ಬಿಗ್ ಬಾಸ್ ಸಾನ್ಯಾ ಅಯ್ಯರ್ ಹಾಟ್ ಲುಕ್; ಇದು ಜಿಮ್ ಬಟ್ಟೆ ಅಲ್ವಾ ಎಂದ ನೆಟ್ಟಿಗರು
ಎಲ್ಲಿ ನೋಡಿದರೂ ಸಾನ್ಯಾ ಅಯ್ಯರ್ ಫೋಟೋಗಳು. ಜಿಮ್ ಉಡುಪುಗಳನ್ನು ನೋಡಿ ನೆಟ್ಟಿಗರು ಥ್ರಿಲ್....

ಪುಟ್ಟ ಗೌರಿಯ ಮದುವೆ (Putta gowri maduve) ಧಾರಾವಾಹಿ ಮೂಲಕ ಬಾಲನಟಿಯಾಗಿ ಕರ್ನಾಟಕದ ವೀಕ್ಷಕರಿಗೆ ಪರಿಚಯವಾದ ಸಾನ್ಯಾ ಅಯ್ಯರ್.
ಬಿಗ್ ಬಾಸ್ ಸೀಸನ್ 9ರಲ್ಲಿ ಕಾಣಿಸಿಕೊಳ್ಳುವ ಮುನ್ನವೇ ಸಾನ್ಯಾ ಬಿಗ್ ಟ್ರಾನ್ಸ್‌ಫಾರ್ಮೆಷನ್ ಮಾಡಿಕೊಂಡಿದ್ದರು. ನಮ್ಮ ಪುಟ್ಟ ಗೌರಿ ಎಷ್ಟು ದೊಡ್ಡವಳಾಗಿದ್ದಾಳೆ ಎಂದಿದ್ದರು.
ಬಿಗ್ ಬಾಸ್‌ನಲ್ಲಿ ಮತ್ತಷ್ಟು ಯಂಗ್ ವೀಕ್ಷಕರ ಮನಸ್ಸಿಗೆ ಹತ್ತಿರವಾದ ಸಾನ್ಯಾ ಈಗ ಇಂದ್ರಜಿತ್ ಲಂಕೇಶ್ ನಿರ್ಮಾಣದ 'ಗೌರಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ನ ಹೊಂದಿರುವ ಸಾನ್ಯಾ 650ಕ್ಕೂ ಹೆಚ್ಚು ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಸಾನ್ಯಾ ಫಿಟ್ನೆಸ್ ಬಗ್ಗೆ ಅನೇಕರಿಗೆ ಕ್ಯೂರಿಯಾಸಿಟಿ ಹೆಚ್ಚಿದೆ. ಅಲ್ಲದೆ ಆಗಾಗ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಕನ್ನಡಿ ಮುಂದೆ ನಿಂತು ಕ್ಲಿಕ್ ಮಾಡಿಕೊಂಡಿರುವ ಫೋಟೋ ಹಾಕುತ್ತಾರೆ.
ಜಿಮ್‌ನಲ್ಲೂ ನೀನು ಇಷ್ಟೋಂದು ಹಾಟ್ ಯಾಕೆ ಎಂದು ಕೆಲವರು ಪ್ರಶ್ನೆ ಮಾಡಿದರೆ. ಇನ್ನೂ ಕೆಲವರು ಅದು ಜಿಮ್ ಎಂದು ತಿಳಿಯದೇ ಇದು ಜಿಮ್ ಬಟ್ಟೆ ಅಲ್ವಾ ಎಂದು ಕೇಳುತ್ತಾರೆ.