Asianet Suvarna News Asianet Suvarna News

Gicchi Giligili Winner ಕಿರೀಟ ಗೆದ್ದ ವಂಶಿಕಾ, ಎರಡನೇ ಸ್ಥಾನಕ್ಕೆ ನಿವೇದಿತಾ ಗೌಡ!

ಗಿಚ್ಚಿ ಗಿಲಿಗಿಲಿ ಶೋನಲ್ಲಿ ಇಬ್ಬರಿಗೆ ಮೊದಲ ಸೀಸನ್‌ನ ವಿನ್ನರ್ ಮತ್ತು ಇಬ್ಬರಿಗೆ ರನ್ನರ್‌ ಟ್ರೋಫಿ... ಪಡೆದಿರುವುದು ಯಾರು? 

Gicchi giligili winner Vanshika runner up Niveditha gowda colors kannada vcs
Author
First Published Sep 19, 2022, 9:55 AM IST

ಕಲರ್ಸ್‌ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ (Gicchi Giligili) ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 17 ಮತ್ತು 18ರಂದು ನಡೆದಿದೆ. ಫಿನಾಲೆಯಲ್ಲಿ ಒಟ್ಟು ನಾಲ್ವರು ಪ್ರಶಸ್ತಿ ಗೆದಿದ್ದಾರೆ. ಎರಡು ಆಕ್ಟರ್ ವಿಭಾಗದಲ್ಲಿ ಎರಡು ನಾನ್ ಆಕ್ಟರ್ ವಿಭಾಗದಲ್ಲಿ. ಸೃಜನ್ ಲೋಕೇಶ್ (Srujan Lokesh), ಶ್ರುತಿ ಮತ್ತು ಸಾಧು ಕೋಕಿಲ್ ತೀರ್ಪುಗಾರಿಕೆಯಲ್ಲಿ, ನಿರಂಜನ್ ದೇಶಪಾಂಡೆ (Niranjan Deshpande) ನಿರೂಪಣೆಯಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಆರಂಭದಿಂದಲ್ಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಫಿನಾಲೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸ್ಯಾಂಡಲ್‌ವುಡ್‌ ಕನಸಿನ ರಾಣಿ ಮಾಲಾಶ್ರೀ (Malashree) ಆಗಮಿಸಿದ್ದರು. 

ಕಿರೀಟ ಯಾರ ಕೈ ಸೇರಿತ್ತು?

ಗಿಚ್ಚಿ ಗಿಲಿಗಿಲಿ ಸೀಸನ್ ವಿನ್ನರ್: ನಾನ್ ಆಕ್ಟರ್ - ವಂಶಿಕಾ ಅಂಜನಿ ಕಶ್ಯಪಾ
                                                ಆಕ್ಟರ್ - ಶಿವು

ಗಿಚ್ಚಿ ಗಿಲಿಗಿಲಿ ಸೀಸನ್ ರನ್ನರ್: ನಾನ ಆಕ್ಟರ್ - ನಿವೇದಿತಾ ಗೌಡ
                                                 ಆಕ್ಟರ್ - ಗೊಬ್ಬರಗಾಲ

ಮೊದಲ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಮತ್ತು 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಎರಡನೇ ಸ್ಥಾನ ಪಡೆದವರಿಗೆ ಟ್ರೋಫಿ ಮತ್ತು 3 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. 

ಗಿಚ್ಚಿ ಗಿಲಿಗಿಲಿ ಶೋ: ರೀಲ್ಸ್ ಸೌಮ್ಯ ಸ್ಕಿಟ್‌ನಲ್ಲಿ ಡಬಲ್‌ ಮೀನಿಂಗ್ ಜಾಸ್ತಿ?

ಶಿವು ಮಾತು:

'ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಸತ್ಯವಾಗಲೂ ಇದು ನನ್ನ ಗೆಲುವು ಮಾತ್ರವಲ್ಲ ಇಲ್ಲಿ ಇರುವ 20 ಜನರಿಗೂ ಸೇರಬೇಕು. ಡೈರೆಕ್ಟರ್‌ಗಳು, ಸ್ಕ್ರಿಪ್ಟ್‌ ರೈಟರ್‌ಗಳಿಗೆ ಧನ್ಯವಾದಗಳು. ತೀರ್ಪುಗಾರರಿಗೂ ಧನ್ಯವಾದಗಳು'

ವಂಶಿಕಾ:

'ನನಗೆ ಗಿಚ್ಚಿ ಗಿಲಿಗಿಲಿ ಅಂದ್ರೆ ಬಹಳ ಇಷ್ಟ ನನಗೆ ಇಲ್ಲಿ ತುಂಬಾ ಫ್ರೆಂಡ್ಸ್ ಸಿಕ್ಕಿದ್ದಾರೆ. ಅಮ್ಮ ಐ ಲವ್ ಯು, ಅಪ್ಪ ಐ ಲವ್ ಯು, ಸೃಜನ್ ಮಾಮ ಲವ್ ಯು 7 ಮತ್ತು ಅಣ್ಣಯ್ಯ ಲವ್ ಯು 100' 

ಇಬ್ಬರು ವಿನ್ನರ್‌ಗಳು ಟ್ರೋಫಿ ಹಿದಿದುಕೊಂಡು ವಾಕ್ ಮಾಡಿ ಆನಂತರ ಅಪಟ್ಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಆಗಿರುವ ಕಾರಣ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡನ್ನು ಒಟ್ಟಿಗೆ ಹಾಡಿದ್ದಾರೆ. 

ನಿವೇದಿತಾ ಮಾತು:

'ಇಲ್ಲಿ ಬರೋದ ಬೇಡ್ವಾ ಅನಿಸಿದ್ದು ಒಂದೇ ಕಾರಣಕ್ಕೆ ಕಾಮಿಡಿ ಮಾಡುವುದು ತುಂಬಾ ಕಷ್ಟ ಜನರನ್ನು ನಗಿಸುವುದು ಇನ್ನೂ ಕಷ್ಟ ಇದೆಲ್ಲಾ ನನಗೆ ಮಾಡಲು ಆಗುತ್ತಾ ಇಲ್ವಾ ಅನಿಸುತ್ತಿತ್ತು. ಸರಿ ನಾನು ಮಾಡಿದ್ದರೂ ಜನರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋ ಯೋಚನೆ ಇತ್ತು. ಚಂದನ್ ಸದಾ ಹೋಗು ಹೋಗು ಮಾಡು ಏನೂ ಆಗೋಲ್ಲ ಆಕ್ಟಿಂಗ್ ಕಲಿತೀಯ ನಿನಗೆ ತುಂಬಾ ಸಹಾಯ ಆಗುತ್ತೆ ಅಂತ ಮೊದಲು ಸಪೋರ್ಟ್ ಕೊಟ್ಟಿದ್ದು ಚಂದನ್. ನನ್ನ ಪೋಷಕರು ಮತ್ತು ಅತ್ತೆ-ಮಾವ ಅವರಿಗೆ ಧನ್ಯವಾದಗಳು. ತೀರ್ಪುಗರಾರ ಬಗ್ಗೆ ಹೇಳಬೇಕು ಅಂದ್ರೆ ನನ್ನ ಹುಟ್ಟುಹಬ್ಬಕ್ಕೆ ಸೃಜನ್ ಲೋಕೇಶ್ ಸರ್ ಬರೆದಿರುವ ಕವಿತೆ ನನಗೆ ತುಂಬಾ ಸ್ಪೆಷಲ್. ನನ್ನ  ಜಗಪ್ಪ ಜೋಡಿಯಾಗಿ ಸಿಕ್ಕಿದಾಗ ತುಂಬಾ ತುಂಬಾ ಖುಷಿಯಾಗಿದ್ದೆ ಅವರು ಮೆಂಟರಿಂಗ್ ಮಾಡಿ ಚೆನ್ನಾಗಿ ಹೇಳಿಕೊಟ್ಟರು. ಇಲ್ಲಿ ಎಲ್ಲಾ ಮೆಂಟರ್‌ಗಳ ಜೊತೆ ಕೆಲಸ ಮಾಡುವುದುಕ್ಕೆ ಖುಷಿ ಸಿಕ್ಕಿದೆ. ನನ್ನ ಡ್ರೆಸ್ ಡಿಸೈನರ್‌ ಥ್ಯಾಂಕ್ಸ್‌ ನಾನು ಸದಾ ಬ್ಯೂಟಿಫುಲ್ ಆಗಿ ಕಾಣಿಸುವಂತೆ ಮಾಡಿದ್ದು ನೀವು'

ಈಗಲೂ ಸೆಟ್‌ನಲ್ಲಿ ನಟಿ ಶ್ರುತಿ ಎಲ್ಲರನ್ನು ಅಳಿಸುತ್ತಾರೆ: ಯಶಸ್ವಿನಿ

ಗೊಬ್ಬರಗಾಲ ಮಾತು:

'ನನಗೆ ತುಂಬಾ ಖುಷಿಯಾಗುತ್ತಿದೆ. ಡೈರೆಕ್ಷನ್ ಡಿಪಾರ್ಟ್‌ಮೆಂಟ್‌ ಮತ್ತು ಕಲರ್ಸ್‌ ಕನ್ನಡ ವಾಹಿನಿ ಅವರಿಗೆ ನನ್ನ ಧನ್ಯವಾದಗಳು. ಐ ಲವ್ ಯು ಗಿಚ್ಚಿ ಗಿಲಿಗಿಲಿ. ಶೋ ಮುಗಿಯುತ್ತಿರುವುದಕ್ಕೆ ಬೇಸರ ಇದೆ. ಯಾವಾಗ ನನ್ನ ತಂದೆ ತಾಯಿ ವೇದಿಕೆ ಮೇಲೆ ಬಂದ್ರು ಅವತ್ತೇ ನಾನು ಶೋ ಗೆದ್ದೆ. ಈ ಶೋ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವುದಕ್ಕೆ ಖುಷಿ ಹೆಚ್ಚಿದೆ' 

 

Follow Us:
Download App:
  • android
  • ios