Asianet Suvarna News Asianet Suvarna News

ಬಿಗ್‌ ಬಾಸ್ ಒಟಿಟಿ 3 ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ವೈರಲ್, ಯಾರಿಗೆಲ್ಲಾ ಚಾನ್ಸ್?

ಬಿಗ್ ಬಾಸ್ ರಿಯಾಲಿಟಿ ಶೋ ಅಬ್ಬರ ಮತ್ತೆ ಆರಂಭಗೊಳ್ಳುತ್ತಿದೆ. ಬಿಗ್ ಬಾಸ್ ಒಟಿಟಿ 3ನೇ ಆವೃತ್ತಿಯಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿಕೊಡುತ್ತಿದ್ದಾರೆ? ಬಿಗ್ ಬಾಸ್ ತಂಡ ಯಾರನ್ನೆಲ್ಲಾ ಸಂಪರ್ಕಿಸಿದೆ?
 

Hindi Bigg Boss Ott 3 Probable list of Contestant Ada Khan confirms Approach ckm
Author
First Published May 21, 2024, 4:20 PM IST

ಮುಂಬೈ(ಮೇ.21) ರಿಯಾಲಿಟಿ ಶೋಗಳಲ್ಲಿ ಅತೀ ದೊಡ್ಡ ಎಂಟರ್‌ಟೈನ್ಮೆಂಟ್ ವೇದಿಕೆಯಾಗಿರುವ ಬಿಗ್ ಬಾಸ್ ಈ ಬಾರಿ ಹಲವು ಹೊಸತನಗಳೊಂದಿಗೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದೀಗ 3ನೇ ಆವೃತ್ತಿ ಬಿಗ್ ಬಾಸ್ ಒಟಿಟಿ ಶೋಗೆ ಸ್ಪರ್ಧಿಗಳು ಯಾರು? ಈ ಕುತೂಹಲಕ್ಕೆ ಕೆಲ ಉತ್ತರಗಳು ಸಿಕ್ಕಿವೆ. ಈಗಾಗಲೇ ಹಿಂದಿ ಬಿಗ್‌ ಬಾಸ್ ಒಟಿಟಿ ತಂಡ ಕೆಲ ನಟ-ನಟಿಯರು, ಸೆಲೆಬ್ರೆಟಿಗಳನ್ನು ಸಂರ್ಪಕಿಸಿದೆ. ಇದರ ಬೆನ್ನಲ್ಲೇ ಒಟಿಟಿ ಸ್ಪರ್ಧಿಗಳ ಸಂಭಾವ್ಯ ಲಿಸ್ಟ್ ವೈರಲ್ ಆಗಿದೆ.

ಬಾಲ್ ವೀರ್ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ಆದಾ ಖಾನ್‌ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಬಿಗ್‌ಬಾಸ್ ತಂಡ ಸಂಪರ್ಕ ಮಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಒಟಿಟಿ ಬಿಗ್‌ ಬಾಸ್‌ನಲ್ಲಿ ಆದಾ ಖಾನ್ ಸ್ಪರ್ಧಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಇವರ ಜೊತಗೆ ಇತರ ಕೆಲ ಸೆಲೆಬ್ರೆಟಿಗಳನ್ನೂ ಬಿಗ್ ಬಾಸ್ ಸಂಪರ್ಕಿಸಿದೆ. 

ನಟಿ ತನಿಷಾ ಕುಪ್ಪಂಡ ಭರ್ಜರಿ ಪ್ರೊಜೆಕ್ಟ್‌ಗೆ ಸದ್ಯದಲ್ಲೇ ಚಾಲನೆ; ಏನದು ಹೊಸ ಬಿಸಿನೆಸ್?

ಹಲವು ಹೆಸರಗಳು ಹರಿದಾಡುತ್ತಿದೆ. ಈ ಪೈಕಿ ಕೆಲವರನ್ನು ಬಿಗ್ ಬಾಸ್ ಒಟಿಟಿ ತಂಡ ಸಂಪರ್ಕಿಸಿದೆ. ಇದರಲ್ಲಿ ಟಿಕ್ ಟಾಕ್ ಮೂಲಕ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅದ್ನನ್ ಶೇಕ್ ಹೆಸರು ಕೇಳಿಬರುತ್ತಿದೆ. ಅದ್ನನ್ ಒಟಿಟಿ ಬಿಗ್ ಬಾಸ್ ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.

ಜನಪ್ರಿಯ ಪಂಜಾಬ್ ನಟಿ ದೆಲ್ಬರ್ ಆರ್ಯ ಒಟಿಟಿ 3ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಪಾಲ್ಗೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲಿಸ್ಟ್‌ನಲ್ಲಿ ಆರ್ಯ ಹೆಸರು ಸೇರಿಕೊಂಡಿದೆ.  ಜನಪ್ರಿಯ ಹಿಂದಿ ಸೀರಿಯಲ್ ನಟಿ ಶಿವಾಂಗಿ ಶರ್ಮಾ ಹೆಸರು ಮುಂಚೂಣಿಯಲ್ಲಿದೆ. ಶಿವಾಂಗಿ ಶರ್ಮಾ ಒಟಿಟಿ ಸೀರಿಸ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಬಿಗ್ ಬಾಸ್ ಒಟಿಟಿ 2ನೇ ಆವೃತ್ತಿಯಲ್ಲಿ ಕಾಣಿಸಿಕೊಂಡ ಫಾಲಕ್ ನಾಜ್ ಸಹೋದರಿ ಶಫಾಖ್ ನಾಜ್ 3ನೇ ಆವೃತ್ತಿಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಿಲ್ ಮಿಲ್ ಗಯೆ, ಬಹು ಹಮಾರಿ ರಜ್ನಿ ಕಾಂತ್ ಸೇರಿದಂತೆ ಹಲವು ಹಿಂದಿ ಸೀರಿಯಲ್ ಮೂಲಕ ಜನಪ್ರಿಯಗೊಂಡಿರುವ ಪಂಕಿತ್ ಥಕ್ಕರ್ ಒಟಿಟಿ 3ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 

ಬಿಗ್ ಬಾಸ್ ಸಾನ್ಯಾ ಅಯ್ಯರ್‌ ಹಾಟ್‌ ಲುಕ್‌; ಇದು ಜಿಮ್‌ ಬಟ್ಟೆ ಅಲ್ವಾ ಎಂದ ನೆಟ್ಟಿಗರು

ಬಿಗ್‌ ಬಾಸ್ ಒಟಿಟಿ 2ನೇ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಕನಾಗಿ ನಡೆಸಿಕೊಟ್ಟಿದ್ದರು. ಮೊದಲ ಆವೃತ್ತಿಯಲ್ಲಿ ಕರಣ್ ಜೋಹರ್ ನಿರೂಪಕನಾಗಿ ಕಾಣಿಸಿಕೊಂಡಿದ್ದರು. 2ನೇ ಆವೃತ್ತಿಯಲ್ಲಿ ಎಲ್ವಿಶ್ ಯಾದವ್ ವಿನ್ನರ್ ಆಗಿ ಹೊರಹೊಮ್ಮಿದ್ದರು.
 

Latest Videos
Follow Us:
Download App:
  • android
  • ios