ಹಾಸಿಗೆಯಿಂದ ಎದ್ದೇಳಲು ಆಗಲ್ಲ, ಟೂತ್‌ಬ್ರಶ್‌ನಲ್ಲಿ ಉಗುರು ಕ್ಲೀನ್ ಮಾಡುವೆ: ನಿವೇದಿತಾ ಗೌಡ
ಕೈಯಲ್ಲಿರುವ ಎರಡು ದೊಡ್ಡ ಬ್ಯಾಗ್‌ನಲ್ಲಿ ಏನಿರುತ್ತದೆ ಎಂದು ರಿವೀಲ್ ಮಾಡಿದ ನಿವೇದಿತಾ ಗೌಡ. ಮತ್ತೊಂದು ವಿಡಿಯೋ ಟ್ರೋಲ್...
ಕನ್ನಡ ಕಿರುತೆರೆ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ, ಗಿಚ್ಚಿ ಗಿಲಿಗಿಲಿ ಸ್ಪರ್ಧಿ ನಿವೇದಿತಾ ಗೌಡ ಯುಟ್ಯೂಬ್ ಚಾನೆಲ್‌ನಲ್ಲಿ ಡಿಫರೆಂಟ್ ಡಿಫರೆಂಟ್ ಆಗಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈ ಸಲ ತಮ್ಮ ಶೂಟಿಂಗ್‌ಗೆ ಏನೆಲ್ಲಾ ತೆಗೆದುಕೊಂಡು ಹೋಗುತ್ತಾರೆಂದು ವಿಡಿಯೋ ಮಾಡಿದ್ದಾರೆ.
'ಶೂಟಿಂಗ್ ಸಮಯದಲ್ಲಿ ನಾನು ಎರಡು ಬ್ಯಾಗ್ ತೆಗೆದುಕೊಂಡು ಹೋಗುವೆ. ಸಣ್ಣ ಬ್ಯಾಗ್‌ನ ಅಸಿಸ್ಟೆಂಟ್ ಕೈಗೆ ಕೊಡುವೆ. ಏನ್ ಬೇಕಿದ್ದರೂ ಮಾಡಿ ಆದರೆ ನನ್ನ ಬ್ಯಾಗ್ ಮಾತ್ರ ಮಿಸ್ ಮಾಡಬೇಡಿ ನಿಮ್ಮ ಜೊತೆಗಿರಲಿ ಏಕೆಂದರೆ ನನ್ನ ದುಬಾರಿ ವಸ್ತುಗಳು ಅ ಬ್ಯಾಗ್‌ನಲ್ಲಿ ಇರುತ್ತದೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ನನಗೆ 5 ಪಾತ್ರಗಳು ಇರುತ್ತದೆ ಒಂದು ಸ್ಕಿಟ್ ನಡೆದ ನಂತರ ಮತ್ತೊಂದಕ್ಕೆ ಬದಲಾಗಬೇಕು. ಶೂಟಿಂಗ್ ಮುಗಿಸಿದ ಮರು ದಿನ ಹಾಸಿಗೆಯಿಂದ ಎದ್ದೇಳಲು ಆಗಲ್ಲ. 5 ದಿನ ಟ್ರೈನಿಂಗ್ ಪಡೆದು 6ನೇ ದಿನ ಚಿತ್ರೀಕರಣ ನಡೆಯುತ್ತದೆ..ತಿಂಗಳು ಪೂರ್ತಿ ಚಿತ್ರೀಕರಣ ನಡೆಯುತ್ತದೆ.
ಪೂಲ್‌ನಲ್ಲಿ ಚಂದನ್-ನಿವೇದಿತಾ ಲಿಪ್‌ಲಾಕ್; ಇದೆಲ್ಲಾ ನಿಮ್ಮ ಬೆಡ್‌ರೂಮ್‌ನಲ್ಲಿ ಇಟ್ಕೊಳ್ಳಿ ಎಂದ ನೆಟ್ಟಿಗರು!
ಬ್ಯಾಗ್‌ನಿಂದ ನಿವೇದಿತಾ ಮೊದಲು ಹೀಲ್ ಚಪ್ಪಲ್ ತೆಗೆದು ತೋರಿಸಿದ್ದಾರೆ. ಕ್ಯಾಮೆರಾ ಎದುರು ನಾನು ಮಾತನಾಡುವಾಗ ಈ ಸ್ಲಿಪರ್ ಧರಿಸಿದರೆ ಉದ್ದ ಕಾಣುವೆ ಎಲ್ಲಾ ವಸ್ತ್ರಕ್ಕೂ ಮ್ಯಾಚ್ ಆಗುತ್ತದೆ ಎಂದಿದ್ದಾರೆ. ವೆಟ್ ವೈಪ್ಸ್ ಬ್ಯಾಗ್‌ನಲ್ಲಿ ಇರುತ್ತದೆ ಆದರೆ ಒಂದು ದಿನವೂ ಬಳಸಿಲ್ಲವಂತೆ ಶೂಟಿಂಗ್ ಮುಗಿಯುವುದು ರಾತ್ರಿ 2 ಗಂಟೆ ಆಗುತ್ತದೆ ಮನೆಗೆ ಬಂದು ಮಲಗಿದರೆ ಸಾಕು ಅನಿಸುತ್ತದೆ ಅಂತೆ. ಪರ್ಫ್ಯೂಮ್, ಬಾಡಿ ಲೋಷನ್, ಮೊಬೈಲ್ ಚಾರ್ಚರ್ ಹಾಗೂ ಕೊಡೆ ಬ್ಯಾಗ್‌ನಲ್ಲಿರುತ್ತದೆ. 'ಬಿಸಿಲು ಮಳೆಯಿಂದ ನೆಮ್ಮದಿಯಾಗಿರಲು ಕೊಡೆ ಬಳಸುವೆ. ಖರೀದಿ ಮಾಡಿದ ದಿನದಿಂದ ಬಳಸಿಲ್ಲ ಯಾವತ್ತು ನಾನು ತೆಗೆದುಕೊಂಡು ಹೋಗಲ್ಲ ಅವತ್ತು ಇದರ ಅಗತ್ಯವಿರುತ್ತದೆ' ಎಂದು ವಿಡಿಯೋದಲ್ಲಿ ನಿವಿ ಮಾತನಾಡಿದ್ದಾರೆ.
ನೀವ್ಯಾಕ್ ಮಾಡ್ಬಾರ್ದು ಕಾಂತಾರ 2?; ನಿವೇದಿತಾ ಗೌಡ ಸೀರೆ ಲುಕ್‌ಗೆ ನೆಟ್ಟಿಗರು ಕಾಮೆಂಟ್ ವೈರಲ್
ಚಳಿ ತಡೆಯಲು ಕ್ಯಾಪ್ ಹಾಗೂ ಕಲರ್ ಕಲರ್ ಲಿಪ್ ಸ್ಟಿಕ್ ಇರುತ್ತದೆ. 'ಯಾರಿಗೂ ಗೊತ್ತಿಲ್ಲ ಬ್ಯಾಗ್‌ನಲ್ಲಿ ನಾನು ಟೂತ್‌ಬ್ರಶ್ ಇಟ್ಟುಕೊಂಡಿರುವೆ. ಒಂದು ಸ್ಕಿಟ್‌ನಲ್ಲಿ ಅವತಾರ್ ವೇಷ ಧರಿಸಿದ್ದೆ ಮೈ ಕೈ ಎಲ್ಲಾ ನೇರಳೆ ಬಣ್ಣ ಬಟ್ಟೆ ಹಾಕುತ್ತಾರೆ ಅಂದುಕೊಂಡೆ ಆದರೆ ಅಷ್ಟರಲ್ಲಿ ಫುಲ್ ಬಾಡಿ ಪೇಂಟ್ ಮಾಡಿ ಬಿಟ್ಟರು. ಹಲ್ಲು ಉಜ್ಜಲು ಬಳಸಬೇಕು ಆದರೆ ಉಗುರು ಕ್ಲೀನ್ ಮಾಡುವುದಕ್ಕೆ ಬಳಸುವೆ' ಎಂದು ನಿವಿ ಹೇಳಿದ್ದಾರೆ.
ದುಬಾರಿ ವಸ್ತುಗಳು:
ದುಬಾರಿ ವಸ್ತುಗಳನ್ನು ಸಣ್ಣ ಬ್ಯಾಗ್‌ನಲ್ಲಿ ಇಟ್ಟಿರುತ್ತಾರೆ. ಎಲ್ಲಾ ಶೆಡ್‌ನಲ್ಲಿರುವ ಲಿಪ್‌ಸ್ಟಿಕ್ ಇಟ್ಟಿರುತ್ತಾರೆ, ಸ್ವಲ್ಪ ಹಣ, ಪವರ್ ಬ್ಯಾಂಕ್, ವ್ಲಾಗ್ ರೀಲ್ಸ್ ಮಾಡಲು ಮತ್ತೊಂದು ಫೋನ್, ಏರ್‌ಪಾಡ್ಸ್. 'ದಿನ ಆರಂಭಿಸುವ ಮುನ್ನ ನಾನು ಹಾಡು ಕೇಳಿಕೊಂಡು ಶುರು ಮಾಡುವೆ. ಹಾಡು ಕೇಳುವುದರಿಂದ ನನ್ನ ದಿನ ಫುಲ್ ಹ್ಯಾಪಿ ಹ್ಯಾಪಿ ಆಗಿರುತ್ತದೆ. ತುಂಬಾ ಸಲ ಶೂಟಿಂಗ್‌ನಲ್ಲಿ ಮಿಸ್ ಮಾಡಿರುವೆ. ಒಂದು ಸಲ ಕ್ಯಾಬ್‌ನಲ್ಲಿ ಬಿಟ್ಟಿದ್ದೆ. ಫೋನ್‌ನಲ್ಲಿ ಟ್ರ್ಯಾಕ್ ಮಾಡುತ್ತಿರುವೆ ಆದರೆ ಅವರು 1 ಗಂಟೆ ದೂರದಲ್ಲಿ ಇರುವೆ ಎಂದು ಸುಳ್ಳು ಹೇಳುತ್ತಿದ್ದರು ಆಮೇಲೆ ತಂದು ಕೊಟ್ಟರು. ಮತ್ತೊಂದು ಸಲ ನನ್ನ ಅಸಿಸ್ಟೆಂಟ್ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ನಾಲ್ಕು ದಿನ ನನಗೆ ನಿದ್ರೆ ಇರಲಿಲ್ಲ' ಎಂದು ನಿವೇದಿತಾ ಹೇಳಿದ್ದಾರೆ.