ಒಂಥರಾ ಕಣ್ಣು ಮಿಟುಕಿಸಿ ಹುಬ್ಬು ಹಾರಿಸಿ 'ಎಷ್ಟು ಜನ್ರನ್ನ..' ಅಂದ್ಬಿಟ್ರು ನಮ್ರತಾ ಗೌಡ; ಸ್ನೇಹಿತ್ ಗೌಡ ಶಾಕ್!

ಬಿಗ್ ಬಾಸ್ ಮನೆಯೊಳಕ್ಕೆ ಬಂದ ಸ್ನೇಹಿತ್ ಗೌಡ, 'ನಿಮ್ಮ ಪ್ರಕಾರ ಈ ಸೀಸನ್‌ ವಿನ್ನರ್ ಯಾರಾಗಬೇಕು' ಎಂದಿದ್ದಕ್ಕೆ ನೇರವಾಗಿಯೇ 'ವಿನಯ್' ಎಂದಿದ್ದಾರೆ. ಆಗ ಅಲ್ಲಿಯೇ ಇದ್ದ ನಮ್ರತಾಗೆ ಸಹಜವಾಗಿಯೇ ಇರುಸುಮುರುಸು ಆಗಿದೆ.

How many people can you wish to win says Namratha Gowda in bigg boss kannada srb

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಕಾದಾಟ ಸಹಜವಾಗಿಯೇ ತೀವ್ರಗೊಂಡಿದೆ. ಗ್ರಾಂಡ್ ಫಿನಾಲೆಗೆ ಇನ್ನೇನು ಒಂದೇ ವಾರ ಬಾಕಿ ಉಳಿದಿದೆ. ಅಲ್ಲಿರುವ ಎಲ್ಲರಲ್ಲೂ ಇರುವುದು ಒಂದೇ ಆಸೆ, ಒಂದೇ ಗುರಿ, ಅದು ಗ್ರಾಂಡ್‌ ಫಿನಾಲೆ ಗೆದ್ದು ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುವುದು. ಅದಕ್ಕಾಗಿಯೇ ಹೋರಾಟ, ಅದಕ್ಕಾಗಿಯೇ ಕಾದಾಟ. 

ಬಿಗ್ ಬಾಸ್ ಕನ್ನಡ ಸೀಸನ್ 10 ಮನೆಯ್ಲಲಿ ಈಗಿರುವುದು ತನಿಷಾ, ಸಂಗೀತಾ, ಕಾರ್ತಿಕ್, ನಮ್ರತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಮಾತ್ರ. ಮಿಕ್ಕವೆರಲ್ಲ ತಮ್ಮ ಪಾಲಿನ ಆಟ ಆಡಿ ಸೋತು ವಾಪಸ್ ಮನೆ ಸೇರಿಕೊಂಡಾಗಿದೆ. ಆದರೆ, ಈಗ ಬಿಗ್ ಬಾಸ್ ಮನೆಯೊಳಕ್ಕೆ ಇದೇ ಸೀಸನ್‌ನ ಮಾಜಿ ಆಟಗೊರರಲ್ಲಿ ಕೆಲವರು ಮತ್ತೆ ಬಂದು ಇಲ್ಲಿರುವ ಸ್ಪರ್ಧಿಗಳ ಜತೆ ಮಾತನಾಡಲು, ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಲಾಗಿದೆ. 

ಅದರಂತೆ, ಬಿಗ್ ಬಾಸ್ ಮನೆಯೊಳಕ್ಕೆ ಬಂದ ಸ್ನೇಹಿತ್ ಗೌಡ, 'ನಿಮ್ಮ ಪ್ರಕಾರ ಈ ಸೀಸನ್‌ ವಿನ್ನರ್ ಯಾರಾಗಬೇಕು' ಎಂದಿದ್ದಕ್ಕೆ ನೇರವಾಗಿಯೇ 'ವಿನಯ್' ಎಂದಿದ್ದಾರೆ. ಆಗ ಅಲ್ಲಿಯೇ ಇದ್ದ ನಮ್ರತಾಗೆ ಸಹಜವಾಗಿಯೇ ಇರುಸುಮುರುಸು ಆಗಿದೆ. ಏಕೆಂದರೆ, ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ, ಸ್ನೇಹಿತ್ ತಮ್ಮ ಬೆಸ್ಟ್‌ ಫ್ರೆಂಡ್ ನಮ್ರತಾ ಎನ್ನತ್ತಿದ್ದರು. ಅಷ್ಟೇ ಅಲ್ಲ, ನಮ್ರತಾ ಬಳಿ ಪರ್ಸನಲ್‌ ಆಗಿ ಸಹ ಮಾತನಾಡಿ 'ನಿಮ್ಮ ಮೇಲೆ ನನಗೆ ಕ್ರಶ್ ಆಗಿದೆ' ಎಂದು ಸಹ ಹೇಳಿದ್ದರು ಎನ್ನಲಾಗಿದೆ. 

ಮೆಗಾಸ್ಟಾರ್ 'ವಿಶ್ವಂಬರ' ಲುಕ್ ನೋಡಿ ಫ್ಯಾನ್ಸ್ ಥ್ರಿಲ್; ತ್ರಿಷಾ ಓಕೆ, ಜಾಹ್ನವಿ ಕಪೂರ್‌ ಯಾಕೆ ಅಂತಿದಾರಲ್ಲ!

ಹೀಗಿರುವಾಗ, ನಮ್ರತಾ ಬಿಟ್ಟು ಏಕಾಏಕಿ ವಿನಯ್ ಹೆಸರು ಹೇಳಿದರೆ ಯಾರಿಗೆ ಬೇಸರವಾಗುವುದಿಲ್ಲ? ಅದೇ ನಮ್ರತಾಗೂ ಆಗಿದೆ. ಅದಕ್ಕಾಗಿಯೇ ಅವರು ಅಪ್‌ಸೆಟ್ ಆಗಿದ್ದಾರೆ. ಸ್ನೇಹಿತ್ ಮುಖಕ್ಕೆ ಹೊಡೆದಂತೆ ನಮ್ರತಾ 'ವಿನಯ್ ವಿನ್ ಆಗ್ಬೇಕಾ? ಮತ್ತೆ ನಾನು? ನನ್ನ ಜತೆ ಅದು ಇದು ಎಲ್ಲ.. ಏನಿದೆಲ್ಲ? ಎಷ್ಟು ಜನ್ರನ್ನ ಗೆಲ್ಲಿಸ್ತೀರ ನೀವು?' ಎಂದು ಕೇಳಿದ್ದಲ್ಲದೇ ನಮ್ರತಾ ಕಣ್ಣು ಮಿಟುಕಿಸಿ ಹುಬ್ಬು ಹಾರಿಸಿದ್ದು ಹೇಗಿತ್ತು ಎಂದರೆ, ಅದರಲ್ಲೇ ಸ್ನೇಹಿತ್‌ಗೆ ಎಲ್ಲಾ ರೀತಿಯಲ್ಲೂ ಉತ್ತರ ಕೊಟ್ಟಂತಿದೆ.

ನೋ ಸಿಂಪತಿ, ನೋ ಲವ್, ನಿಯತ್ತಾಗಿ ಆಡ್ತಿರೋ ತನಿಷಾಗೆ ಜೈ; ಟ್ಯಾಗ್‌ಲೈನ್ ಫೋಟೋ ಭಾರೀ ಟ್ರೆಂಡಿಂಗ್! 

ನಮ್ರತಾ ಕೊಟ್ಟ ಉತ್ತರ ಋಉಪದ ಪ್ರಶ್ನೆಗೆ ಸ್ನೇಹಿತ್ ಶಾಕ್ ಆಗಿ ಸ್ಟನ್ ಆಗಿದ್ದಾರೆ. ಅದನ್ನು ಕೂಡ ನೀವು ಪ್ರೋಮೋ ವೀಡಿಯೋದಲ್ಲಿ ನೋಡಬಹುದು. ಹಾಗಿದ್ದರೆ ಸ್ನೇಹಿತ್ ಇಂಟೆನ್‌ಶನ್ ಏನು? ನಮ್ರತಾ ಕೋಪ ಶಮನಕ್ಕೆ ಸ್ನೇಹಿತ್ ಬೇರೆ  ಏನಾದ್ರೂ ಉಪಾಯ ಕಂಡುಕೊಂಡ್ರಾ? ಎಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ದೊರಕಬಹುದೇನೋ?!

 

 

Latest Videos
Follow Us:
Download App:
  • android
  • ios