ಪಾರು ಅಂದಾಕ್ಷಣ ಜಿಂಕೆ ಕಣ್ಣಿನ ಮುದ್ದಾದ ಹುಡುಗಿ ಮೋಕ್ಷಿತಾ ಕಣ್ಮುಂದೆ ಬರುತ್ತಾರೆ. ಈ ಸೀರಿಯಲ್ ಬಳಿಕ ಎಲ್ಲರೂ ಅವರನ್ನುಮನೆ ಮಗಳ ರೀತಿ ನೋಡೋದಕ್ಕೆ ಶುರು ಮಾಡಿದ್ದಾರೆ. ಅವರ ಆಕ್ಟಿಂಗ್, ಅಪೀರೆಯರೆನ್ಸ್ ನಲ್ಲಿರೋ ಮೋಡಿಗೆ ಎಲ್ಲರೂ ಮನಸೋತಿದ್ದಾರೆ. ಅದಕ್ಕೆ ಸಾಕ್ಷಿ ಏನೋ ಅನ್ನೋ ಹಾಗೆ ಪಾರು ಸೀರಿಯಲ್ ಮೊದಲಿಂದಲೂ ಟಾಪ್ ೫ ಸೀರಿಯಲ್ ಗಳ ಪೈಕಿ ಒಂದೆನಿಸಿಕೊಂಡಿದೆ. ಬೆಸ್ಟ್ ಸೀರಿಯಲ್ ಲೀಸ್ಟ್ ನಿಂದ ಕೆಳಗಿಳಿದೇ ಇಲ್ಲ. ಇದಕ್ಕೆ ಮೋಕ್ಷಿತಾ ಅಭಿನಯವೂ ಒಂದು ಮುಖ್ಯ ಕಾರಣ. 

ಸಾಮಾನ್ಯವಾಗಿ ಸಿನಿಮಾ, ಸೀರಿಯಲ್ ನಾಯಕಿಯರು ಅಂದಾಕ್ಷಣ ಅವರ ಲೈಫ್ ರಾಜಕುಮಾರಿಯರ ಥರ ಇರುತ್ತೆ ಅಂತ ಇಮ್ಯಾಜಿನ್ ಮಾಡ್ಕೊಳ್ತೀನಿ. ನಮ್ಮ ಈ ನಂಬಿಕೆಯನ್ನು ಧೃಡ ಮಾಡುವಂತೆ ಆ ನಾಯಕಿಯರೂ ಕಲರ್ ಫುಲ್ ಉಡುಗೆಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಸಖತ್ ರಿಚ್ ನೆಸ್ ನಿಂದ ಕಂಗೊಳಿಸ್ತಾರೆ. ಆದರೆ ಅವರ ಲೈಫ್ ಒಳಗಿನ ಸತ್ಯ, ಅಲ್ಲಿನ ಕಹಿ ಅವರಿಗಷ್ಟೇ ಗೊತ್ತು.

ರಜನೀಕಾಂತ್‌ಗಾಗಿ 10 ದಿನ ಉಪವಾಸ ಮಾಡಿದ ಶ್ರೀದೇವಿ ...

ಲೈಫ್ ನ ಕಹಿಯನ್ನು ನುಂಗಿ ಸಿಹಿಯಾಗಿ ನಗೋದನ್ನು ಅವರು ಅಭ್ಯಾಸ ಮಾಡಿಕೊಂಡಿರುತ್ತಾರೆ. ಕನ್ನಡ ಸೀರಿಯಲ್ ಜಗತ್ತಿನಲ್ಲಿ ಕಷ್ಟದಿಂದ ಮೇಲೆ ಬಂದ ನಾಯಕಿಯರು ಬಹಳಷ್ಟು ಜನ ಇದ್ದಾರೆ. ಹಾಗೆ ನೋಡಿದರೆ ಇಂಥವರ ಕತೆ ನಮಗೆಲ್ಲ ಸ್ಫೂರ್ತಿಯಾಗಬಹುದು. ಏಕೆಂದರೆ ಅವರು ಲೈಫ್ ಕಷ್ಟ ಇದೆ ಅಂತ ಅಳುತ್ತಾ ಕೂತರೆ ಇವತ್ತು ಈ ಸ್ಥಾನಕ್ಕೆ ಬರೋದು ಸಾಧ್ಯ ಆಗ್ತಾ ಇರಲಿಲ್ಲ. 

ಇರಲಿ, ಈಗ ಪಾರು ಅಲಿಯಾಸ್‌ ಮೋಕ್ಷಿತಾ ಪೈ ಕತೆಗೆ ಬರೋಣ. ಪುರುಸೊತ್ತಿದ್ದಾಗ ಒಮ್ಮೆ ಈಕೆಯ ಸೋಷಿಯಲ್ ಮೀಡಿಯಾ ಅಕೌಂಟ್ ಜಾಲಾಡಿ. ಇನ್‌ಸ್ಟಾಗ್ರಾಂನಲ್ಲಿ ಮೋಕ್ಷಿತಾ ಪೈ ಅಂತ ಟೈಪಿಸಿದ್ರೆ ಹತ್ತಾರು ಅಕೌಂಟ್ ಗಳು ದಬ ದಬ ಅಂತ ಬಂದು ಬೀಳುತ್ತವೆ. ಆ ಅಕೌಂಟ್ ಗಳಲ್ಲಿ ಮೋಕ್ಷಿತಾ ಅವರ ರಿಯಲ್ ಅಕೌಂಟ್ ಯಾವ್ದು ಅಂತ ಗೊತ್ತು ಪಡಿಸೋದಕ್ಕೆ ಬ್ಲೂಟಿಕ್ ಸಹ ಬರಲ್ಲ. ಜಾಸ್ತಿ ಜನ ಫಾಲೋ ಮಾಡೋ ಅಕೌಂಟ್‌ಅನ್ನೇ ಓಪನ್ ಮಾಡಿ ನೋಡಿ. ಅದ್ರಲ್ಲಿ ಕಲರ್ ಫುಲ್ಲಾದ ಮೋಕ್ಷಿತಾ ಪೈ ಎಂಬ ಮುದ್ದು ಮುಖದ ಹತ್ತಾರು ಫೋಟೋಗಳು ಕಾಣಸಿಗುತ್ತವೆ.

ಮೆಹೆಂದಿ ಶಾಸ್ತ್ರದಲ್ಲಿ ನಟಿ ಐಶಾನಿ ಶೆಟ್ಟಿ; ಹುಡುಗನ್ಯಾರು? ...

ಅದರಲ್ಲಿ ಒಂದು ಫೋಟೋ ನೀವು ನೋಡಲೇ ಬೇಕು. ಒಬ್ಬ ಮಾನಸಿಕ ಸಮಸ್ಯೆ ಇರುವ ಹುಡುಗನನ್ನು ಪಾರು ಮುದ್ದಾಡ್ತಿರೋ ಫೋಟೋ. ಹತ್ತಾರು ಫ್ರೇಮ್ ಗಳಲ್ಲಿ ಆ ಹುಡುಗನನ್ನು ಅಕ್ಕರೆಯಿಂದ ಮುದ್ದಿಸುವ ಮೋಕ್ಷಿತ ಫೋಟೋ ಇದೆ. ಅದ್ಯಾರು ಆ ಹುಡುಗ ಅಂತ ಚೆಕ್ ಮಾಡಿದ್ರೆ ಆತ ಈಕೆಯ ತಮ್ಮ ಅನ್ನೋದು ಗೊತ್ತಾಗುತ್ತೆ. ಮೋಕ್ಷಿತಾಳ ಈ ತಮ್ಮನಿಗೀಗ ಹದಿನೆಂಟು ವರ್ಷ ವಯಸ್ಸು. ಆದರೆ ಬುದ್ಧಿ ಎಳೆಯ ಮಗುವಿನದು. ಒಂದೆರಡು ವರ್ಷ ವಯಸ್ಸಿನ ಮಗುವಿನಂತೇ ಆಡುತ್ತಾನೆ. 

ಮೋಕ್ಷಿತಾಗೆ ತಾನು ಫ್ಯಾಶನ್ ಡಿಸೈನಿಂಗ್ ಮಾಡಬೇಕು ಅನ್ನೋ ಕನಸಿತ್ತು. ಆದರೆ ಈಕೆಯ ಅಮ್ಮ ಬುದ್ಧಿಮಾಂದ್ಯ ಮಕ್ಕಳ ಬಗೆಗಿನ ಉನ್ನತ ಅಧ್ಯಯನಕ್ಕೆ ತೆರಳಿದ್ದರಿಂದ ಮೋಕ್ಷಿತಾ ಕಲಿಯುತ್ತಿದ್ದ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಅನ್ನು ಅರ್ಧಕ್ಕೇ ನಿಲ್ಲಿಸಿದರು. ತಮ್ಮನಿಗೆ ತಾನೇ ಅಮ್ಮನಾಗಿ ನಿಂತರು. ತಮ್ಮನ ಸ್ನಾನ, ತಿಂಡಿಯಿಂದ ಹಿಡಿದು ಎಲ್ಲಾ ಆರೈಕೆಯನ್ನೂ ಎರಡು ವರ್ಷಗಳ ಕಾಲ ಮಾಡಿದ್ರು. ಹರೆಯದ ಹುಡುಗಿಯೊಬ್ಬಳು ತನ್ನ ಅಮೂಲ್ಯ ಬದುಕಿನ ಸಮಯವನ್ನು ತಮ್ಮನಾಗಿ ಮೀಸಲಿಡುವುದು ಬಹಳ ಮಹತ್ವದ ವಿಚಾರ ಅಲ್ವಾ. ಅಮ್ಮನ ಅಧ್ಯಯನ ಕಂಪ್ಲೀಟ್ ಆದ ಮೇಲೆ ಸೀರಿಯಲ್ ಜಗತ್ತಿನತ್ತ ದೃಷ್ಟಿ ನೆಟ್ಟರು.

ಬರಡು ಭೂಮಿಯನ್ನು ಹಸಿರಾಗಿಸಿದ ನಟ ಮಾಧವನ್ ...

ಆದರೆ ಈ ಹೊತ್ತಿಗೆ ತಮ್ಮ ಅಕ್ಕನನ್ನು ಬಹಳ ಹಚ್ಚಿಕೊಂಡು ಬಿಟ್ಟಿದ್ದ. ಅಕ್ಕ ಅವನನ್ನು ಬಿಟ್ಟು ಹೋಗೋದು ಸ್ವಲ್ಪವೂ ಇಷ್ಟ ಇರಲಿಲ್ಲ. ಶುರು ಶುರುವಿನಲ್ಲಿ ಊಟ ತಿಂಡಿಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲವಂತೆ. ಈಗ ಸುಧಾರಿಸಿದ್ದಾನೆ. ಅಕ್ಕ ಸೀರಿಯಲ್ ಜೊತೆಗೆ ಸಿನಿಮಾದಲ್ಲೂ ಬ್ಯುಸಿಯಾಗಿರುವ ಕಾರಣ ಅಕ್ಕನನ್ನು ತುಂಬಾ ಮಿಸ್ ಮಾಡುತ್ತಾನೆ. ಅಕ್ಷರಶಃ ಮಗುವಿನ ಹಾಗೇ ಇರುವ ತಮ್ಮನನ್ನೂ ಅಕ್ಕ ಮೋಕ್ಷಿತಾ ಮಿಸ್ ಮಾಡದ ದಿನ ಇಲ್ಲವಂತೆ.