ಹೊಂಗನಸು ಸೀರಿಯಲ್‌ನ ಒರಿಜಿನಲ್ ತೆಲುಗಿನಲ್ಲಿ ಪ್ರಸಾರ ಆಗ್ತಿದೆ. ಅದರಲ್ಲಿ ಹೀರೋ ಆಗಿ ನಟಿಸುತ್ತಿರುವ ಮೈಸೂರಿನ ನಟ ಮುಖೇಶ್ ಸೀರಿಯಲ್‌ನಿಂದ ನಾಪತ್ತೆ ಆಗಿದ್ದಾರೆ. ಇದಕ್ಕೆ ಸಹ ನಟ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ರಿಷಿ ಸಾರ್‌ಗೆ ಏನಾಯ್ತು? 

ಗುಪ್ಪೆಡಂಥಾ ಮನಸು ಅನ್ನೋ ತೆಲುಗು ಸೀರಿಯಲ್ ಕನ್ನಡದಲ್ಲಿ 'ಹೊಂಗನಸು' ಎಂಬ ಹೆಸರಿನಲ್ಲಿ ಡಬ್ಬಿಂಗ್ ಆಗಿ ಬರುತ್ತಿದೆ. ಸ್ಟಾರ್ ಸುವರ್ಣದಲ್ಲಿ ಈ ಸೀರಿಯಲ್ ಪ್ರಸಾರ ಆಗುತ್ತಿದೆ. ಡಬ್ಬಿಂಗ್ ಸೀರಿಯಲ್‌ ಆದರೂ ಇದಕ್ಕೆ ಸಾಕಷ್ಟು ಫ್ಯಾನ್ ಫಾಲೊವಿಂಗ್ ಇದೆ. ಈ ಸೀರಿಯಲ್‌ನ ಒರಿಜಿನಲ್‌ ಸ್ಟಾರ್ ಮಾದಲ್ಲಿ ಪ್ರಸಾರವಾಗುತ್ತಿದೆ. ಗುಪ್ಪೆಡಂಥಾ ಮನಸು ಸೀರಿಯಲ್ ತೆಲುಗು ರಾಜ್ಯಗಳಲ್ಲಿ ಸಖತ್ ಫೇಮಸ್. ಇದರ ಹೀರೋ ಪಾತ್ರ ರಿಷಿ ಸಾರ್. ಕಳೆದ ಮೂರು ವರ್ಷಗಳಿಂದ ಈ ಪಾತ್ರವನ್ನು ಲೀಲಾಜಾಲವಾಗಿ ನಟಿಸುತ್ತ ಬಂದವರು ಮುಖೇಶ್ ಗೌಡ. ಇವರು ಮೈಸೂರಿನವರು. ಕನ್ನಡ ಸೀರಿಯಲ್‌ಗಳಲ್ಲೂ ಈ ಹಿಂದೆ ನಟಿಸಿದ್ದರು. ಅದಿತಿ ಪ್ರಭುದೇವ ಅವರೊಂದಿಗಿನ ಸೀರಿಯಲ್‌ನಲ್ಲಿ ಇವರ ನಟನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು.

ಆ ಬಳಿಕ ತೆಲುಗು ಕಿರುತೆರೆಯಿಂದ ಆಫರ್ ಬಂದಿದ್ದೇ ಮುಖೇಶ್ ಅಲ್ಲಿಗೆ ಹಾರಿದರು. ಅಲ್ಲಿ ಸ್ಟಾರ್ ಮಾ ದ 'ಗುಪ್ಪೆಡಂಥಾ ಮನಸು' ಎಂಬ ಸೀರಿಯಲ್‌ಗೆ ಹೀರೋ ಆದರು. ಈ ಪಾತ್ರದಲ್ಲಿ ಅಲ್ಲಿನ ಜನ ಇವರನ್ನು ಸಿಕ್ಕಾಪಟ್ಟೆ ಇಷ್ಟಪಟ್ಟರು. ಇವರ ಖ್ಯಾತಿ ಕೇವಲ ತೆಲುಗು ಭಾಷೆಗಷ್ಟೇ ಸೀಮಿತವಾಗಲಿಲ್ಲ. ನಿಧಾನಕ್ಕೆ ಇವರ ನಟನೆಯ ದಕ್ಷಿಣ ಭಾರತದಾದ್ಯಂತ ಫೇಮಸ್ ಆಯಿತು. ಇದೀಗ ಇವರಿಗೆ ತಮಿಳು, ಕನ್ನಡ ಭಾಷೆಗಳಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ. ಇದೀಗ ಇವರು ಸೀರಿಯಲ್‌ನಿಂದ ನಾಪತ್ತೆ ಆಗಿದ್ದಾರೆ. ಹೀರೋನ ಬರುವಿಕೆಗಾಗಿ ಫ್ಯಾನ್ಸ್ ಜಾತಕ ಪಕ್ಷಿಗಳಂತೆ ಕಾಯೋದೇ ಆಗಿ ಬಿಟ್ಟಿದೆ.

ಬೆಸ್ಟ್ ಗರ್ಲ್ ಫ್ರೆಂಡ್‌ ಆಗೋದು ಹೇಗೆ?: ತಿಂಗಳ ಕಡೇಲಿ ಬಾಯ್ ಫ್ರೆಂಡ್‌‌ನ ವಿಚಾರಿಸೋದು ಹೇಗೆ ಹೇಳ್ತಾರೆ ಕೇಳಿ!

ಈ ನಟ ಸಡನ್ನಾಗಿ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳದೇ ಇರಲು ಇವರು ನಟಿಸುತ್ತಿರುವ ಸಿನಿಮಾ ಕಾರಣ ಎಂದು ಒಂದಿಷ್ಟು ಮಂದಿ ಚರ್ಚೆ ಮಾಡಿದರು. ಸಿನಿಮಾ ಶೂಟಿಂಗ್ ಕಾರಣಕ್ಕೆ ಮುಖೇಶ್ ಸೀರಿಯಲ್‌ನಿಂದ ಹೊರಬಿದ್ದಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿತ್ತು. ಇದು ಇವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿತ್ತು. ಆದರೆ ಇದೀಗ ರಿಯಾಲಿಟಿ ಏನು ಅನ್ನೋದನ್ನು 'ಗುಪ್ಪೆಡಂಥ ಮನಸು' ಸೀರಿಯಲ್‌ನಲ್ಲಿ ಇವರ ತಂದೆ ಪಾತ್ರ ಮಾಡುವ ಜನಪ್ರಿಯ ಕಿರುತೆರೆ ನಟ ಸಾಯಿ ಕಿರಣ್ ಇನ್‌ಸ್ಟಾ ವೀಡಿಯೋದಲ್ಲಿ ಹೇಳಿದ್ದಾರೆ. ಜಿಮ್‌ನಲ್ಲಿ ಪ್ರಾಕ್ಟೀಸ್‌ ಮಾಡುವಾಗ ಮುಖೇಶ್ ಅವರಿಗೆ ಗಾಯವಾಗಿದೆ. ಈ ಏಟು ಕೊಂಚ ಸೀರಿಯಸ್ ಆಗಿದ್ದು, ಎಂಆರ್‌ಐ ಸ್ಕ್ಯಾನ್ ಎಲ್ಲ ಆದ ಬಳಿಕ ವೈದ್ಯರು ಬೆಡ್‌ರೆಸ್ಟ್ ಹೇಳಿದ್ದಾರೆ.

ಹೀಗಾಗಿ ನಟ ಮುಖೇಶ್ ಸೀರಿಯಲ್‌ ಶೂಟಿಂಗ್‌ಗೆ ಹೋಗೋದಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ಕಳೆದೆರಡು ವಾರಗಳಿಂದ 'ಗುಪ್ಪೆಡಂಥ ಮನಸು' ಸೀರಿಯಲ್‌ನಲ್ಲಿ ಹೀರೋ ಪಾತ್ರ ಕಾಣಿಸಿಕೊಂಡಿಲ್ಲ. ಆತ ನಾಪತ್ತೆ ಆಗಿದ್ದಾನೆ ಎಂಬ ರೀತಿ ಕಥೆಯನ್ನು ಸೀರಿಯಲ್ ಟೀಮ್ ಬೆಳೆಸಿದೆ.

ತಾಯಿನ ಬಿಟ್ಟು ಇರ್ತೀನಿ... ಬಾಯ್‌ಫ್ರೆಂಡ್‌ಗೆ ಮೊದಲ ಫೋನ್: 9 ವರ್ಷದ ಫೇಸ್‌ಬುಕ್‌ ಸ್ಟೋರಿ ಬಿಚ್ಚಿಟ್ಟ ಬಿಗ್ ಬಾಸ್ ಪವಿ ಪೂವಪ್ಪ

ಸಹ ನಟ ಸಾಯಿ ಕಿರಣ್ ಈ ಸ್ಪಷ್ಟನೆ ನೀಡುವ ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ಮುಖೇಶ್ ವಿರುದ್ಧ ಒಂದಿಷ್ಟು ಮಾತುಗಳು ಕೇಳಿಬಂದಿದ್ದವು. ಒಂದಿಷ್ಟು ಮಂದಿ ನೆಗೆಟಿವ್ (negative) ಕಾಮೆಂಟ್ ಮಾಡಿದ್ದರು. ಆದರೆ ಇವರ ಫ್ಯಾನ್ಸ್‌ ಯಾರೂ ಅದಕ್ಕೆ ಪ್ರತಿಕ್ರಿಯೆ reaction) ನೀಡಲು ಹೋಗಿಲ್ಲ. ಆದರೂ ಒಂದು ಅಸಾಮಾಧಾನ, ಗೊಂದಲ ಇದ್ದೇ ಇತ್ತು. ಸದ್ಯಕ್ಕೆ ಇದೀಗ ಸಹನಟ ( co actor) ಸ್ಪಷ್ಟನೆ ನೀಡಿದ್ದು ಈ ಗೊಂದಲ ಪರಿಹಾರವಾಗಿದೆ. ರಿಷಿ ಸಾರ್ ಬೇಗ ಚೇತರಿಸಿಕೊಳ್ಳಲಿ ಅಂತ ಅವರ ಫ್ಯಾನ್ಸ್ (fans) ಹಾರೈಸುತ್ತಿದ್ದಾರೆ.

ಮುಖೇಶ್ ಗೌಡ ತೆಲುಗಿನಲ್ಲಿ 'ಗೀತಾ ಶಂಕರ್‌' ಎಂಬ ರೊಮ್ಯಾಂಟಿಕ್ ಡ್ರಾಮಾದಲ್ಲಿ (romantic drama) ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಮುಹೂರ್ತ ನಡೆದಿದೆ. ಚಿತ್ರೀಕರಣವೂ ಆರಂಭವಾಗಿದೆ.