ವ್ಹಾವ್​ ಎನ್ನುವ ಸ್ವರ್ಗ- ಉಸ್ಸಪ್ಪಾ ಎನ್ನುವ ನರಕ... ಬಿಗ್​ಬಾಸ್​ ಮನೆಯ ಸಂಪೂರ್ಣ ಚಿತ್ರಣದ ಪ್ರೊಮೋ ಬಿಡುಗಡೆ

ಬಿಗ್​ಬಾಸ್ ಕನ್ನಡ 11 ಇಂದು ಶುರುವಾಗಲಿದೆ. ಇದರಲ್ಲಿರುವ  ಸ್ವರ್ಗ ಮತ್ತು ನರಕಗಳ ಕೋಣೆಗಳು ಹೇಗಿವೆ. ಅಲ್ಲಿ ಏನೇನು ಸೌಲಭ್ಯಗಳು ಇವೆ ಎಂಬಿತ್ಯಾದಿ ವಿಶೇಷತೆಗಳ ವಿಡಿಯೋ ರಿಲೀಸ್​ ಮಾಡಲಾಗಿದೆ. 
 

How is  heaven and hell facilities in Bigg Boss Kannada 11 new promo has been released suc

ಇದು ಬಿಗ್​ಬಾಸ್​. ಇದು ಒಂದು ಕನಸಿನ ಕೋಟೆ. ಅವರವರ ಪ್ರಪಂಚದಿಂದ ಕಳೆದು ಹೋಗಿ ಬಿಗ್​ಬಾಸ್​ ಪ್ರಪಂಚದಲ್ಲಿ ತಮ್ಮನ್ನು ತಾವೇ ಹುಡುಕುವ ಹೋರಾಟ. ಹತ್ತು ಸೀಸನ್​ ದಾಟಿ ಬಂದರೂ ಹಲವಾರು ಪ್ರಶ್ನೆಗಳು ಹಾಗೆವೇ ಇವೆ. ಇಲ್ಲಿ ಬಂದವರಿಗೆ ಬದುಕುವುದು ಕಷ್ಟ ಎನಿಸಿದರೆ, ನೋಡುಗರಿಗೆ ಸ್ಪರ್ಧಿಗಳದ್ದು ನಾಟಕ ಎನಿಸುತ್ತದೆ. ಯುವಕರು ಇಲ್ಲಿ ನಡೆಯುವ ಲವ್​ ಸ್ಟೋರಿಗಳಿಗೆ ನಾನೇ ಡೈರೆಕ್ಟರ್​ ಅಂದ್ರೆ, ಹಿರಿಯರು ಇಲ್ಲಾಗುವ ಜಗಳಗಳಿಗೆ ನಾನೇ ಗಾಡ್​ ಫಾದರ್​ ಎನ್ನುತ್ತಿದ್ದಾರೆ. ಇಷ್ಟಾದರೂ 10 ವರ್ಷ ಕಳೆದರೂ ಬಿಗ್ ಬಾಸ್​ ಯಾರು ಎನ್ನುವ ಕುತೂಹಲ ಇದ್ದೇ ಇದೆ. ಎಷ್ಟೋ ಸಲ ಉತ್ತರ ಕೊಟ್ಟಿದ್ದರೂ, ಬಿಗ್​ಬಾಸ್​ ಎನ್ನುವುದು ಸ್ಕ್ರಿಪ್ಟೆಡ್​ ಆಗಿದೆ ಎನ್ನೋ ಅನುಮಾನ ಇನ್ನೂ ಹಾಗೆಯೇ ಇದೆ...

ಹೀಗೆ ಎನ್ನುತ್ತಲೇ ಬಿಗ್​ಬಾಸ್​  ಸೀಸನ್​ 11ರ ಹೊಸ ಪ್ರೊಮೋ ಒಂದನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿದೆ. ಅಷ್ಟಕ್ಕೂ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್ ಓಪನಿಂಗ್​ಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನಿನ್ನೆ  ಸಂಜೆ  ರಾಜಾ ರಾಣಿ ರೀಲೋಡೆಡ್​ನ ಗ್ರ್ಯಾಂಡ್​ ಫಿನಾಲೆಯ ಸಮಯದಲ್ಲಿ ನಾಲ್ವರು ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಾಗಿದೆ.  ಈಗಾಗಲೇ ಸತ್ಯ ಸೀರಿಯಲ್​ ನಾಯಕಿ ಗೌತಮಿ ಜಾಧವ್, ವಕೀಲ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್‌ ಅವರ ಹೆಸರು  ರಿವೀಲ್ ಮಾಡಲಾಗಿದೆ.  ಈ ನಾಲ್ವರ ಪೈಕಿ ಯಾರು ಸ್ವರ್ಗ ಸೇರುತ್ತಾರೆ, ಯಾರು ನರಕ ಸೇರುತ್ತಾರೆ ಎನ್ನುವುದು ಹಾಗೂ ಉಳಿದ ಸ್ಪರ್ಧಿಗಳು ಯಾರು ಎನ್ನುವುದು ಇಂದು ಸಂಜೆ ಗೊತ್ತಾಗಲಿದೆ.  ಇದಾಗಲೇ ಬಿಗ್​ಬಾಸ್​ ಪ್ರೇಮಿಗಳಿಗೆ ಗೊತ್ತಿರುವಂತೆ ಈ ಸೀಸನ್​ನ ವಿಶೇಷತೆ ಎಂದರೆ ಸ್ವರ್ಗ ಮತ್ತು ನರಕ. ಅಂದ್ರೆ ಒಂದಲ್ಲ, ಎರಡು ಮನೆಗಳು ಇರಲಿವೆ. ‘’ಈ ಬಾರಿ ಬಿಗ್ ಬಾಸ್‌ ಮನೆಯಲ್ಲಿ ಒಂದಲ್ಲ… ಎರಡು ಮನೆ (ಸ್ವರ್ಗ, ನರಕ) ಇರಲಿವೆ ಎಂದು ಸುದೀಪ್​ ಹೇಳಿದ್ದಾರೆ. ‘ಬಿಗ್ ಬಾಸ್’ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಸಲಿ ಆಟ ವೀಕ್ಷಕರಿಂದ ಶುರುವಾಗುತ್ತಿದೆ. ಮನೆಯೊಳಗೆ ಹೋಗುವ ಸ್ಪರ್ಧಿಗಳ ಹೆಸರನ್ನ ನಾವು ಹೇಳ್ತೀವಿ. ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ಎಂಬ ನಿರ್ಧಾರ ನಿಮ್ಮ ಕೈಯಲ್ಲಿದೆ’’ ಎಂದೂ ಅವರು ಹೇಳಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ.  ಇದೀಗ ಸ್ವರ್ಗದಲ್ಲಿ ಏನೆಲ್ಲಾ ಸೌಲಭ್ಯಗಳು ಇವೆ, ನರಕದಲ್ಲಿ ಏನೇನು ಕಷ್ಟಗಳು ಇವೆ ಎಂಬುದನ್ನು ಈ ಪ್ರೊಮೋದಲ್ಲಿ ತೋರಿಸಲಾಗಿದೆ. 

ಬಿಗ್​ಬಾಸ್​ ಮನೆಗೆ ರಾಖಿ ಸಾವಂತ್ ಎಂಟ್ರಿ! ದೊಡ್ಮನೆಯ ಮೂಡು ಹೇಗೆ ಚೇಂಜ್​ ಆಗೋಯ್ತು ನೋಡಿ...

ಇದಾಗಲೇ  ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಉದ್ದುದ್ದ ಬೆಳೆಯುತ್ತಲೇ ಹೋಗುತ್ತಿದೆ. 18 ಜನರು ಸ್ಪರ್ಧಿಗಳು ಈ ಬಾರಿ ಬಿಗ್​ಬಾಸ್​ ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗಿದ್ದರೂ, ಇದಾಗಲೇ 30-40 ಸ್ಪರ್ಧಿಗಳ ಬಗ್ಗೆ ಗಾಳಿ ಸುದ್ದಿ ಹರಡಿವೆ. ಇದಾಗಲೇ ಕೆಲವು ಸ್ಪರ್ಧಿಗಳು ತಾವು ಬಿಗ್​ಬಾಸ್​ಗೆ ಹೋಗುವುದಿಲ್ಲ ಎಂದೂ ಹೇಳಲಾಗಿದೆ. ಮೊನ್ನೆಯಷ್ಟೇ, ಅಭಿಮಾನಿಗಳ ತಲೆಗೆ ಹುಳು ಬಿಡುವ ಫೋಟೋಗಳನ್ನು ಶೇರ್ ಮಾಡಲಾಗಿತ್ತು. ಆದರೆ ಅವುಗಳನ್ನು ಬ್ಲರ್​ ಮಾಡಲಾಗಿತ್ತು.  ಇದರಲ್ಲಿ ಇರುವ ಸೆಲೆಬ್ರಿಟಿಗಳು ಯಾರು ಇರಬಹುದು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇವರು ಇರ್ಬೋದಾ, ಅವರು ಇರ್ಬೋದಾ, ಇವನು ಅವನಲ್ಲ, ಇವಳು ಅವಳಲ್ಲ... ಹೀಗೆ ತಮ್ಮದೇ ಆದ ಊಹೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ಸ್ಯಾಂಡಲ್​ವುಡ್​ ಬ್ಯೂಟಿ, ಎವರ್​ಗ್ರೀನ್​ ತಾರೆ  ಪ್ರೇಮಾ, ಜನಪ್ರಿಯ ಟಿ.ವಿ ನಿರೂಪಕ ಹರೀಶ್ ನಾಗರಾಜು, 'ದಾಸ ಪುರಂದರ' ಮತ್ತು 'ಬೃಂದಾವನ'ದಲ್ಲಿ ನಟಿಸಿರುವ ನಟಿ ಅಮೂಲ್ಯ ಭಾರದ್ವಾಜ್,  'ಗಿಚ್ಚಿ ಗಿಲಿಗಿಲಿ ಸೀಸನ್​ 3' ರ ರನ್ನರ್ ಅಪ್ ಮಾನಸಾ ತುಕಾಲಿ ಸಂತೋಷ್,  ಹಾಸ್ಯನಟ ಹುಲಿ ಕಾರ್ತಿಕ್, 'ಮಗಳು ಜಾನಕಿ' ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಗಾಯಕಿ ಮತ್ತು ನಟಿ ಐಶ್ವರ್ಯಾ ರಂಗರಾಜನ್ ಸಂಭಾವ್ಯ ಪಟ್ಟಿಯಲ್ಲಿದ್ದಾರೆ.  ಆ್ಯಂಕರ್ ಸುಕನ್ಯಾ, ಒಲವಿನ ನಿಲ್ದಾಣದ ನಾಯಕ ಅಕ್ಷಯ್ ನಾಯಕ್, ಕನ್ನಡತಿ ಸೀರಿಯಲ್​ನಲ್ಲಿ ಹರ್ಷನ ತಂಗಿ ಸುಚಿಯಾಗಿದ್ದ ನಟಿ ಅಮೃತಾ ಮೂರ್ತಿ, ಭೀಮಾ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿರುವ ಪ್ರಿಯಾ ಶಠಮರ್ಷಣ ಹೆಸರೂ ಕೇಳಿಬರುತ್ತಿವೆ.

ಅದೇ ರೀತಿ, ನಟಿ ಭವ್ಯಾ ಗೌಡ, ನಟ ದೀಪಕ್​ ಗೌಡ, ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ಪ್ರಖ್ಯಾತ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ , ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ತ್ರಿವಿಕ್ರಮ್, ಸುಕೃತಾ ನಾಗ್, ಗೌತಮಿ ಜಾಧವ್, ಮತ್ತು ಶರತ್ ಕುಮಾರ್ ಹೀಗೆ ಹಲವಾರು ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಇವೆ. ಆದರೆ ಅಂತಿಮ ಹೆಸರು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಕೆಲವೇ ಗಂಟೆಗಳಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ. 

ಯಾರಿಗೆ ಸ್ವರ್ಗ, ಯಾರಿಗೆ ನರಕ? ಬಿಗ್‌​ಬಾಸ್​ ಸ್ಪರ್ಧಿಗಳ ಹಣೆಬರಹ ವೀಕ್ಷಕರ ಕೈಯಲ್ಲಿ! ಹೊಸ ಪ್ರೊಮೋ ರಿಲೀಸ್...

 

Latest Videos
Follow Us:
Download App:
  • android
  • ios