ಹೆಂಗಸರನ್ನು ನೋಡಿದ್ರೆ ನನ್ನ ಗಂಡನಿಗೆ ತುಂಬಾ ಸಂಕೋಚ: ಗೌರೀಶ್ ಅಕ್ಕಿ ಪತ್ನಿ ಮಾಲತಿ

ಬಿಗ್ ಬಾಸ್ ಮನೆಯಲ್ಲಿರುವ ತಮ್ಮ ಗಂಡ ಗೌರೀಶ್ ಅಕ್ಕಿ ಅವರ ಕರುನಾಡಿನ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಪತ್ನಿ ಮಾಲತಿ ಅವರು ತಮ್ಮ ಸೋಷಿಯಲ್ ಮೀಡಿಯಾ, ವಾಟ್ಸ್‌ಅಪ್ ಹಾಗೂ ತಮ್ಮ (GAS)ಅಧಿಕೃತ ಯೂಟ್ಯೂಬ್ ಚಾನೆಲ್  ಮೂಲಕ 'ಸಂದೇಶ'ವೊಂದನ್ನು ಹರಿಬಿಟ್ಟಿದ್ದಾರೆ.

Gourish Akki entered colors kannada bigg Boss season 10 srb

ಪತ್ರಕರ್ತರು ಮತ್ತು ಟಿವಿ ಸುದ್ದಿ ನಿರೂಪಕರಾದ 'ಗೌರೀಶ್ ಅಕ್ಕಿ'ಯವರು 'ಬಿಗ್ ಬಾಸ್ ಕನ್ನಡ'ದ ಸೀಸನ್ 10ನಲ್ಲಿ ಬಿಗ್ ಬಾಸ್ ಮನೆ ಪ್ರವೇಶ ಪಡೆದು, ಸದ್ಯ ಅಲ್ಲಿದ್ದಾರೆ. ನಿನ್ನೆ ನಡೆದ ಬಿಗ್ ಬಾಸ್ 'ಪ್ರೀಮಿಯರ್' ಶೋ ದಲ್ಲಿ ಹೋಸ್ಟ್ ಕಿಚ್ಚ ಸುದೀಪ್ ಗೌರೀಶ್ ಅಕ್ಕಿ ಅವರನ್ನು ಮನೆ ಒಳಗೆ ಕಳುಹಿಸುವ ಮೊದಲು, ಅವರ ಪತ್ನಿ ಮಾಲತಿ ಹಾಗೂ ಮಗ ಆಸ್ತೇಯ ಅವರನ್ನು ವೀಕ್ಷಕರಿಗೆ ಪರಿಚಯಿಸಿದ್ದಾರೆ. ಬಳಿಕ ಸುದೀಪ್ ಫಾರ್ಮಾಲಿಟೀಸ್ ಎಂಬಂತೆ 'ಫ್ಯಾಮಿಲಿ' ಜತೆ ಮಾತನಾಡಿದ್ದಾರೆ. 

ಈ ವೇಳೆ ಅಲ್ಲಿದ್ದ, ಗೌರೀಶ್ ಅಕ್ಕಿ ಹೆಂಡತಿ ಮಾಲತಿ ಅವರಲ್ಲಿ 'ಗಂಡ ಗೌರೀಶ್ ವೀಕ್‌ನೆಸ್‌ ಏನು' ಎಂದು ಕೇಳಿದ್ದಾರೆ. ತಕ್ಷಣವೇ ಉತ್ತರಿಸ ಹೊರಟ ಮಾಲತಿ ಅವರು 'ನನ್ನ ಗಂಡ ಹೆಂಗಸರನ್ನು ಕಂಡರೆ ತುಂಬಾ ಕಷ್ಟ.. ' ಎಂದು ಹೇಳಿ ಮುಂದಕ್ಕೆ ಹೇಳುವ ಮೊದಲು ಒಂದು 'ಗ್ಯಾಪ್' ಕೊಟ್ಟಿದ್ದಾರೆ. ತಕ್ಷಣವೇ ಆ ಗ್ಯಾಪ್ ತಮಗಾಗಿ ಉಪಯೋಗಿಸಿಕೊಂಡ ಸುದೀಪ್  'ಅವರು ಹೆಂಗಸರನ್ನು ಕಂಡರೆ ಕಷ್ಟ.. ಎಂದರೆ.. ಏನು ಅರ್ಥ..' ಎಂದು ಕೇಳಿದ್ದಾರೆ. ತಕ್ಷಣವೇ ಅಲ್ಲಿದ್ದ ಎಲ್ಲರೂ ನಗೆಗಡಲಿನಲ್ಲಿ ತೇಲಿದ್ದಾರೆ. 

ಸುದೀಪ್ ಪ್ರಶ್ನೆ ಮುಗಿಯುತ್ತಿದ್ದಂತೆ ಮಾಲತಿ ಅವರು ಮುಂದುವರೆಸುತ್ತ "ಅಂದರೆ, ಅವರಿಗೆ ಹೆಂಗರಸನ್ನು ಕಂಡರೆ ತುಂಬಾ ನಾಚಿಕೆ (ಶೈ- Shy). ಹೆಂಗಸರನ್ನು ಕಂಡರೆ ಅವರು ಮಾತನಾಡಲು ಕಷ್ಟ ಪಡುತ್ತಾರೆ.  ಬಿಗ್ ಬಾಸ್ ಮನೆಯಲ್ಲಿದ್ದು ಅಲ್ಲಿ ಹೆಂಗಸರೊಂದಿಗೆ ಮಾತನಾಡುವುದು ಅಭ್ಯಾಸವಾದರೆ, ನನಗೆ ತುಂಬಾ ಅನುಕೂಲ ಆಗಲಿದೆ. ಮುಂದೆ ಅವರು ನನ್ನ ಫ್ರಂಡ್ಸ್ ಜತೆಗೂ ಚೆನ್ನಾಗಿ ಮಾತನಾಡಬಹುದು" ಎಂದಿದ್ದಾರೆ. ಮಾಲತಿ ಉತ್ತರದ ಬಳಿಕ ಅಲ್ಲಿದ್ದ ಎಲ್ಲರೂ ಬಿಗಿ ಹಿಡಿದಿದ್ದ ಉಸಿರನ್ನು ಸಡಿಲಗೊಳಿಸಿಕೊಂಡು ನಿರಾಳವಾಗಿ ಉಸಿರಾಡತೊಡಗಿದ್ದಾರೆ. 

ಇದೀಗ ಬಿಗ್ ಬಾಸ್ ಮನೆಯಲ್ಲಿರುವ ತಮ್ಮ ಗಂಡ ಗೌರೀಶ್ ಅಕ್ಕಿ ಅವರ ಕರುನಾಡಿನ ಅಭಿಮಾನಿಗಳು ಹಾಗೂ ಹಿತೈಷಿಗಳಿಗೆ ಪತ್ನಿ ಮಾಲತಿ ಅವರು ತಮ್ಮ ಸೋಷಿಯಲ್ ಮೀಡಿಯಾ, ವಾಟ್ಸ್‌ಅಪ್ ಹಾಗೂ ತಮ್ಮ (GAS)ಅಧಿಕೃತ ಯೂಟ್ಯೂಬ್ ಚಾನೆಲ್  ಮೂಲಕ 'ಸಂದೇಶ'ವೊಂದನ್ನು ಹರಿಬಿಟ್ಟಿದ್ದಾರೆ. ಆ ಮೂಲಕ ಸದ್ಯ ತಮ್ಮಿಂದ ದೂರದಲ್ಲಿ ಬಿಗ್ ಬಾಸ್‌ ಮನೆಯಲ್ಲಿರುವ ತಮ್ಮ ಗಂಡ ಗೌರೀಶ್ ಅಕ್ಕಿ ಅಲ್ಲಿಂದ ಹೊರಗೆ ಬರುವವರೆಗೆ 'ಸಾರ್ವಜನಿಕರ ಸಂಪರ್ಕಕ್ಕೆ'  ಸಿಗಲು ಸಾಧ್ಯವಿಲ್ಲ' ಎಂಬ ಮಾಹಿತಿಯನ್ನು ಹೊರಜಗತ್ತಿಗೆ ಪ್ರಕಟಿಸಿದ್ದಾರೆ. 

BBK 10: ಬಿಗ್‌ಬಾಸ್‌ ಮನೆಯಲ್ಲೂ ಶುರುವಾಯ್ತು ಪ್ರದೀಪ್‌ ಈಶ್ವರ್‌ ಮೋಟಿವೇಷನ್‌ ಸ್ಪೀಚ್‌!

ತಮ್ಮ ಸಂದೇಶದಲ್ಲಿ ಮಾಲತಿ ಅವರು "ನಮಸ್ಕಾರ ಎಲ್ರಿಗೂ.. ಎಲ್ರಿಗೂ ಗೊತ್ತಾಗಿರಬಹುದು, ಈಗ... ಗೌರೀಶ್ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.. ಬಿಡುವಿಲ್ಲದ ಕೆಲಸಗಳ ಮದ್ಯೆ ಸಣ್ಣದೊಂದು ಬದಲಾವಣೆ ಬೇಕಿತ್ತು.. ಹಠ ಮಾಡಿ ನಾನೇ ಕಳಿಸಿದ್ದೇನೆ.. ಗೌರೀಶ್ ಬಗ್ಗೆ ಹೇಳೋದೇನೂ ಬೇಡ .. ನಿಮಗೆಲ್ಲ ಅವರ ಸ್ವಭಾವದ ಪರಿಚಯವಿದೆ.. ಯಾರಿಗೂ ಕೆಡುಕನ್ನ ಬಯಸದ ಮನಸ್ಸೊಂದು ಬಿಗ್ ಬಾಸ್ ಮನೆ ಹೊಕ್ಕಿದೆ.. ಅಲ್ಲಿ ಅವರು ಅವರಾಗೇ ಇರಬಹುದು ಅನ್ನೋ ಆಶಯವೂ ಇದೆ.. ಮಾಧ್ಯಮ ವೃಂದವೇ ನಮ್ಮಿಬ್ಬರ ಗೆಳಯರ ಬಳಗ.. ನಿಮ್ಮ ಸ್ನೇಹಿತನ ಮೇಲಿನ ಪ್ರೀತಿ ಹೀಗೇ ಇರಲಿ.. ಹೊರಗೆ ಬಂದಾಗ ಹಂಚಿಕೊಳ್ಳಲು ಬಹಳಷ್ಟು ವಿಷಯಗಳಿರಬಹುದು.. ಮನೆಯಲ್ಲಿ ಇದ್ದಷ್ಟು ದಿನ ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ.. "ಎಂದು ಬರೆದುಕೊಂಡಿದ್ದಾರೆ.

ಏನೋ ಇದೆ ಅಂತಿದಾರೆ 'ಸುರಸುಂದ್ರ' ಅವಿನಾಶ್ ಬಿಗ್ ಬಾಸ್ ಸೀಕ್ರೆಟ್..! 

ಒಟ್ಟಿನಲ್ಲಿ, ನಿರೂಪಕ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಯೊಳಕ್ಕೆ ಹೋಗುವ ಮೂಲಕ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. 'ಫಾರ್ ಅ ಚೆಂಜ್' ಎನ್ನುವ ರೀತಿ ಅಲ್ಲಿಗೆ ಹೋಗಿರುವ ಅವರ ಮುಂದಿನ 'ಜರ್ನಿ' ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಅಲ್ಲಿನ 'ಟೀಮ್-ಗೇಮ್' ಜತೆ ಗೌರೀಶ್ ಅಕ್ಕಿಯವರು ಹೇಗೆಲ್ಲಾ ಹೊಂದಿಕೊಂಡು ಹೋಗಲಿದ್ದಾರೆ, ಬಿಗ್ ಬಾಸ್ ಗೆಲ್ಲುವ ಅವರ ಕನಸು ಈಡೇರಲಿದೆಯಾ? ಎಲ್ಲವನ್ನೂ ಕಾದು ನೋಡಬೇಕಿದೆ! 

Latest Videos
Follow Us:
Download App:
  • android
  • ios