ಕನ್ನಡದ ಬೆಸ್ಟ್ ಸೀರಿಯಲ್ ಯಾವುದು ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಕನ್ನಡತಿ ಎಂದು ತೋರಿಸುತ್ತಿದೆ. ಇದನ್ನು ಕನ್ನಡತಿ ಧಾರವಾಹಿ ಕಲಾವಿದರು ಶೇರ್ ಮಾಡಿಕೊಂಡು ಖುಷಿಪಟ್ಟಿದ್ದಾರೆ.
ಸದ್ಯ ಕನ್ನಡದಲ್ಲಿ ಪ್ರಸಿದ್ಧ ಧಾರವಾಹಿ ಅಂದ್ರೆ ಅದು ಕನ್ನಡತಿ. ವಾಸ್ತವಕ್ಕೆ ಹತ್ತಿರವಿರೋ ಅಭಿನಯ, ಸರಳತೆಯನ್ನು ನೋಡಿ ಜನರು ಧಾರವಾಹಿಗೆ ಫಿದಾ ಆಗಿದ್ದಾರೆ. ಇದೀಗ ಕನ್ನಡದ ಬೆಸ್ಟ್ ಸೀರಿಯಲ್ ಯಾವುದು ಎಂದು ಸರ್ಚ್ ಮಾಡಿದರೂ ಕನ್ನಡತಿ ಎನ್ನುವುದು ಮೊದಲು ತೋರಿಸುತ್ತಿದೆ. ನಂತರ ಸಾಲಿನಲ್ಲಿ ಇತರ ಧಾರವಾಹಿಗಳು ಕಾಣಿಸಿಕೊಳ್ಳುತ್ತವೆ.
ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಮತ್ತು ಕೆಲವರನ್ನು ಬಿಟ್ಟು ಹೆಚ್ಚಿನ ಹೊಸ ಮುಖಗಳೇ ಇರೋ ಧಾರವಾಹಿ ಕನ್ನಡತಿ. ಸಾರಾ ಅಣ್ಣಯ್ಯ, ರಾಮೋಲ, ಕಿರಣ್ ರಾಜ್ ಕನ್ನಡಿಗರ ಮಟ್ಟಿಗೆ ಹೊಸ ಮುಖಗಳೇ.
ರೀಲ್‌ನಲ್ಲಿ ಜರ್ನಲಿಸ್ಟ್, ರಿಯಲ್‌ನಲ್ಲಿ ಎಂಜಿನಿಯರ್: ಕನ್ನಡತಿಯ ಪೂಜಾ ಇವ್ರೇ
ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿಯೂ ಬಹಳಷ್ಟು ಅವಾರ್ಡ್‌ಗಳನ್ನು ಗಳಿಸಿದ ಸೀರಿಯಲ್ ಇದು. ಸದ್ಯ ಗೂಗಲ್ ಕನ್ನಡತಿ ಸೀರಿಯಲ್‌ಗೆ 4.8 ಸ್ಟಾರ್ ತೋರಿಸುತ್ತಿದೆ.
ವಿಭಿನ್ನ ಕಥಾ ಹಂದರವಿರುವ, ಹೆಚ್ಚು ಸಹಜತೆ ಇರುವಂತಹ ಧಾರವಾಹಿ ಸದ್ಯ ಸಕ್ಸಸ್‌ಫುಲ್ ಆಗಿ ಮುಂದುವರಿಯುತ್ತಿದೆ. ಹೊಸ ಹೊಸ ಟ್ವಿಸ್ಟ್, ಕಥೆಯ ಹರಿವು ತಿರುವು ಮತ್ತಷ್ಟು ವೀಕ್ಷಕರನ್ನು ಸೆಳೆಯುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 9, 2021, 9:23 AM IST