ಮಜಾ ಟಾಕೀಸ್‌ನಲ್ಲಿ ರಾಮಾರ್ಜುನ ಚಿತ್ರ ತಂಡದ ಜೊತೆ ಹರಟೆ. ಹರೀಶ್ ರಾಜ್, ಕುರಿ ಪ್ರತಾಪ್ ಕಾಮಿಡಿ ಹಿಂದಿದೆ ಒಂದು ಕತೆ...
ಸೆಲೆಬ್ರಿಟಿಗಳ ಜೊತೆ ಹರಟೆ, ಚಿತ್ರಗಳ ಬಗ್ಗೆ ಚರ್ಚೆ, ವೀಕೆಂಡ್ ಆದ್ರೆ ಸಾಕು ಮಜಾ ಫ್ಯಾಮಿಲಿ ಜೊತೆಗಿರುತ್ತೆ ಮೋಜು ಮಸ್ತಿ. ಇತ್ತೀಚಿಗೆ ಅದ್ಧೂರಿಯಾಗಿ ತೆರೆ ಕಂಡ ರಾಮಾರ್ಜುನ ಚಿತ್ರತಂಡ ಮಜಾ ಟಾಕೀಸ್‌ಗೆ ಆಗಮಿಸಿದರು. ಕುಚಿಕು ಗೆಳೆಯ ಕುರಿ ಪ್ರತಾಪ್‌ನನ್ನು ನೋಡಿ ಹರೀಶ್ ರಾಜ್ ಬಿಚ್ಚಿಟ್ಟ ಹತ್ತಿ ಕತೆ ಇದು.
'ಹೆಂಗ್ ಮಾಡ್ಕೊಂಡವ್ನೆ ನೋಡು ಕೋತ್ ನನ್ನ ಮಗ ಕುರಿ'; ಪ್ರತಾಪ್ ಗ್ರಾಫಿಕ್ ವಿಡಿಯೋ ವೈರಲ್!
ಹರೀಶ್ ರಾಜ್ ಹಾಗೂ ಪತ್ರಾಪ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಇಬ್ಬರ ಆನ್‌ಸ್ಕ್ರೀನ್ ಕಾಮಿಡಿ ನೋಡಿ ಎಂಜಾಯ್ ಮಾಡುವ ಸಿನಿ ಪ್ರೇಮಿಗಳಿಗೆ ಅಂತು ಇಂತೂ ಪ್ರೀತಿ ಬಂತು ಚಿತ್ರದ ಘಟನೆಯೊಂದನ್ನು ಹೇಳುವ ಮೂಲಕ ಮಜಾ ಮನೆಯಲ್ಲಿದ್ದ ಎಲ್ಲರಿಗೂ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದಾರೆ. ಪ್ರತಾಪ್ ಹಾಗೂ ಹರೀಶ್ ಮಾಡಿರುವ ಬಹುತೇಕ ಚಿತ್ರಗಳಲ್ಲಿ ಇಬ್ಬರಿಗೆ ಡೆಡ್ ಬಾಡಿ ಜೊತೆಗಿರುವ ದೃಶ್ಯ ಇರುತ್ತದಂತೆ. 'ಸಿನಿಮಾದಲ್ಲಿ ಹೀರೋ ತಂದೆ ತೀರೋಗಿದ್ದಾರೆ. ಅದರ ಎಲ್ಲಾ ಪ್ರೋಸೀಜರ್ ನಾನು ಮಾಡಬೇಕಿತ್ತು. ಬಾಡಿ ಮಲಗಿಸಿದ್ದರು ಹತ್ತಿನ ಮೂಗಿನಲ್ಲಿತ್ತು, ಡೈರೆಕ್ಟರ್ ರೋಲ್ ಆ್ಯಕ್ಷನ್ ಅಂತ ಹೇಳಿದರು. ಅವರು ತಕ್ಷಣ ಜೋರಾಗಿ ಹುಸಿರಾಡಿದ್ದಾರೆ ಮೂಗಿನಲ್ಲಿದ ಹತ್ತಿ ಮುಂದಕ್ಕೆ ಹಾರಿ ಬಿತ್ತು. ಆಗ ನಾನು ಪ್ರತಾಪ್ ಒಂದು ಸಲ ಮುಖ ನೋಡಿದ್ವಿ. ಅವತ್ತಿಂದ ಏನೇ ಶಾಟ್ ಬಂದರೂ, ನಾವು ನಗುತ್ತಲೇ ಮಾಡುತ್ತಿದ್ವಿ,' ಎಂದು ಹರೀಶ್ ರಾಜ್ ಮಾತನಾಡಿದ್ದಾರೆ.
'ಮತ್ತೊಂದು ದೃಶ್ಯದಲ್ಲಿ ಹೆಣ ಎತ್ಕೊಂಡು ಹೋಗಬೇಕು, ಜೂನಿಯರ್ ಆರ್ಟಿಸ್ಟ್‌ಗಳು ಬಂದಿದ್ದರು. ಹಿಂದೆ ಅವರಿಬ್ಬರಿದ್ದರು ಮುಂದೆ ನಾವಿದ್ವಿ, ಸನ್ ಸೆಟ್ ಟೈಂ ದೃಶ್ಯ ಸೂಪರ್ ಆಗಿ ಬರುತ್ತೆ ಅಂತ ಶೂಟ್ ಮಾಡಲಾಗಿತ್ತು. ಕ್ಯಾಮೆರಾ ತುಂಬಾನೇ ದೂರ ಇತ್ತು. ಶಾಟ್ ಮಾಡ್ತಿದ್ವಿ ನಮ್ ಮುಂದೆ ಮೋರಿ ಇದೆ. ಡೈರೆಕ್ಟರ್ ಬನ್ನಿ ಅಂತ ಹೇಳ್ತಿದ್ದಾರೆ, ನಾನು ಮೋರಿ ಮೋರಿ ಅಂತ ಕೂಗಾಡುತ್ತಿದ್ವಿ. ಚೆಟ್ಟಾ ಮೇಲಿದ್ದ ಶ್ರೀನಿವಾಸ್ ಮೂರ್ತಿ ಸರ್ ಬೀಳ್ತಿದ್ದೀನಿ ಅಂತ ಕೂಗ್ತಿದ್ದಾರೆ. ಈ ದೃಶ್ಯ ಎಡಿಟ್ ಮಾಡದೆ ಬಳಸಿದ್ದಾರೆ. ಸೂಪರ್ ಆಗಿ ಬಂದಿದೆ,' ಎಂದು ಹರೀಶ್ ಘಟನೆ ಬಗ್ಗೆ ವಿವರಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 6, 2021, 2:04 PM IST