ಬಿಗ್ ಬಾಸ್ ಗೆ ಬರ್ತಿನಿ ಒಂದ್ ಅವಕಾಶಕೊಡಿ, ಸುದೀಪ್ ಗೆ ಹುಚ್ಚ ವೆಂಕಟ್ ರಿಕ್ವೆಸ್ಟ್

ಕಲರ್ಸ್ ಕನ್ನಡದ ಬಿಗ್ ಶೋ ಬಿಗ್ ಬಾಸ್ 11 ಶುರುವಾಗಲು ಇನ್ನೇನು ಕೆಲವೇ ಗಂಟೆ ಬಾಕಿ ಇದೆ. ಸೆಪ್ಟೆಂಬರ್ 29ರಂದು ಶುರುವಾಗಲಿರುವ ರಿಯಾಲಿಟಿ ಶೋ ಬಗ್ಗೆ ಫ್ಯಾನ್ಸ್ ಆಸಕ್ತಿ ಹೆಚ್ಚಿದೆ. ಈ ಮಧ್ಯೆ ಹುಚ್ಚ ವೆಂಕಟ್ ವಿಡಿಯೋ ಒಂದು ವೈರಲ್ ಆಗಿದೆ. 
 

Huccha Venkat requests Sudeep to send Bigg Boss Kannada 11 roo

ಕಲರ್ಸ್ ಕನ್ನಡ ಹಾಗೂ ಸುದೀಪ್ ಅವರಿಗೆ ವಿನಂತಿ ಮಾಡಿಕೊಳ್ತೇನೆ. ಬಿಗ್ ಬಾಸ್ ನಲ್ಲಿ ಭಾಗಿಯಾಗಲು ನನಗೆ ನನಗೆ ಒಂದು ಅವಕಾಶಕೊಡಿ. ಒಂದು ದಿನಕ್ಕೆ ಕರೆದ್ರೂ ನಾನು ಬರ್ತೇನೆ. ಒಂದು ವಾರಕ್ಕೆ ಕರೆದ್ರೂ ನಾನು ಬರ್ತೇನೆ. ಬಿಗ್ ಬಾಸ್ ಮನೆಯಲ್ಲಿ ಮೂರು ತಿಂಗಳು ಇರ್ಬೇಕು ಅಂದ್ರೂ ನಾನು ಬರ್ತೇನೆ. ಎಲ್ಲರೂ ನನ್ನನ್ನ ಬಿಗ್ ಬಾಸ್ ಹುಚ್ಚ ವೆಂಕಟ್ ಅಂತ ಕರಿತಾರೆ. ಬಿಗ್ ಬಾಸ್ ಶೋ ಬರ್ತಿದೆ ಅನ್ನೋದು ಗೊತ್ತಾದಾಗ ಎಲ್ಲರೂ ನೀವು ಹೋಗಲ್ವಾ, ನೀವು ಹೋಗಲ್ವಾ ಅಂತ ಕೇಳ್ತಾರೆ. ಸುದೀಪ್ ಅವರಿಗೆ ರಿಕ್ವೆಸ್ಟ್. ಒಂದು ಅವಕಾಶಕೊಡಿ. ನೀವು ಮನಸ್ಸು ಮಾಡಿದ್ರೆ ಆಗುತ್ತೆ. ಫೈನಲ್ ಗಾದ್ರೂ ನನ್ನನ್ನು ಕರೆಯಿರಿ ಎಂದು ಹುಚ್ಚ ವೆಂಕಟ್ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ. 

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿರುವ ಅವರ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಅವಕಾಶಕೊಟ್ಟಾಗ ನೀವು ಬಳಸಿಕೊಳ್ಳಲಿಲ್ಲ, ಈಗ ಬೇಡ್ತೀರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಸುದೀಪ್ ಬಗ್ಗೆ ಮಾತನಾಡೋಕೆ ನಿಮಗೆ ಯೋಗ್ಯತೆ ಇಲ್ಲ, ಬಿಗ್ ಬಾಸ್ ಗೆ ಬಂದ್ರೆ ಆಗ್ಲಿಲ್ಲ, ಟಾಸ್ಕ್ ಮಾಡೋಕೆ ಶಕ್ತಿಬೇಕು ಅಂತ ಕೆಲವರು ಹೇಳಿದ್ದಾರೆ. ಆದ್ರೆ ಹುಚ್ಚ ವೆಂಕಟ್ ಪರ ಬ್ಯಾಟ್ ಬೀಸಿದವರೂ ಇದ್ದಾರೆ. ಒಂದು ಅವಕಾಶವನ್ನು ಹುಚ್ಚ ವೆಂಕಟ್ ಗೆ ನೀಡಿದ್ರೆ ತಪ್ಪಿಲ್ಲ ಎಂಬುದು ಕೆಲವರ ಅಭಿಪ್ರಾಯವಾಗಿದೆ. 

ಲುಂಗಿ ಹೋಗಿ ಪ್ಯಾಂಟ್ ಬಂತು, ಸುದರ್ಶನ್ ಭಟ್ ಜೊತೆ ಬೈಕ್ ಏರಿದ ಕೃತಿ, ಮದುವೆ ಡೇಟ್ ಅನೌನ್ಸ್ಡ್

ಬಿಗ್ ಬಾಸ್ 3ಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳ ತಲೆ ತಿನ್ನಲು ಶುರು ಮಾಡಿದ್ದ ಹುಚ್ಚ ವೆಂಕಟ್, ಬಿಗ್ ಬಾಸ್ ಗೆ ತಲೆನೋವಾಗಿದ್ದ. ಹುಡುಗಿಯರ ಡ್ರೆಸ್ ನಿಂದ ಶುರುವಾದ ಅವರ ಗಲಾಟೆ, ರವಿ ಮೂರೂರ್ ಮೇಲೆ ಹಲ್ಲೆ ಮಾಡಿ ಹೊರಗೆ ಬಂದಿದ್ದರು. ಅದಾದ್ಮೇಲೆ ಬಿಗ್ ಬಾಸ್ ಯಾವುದೇ ತನ್ನ ಕಾರ್ಯಕ್ರಮಕ್ಕೆ ಹುಚ್ಚ ವೆಂಕಟ್ ಅವರನ್ನು ಆಹ್ವಾನಿಸಿಲ್ಲ. ಹುಚ್ಚ ವೆಂಕಟ್ ಸದ್ಯ ವಿಷ್ಣುಮಾರ್ಗ ಸಿನಿಮಾದಲ್ಲಿ ನಟಿಸಿದ್ದು, ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ.  

ಬಿಗ್ ಬಾಸ್ ಸೀಸನ್ 11ರಲ್ಲಿ ಹುಚ್ಚ ವೆಂಕಟ್ ಕಾಣಿಸಿಕೊಳ್ಳೋದು ಅನುಮಾನ. ಬಿಗ್ ಬಾಸ್ ಮತ್ತೆ ಅವರಿಗೆ ಅವಕಾಶ ನೀಡುವ ಸಾಧ್ಯತೆ ತುಂಬಾ ಕಡಿಮೆ ಇದೆ. ನಾಳೆ ಕೆಲ ಸ್ಪರ್ಧಿಗಳ ಹೆಸರು ರಾಜಾ ರಾಣಿ ಫೈನಲ್ ನಲ್ಲಿ ಬಹಿರಂಗವಾಗಲಿದ್ದು, ಸೆಪ್ಟೆಂಬರ್ 29ರಂದು ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಲಿದ್ದಾರೆ. ಸ್ಪರ್ಧಿಗಳು ಯಾರ್ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ. ಒಂದಿಷ್ಟು ಸಂಭಾವ್ಯ ಸ್ಪರ್ಧಿಗಳ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಓಡಾಡ್ತಿದ್ದು, ಸ್ಪರ್ಧಿಗಳು ಬಿಗ್ ಬಾಸ್ ಗೆ ಎಂಟ್ರಿಯಾಗುವ ಮೊದಲೇ ಫ್ಯಾನ್ಸ್ ಮಧ್ಯೆ ಚರ್ಚೆ ಶುರುವಾಗಿದೆ.  

ಬಿಗ್ ಬಾಸ್ ಗೆ ಹೋಗ್ತೀರಾ ಅಂದ್ರೆ… “ಚಾನ್ಸೇ ಇಲ್ಲ, ನನಗೆ ನಾನೆ ಬಾಸು” ಅಂದ್ರು ನಟಿ ಹರಿಪ್ರಿಯಾ

ಕಿಚ್ಚ ಸುದೀಪ್ ನಿರೂಪಣೆಯಲ್ಲಿಯೇ ಈ ಬಾರಿಯೂ ಬಿಗ್ ಬಾಸ್ ಬರಲಿದ್ದು, ಸ್ವರ್ಗ ಮತ್ತು ನರಕ ಕಾನ್ಸೆಪ್ಟ್ ನಲ್ಲಿರುವ ರಿಯಾಲಿಟಿ ಶೋ ಮತ್ತಷ್ಟು ಗಲಾಟೆ ಎಬ್ಬಿಸೋದ್ರಲ್ಲಿ ಅನುಮಾನವಿಲ್ಲ. ಬಿಗ್ ಬಾಸ್ ಶೋ ನೋಡಲು ವೀಕ್ಷಕರು ತುದಿಗಾಲಿನಲ್ಲಿ ಕುಳಿತಿದ್ದು, ಇನ್ನೊಂದಿಷ್ಟು ದಿನ ಬಿಗ್ ಬಾಸ್ ಮನರಂಜನೆ ವೀಕ್ಷಕರಿಗೆ ಸಿಗಲಿದೆ. 
 

Latest Videos
Follow Us:
Download App:
  • android
  • ios