ಎಲ್ಲಾ ಸುಳ್ಳು, ನನಗೇನು ಆಗಿಲ್ಲ, ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ!
ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ತಂದೆಯ ಕಾರಣದಿಂದ ತುರ್ತಾಗಿ ಸ್ಪರ್ಧೆಯಿಂದ ಹೊರಬಂದಿದ್ದಾರೆ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಆತಂಕ ಹೆಚ್ಚಾಗಿತ್ತು. ಇದೇ ವೇಳೆ ಗೋಲ್ಡ್ ಸುರೇಶ್ ತಂದೆ ತೀವ್ರ ಅನಾರೋಗ್ಯ ಕಾಡಿದೆ ಅನ್ನೋ ಸುದ್ದಿಯೂ ಹರಿದಾಡಿತ್ತು. ಇದೀಗ ಗೋಲ್ಡ್ ಸುರೇಶ್ ತಂದೆಯೇ ಕುರಿತು ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಸುಳ್ಳು ಎಂದಿದ್ದಾರೆ.
ಬೆಂಗಳೂರು(ಡಿ.15) ತುರ್ತು ಕಾರಣದಿಂದ ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಬಂದ ಘಟನೆ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಆತಂಕ, ದುಗುಡ, ಭಾವುಕರಾಗಿ ಮನೆಯಿಂದ ಹೊರಬಂದ ವಿಡಿಯೋ, ಬಿಗ್ ಬಾಸ್ ಇತರ ಸ್ಪರ್ಧಿಗಳು ಧೈರ್ಯ ತುಂಬಿ ಗೋಲ್ಡ್ ಸುರೇಶ್ ಕಳುಹಿಸಿಕೊಟ್ಟ ಪ್ರೋಮೋಗಳು ಕೋಲಾಹಲ ಸೃಷ್ಟಿಸಿತ್ತು. ಇದರ ನಡುವೆ ಗೋಲ್ಡ್ ಸುರೇಶ್ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿತ್ತು. ಈ ಉಹಾಪೋಹಾದ ನಡುವೆ ಇದೀಗ ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಸುಳ್ಳು, ನಾನು ಆರೋಗ್ಯವಾಗಿದ್ದೇನೆ. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಗೋಲ್ಡ್ ಸುರೇಶ್ ಮನೆಯಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಸದ್ಯ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಗಿಂತ ಅವರ ಕುಟುಂಬದ ಜೊತೆ ಮನೆಯಲ್ಲಿ ಇರಬೇಕಿದೆ. ಹೀಗಾಗಿ ಗೋಲ್ಡ್ ಸುರೇಶ್ ಬಟ್ಟೆ, ಬ್ಯಾಗ್ ಪ್ಯಾಕ್ ಮಾಡಿ ಹೊರಬರಲು ಬಿಗ್ ಬಾಸ್ ಆದೇಶಿಸಿತ್ತು. ಈ ವಿಡಿಯೋ ಬಿಗ್ ಬಾಸ್ ವೀಕ್ಷಕರಲ್ಲಿ ಆತಂಕ ಸೃಷ್ಟಿಸಿತ್ತು. ತೀರಾ ತುರ್ತು ಕಾರಣದಿಂದ ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಗೋಲ್ಡ್ ಸುರೇಶ್ ತಂದೆ ನಿಧನರಾಗಿದ್ದಾರೆ ಅನ್ನೋ ಸುಳ್ಳು ಸುದ್ದಿಗಳು ಹಬ್ಬಿತ್ತು
ಈ ಸುಳ್ಳು ಸುದ್ದಿ ಭಾರಿ ವೇಗವಾಗಿ ಎಲ್ಲಡೆ ಹಬ್ಬಿದೆ. ಈ ಸುದ್ದಿ ಗೋಲ್ಡ್ ಸುರೇಶ್ ತಂದೆ ಕಿವಿಗೂ ಬಿದ್ದಿದ್ದೆ. ಇದೇ ವೇಳೆ ಹಲವು ಸೋಶಿಯಲ್ ಮೀಡಿಯಾ ಕ್ರಿಯೆಟರ್ಸ್ ಗೋಲ್ಡ್ ಸುರೇಶ್ ಮನೆಗೆ ಬೇಟಿ ನೀಡಿ ತಂದೆ ವಿಚಾರಿಸಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಗೋಲ್ಡ್ ಸುರೇಶ್ ತಂದೆ ಶಿವಗೋಡ ಕಾಶಿರಾಮ, ನನಗೆ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯವಾಗಿದ್ದೇನೆ. ಕೇವಲ ಕಾಲಿಗೆ ಕೊಂತ ಏಟಾಗಿದೆ. ಇದನ್ನು ಹೊರತುಪಡಿಸಿದರೆ ನಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ.
.ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ: ಬಿಗ್ ಬಾಸ್ ಮನೆ ಬಿಟ್ಟು ಹೋದ ಸುರೇಶ್ ವಾಪಸ್ ಬರ್ತಾರಾ?
ಇಲ್ಲಿಯ ಮನೆ, ಬೆಂಗಳೂರಿನ ಮನೆ ಎಲ್ಲೂ ಯಾವುದೇ ಸಮಸ್ಯೆ ಇಲ್ಲ. ಕುಟುಂಬಸ್ಥರು ಆರೋಗ್ಯವಾಗಿದ್ದಾರೆ. ಕಾಲಿಗೆ ಪೆಟ್ಟಾಗಿರುವ ಕಾರಣ ಔಷಧಿ ಸೇರದಂತೆ ಇತರ ಕಾರ್ಯಗಳಿಗೆ ಮನೆಯಿಂದ ಹೊರಬಂದಿರಬಹುದು. ಆದರೆ ಉತ್ತರ ಕರ್ನಾಟಕದ ಜನರ ಪ್ರೀತಿ ಗಳಿಸಿದ್ದಾನೆ. ಗೆಲ್ಲುತ್ತಾನೆ. ಮತ್ತೆ ಬಿಗ್ ಬಾಸ್ ಮನೆಗೆ ಮರಳುತ್ತಾನೆ ಎಂದು ಗೋಲ್ಡ್ ಸುರೇಶ್ ತಂದೆ ಹೇಳಿದ್ದಾರೆ.
ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ ನೀಡಿದ ಬಳಿಕ ಇದೀಗ ಹಲವು ಅನುಮಾನಗಳು ಮೂಡಿದೆ. ತುರ್ತು ಕಾರಣ ನೀಡಿ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರಬಂದಿದ್ದೇಕೆ? ಗೋಲ್ಡ್ ಸುರೇಶ್ ತುರ್ತು ಕಾರಣವಿದೆ ಎಂದು ಬಿಗ್ ಬಾಸ್ ಹೇಳಿದೆ. ಹೀಗಾಗಿ ಇವೆಲ್ಲವೂ ಬಿಗ್ ಬಾಸ್ ಟಿಆರ್‌ಪಿಗಾಗಿ ಮಾಡಿದ ನಾಟಕವೇ ಅನ್ನೋ ಪ್ರಶ್ನೆಗಳು ಹುಟ್ಟಿದೆ.