'ಜೋತಿ ಅಲಿಯಾಸ್ ಕೋತಿ ರಾಜ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಐಶಾನಿ ಶೆಟ್ಟಿ 'ವಾಸ್ತು ಪ್ರಕಾರ' ಚಿತ್ರದ ಮೂಲಕ ಲೈಮ್‌ ಲೈಟ್‌ಗೆ ಬಂದರು. ಆ ನಂತರ ಆಯ್ಕೆ ಮಾಡಿಕೊಂಡ ಪ್ರತಿಯೊಂದು  ಚಿತ್ರವೂ ಸೂಪರ್ ಹಿಟ್ ಆಗಿದೆ. ಈ ನಡುವೆ ಐಶಾನಿ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ಕೊಂಚ ಗೊಮದಲವುಂಟು ಮಾಡಿದ್ದಾರೆ.

ಕೊನೆಗೂ ಧೈರ್ಯ ಮಾಡಿ ತಾನೇ ಕೂದಲು ಕಟ್ ಮಾಡಿಕೊಂಡ ನಟಿ ಐಶಾನಿ ಶೆಟ್ಟಿ!

ಏನದು ಫೋಟೋ:

ಐಶಾನಿ ಕೆಲ ದಿನಗಳ ಹಿಂದೆ ಮೆಹೆಂದಿ ಶಾಸ್ತ್ರದಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಐಶಾನಿ ಮದುವೆಯಾಗುತ್ತಿದ್ದಾರೆ ಎಂದು ತಿಳಿದುಕೊಂಡಿದ್ದಾರೆ ಅಲ್ಲದೆ ಹುಡುಗ ಯಾರೆಂದು ಪ್ರಶ್ನಸಿದ್ದಾರೆ. ಆದರೆ ಫೋಟೋಗೆ ಕ್ಯಾಪ್ಶನ್ ಬರೆಯುವ ಮೂಲಕ ನಟಿ ಕ್ಲಾರಿಟಿ ನೀಡಿದ್ದಾರೆ.

 

ಐಶಾನಿ ಆಪ್ತ ಗೆಳತಿಯ ಮದುವೆ ಕಾರ್ಯಕ್ರಮದ ಫೋಟೋಗಳಿವು ಎಂದು ಹೇಳಿದ್ದಾರೆ. ಪ್ರತಿ ಫೋಟೋಗೂ #Bridesmaid ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ. ಪ್ರತಿ ಫೋಟೋದಲ್ಲೂ ಐಶಾನಿ ಸುಂದರವಾಗಿ ಕಂಗೊಳ್ಳಿಸುತ್ತಿದ್ದಾರೆ. 'ಪ್ಲೀಸ್‌ ನೀವು ಬೇಗ ಮದುವೆಯಾಗ ಬೇಡಿ ನೀವು ನಮ್ಮ ಕ್ರಶ್' ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. 

ಹೊಂದಿಸಿ ಬರೆಯಿರಿ ಎಂದ ರಾಕೆಟ್ ಹುಡುಗಿ! 

ಐಶಾನಿ ಸಿನಿಮಾ:

ಸದ್ಯಕ್ಕೆ ಐಶಾನಿ 'ಧರಣಿ ಮಂಡಲ ಮಧ್ಯದೊಳಗೆ' ಹಾಗೂ 'ಹೊಂದಿಸಿ ಬರೆಯಿರಿ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಗಿದ್ದಾರೆ. ಚಿತ್ರ ಹಾಗೂ ಚಿತ್ರೀಕರಣದ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇರುತ್ತಾರೆ.