ಆ್ಯಕ್ಸಿಡೆಂಟ್ ಶೂಟಿಂಗ್ನಲ್ಲಿ ಸೀರಿಯಲ್ ನಟರಿಗೂ ಈ ಪರಿ ರಿಸ್ಕಾ? ಮೈ ಜುಂ ಎನ್ನಿಸುವ ವಿಡಿಯೋ ವೈರಲ್
ಧಾರಾವಾಹಿ ಒಂದರ ಅಪಘಾತದ ದೃಶ್ಯದ ಶೂಟಿಂಗ್ ಹೇಗೆ ಮಾಡಲಾಗಿದೆ ಎನ್ನುವ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ನೋಡಿದರೆ ಮೈ ಜುಂ ಎನ್ನುತ್ತದೆ.
ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ.
ಅಂಥದ್ದೇ ಒಂದು ಶೂಟಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕಾಯಲ್ ಎನ್ನುವ ತಮಿಳು ಸೀರಿಯಲ್ನ ಶೂಟಿಂಗ್ ದೃಶ್ಯವಾಗಿದೆ. ಅಪಘಾತವೊಂದರ ಚಿತ್ರೀಕರಣವನ್ನು ಯಾವ ರೀತಿಯಲ್ಲಿ ಮಾಡಲಾಗಿದೆ ಎಂಬ ಬಗ್ಗೆ ಈ ವಿಡಿಯೋದಲ್ಲಿ ಶೇರ್ ಮಾಡಲಾಗಿದೆ. ಇದನ್ನು ನೋಡಿದರೆ ನಿಜಕ್ಕೂ ಮೈ ಜುಂ ಎನ್ನುವುದು ಗ್ಯಾರೆಂಟಿ. ಇದರಲ್ಲಿ ನಟಿ ಅಪಘಾತಗೊಳ್ಳುವ ದೃಶ್ಯವಿದ್ದು, ಅದನ್ನುಯಾವ ರೀತಿ ಶೂಟ್ ಮಾಡಲಾಗಿದೆ ಎನ್ನುವುದನ್ನು ನೋಡಬಹುದು. ನಟಿಗೆ ಹಗ್ಗ ಕಟ್ಟಿ ಹೇಗೆ ನೇತು ಹಾಕಲಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಆ ಹಗ್ಗವನ್ನು ಕಾಣದಂತೆ ಮಾಡಲಾಗುತ್ತದೆ. ಅಪಘಾತವಾದಾಗ ಡಿಕ್ಕಿಯ ರಭಸಕ್ಕೆ ಗಾಳಿಯಲ್ಲಿ ತೇಲಿಹೋಗಿ ಬೀಳುವ ದೃಶ್ಯವನ್ನು ಹೇಗೆ ಮಾಡಲಾಗುತ್ತದೆ ಎನ್ನುವುದನ್ನು ಇದರಲ್ಲಿ ತೋರಿಸಲಾಗಿದೆ.
ಕೈಯಲ್ಲಿ ಒಂದು ರೂಪಾಯಿನೂ ಇರ್ಲಿಲ್ಲ, ಸಾಲ ತೀರಿಸಲು ತಾಳಿ ಕೊಟ್ಟಿದ್ರು... ಪತ್ನಿ ತ್ಯಾಗ ನೆನೆದು ಪ್ರೇಮ್ ಕಣ್ಣೀರು
ಈ ಅಪಘಾತದ ಶೂಟಿಂಗ್ ನೋಡಿದರೆ ತೆರೆಯ ಹಿಂದೆ ನಟ-ನಟಿಯರು ಎಷ್ಟೊಂದು ಸರ್ಕಸ್ ಮಾಡುತ್ತಾರೆ ಎನ್ನುವುದನ್ನು ನೋಡಬಹುದು. ಒಂದು ಸಿನಿಮಾ ಅಥವಾ ಸೀರಿಯಲ್ ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತದೆಯೆಂದು ಹೇಳುವುದು ಕಷ್ಟ. ಹಾಗೆಂದು ಯಾವುದೇ ನಿರ್ದೇಶಕರು ತಮ್ಮ ಸರ್ವ ಪ್ರಯತ್ನವನ್ನೂ ಮಾಡಲೇಬೇಕು. ಅದಕ್ಕಾಗಿಯೇ ವೀಕ್ಷಕರಿಗೆ ಇಷ್ಟವಾಗುವಂಥ ಹೊಸ ಹೊಸ ರೋಚಕತನವನ್ನು ತೋರಿಸಲಾಗುತ್ತದೆ. ವೀಕ್ಷಕರಿಗೆ ರೋಚಕತೆ ಮುಂದಿಡಲು ಇಂಥ ಕೆಲವು ಕಠಿಣ ದೃಶ್ಯಗಳಿಗೆ ನಟ-ನಟಿಯರು ಒಗ್ಗಿಕೊಳ್ಳಲೇಬೇಕು. ಅವರಿಗೆ ಈ ರೀತಿಯ ಶೂಟಿಂಗ್ ಮಾಡುವಾಗ ಎಲ್ಲ ರೀತಿಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯಾದರೂ ಇಂಥ ಆ್ಯಕ್ಷನ್ ಶೂಟಿಂಗ್ ಮಾಡುವುದು ಸುಲಭದ ಮಾತಲ್ಲ ಎನ್ನುವುದೂ ಅಷ್ಟೇ ದಿಟ.
ಇಲ್ಲಿ ಅಪಘಾತದ ಬಳಿಕ ಬಾಯಲ್ಲಿ ರಕ್ತ ಬರುವಂತೆ ಮಾಡಲು ನಟಿ ಮೊದಲೇ ಕೆಂಪು ಬಣ್ಣದ ರಸವನ್ನು ಸೇವನೆ ಮಾಡಿದ್ದಾರೆ. ಅದಾದ ಬಳಿಕ ಕಾರು ಆಕೆಗೆ ಗುದ್ದುತ್ತದೆ. ಗುದ್ದಿದ ಹೊಡೆತಕ್ಕೆ ಬಾಯಿಯಿಂದ ರಕ್ತ ಬರುತ್ತದೆ. ಅದಾದ ಬಳಿಕ ನಟಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರುತ್ತಾಳೆ. ಇವೆಲ್ಲವನ್ನೂ ಅದೆಷ್ಟು ನೈಜವಾಗಿ ತೋರಿಸಿದಂತೆ ಇದರಲ್ಲಿ ಮಾಡಲಾಗಿದೆ ಎನ್ನುವುದನ್ನು ಈ ಕೆಳಗಿರುವ ವಿಡಿಯೋದಲ್ಲಿ ನೋಡಬಹುದು.
ಗಟ್ಟಿಮೇಳದ ಅದಿತಿ- ಪಾರು ಸೀರಿಯಲ್ ಪ್ರೀತು ದಂಪತಿಯ ಸಂಕ್ರಾಂತಿ ಸಂಭ್ರಮ ಹೇಗಿತ್ತು ನೋಡಿ...