Asianet Suvarna News Asianet Suvarna News

ಆದರ್ಶ ಗಂಡ ಹೇಗಿರ್ಬೇಕು? ಗೀತಾ ಸೀರಿಯಲ್​ ಅಜಯ್​ ಹೇಳಿಕೊಟ್ಟಿದ್ದಾರೆ ನೋಡಿ...

 ಆದರ್ಶ ಗಂಡ ಹೇಗಿರ್ಬೇಕು? ಗೀತಾ ಸೀರಿಯಲ್​ ಅಜಯ್​ ಹೇಳಿಕೊಟ್ಟಿದ್ದಾರೆ ನೋಡಿ... 
 

How should an ideal husband be Geetha serial Ajay has taught suc
Author
First Published Nov 14, 2023, 5:34 PM IST

ಮದುವೆಯಾದ ಬಳಿಕ ಆದರ್ಶ ಎಂಬ ಶಬ್ದ ಬಂದಾಗ, ಆದರ್ಶ ದಂಪತಿ ಎನ್ನುತ್ತೇವೆ, ಆದರ್ಶ ಪತ್ನಿ ಎಂದೂ ಕೇಳಿಬರುವುದು ಸಹಜವೇ. ಆದರೆ ಆದರ್ಶ ಪತಿ ಹೀಗಿರಬೇಕು ಎನ್ನುವ ಮಾತು ಕೇಳಿಬರುವುದು ಸ್ವಲ್ಪ ಕಮ್ಮಿಯೇ. ಹೆಣ್ಣಾದವಳು ತನ್ನ ಗಂಡನಲ್ಲಿ ಈ ರೀತಿಯ ಆದರ್ಶ ಗುಣಗಳು ಇರಬೇಕು ಎಂದು ಬಯಸುತ್ತಾಳೆ. ಆ ಸಂದರ್ಭದಲ್ಲಿ ಆಕೆಯ ಬಾಯಿಯಿಂದ ಆದರ್ಶ ಗಂಡ ಎನ್ನುವ ಶಬ್ದ ಬರುವುದು ಬಿಟ್ಟರೆ, ಸಾಮಾನ್ಯವಾಗಿ ಬುದ್ಧಿ ಮಾತು ಹೇಳುವಾಗ ಪತ್ನಿಯ ಆದರ್ಶದ ಬಗ್ಗೆಯೇ ಮಾತನಾಡುವುದು ತಲೆ ತಲಾಂತರಗಳಿಂದಲೂ ನಡೆದುಕೊಂಡು ಬಂದಿದೆ. ಇದರ ನಡುವೆಯೇ ಆದರ್ಶ ಗಂಡ ಹೀಗೆ ಇರಬೇಕು ಎಂದು ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಗೀತಾದ ನಾಯಕ ಹೇಳಿಕೊಟ್ಟಿದ್ದು, ಅದರ ಪ್ರೊಮೋ ಸಕತ್​ ವೈರಲ್​ ಆಗುತ್ತಿದೆ. ನಿಜವಾಗಿಯೂ ಆದರ್ಶ ಗಂಡ ಹೀಗೆಯೇ ಇರಬೇಕು ಎನ್ನುತ್ತಿದ್ದಾರೆ ಮಹಿಳೆಯರು.

ಅಷ್ಟಕ್ಕೂ ಈ ಸೀರಿಯಲ್  ಅತ್ತೆ-ಸೊಸೆಗೆ ಸಂಬಂಧಿಸಿದ ಕಥೆಯಾದರೂ ಗೀತಾ ಗಂಡನಿಗೂ ಪಾತ್ರದಲ್ಲಿ ಪ್ರಾಮುಖ್ಯತೆ ಇದೆ. ಮೂರು ಪಾತ್ರಗಳ ಸುತ್ತ ಸುತ್ತುತ್ತಿರುವ ಕಥೆ ಇದಾಗಿದೆ.  ಇದೀಗ ಇಂಥದ್ದೊಂದು ಡೈಲಾಗ್​ ಇರುವ ಪ್ರೋಮೋ ರಿಲೀಸ್​ ಮಾಡಿರುವ ತಂಡ, ಪ್ರೇಕ್ಷಕರನ್ನು ತನ್ನತ್ತ ಹಿಡಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಅಷ್ಟಕ್ಕೂ ಇದರಲ್ಲಿ ಗಂಡ ವಿಜಯ್​ ಪತ್ನಿಯ ತಟ್ಟೆಯಲ್ಲಿಯೇ ಊಟ ಮಾಡುವ ದೃಶ್ಯವಿದೆ. ಸಾಮಾನ್ಯವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯೇನೆಂದರೆ, ಗಂಡ ಊಟ ಮಾಡಿದ ಮೇಲೆ ಆತನ ತಟ್ಟೆಯಲ್ಲಿ ಪತ್ನಿ ಊಟ ಮಾಡಬೇಕು ಎನ್ನುವುದು. ಈಗಿನ  ಪತ್ನಿಯರು ಈ ರೀತಿ ಮಾಡದಿದ್ದರೂ ಕೆಲವು ಕಡೆಗಳಲ್ಲಿ ಇನ್ನೂ ಇದು ರೂಢಿಯಲ್ಲಿ ಇದೆ. ಪತಿಯೇ ಪರದೈವ, ಗಂಡ ಎಂದರೆ ದೇವರು ಎಂದೆಲ್ಲಾ ಹೇಳುತ್ತದೆ ಹಿಂದೂ ಸಂಪ್ರದಾಯ. ಇದೇ ಕಾರಣಕ್ಕೆ ಗಂಡ ಊಟ ಮಾಡಿದ ಬಳಿಕ, ಆತನ ಎಂಜಲು ತಟ್ಟೆಯಲ್ಲಿ ಪತ್ನಿ ಊಟ ಮಾಡಿದರೆ ಇಬ್ಬರಿಗೂ ಶ್ರೇಯಸ್ಸು, ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂದುಹಿರಿಯರು ಹೇಳುತ್ತಾರೆ.

ಬಿಗ್​ಬಾಸ್​ ಮನೆಯಲ್ಲಿ ಭಾಗ್ಯ ಅನುಭವ ಹೇಗಿತ್ತು, ಯಾವ ಸ್ಪರ್ಧಿ ಇಷ್ಟ? ವೀಕ್ಷಕರು ಕೇಳಿದ ಪ್ರಶ್ನೆಗೆ ನಟಿ ಹೀಗೆಂದ್ರು...

ಆದರೆ ಈ ಪದ್ಧತಿ ಇವತ್ತು ಇಲ್ಲವಾದರೂ ಈ ಸೀರಿಯಲ್​ನಲ್ಲಿ ಸ್ವಲ್ಪ ಭಿನ್ನವಾಗಿ ತೋರಿಸಲಾಗಿದೆ. ಇದೇ ಕಾರಣಕ್ಕೆ ಆದರ್ಶ ಪತಿಯೆಂದರೆ ಹೀಗಿರಬೇಕು ಎನ್ನಲಾಗುತ್ತಿದೆ.  ಅಷ್ಟಕ್ಕೂ ಇದರಲ್ಲಿ ವಿಜಯ್​ ಮಾವನ ಮನೆಗೆ ಬಂದಾಗ, ಪತ್ನಿ ಊಟ ಮಾಡಿದ ತಟ್ಟೆಯಲ್ಲಿ ಊಟಕ್ಕೆ ಕುಳಿತುಕೊಳ್ಳುತ್ತಾನೆ, ಆಗ ಪತ್ನಿ ಬೇಡ ಎಂದಾಗ ಮಾವ ಕೂಡ ಇದೇನು ಅಳಿಯಂದಿರೇ ಎಂದು ಪ್ರಶ್ನಿಸುತ್ತಾರೆ. ಆಗ ವಿಜಯ್​, ಯಾಕೆ ಆಗಬಾರದು. ಪತಿ ಊಟ ಮಾಡಿದ ತಟ್ಟೆಯಲ್ಲಿ ಪತ್ನಿ ಊಟ ಮಾಡಬೇಕು ಎನ್ನುವ ಹಾಗೆ, ಆಕೆ ಊಟ ಮಾಡಿದ ಬಳಿಕ ಅದೇ ತಟ್ಟೆಯಲ್ಲಿ ಪತಿ ಊಟ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿ, ಅದೇ ತಟ್ಟೆಯಲ್ಲಿ ಊಟ ಬಡಿಸುವಂತೆ ಪತ್ನಿಗೆ ಹೇಳುತ್ತಾನೆ. ಇದು ಹೆಚ್ಚಿನವರಿಗೆ ತುಂಬಾ ಇಷ್ಟವಾಗಿದ್ದು, ಆದರ್ಶ ಪತಿ ಎಂದ್ರೆ ಹೀಗಿರಬೇಕು ಅಂತಿದ್ದಾರೆ. 
 
ಅಂದಹಾಗೆ, ಗೀತಾ ಸೀರಿಯಲ್​, ಜನವರಿ 6, 2020 ರಿಂದ ಪ್ರಸಾರ ಆರಂಭಿಸಿದೆ.  ಈ ಸೀರಿಯಲ್​ನಲ್ಲಿ ಗೀತಾ ಹಾಗೂ ವಿಜಿಯ ನಡುವೆ ಜಗಳವಾಗಿ ನಂತರ ಅದು ಪ್ರೀತಿಗೆ ತಿರುಗಿದೆ. ಗೀತಾ ಧಾರಾವಾಹಿಯಲ್ಲಿ ಗೀತಾಳನ್ನು ಸಾಯಿಸಿದ ರೀತಿಯಲ್ಲಿ ತೋರಿಸಲಾಗಿತ್ತು. ಅಷ್ಟೇ ಅಲ್ಲದೆ ಈಗಲೂ ಸಹ ಗೀತಾ ಸತ್ತು ಹೋಗಿದ್ದಾಳೆ ಎಂದು ತೋರಿಸಿದರು. ಆದರೆ ಹಾಗೆ ಆಗಲಿಲ್ಲ.  ನಂತರ ಧಾರಾವಾಹಿ ಮುಗಿಯುತ್ತದೆ ಎಂದು ಹೇಳಲಾಯಿತು. ಆದರೆ ಧಾರಾವಾಹಿ ಮುಂದೆ ಸಾಗುತ್ತಲೇ ಇದ್ದು, ಒಂದು ಹಂತದಲ್ಲಿ ಪ್ರೇಕ್ಷಕರೂ ಧಾರಾವಾಹಿ ಮುಗಿಸುವಂತೆ ಹೇಳುತ್ತಿದ್ದಾರೆ. ಇದರ ನಡುವೆಯೇ ಈ ಡೈಲಾಗ್​ ಸಕತ್​ ಇಷ್ಟವಾಗುತ್ತಿದೆ. ಹೆಂಡತಿಯ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ಅವಳ ಎಲ್ಲಾ ನೋವಿಗೂ ಜೊತೆಯಾಗಿ ನಿಂತು ಒಳ್ಳೆ ಸ್ನೇಹಿತನಾಗಿ ತಂದೆ ತಾಯಿಯ ಸ್ಥಾನದಲ್ಲಿ ನಿಲ್ಲುವನೆ ಆದರ್ಶ ಗಂಡ ಎಂದೂ ಕಮೆಂಟ್​ನಲ್ಲಿ ಒಬ್ಬರು ತಿಳಿಸಿದ್ದಾರೆ. 

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ
 

Follow Us:
Download App:
  • android
  • ios