಣ ಆದ್ರೆ ಆಗುತ್ತೆ ಬಿಡು ಅನ್ನೋ ಮೈಂಡ್‌ಸೆಟ್‌ಗೆ ಬಂದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಭೂಮಿಕಾ ಮಾತನಾಡಿದ್ದಾರೆ. 

ಗರ್ಲ್‌ಫ್ರೆಂಡ್‌ನ ತಾಯಿ ಮುಂದೆ ನಿಲ್ಲಿಸಿದ ದೇವರಾಜ್ ಕಿರಿಯ ಪುತ್ರ; ಅಣ್ಣ- ಅತ್ತಿಗೆ ಸಪೋರ್ಟ್ ಇಲ್ವಾ?

'ಸಾಕಷ್ಟು ಪ್ರಪೋಸಲ್‌ಗಳು ಬಂದಿದೆ ಅದನ್ನು ತಡೆಯಲು ಆಗಲ್ಲ. ಯಾರೂ ಧೈರ್ಯ ಮಾಡಿ ನನಗೆ ಪ್ರಪೋಸ್ ಮಾಡಲಿಲ್ಲ ಕಾರಣ ನನ್ನ ತಂದೆ ಲಾಯರ್ ಅಂತ. ಸ್ನೇಹಿತರ ಮೂಲಕ ಅವರಿವರ ಬಾಯಲ್ಲಿ ಹೀಗಂತೆ ಅಂತ ಕೇಳಿದ್ದೀನಿ ಅಷ್ಟೇ. ಆದರೆ ಈಗ ಪ್ರೀತಿ ಮಾಡುವುದಕ್ಕೆ ಸಮಯಲ್ಲಿ ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ನಿರ್ಧರಿಸಿದ್ದೀನಿ' ಎಂದಿದ್ದಾರೆ ಭೂಮಿಕಾ.

ಇಷ್ಟು ಗಾಢ ಹಸಿರು ನಿಮಗೆ ಬೇಡವೆಂದ ನೆಟ್ಟಿಗರು: ಶ್ವೇತಾ ಚಂಗಪ್ಪ ಫೋಟೋಸ್ ವೈರಲ್