ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ, ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ನಡೀತು, ನನಗೆ ನೀಡಿದ ಸಂಬಳ ಎಷ್ಟು, ಎಷ್ಟು ಸಾಲ ಇದೆ ಎಲ್ಲವನ್ನು ಮಲ್ಲಮ್ಮ ಬಿಚ್ಚಿಟ್ಟಿದ್ದಾರೆ.
ಬಿಗ್ ಬಾಸ್ (Bigg Boss) ಮನೆ ಸೇರಿರುವ ಸ್ಪರ್ಧಿಗಳ ಬಗ್ಗೆ ವೀಕ್ಷಕರಿಗೆ ವಿಶೇಷ ಕುತೂಹಲ ಇರುತ್ತೆ. ಸ್ಪರ್ಧಿಗಳಿಗೆ ಎಷ್ಟು ಸಂಭಾವನೆ ಸಿಗುತ್ತೆ ಅನ್ನೋದು ಹಾಟ್ ಟಾಪಿಕ್. ಬಹುತೇಕ ಯಾವುದೇ ಸ್ಪರ್ಧಿಗಳು ತಮ್ಮ ಸಂಪಾದನೆ, ಸಂಬಳದ ಬಗ್ಗೆ ಮಾಹಿತಿ ನೀಡೋದಿಲ್ಲ. ಆದ್ರೆ ಮುಗ್ದೆ ಮಲ್ಲಮ್ಮ, ಬಿಗ್ ಬಾಸ್ ಮನೆಯಿಂದ ಹೊರ ಬರ್ತಿದ್ದಂತೆ ಬಿಗ್ ಬಾಸ್ ಮನೆಯೊಳಗಿನ ಘಟನೆ ಜೊತೆ ತಮ್ಮ ಸಂಬಳದ ಬಗ್ಗೆಯೂ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮಲ್ಲಮ್ಮ (Mallamma)ನಿಗೆ ಸಿಕ್ತು ಇಷ್ಟು ಸಂಬಳ :
ಹಳ್ಳಿಯಿಂದ ಬಂದು, ಸೋಶಿಯಲ್ ಮೀಡಿಯಾ ಮೂಲಕ ಪ್ರಸಿದ್ಧಿಗೆ ಬಂದಿದ್ದ ಮಲ್ಲಮ್ಮ, ಬಿಗ್ ಬಾಸ್ ಮನೆ ಸೇರಿದ್ದೇ ದೊಡ್ಡ ಸಾಧನೆ. ಇಳಿ ವಯಸ್ಸಿನಲ್ಲೂ ಬತ್ತದ ಅವರ ಉತ್ಸಾಹವೇ ಅವರನ್ನು ಬಿಗ್ ಬಾಸ್ ಬಾಗಿಲಿಗೆ ಕರೆದುಕೊಂಡು ಹೋಗಿತ್ತು. ಬಿಗ್ ಬಾಸ್ ಮನೆಯಲ್ಲೂ ಯುವ ಸ್ಪರ್ಧಿಗಳ ಜೊತೆ ಹೋರಾಡಿದ್ದ ಮಲ್ಲಮ್ಮ, ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಬಿಗ್ ಬಾಸ್ ಮನೆಯಲ್ಲಿರುವ ಪ್ರಸಿದ್ಧ ಕಲಾವಿದರು, ಘಟಾನುಘಟಿ ಸ್ಪರ್ಧಿಗಳಿಗೆ ಸಖತ್ ಪೈಪೋಟಿ ನೀಡಿದ್ದ ಮಲ್ಲಮ್ಮ ಈಗ ಮನೆಯಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆ ಸೇರುವ ಮೊದಲೇ, ನನಗೆ ಕಲರ್ಸ್ ಕನ್ನಡ ಸಂಬಳ ನೀಡುತ್ತೆ, ಅದಕ್ಕೆ ಬಿಗ್ ಬಾಸ್ ಮನೆಗೆ ಹೋಗ್ತಿದ್ದೇನೆ, ಬಂದ ಹಣದಲ್ಲಿ ಸಾಲ ತೀರಿಸ್ತೇನೆ ಎಂದಿದ್ದರು. ಈಗ 30 ದಿನಕ್ಕೂ ಹೆಚ್ಚು ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಬಂದ ಮಲ್ಲಮ್ಮನಿಗೆ 1.50 ಲಕ್ಷ ರೂಪಾಯಿ ಸಿಕ್ಕಿದೆ. ಇದನ್ನು ಸ್ವತಃ ಮಲ್ಲಮ್ಮ ಹೇಳಿದ್ದಾರೆ.
ಬಿಗ್ ಬಾಸ್ 'ಮೂರ್ಖರ ಆಟ' ಎಂದ ಅಂಕಲ್ ಯಾರೂ ಹೇಳಿರದ 'ಅಶ್ವಿನಿ ಗೌಡ' ಹೊಸ ಸೀಕ್ರೆಟ್ ಬಿಚ್ಚಿಟ್ರು!
ಬಂದ ಹಣವನ್ನು ಏನು ಮಾಡ್ತಾರೆ ಮಲ್ಲಮ್ಮ? :
ಮಲ್ಲಮ್ಮನಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಹಾಗೂ ಚಿಕ್ಕ ಮಗ ಇಬ್ಬರೂ ಟೈಲರಿಂಗ್ ಕೆಲ್ಸ ಮಾಡ್ತಾರೆ. ಟೈಲರಿಂಗ್ ಕಲಿತಿರುವ ಮಲ್ಲಮ್ಮ, ದೊಡ್ಡ ಮಗನ ಮದುವೆ, ಮನೆ ಕಟ್ಟಿದ್ದರ ಸಾಲ ತೀರಿಸಲು ಬೆಂಗಳೂರಿಗೆ ಬಂದಿದ್ದರು. 15 ವರ್ಷಗಳಿಂದ ಮಲ್ಲಮ್ಮ ಬೆಂಗಳೂರಿನಲ್ಲಿದ್ದಾರೆ. ಪಲ್ಲವಿಯವರ ಬೋಟಿಕ್ ನಲ್ಲಿ ಕೆಲ್ಸ ಮಾಡ್ತಿರುವ ಮಲ್ಲಮ್ಮ, ಚಿಕ್ಕ ಮಗನಿಗೆ ಮದುವೆ ಮಾಡಿದ್ದಾರೆ. ಚಿಕ್ಕ ಮಗನ ಮದುವೆಗೆ ಮಲ್ಲಮ್ಮ ಸಾಲ ಮಾಡಿದ್ದರು. ಈಗ ಸುಮಾರು 7 ಲಕ್ಷ ಸಾಲ ಮೈಮೇಲಿದೆ. ಬಿಗ್ ಬಾಸ್ ಮನೆಯಲ್ಲಿ ಸಿಕ್ಕ ಹಣದಲ್ಲಿ ಸಾಲ ತೀರಿಸ್ತೇನೆ ಅಂತ ಮಲ್ಲಮ್ಮ ಹೇಳಿದ್ದಾರೆ.
ಕಾವ್ಯ ಶೈವ, ಗಿಲ್ಲಿ ನಟನಿಗೆ ಧರ್ಮಸಂಕಟದಲ್ಲಿ ಸಿಲುಕಿಸಿದ Bigg Boss; ಈಗ ಮಿಸ್ ಆದ್ರೆ ಲೈಫ್ ಟೈಮ್ ಸ್ನೇಹ ಇರಲ್ಲ
ಇನ್ನಷ್ಟು ದಿನ ಇದ್ರೆ ಸಾಲ ತೀರುತ್ತಿತ್ತು :
ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿದ್ರೆ ವಾರದ ಲೆಕ್ಕದಲ್ಲಿ ಹಣ ಸಿಗುತ್ತಿತ್ತು. ಅದ್ರಲ್ಲಿ ತನ್ನ ಸಾಲ ತೀರಿಸಬಹುದಿತ್ತು ಅಂತ ಮಲ್ಲಮ್ಮ ಹೇಳಿದ್ದಾರೆ. ಮಲ್ಲಮ್ಮ ಅವರಿಗೆ ಬೋಟಿಕ್ ನಲ್ಲಿ 12 ಸಾವಿರ ರೂಪಾಯಿ ತಿಂಗಳ ಸಂಬಳ ಸಿಗುತ್ತೆ. ದೊಡ್ಡ ಮಗ ಊರಿನಲ್ಲಿ ಟೈಲರಿಂಗ್ ಮಾಡ್ತಿದ್ದು, ಮಲ್ಲಮ್ಮ, ಚಿಕ್ಕ ಮಗನ ಜೊತೆಗಿದ್ದಾರೆ. ಎರಡನೇ ಸೊಸೆ ಗರ್ಭಿಣಿಯಾಗಿದ್ದು, ಮೊಮ್ಮಕ್ಕಳನ್ನು ಸ್ವಾಗತಿಸು ಆತುರದಲ್ಲಿ ಮಲ್ಲಮ್ಮ ಇದ್ದಾರೆ.
ಮಲ್ಲಮ್ಮನ ಆಸೆ ಏನು? :
ನಟ ಮನೋಜ್ ಹಾಗೂ ಪಲ್ಲವಿ ಜೊತೆ ಮಲ್ಲಮ್ಮ ಟಾಕ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡ್ತಾ, ಬೋಟಿಕ್ ಕೆಲ್ಸ ಮಾಡ್ತಾ ಇದ್ದಿದ್ದರಲ್ಲಿಯೇ ಖುಷಿಯಾಗಿರುವ ಮಲ್ಲಮ್ಮನಿಗೆ ದೊಡ್ಡ ಆಸೆ ಏನಿಲ್ಲ. ಮಕ್ಕಳ ಮದುವೆಗೆ ನೀಡಿದ ಸಾಲ ತೀರಿಸ್ಬೇಕು, ಸಾಲ ತೀರಿಸಿದ್ರೆ ನನ್ನ ಋಣ ಮುಗಿದಂತೆ ಅಂತ ಮಲ್ಲಮ್ಮ ಹೇಳಿದ್ದಾರೆ. ಬಿಲ್ಡಿಂಗ್ ಕೆಲ್ಸಕ್ಕೆ ಅಂತ ಬಂದು, ಬಿಗ್ ಬಾಸ್ ಮನೆ ಸೇರಿದ್ದ ಮಲ್ಲಮ್ಮ ಆದಷ್ಟು ಬೇಗ ಸಾಲ ತೀರಿಸಿ ನೆಮ್ಮದಿ ಜೀವನ ಕಾಣಲಿ ಅನ್ನೋದೇ ಅಭಿಮಾನಿಗಳ ಬಯಕೆ.
