ವೆಬ್‌ ಸೀರಿಸ್‌ ಲೋಕದಿಂದ ಕಿರುತೆರೆಗೆ ಕಾಲಿಟ್ಟ ಸುಂದರಿ ಇಸ್ಮೀತ್ ಕೊಹ್ಲಿ. ಇದು ಅಂಕಲ್- ಹುಡುಗಿ ಲವ್ ಸ್ಟೋರಿ...  

ಹಿಂದಿ ಕಿರುತೆರೆ ಲೋಕದಲ್ಲಿ ಜಗನ್ನಾಥ್ ಮತ್ತು ಪೂರಿ ದೋಸ್ತಿ ಅನೋಖಿ (Dosti Anokhi) ಧಾರಾವಾಹಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಧಾರಾವಾಹಿಯ ಸಣ್ಣ ವಿಡಿಯೋ ವೈರಲ್ ಆಗಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಹಿರಿಯ ವ್ಯಕ್ತಿ ಜಗನ್ನಾಥ್ ಮಿಶ್ರಾ (Jagganath Mishara) ಮತ್ತು ಹುಡುಗಿ ಪೂರ್ವಿ (Purvi) ಸ್ನೇಹದಿಂದ ಶುರುವಾಗುವ ಈ ಸಂಬಂಧದ ಬಗ್ಗೆ ಧಾರಾವಾಹಿಯ ತಿರುಳೇನು ಎನ್ನುವ ಸಣ್ಣ ಸುಳಿವು ಸಿಕ್ಕಿದೆ. ವೆಬ್‌ ಸೀರಿಸ್‌ ಲೋಕದಲ್ಲಿ ಜನಪ್ರಿಯತೆ ಪಡೆದಿದ್ದ ಇಸ್ಮೀತ್ ಕೊಹ್ಲಿ (Ismeet kohli) ಇದೇ ಮೊದಲ ಬಾರಿ ಧಾರಾವಾಹಿಯನ್ನು ಆಯ್ಕೆ ಮಾಡಿಕೊಂಡಿರುವುದು, ಹೀಗಾಗಿ ತಮ್ಮ ಪಾತ್ರದ ಬಗ್ಗೆ ಹಂಚಿಕೊಂಡಿದ್ದಾರೆ. 

'ದೋಸ್ತಿ ಅನೋಖಿ ಒಂದು ಕ್ಯೂಟ್ ಮತ್ತು ವಿಭಿನ್ನವಾಗಿರುವ ಕಥೆ. ನಾನು ನಿರ್ದೇಶಕರಿಂದ ಕಥೆ ಹೇಳುತ್ತಿರುವಾಗ ನಗುತ್ತಿದ್ದ ಹಾಗೇ ಆನಂದ ಭಾಷ್ಮ ಹರಿದು ಬಂತು. ಬೇರೆ ವಾಹಿನಿಗಳೊಂದಿಗೆ ಕಂಪೇರ್ ಮಾಡಿಕೊಂಡರೆ, ಈ ವಾಹಿನಿ ವಿಭಿನ್ನ ಕಥೆಗಳನ್ನು ಹುಡುಕುತ್ತಾರೆ. ಪ್ರೊಡಕ್ಷನ್‌ನಿಂದ (Production) ಹಿಡಿದು ಎಲ್ಲವೂ ತುಂಬಾ ರಿಯಲ್ ಮತ್ತು ನ್ಯಾಚುರಲ್‌ ಆಗಿರುತ್ತದೆ. ಕಥೆ ಆಯ್ಕೆ ಮಾಡಿಕೊಳ್ಳುವಾಗ ವಾಹಿನಿ ಹೇಗೆ ಈ ಧಾರಾವಾಹಿಯನ್ನು ಸ್ವೀಕಾರ ಮಾಡುತ್ತದೆ ಎಂದು ತಿಳಿದುಕೊಂಡು ಒಪ್ಪಿಕೊಂಡೆ. ನಾನು ತುಂಬಾನೇ ಮುದ್ದಾದ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವೆ. ಹೀಗಾಗಿ ಯಾವ ಕಾರಣಕ್ಕೂ ರಿಜೆಕ್ಟ್ ಮಾಡಲು ಮನಸ್ಸಿರಲಿಲ್ಲ,' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

'ಧಾರಾವಾಹಿಯಲ್ಲಿ ಎಲ್ಲರೂ ಪೂರ್ವಿ ಹುಚ್ಚು ಹುಡುಗಿ ಎಂದುಕೊಂಡಿದ್ದಾರೆ. ಆದರೆ ನನಗೆ ಆಕೆ ತುಂಬಾ ಮುಗ್ಧ ಹುಡುಗಿ ಅನಿಸುತ್ತದೆ. ಪೂರ್ವಿಗೆ ತನ್ನ ಹುಡುಗ ಹೇಗಿರಬೇಕು ಎಂದು ತಲೆಯಲ್ಲಿದೆ. ಹೀಗಾಗಿ ಅದನ್ನು ಗಿಟ್ಟಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡೇ ಮಾಡುತ್ತಾಳೆ. ಪ್ರೀತಿಯೇ ಆಕೆಗೆ ದೊಡ್ಡ ಶಕ್ತಿ. ಯಾರಿಗೂ ನೋವು ಮಾಡುವುದಿಲ್ಲ. ತನ್ನ ಕುಟುಂಬ ಸಂತೋಷವಾಗಿರಲು ಏನ್ ಬೇಕಿದ್ದರೂ ಮಾಡುತ್ತಾಳೆ,' ಎಂದು ಇಸ್ಮೀತ್ ಕೊಹ್ಲಿ ಹೇಳಿದ್ದಾರೆ. 

ಕೆಂಪು ಬಣ್ಣದ Range Rover ಕಾರು ಖರೀದಿಸಿದ ಕಿರುತೆರೆ ನಟಿ ಡಿಂಪಿ ಗಂಗೂಲಿ!

'ಸ್ನೇಹ (Frindship) ಅಂದ್ಮೇಲೆ ಒಬ್ಬರಿಗೆ ಇನ್ನೊಬ್ಬರು ಒಳ್ಳೆಯ ವಿಚಾರಗಳನ್ನು ಹೇಳಿ ಕೊಡುವುದು. ಪೂರ್ವಿ ಜಗನ್ನಾಥ್‌ ಜೀವನಕ್ಕೆ ಎಂಟ್ರಿ ಕೊಟ್ಟಾಗ ಆತನ ವ್ಯಕ್ತಿತ್ವ ಬದಲಾಗುತ್ತದೆ. ಅದರಲ್ಲೂ ಅವರ ಪತ್ನಿ ಕುಸುಮಾ (Kusuma) ಮೇಲೆ ಪರಿಣಾಮ ಬೀರುತ್ತದೆ. ಇಬ್ಬರ ಜೀವನ ಚೆನ್ನಾಗಿರಲಿ, ಎಂದು ಎಲ್ಲಾ ರೀತಿ ಶ್ರಮ ಹಾಕುತ್ತಾರೆ. ಈ ಧಾರಾವಾಹಿ ವೀಕ್ಷಿಸುವವರಿಗೆ ಪ್ರೀತಿಯ ಪ್ರಾಮುಖ್ಯತೆ ತಿಳಿಯುತ್ತದೆ, ಜೀವನದಲ್ಲಿ ಲಾಂಗ್‌ ಟರ್ಮ್‌ ಸಂಬಂಧ (Long term relationship) ಎಷ್ಟು ಮುಖ್ಯ ಎಂದು ಗೊತ್ತಾಗುತ್ತದೆ. ಒಳ್ಳೆ ಜನರೇಷನ್‌ಗೂ ಈಗಿನ ಜನರೇಷ್‌ನವರು ಪ್ರೀತಿಯನ್ನು ಹೇಗೆ ನೋಡುತ್ತಾರೆ ಎಂದು ತಿಳಿಸಲಾಗುತ್ತದೆ' ಎಂದಿದ್ದಾರೆ ಇಸ್ಮೀತ್ ಕೊಹ್ಲಿ. 

ಲವ್ ಮಾಕ್ಟೇಲ್ ಜೋ ಆಗಿ ಮತ್ತೆ ಬದಲಾಗುವುದಕ್ಕೆ ನನಗೆ ಕಷ್ಟವಾಯ್ತು: Amrutha Iyengar

'ನನ್ನ ನಿಜ ಜೀವನಕ್ಕೂ ತೆರೆ ಮೇಲೆ ನೋಡುವ ಪಾತ್ರಕ್ಕೂ ಸಣ್ಣ ವ್ಯತ್ಯಾಸವಿದೆ ಅಷ್ಟೆ. ನಾವಿಬ್ಬರೂ ಮನಸ್ಸಿನಿಂದ ಮಾತನಾಡುವ ವ್ಯಕ್ತಿ ಬಾಯಿಗೆ ಫಿಲ್ಟರ್ ಇಲ್ಲ ನೇರವಾಗಿ ಮಾತನಾಡುತ್ತೇವೆ. ಪೂರ್ವಿ ಪಾತ್ರ ನನಗೆ ತುಂಬಾನೇ ಇಷ್ಟ ಆಗುತ್ತದೆ. ಸಾಮಾನ್ಯ ಹುಡುಗಿಯ ಜೀವನ ಹೇಗಿರುತ್ತದೆ, ಅದನ್ನೇ ತೋರಿಸಲಾಗಿದೆ. ನಾನು ಪ್ರೀತಿ ವಿಚಾರದಲ್ಲಿ ತುಂಬಾನೇ ಪ್ರಾಕ್ಟಿಕಲ್ (Practical Girl). ಪ್ರೀತಿಸಿ ಓಡಿ ಹೋಗುವವಳು ನಾನಲ್ಲ. ಮೊದಲ ಚಿತ್ರೀಕರಣವನ್ನು ನಾವು ಬನಾರಸಿಯಲ್ಲಿ ಮಾಡಿದ್ದು, ಅದೇ ಮೊದಲು ನಾನು ಇಡೀ ತಂಡವನ್ನು ಭೇಟಿ ಮಾಡಿದ್ದು. ಗಂಗಾ ಘಾಟ್‌ ಬಳಿ ಚಿತ್ರೀಕರಣ ಮಾಡುವುದಕ್ಕೆ ಸಂತೋಷವಾಗಿತ್ತು,' ಎಂದಿದ್ದಾರೆ.