ಬಿಗ್‌ ಬಾಸ್‌ ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ಬೆಳಗಾವಿಯ ಉದ್ಯಮಿ ಗೋಲ್ಡ್‌ ಸುರೇಶ್‌ ಎಂಟ್ರಿ ನೀಡಲಿದ್ದಾರೆ. ಜಿಯೋ ಆಪ್‌ನಲ್ಲಿ ಅಭಿಮಾನಿಗಳ ವೋಟ್‌ ಮೂಲಕ ಸುರೇಶ್‌ ಅವರು ಸ್ವರ್ಗ ಅಥವಾ ನರಕ ಮನೆಗೆ ಹೋಗುವುದು ನಿರ್ಧಾರವಾಗಲಿದೆ.

ಬೆಂಗಳೂರು (ಸೆ.28): ಬಿಗ್‌ ಬಾಸ್‌ ಮನೆಯ ನಾಲ್ಕಯೇ ಸ್ಪರ್ಧಿಯ ಘೋಷಣೆಯಾಗಿದೆ. ಬೆಳಗಾವಿ ಮೂಲದ ರೈತ ಹಾಗೂ ಉದ್ಯಮಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿಯಾಗಲಿದ್ದಾರೆ. ಇವರು ಸ್ವರ್ಗಕ್ಕೋ ಹೋಗಬೇಕೋ? ನರಕಕ್ಕೆ ಹೋಗಬೇಕೋ ಅನ್ನೋದನ್ನ ಅಭಿಮಾನಿಗಳು ನಿರ್ಧಾರ ಮಾಡಲಿದ್ದಾರೆ. ಜಿಯೋ ಆಪ್‌ನಲ್ಲಿ ಕೇವಲ 15 ನಿಮಿಷ ಕಾಲಾವಕಾಶ ಇರಲಿದ್ದು, ಅಷ್ಟರಲ್ಲಿ ಬಂದ ವೋಟ್‌ನ ಆಧಾರದ ಮೇಲೆ ಬಿಗ್‌ ಬಾಸ್‌ನಲ್ಲಿ ಇವರುಗಳು ಯಾವ ಮನೆಗೆ ಹೋಗಲಿದ್ದಾರೆ ಅನ್ನೋದು ನಿರ್ಧಾರವಾಗಲಿದೆ. ತಮ್ಮದೇ ಆದ ಸ್ವಂತ ಉದ್ಯಮ ಹೊಂದಿರುವ ಗೋಲ್ಡಡ್‌ ಸುರೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಮೈಮೇಲಿನ ಆಭರಣದ ಕಾರಣಕ್ಕಾಗಿಯೇ ಸುದ್ದಿಯಾದವರು. ಮೈಮೇಲೆ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನು ಹಾಕಿಕೊಂಡೇ ತಿರುಗಾಡುವ ಗೋಲ್ಡ್‌ ಸುರೇಶ್‌, ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿಯಲ್ಲಿ ಇರ್ತಾರೆ ಅನ್ನೋದರ ಕುತೂಹಲ ಎಲ್ಲರಲ್ಲಿದೆ.

 ಗೋಲ್ಡ್‌ ಸುರೇಶ್‌ ಸದ್ಯ ಬೆಂಗಳೂರಿನಲ್ಲಿದ್ದರೂ, ಅವರ ಮೂಲ ಬೆಳಗಾವಿ ಎನ್ನಲಾಗುತ್ತಿದೆ. ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇರುವ ಗೋಲ್ಡ್‌ ಸುರೇಶ್‌ ಚಿನ್ನದ ವ್ಯಾಪಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಮೊದಲ ಕ್ಯಾಮೆರಾ ಮುಂದೆ ಸುರೇಶ್‌ ಬಂದಿದ್ದಾರೆ. ಮೈಮೇಲೆ ಇವರು ಹಾಕುವ ಆಭರಣದ ಬೆಲೆಯೇ 1 ರಿಂದ 2 ಕೋಟಿ ಎನ್ನಲಾಗುತ್ತದೆ. ಇದೇ ಕಾರಣಕ್ಕಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಇವರು 15 ಸಾವಿರಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲೂ ಗೋಲ್ಡ್‌ ಸುರೇಶ್‌ ಎನ್ನುವ ಹೆಸರನ್ನೇ ಇರಿಸಿಕೊಂಡಿರುವ ಇವರ ರಾಪರ್‌ ಚಂದನ್‌ ಶೆಟ್ಟಿ, ಬಿಜೆಪಿ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ ಅವರೊಂದಿಗೆ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ತಮ್ಮ ಮನೆಯ ನಾಯಿಗೂ ಗೋಲ್ಡ್‌ ಚೈನ್‌ ಹಾಕಿ ಸಂಭ್ರಮಿಸುವ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಯಲ್ಲಿ ಗೋಲ್ಡ್‌ ಆಗಲಿದ್ದಾರೆಯೋ, ರೋಲ್ಡ್‌ ಗೋಲ್ಡ್‌ ಆಗಲಿದ್ದಾರೆಯೋ ಅನ್ನೋದನ್ನ ಮುಂದಿನ ದಿನಗಳು ನಿರ್ಧರಿಸಲಿದೆ.

BBK 11: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಚೈತಾ ಕುಂದಾಪುರ ಬಿಗ್‌ ಬಾಸ್‌ ಮನೆಗೆ ಎಂಟ್ರಿ!

ಈಗಾಗಲೇ ಬಿಗ್‌ ಬಾಸ್‌ ಮನಗೆ ಸೀರಿಯಲ್‌ ತಾರೆ ಗೌತಮ್‌ ಜಾಧವ್‌, ಲಾಯರ್‌ ಕೆಎನ್‌ ಜಗದೀಶ್‌ ಹಾಗೂ ಫೈರ್‌ ಬ್ರ್ಯಾಂಡ್‌ ಭಾಷಣಗಾರ್ತಿ ಚೈತ್ರಾ ಕುಂದಾಪುರ ಎಂಟ್ರಿ ಪಡೆದುಕೊಂಡಿದ್ದಾರೆ. ಇವರು ಸ್ವರ್ಗಕ್ಕೆ ಹೋಗುತ್ತಾರೋ, ನರಕಕ್ಕೆ ಹೋಗುತ್ತಾರೋ ಅನ್ನೋದು ಭಾನುವಾರ ತಿಳಿಯಲಿದೆ.

ದರ್ಶನ್ ಜೈಲಿಗೆ, ಕಿಲ್ಲಿಂಗ್ ಸ್ಟಾರ್ ಬಗ್ಗೆ ಅಪ್ಡೇಟ್ ನೀಡ್ತಿದ್ದ ಲಾಯರ್ ‌ಬಿಗ್ ಬಾಸ್‌ಗೆ