ನಾನು ಗರ್ಭಿಣಿ ಅಲ್ಲ, ಇನ್ಮುಂದೆ ಫ್ರೀ ಸೈಜ್ ಶರ್ಟ್‌ ಹಾಕಲ್ಲ: ನಟಿ Disha Parmar

ದಿಶಾ ಲೂಸ್‌ ಶರ್ಟ್‌ ನೋಡಿ ಗರ್ಭಿಣಿ ಎಂದು ವದಂತಿ ಹಬ್ಬಿಸಿದ ನೆಟ್ಟಿಗರಿಗೆ ಇಲ್ಲಿದೆ ಕ್ಲಾರಿಟಿ.

Hindi actress Disha Parmar replies to Pregnancy rumours vcs

ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟಿ ದಿಶಾ ಪಾರ್ಮರ್ (Disha Parmar) ಮತ್ತು ಪತಿ ರಾಹುಲ್ ವೈದ್ಯ (Rahul Vaidya) ಇತ್ತೀಚಿಗೆ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಕೇಸರಿ ಬಣ್ಣದ ಲೂಸ್ ಶರ್ಟ್‌ ಧರಿಸಿ ದಿಶಾ ಪಾರ್ಮರ್ ನೆಟ್ಟಿಗರ ಗಮನ ಸೆಳೆದಿದ್ದಾರೆ. ಲೂಸ್ ಶರ್ಟ್‌ನಲ್ಲಿ ದಿಶಾ ಕೊಂಚ ದಪ್ಪ ಕಾಣಿಸುತ್ತಿರುವುದು ಸತ್ಯ ಕೊಂಚ ಗ್ಲೋ ಆಗುತ್ತಿರುವುದು ಕೂಡ ಸತ್ಯವೇ. ಹೀಗಾಗಿ ದಿಶಾ ಗರ್ಭಿಣಿ ಎಂದು ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. 

2021ರ ಜುಲೈ ತಿಂಗಳಿನಲ್ಲಿ ರಾಹುಲ್ ವೈದ್ಯ ಮತ್ತು ದಿಶಾ ಪಾರ್ಮರ್ ಅದ್ಧೂರಿಯಾಗಿ ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟರು. ಚಿತ್ರೀಕರಣ ಇಲ್ಲದ ಸಮಯದಲ್ಲಿ ಇಬ್ಬರು ಆಗಾಗ ಡೇಟಿಂಗ್ (Dating), ಲಂಚ್‌ ಅಂತ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಮದುವೆಯಾದ ನಂತರವೂ ಇವರಿಬ್ಬರು ಡೇಟಿಂಗ್ ರೂಲ್ ಮಾಡುತ್ತಿರುವ ಕಾರಣ ಕ್ಯಾಮೆರಾ ಸದಾ ಇವರ ಮೇಲಿರುತ್ತದೆ. ರಾಹುಲ್ ಬ್ಲ್ಯಾಕ್ ಟೀ-ಶರ್ಟ್‌ನಲ್ಲಿ ಕಾಣಿಸಿಕೊಂಡರೆ ದಿಶಾ ಪಾರ್ಮರ್ ಶರ್ಟ್‌ ಹಾಕಿದ್ದಾರೆ ಅಲ್ಲದೆ ಕೂದಲು ಗಂಟು ಕಟ್ಟಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಸ್ಟೈಲಿಷ್ ಲುಕ್‌ ಸಖತ್ ವೈರಲ್ ಆಗುತ್ತಿದೆ. 

Alia Bhatt: ಜ್ಯೂ ಎನ್​ಟಿಆರ್​ ಬಳಿ ವಿಶೇಷ ಬೇಡಿಕೆಯಿಟ್ಟ ಬಾಲಿವುಡ್ ನಟಿ!

'ದಿಶಾ ಪಾರ್ಮರ್ ಗ್ಲೋ ಆಗುತ್ತಿದ್ದಾರೆ. ಆಕೆ ಗರ್ಭಿಣಿ (Pregnant) ಇರಬೇಕು, ದಿಶಾ ಸದಾ ಟೈಟ್ ಡ್ರೆಸ್ ಹಾಕಿಕೊಳ್ಳುತ್ತಾರೆ ಇದ್ದಕ್ಕಿದ್ದಂತೆ ಲೂಸ್‌ ಡ್ರೆಸ್‌ ಹಾಕಿಕೊಂಡಿದ್ದಾರೆ ಅಂದ್ರೆ ಹೊಟ್ಟೆ ಬಂದಿರಬೇಕು' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದಿಶಾ ಕುಟುಂಬದವರಿಗೇ ಇದು ಸರ್ಪ್ರೈಸ್ ಆಗಿದ್ದ ಕಾರಣ ಅವರೂ ಕೂಡ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕುವ ಮೂಲಕ ಎಲ್ಲರಿಗೂ ಕ್ಲಾರಿಟಿ ಕೊಟ್ಟಿದ್ದಾರೆ. 

Hindi actress Disha Parmar replies to Pregnancy rumours vcs

ದಿಶಾ ಪೋಸ್ಟ್:

'ಇನ್ನು ಮುಂದೆ ನಾನು ಲೂಸ್ ಅಥವಾ ಓವರ್ ಸೈಜ್ ಇರುವ ಡ್ರೆಸ್‌ ಅಥವಾ ಶರ್ಟ್‌ ಧರಿಸುವುದಿಲ್ಲ. ಹಾಗೆ ನನಗೆ ಪದೇ ಪದೇ ಕರೆ ಮಾಡಿ ಗರ್ಭಿಣಿನಾ ಎಂದು ವಿಚಾರಿಸುತ್ತಿರುವವರಿಗೆ ....ಇಲ್ಲ ನಾನು ಗರ್ಭಿಣಿ ಆಗಿಲ್ಲ' ಎಂದು ಬರೆದುಕೊಂಡಿದ್ದಾರೆ

Aishwarya Salimath Engaged: ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಅಗ್ನಿಸಾಕ್ಷಿ' ನಟಿ ಐಶ್ವರ್ಯಾ ಸಾಲಿಮಠ!

ಈ ಘಟನೆಗೂ ಮುನ್ನ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ದಿಶಾ ಮತ್ತು ರಾಹುಲ್ ಫ್ಯಾಮಿಲಿ ಪ್ಲ್ಯಾನಿಂಗ್ (Family Planning) ಬಗ್ಗೆ ಹಂಚಿಕೊಂಡಿದ್ದಾರೆ. ನಿರೂಪಕಿ ನಿಮ್ಮ ಮಗು ಆಗಮನದ ಬಗ್ಗೆ ಏನಾದರೂ ಪ್ಲ್ಯಾನ್ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ. ನಾನು ಮೊದಲ ದಿನದಿಂದಲೂ ಕಾಯುತ್ತಿರುವೆ ಎಂದು ರಾಹುಲ್ ಹೇಳಿದ್ದಾರೆ. ಅದಕ್ಕೆ 34 ವರ್ಷದ ನಟಿ ನಗು ನಗುತ್ತಲೇ  'ನಾನು ಕೂಡ ತುಂಬಾ ಶ್ರಮದಿಂದ ಇದಕ್ಕೆ ಕೆಲಸ ಮಾಡುತ್ತಿರುವೆ ಎಂದಿದ್ದರು. ಹಾಗೆ ನಾವು ಮದುವೆಯಾಗಿ ಕೇವಲ 7-8 ತಿಂಗಳು ಆಗಿದೆ ಏನೇ ಇದ್ದರೂ ಒಂದು ವರ್ಷದ ನಂತರ ಎಂದಿದ್ದಾರೆ. 'ಸೀರಿಯಸ್ ಆಗಿ ಹೇಳಬೇಕು ಅಂದ್ರೆ ಇದು ದಿಶಾ ನಿರ್ಧಾರವಾಗಿರುತ್ತದೆ. ಆಕೆ ಯಾವಾಗ ರೆಡಿ ಅನ್ನುತ್ತಾಳೆ ನಾವು ಆಗ ಸಂಸಾರ ಶುರು ಮಾಡುವುದು. ಹೆಣ್ಣುಮಕ್ಕಳಿಗೆ ಅವರ ಜೀವನದಲ್ಲಿ ಇದೊಂದು ದೊಡ್ಡ ಚಾಲೆಂಜ್‌. ಇದರಿಂದ ಅವರ ಜೀವನವೇ ಬದಲಾಗುತ್ತದೆ ಅಲ್ವಾ? ಅದಕ್ಕೆ ನಾನು ಆಕೆಗೆ ಸಂಪೂರ್ಣ ಸ್ವಾತಂತ್ರ ನೀಡುವೆ' ಎಂದು ರಾಹುಲ್ ಹೇಳಿದ್ದರು.

Latest Videos
Follow Us:
Download App:
  • android
  • ios