'ತಾರಕ್ ಮೆಹ್ತಾ ಕಾ ಊಲ್ತಾ ಚಷ್ಮಾ' ಖ್ಯಾತಿಯ  ನಟ ಸಮಯ್ ಶಾಗೆ ಕೆಲವು ದಿನಗಳ ಹಿಂದೆ ಬಂದಿದ್ದ ಕೊಲೆ ಬೆದರಿಕೆ ಕರೆಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಸಿಸಿಟಿವಿಯಲ್ಲಿ ಈ ದುಷ್ಕೃತ್ಯಕ್ಕೆ ಸಾಕ್ಷಿಗಳು ಲಭ್ಯವಾಗಿವೆ. 

ಜಡ್ಜ್‌ಗೆ ಸ್ಫೋಟಕ ಬೆದರಿಕೆ ಹಾಕಿದ್ದವ ಅರೆಸ್ಟ್‌ 

ಬೋರಿವಲಿ ನಿವಾಸಿಯಾಗಿರುವ ಸಮಯ್ ಅಕ್ಟೋಬರ್ 27ರಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ದುಷ್ಕರ್ಮಿಗಳ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ' ಈ ವ್ಯಕ್ತಿ ನನ್ನ ನಿವಾಸದ ಬಳಿ ಬಂದು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದ. ಯಾವ ಕಾರಣಕ್ಕೆ ಹೀಗೆ ಮಾಡಿದ ಎಂದು ನನಗೆ ಗೊತ್ತಿಲ್ಲ. ನನಗೆ ತೊಂದರೆ ಕೊಟ್ಟರೆ ಅವನಿಗೇನು ಸಿಗುತ್ತದೆ ಎಂಬುವುದೂ ನನಗೆ ಅರ್ಥವಾಗುತ್ತಿಲ್ಲ. ಆದರೆ ನನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವುದು ಸತ್ಯ. ನಾನು ಈ ವಿಚಾರದ ಬಗ್ಗೆ ಚರ್ಚಿಸಲು ಕಾರಣ ನನ್ನನ್ನು ಪ್ರೀತಿಸುವ ಜನರಿಗೆ ಇದರ ಬಗ್ಗೆ ತಿಳಿಯಬೇಕೆಂದು. ನಮಗೆ ಏನಾದರೂ ನಮ್ಮನ್ನು ಪ್ರೀತಿಸುವವರು ನನ್ನ ಪರ ಹಾಗೂ ನನ್ನ ಕುಟುಂಬದ ಪರ ನಿಲ್ಲುತ್ತಾರೆ ಎಂದು ನಂಬಿದ್ದೇನೆ,' ಎಂದು ಬರೆದುಕೊಂಡಿದ್ದಾರೆ.

 

ಕಾನೂನು ಮೊರೆ ಹೋದ ಕುಟುಂಬ:
'ನಾನು ನನ್ನ ಕುಟುಂಬ ಹಲವು ದಿನಗಳಿಂದ ಇಂಥ ಸ್ಟ್ರೆಸ್‌ಗೆ ಒಳಗಾಗಿದ್ದೇವೆ. ಕೊನೆಗೂ ನಿರ್ಧರಿಸಿ ಪೊಲೀಸರಿಗೆ ದೂರು ನೀಡಿದ್ದೀವಿ,' ಎಂದು ಸಮಯ್ ತಾಯಿ ಖಾಸಗಿ ವಾಹಿನಿಯೊಂದಿಗೆ ಮಾತನಾಡಿ, ತಮ್ಮ ಮನದ ದುಗುಡವನ್ನು ತೋಡಿಕೊಂಡಿದ್ದಾರೆ. 

ನಟ ವಿಜಯ್ ಅಪ್ರಾಪ್ತ ಮಗಳ ಮೇಲೆ ರೇಪ್ ಬೆದರಿಕೆ 

'ಇದೇನು ಮೊದಲ ಸಲವಲ್ಲ. ಕೆಳೆದ 15 ದಿನಗಳಿಂದಸೂ ಬೆದರಿಕೆ ಕರೆಗಳು ಬರುತ್ತಲೇ ಇವೆ. ಮನೆ ಬಳಿ ಬಂದಿರುವುದು ಇದು ಮೂರನೇ ಸಲ. ನಾವು ಮೊದಲನೇ ಮಹಡಿಯಲ್ಲಿ ವಾಸವಿದ್ದೇವೆ. ನಮ್ಮ ಮನೆ ಮುಖ್ಯ ರಸ್ತೆ ಕಡೆ ಮುಖ ಮಾಡುತ್ತದೆ. ನಾನು ಕಿಟಕಿ ಬಳಿ ನಿಂತಿರುವಾಗ ಕೆಲವು ದುಷ್ಕರ್ಮಿಗಳು ಆಟೋದಲ್ಲಿ ಸಮಯ್ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾ ಹೋಗುತ್ತಿದ್ದರು. ನಾನು ಅವರು ಮುಖಗಳನ್ನು ಸರಿಯಾಗಿ ನೋಡಲಾಗಲಿಲ್ಲ. ಅವರಲ್ಲಿ ಒಬ್ಬ ವ್ಯಕ್ತಿ ನಮ್ಮ ಮನೆ ಬಾಗಿಲಿಗೆ ಬಂದು ಕೂಗಲು ಪ್ರಾರಂಭಿಸಿ, ಕೊಲೆ ಮಾಡುವುದಾಗಿ ಹೇಳಿದ. ನಾನು ಅವನ ಬಳಿ ಹೋಗಿ ಯಾಕ್ಹೀಗೆ ಮಾಡುತ್ತಿರುವೆ ಎಂದು ಕೇಳಿದರೂ, ಅವನಿಂದ ಯಾವುದೇ ಉತ್ತರ ಬರಲಿಲ್ಲ. ಇದರಿಂದ ಸಮಯ್‌ಗೆ ತೊಂದರೆ ಆಗುತ್ತದೆ,' ಎಂದು ಸಮಯ್ ತಾಯಿ ಹೇಳಿದ್ದಾರೆ.

ಮನೆ ಬಳಿ ಒಬ್ಬನೇ ವ್ಯಕ್ತಿ ಬಂದಿರುವುದು ಎಂದು ತಿಳಿದುಕೊಂಡ ಕುಟುಂಬ ಸಿಸಿಟಿವಿ ನೋಡಿದೆ. ಬಳಿಕೆ ಐವರು ದುಷ್ಕರ್ಮಿಗಳು ಜೊತೆಗಿರುವುದಾಗಿ ತಿಳಿದು ಬಂದಿದೆ. ಸಮಯ್‌ನ ಚಿತ್ರೀಕರಣಕ್ಕೆ ಕಳುಹಿಸಲು ಹೆದರುತ್ತಿರುವ ಪೋಷಕರು, ಪೊಲೀಸರ ಸಹಾಯ ಬೇಡಿದ್ದಾರೆ..