Asianet Suvarna News Asianet Suvarna News

ಕಾಂತಾರ ಚಿತ್ರದ ಬಳಿಕ ಸಪ್ತಮಿ ಗೌಡ ಸಂಭಾವನೆ ಎಷ್ಟು ಪಟ್ಟು ಹೆಚ್ಚಾಯ್ತು? ನಟಿಯಿಂದಲೇ ಗುಟ್ಟು ರಟ್ಟು

ಕಾಂತಾರ ಚಿತ್ರದ ಬಳಿಕ ಸಪ್ತಮಿ ಗೌಡ ಸಂಭಾವನೆ ಎಷ್ಟು ಪಟ್ಟು ಹೆಚ್ಚಾಯ್ತು? ನಟಿಯಿಂದಲೇ ಗುಟ್ಟು ರಟ್ಟಾಗಿದ್ದು, ನಟಿ ಹೇಳಿದ್ದೇನು?
 

How much did Saptami Gowdas salary increase after Kantara secret was revealed by the actress suc
Author
First Published May 25, 2024, 9:53 PM IST

ಕಾಂತಾರ ಭರ್ಜರಿ ಯಶಸ್ಸಿನ ಬಳಿಕ ನಟಿ ಸಪ್ತಮಿ ಗೌಡ  ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಅವರಿಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದೀಗ  'ಕಾಂತಾರ: ಚಾಪ್ಟರ್‌ 1' ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿಯೂ ನಟಿಯನ್ನು ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಸಪ್ತಮಿ ನಿರಾಸೆ ಮೂಡಿಸಿದ್ದಾರೆ. ಇದಕ್ಕೆ  ಕಾರಣ, ಇದರಲ್ಲಿ ಸಪ್ತಮಿ ಇರಲ್ಲ, ಬದಲಿಗೆ ಬೇರೆ ನಟಿ ಇರಲಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸದೇ ಇರಲು ಖುದ್ದು ಅವರೇ ಕಾರಣ ಕೊಟ್ಟಿದ್ದಾರೆ ಅದೇನೆಂದರೆ, ಈ ಬರುತ್ತಿರುವುದು ಇದಾಗಲೇ ರಿಲೀಸ್​ ಆಗಿರುವ ಕಾಂತಾರದ ಮೊದಲ ಭಾಗ. ಇದರಲ್ಲಿ ಲೀಲಾ ಪಾತ್ರ ಅಂದರೆ ಸಪ್ತಮಿ ಗೌಡ ಪಾತ್ರವೇ ಇರುವುದಿಲ್ಲ. ಆದ್ದರಿಂದ ನಾನು ಇದರಲ್ಲಿ ಹೇಗೆ ನಟಿಸಲಿ ಎಂದು ನಟಿ ಪ್ರಶ್ನಿಸುವ ಮೂಲಕ ಈ ಚಿತ್ರದಲ್ಲಿ ತಾವು ಇರುವುದಿಲ್ಲ ಎಂದಿದ್ದಾರೆ.  

ನಾನು ಎಷ್ಟೇ ಚಿತ್ರದಲ್ಲಿ ನಟಿಸಿದರೂ ಕಾಂತಾರ ನನಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿದೆ. ಚಿತ್ರ ತೆರೆಗೆ ಬಂದು ಎರಡು ವರ್ಷ ಕಳೆದರೂ ಈಗಲೂ ಅದರ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅದೇ ನನಗೆ ಖುಷಿಯ ವಿಚಾರ. ಮೊದಲ ಸಿನಿಮಾದಂತೆ ಈ ಬಾರಿಯೂ 'ಕಾಂತಾರ' ಎಲ್ಲರಿಗೂ ಇಷ್ಟವಾಗಲಿದೆ. ಎಲ್ಲರಂತೆ ನಾನು ಕೂಡ ಸಿನಿಮಾಕ್ಕಾಗಿ ಕಾಯುತ್ತಿದ್ದೇನೆ. ಶೀಘ್ರದಲ್ಲೇ ಶೂಟಿಂಗ್ ಆರಂಭವಾಗಲಿದೆ" ಎಂದೂ ನಟಿ ಹೇಳಿದ್ದಾರೆ. ಅಷ್ಟಕ್ಕೂ  ಕಾಂತಾರ ಚಿತ್ರದ ಮೂಲಕ ನಟಿಯ ಕೀರ್ತಿ ಭಾರತದಾಚೆಯೂ ಹರಡಿದೆ ಎನ್ನುವುದು ಸುಳ್ಳಲ್ಲ.

ಕಾಂತಾರ ಬೆಡಗಿ ಸಪ್ತಮಿ ಗೌಡ ಮದ್ವೆಯಾಗೋ ಹುಡುಗ ಹೀಗಿದ್ರೆ ಸಾಕಂತೆ... ನೀವ್​ ರೆಡಿನಾ...?

ಇದೇ ವೇಳೆ ಸಪ್ತಮಿ ಗೌಡ ಅವರು, ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನನ್ನಮ್ಮ ಸೂಪರ್​ಸ್ಟಾರ್​ ಷೋಗೆ ಅತಿಥಿಯಾಗಿ ಆಗಮಿಸಿದ್ದಾರೆ. ಈ ಸಮಯದಲ್ಲಿ ಕೆಲವೊಂದು ವಿಷಯಗಳನ್ನು ನಟಿ ಹೇಳಿದ್ದಾರೆ. ನಿರೂಪಕಿ ಸುಷ್ಮಾ ರಾವ್​ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಸಪ್ತಮಿ ಗೌಡ ಅವರು ತಮ್ಮ ಜೀವನದ ಕೆಲವೊಂದು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಇವರ ತಂದೆ ಪೊಲೀಸ್​ ಅಧಿಕಾರಿಯಾಗಿದ್ದವರು. ಪೊಲೀಸ್​ ಆಗಿರೋ ಅಪ್ಪನಿಗೆ ಹೇಳದೇ ಏನಾದರೂ ಕೆಲಸ ಮಾಡಿದ್ದೀರಾ ಎಂದರೆ ಇಲ್ಲವೇ ಇಲ್ಲ.  ರಾತ್ರಿ ಕದ್ದು ಮುಚ್ಚಿ ಎಲ್ಲೂ ಹೋಗಿಲ್ಲ. ಸ್ಕೂಲ್​-ಕಾಲೇಜಿನ ಪರೀಕ್ಷೆಯಲ್ಲಿ ಕಾಪಿ ಅಂತೂ ಮಾಡೇ ಇಲ್ಲ. ಕಾಲೇಜಿಗೆ ಬಂಕ್​ ಮಾಡಿದ್ದೇನೆ ಆದ್ರೆ ಆವಾಗ್ಲೂ ಮನೆಯಲ್ಲಿ ಹೇಳಿದ್ದೆ. ದುಡ್ಡಂತೂ ಕದ್ದೇ ಇಲ್ಲ ಎಂದೆಲ್ಲಾ ಹೇಳಿದರು. 

ನಂತರ ಇವರ ಸಂಭಾವನೆಯ ವಿಷಯ ಕೇಳಲಾಗಿದೆ. ಸಾಮಾನ್ಯವಾಗಿ ಚಿತ್ರ ತಾರೆಯರು ಒಂದು ಹಿಟ್​ ಚಿತ್ರ ಕೊಟ್ಟರೆ, ಸಹಜ ಎಂಬಂತೆ ಅವರ ಸಂಭಾವನೆ ಕೂಡ ಹೆಚ್ಚಾಗುತ್ತದೆ. ಅದರಂತೆಯೇ, ಕಾಂತಾರದ ಯಶಸ್ಸಿನ ಬಳಿಕ  ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಪಟ್ಟು ಜಾಸ್ತಿ ಆಗಿದೆ ಎಂಬ ಪ್ರಶ್ನೆಯನ್ನು ನಟಿಯ ಮುಂದಿಟ್ಟಾಗ,   ​ಕಾಂತಾರ ಚಿತ್ರದ  ಪ್ರೊಡಕ್ಷನ್​ ಮಾಡಿದವರೇ ಎರಡನೆಯ ಚಿತ್ರದ ಪ್ರೊಡಕ್ಷನ್​ ಕೂಡ ಮಾಡಿದ್ರು​. ಸೋ ನಾನು ಮೊದಲ ಚಿತ್ರಕ್ಕೂ ಪೇಮೆಂಟ್​ ಕೇಳಿರಲಿಲ್ಲ, ಎರಡನೆಯ ಚಿತ್ರಕ್ಕೂ ಕೇಳಿಲ್ಲ. ಆದರೆ ಅವರಾಗಿಯೇ 7-8 ಪಟ್ಟು ಜಾಸ್ತಿ ಸಂಭಾವನೆ ಕೊಟ್ಟರು ಎಂದರು. ಸಪ್ತಮಿ ಗೌಡ ಅವರ ಗಾಸಿಪ್​ ಕುರಿತು ಹೇಳಿ ಎಂದಾಗ, ಕಾಂತಾರದಲ್ಲಿ ನಾನು ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಪಡೆದೆ ಎಂದು ದೊಡ್ಡ ಮ್ಯಾಗಜೀನ್​ ಒಂದರಲ್ಲಿ ಪ್ರಕಟವಾಯ್ತು. ಅದನ್ನು ನೋಡಿ ನನಗೆ ತುಂಬಾ ಖುಷಿಯಾಯ್ತು. ಮುಂದೆ ಇಷ್ಟು ದುಡ್ಡು ಪಡೆಯುವ ಹಾಗೆ ಆಗಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ ಎಂದರು.  

ಸಪ್ತಮಿ ಗೌಡ v/s ಸಪ್ತಮ್ಮಿ ಗೌಡ: ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆಯಲ್ಲಿ ಇಬ್ಬಿಬ್ರು! ಗ್ರ್ಯಾಂಡ್ ಫಿನಾಲೆ ಟ್ವಿಸ್ಸ್​...

 

Latest Videos
Follow Us:
Download App:
  • android
  • ios