ಅಮೃತಧಾರೆ ಭೂಮಿಕಾ ಫುಲ್ ಟೈಟ್! ಈ ಕ್ಯಾರೆಕ್ಟರ್ಗೆ ಇದೆಲ್ಲಾ ಬೇಕಿತ್ತಾ- ಫ್ಯಾನ್ಸ್ ಆಕ್ರೋಶ
ಅಮೃತಧಾರೆ ಭೂಮಿಕಾ ಪಾನೀಯದಲ್ಲಿ ಮದ್ಯ ಸೇವಿಸಿದ ಗೌತಮ್ ಗೆಳೆಯ. ಸೀರಿಯಲ್ ಅಭಿಮಾನಿಗಳಿಂದ ಅಸಮಾಧಾನ.
ಧಾರಾವಾಹಿ ಪ್ರಿಯರು ಒಂದಿಷ್ಟು ಧಾರಾವಾಹಿಗಳನ್ನು ನೋಡಿದರೂ, ಅವರಿಗೆ ಕೆಲವೊಂದು ಸೀರಿಯಲ್ಗಳು ತುಂಬಾ ಇಷ್ಟವಾಗಿಬಿಡುತ್ತವೆ. ಕೆಲವರು ಆ ಸೀರಿಯಲ್ಗಳನ್ನು ತಮ್ಮ ಮನೆಯ ಕಥೆಯೋ ಏನೋ ಎಂಬಂತೆ ಅಂದುಕೊಂಡರೆ, ಇನ್ನು ಕೆಲವರಿಗೆ ಧಾರಾವಾಹಿಗಳಲ್ಲಿನ ಕೆಲವು ಪಾತ್ರಗಳು ಇಷ್ಟವಾಗುವುದು ಉಂಟು. ಮಧ್ಯ ವಯಸ್ಕರಾದರೂ ಮದುವೆಯಾಗದೇ ಇದ್ದ ಹಲವರು ತೊಳಲಾಟದಲ್ಲಿ ಇರುವ ಸಮಯದಲ್ಲಿ ಅಂಥವರಿಗೆ ತುಂಬಾ ಇಷ್ಟವಾದ ಧಾರಾವಾಹಿಗಳಲ್ಲಿ ಒಂದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ ಧಾರಾವಾಹಿ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಒತ್ತಾಯಪೂರ್ವಕವಾಗಿ ವಯಸ್ಸಾಗಿರುವ ಕೋಟ್ಯಧಿಪತಿ ಬಿಜಿನೆಸ್ಮೆನ್ ಜೊತೆ ಮದುವೆಯಾಗಿ ಇಬ್ಬರೂ ಸಂಸಾರದಲ್ಲಿ ಹೊಂದಿಕೊಳ್ಳಲು ಪರದಾಡುತ್ತಿರುವ ಕಥಾಹಂದರವನ್ನು ಹೊಂದಿರುವ ಈ ಧಾರಾವಾಹಿ ಸ್ವಲ್ಪ ವಿಭಿನ್ನ ಎನಿಸಿರುವ ಕಾರಣಕ್ಕೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ. ಇಷ್ಟವಿಲ್ಲದೇ ಅನಿವಾರ್ಯ ಕಾರಣಗಳಿಂದ ಮದುವೆಯಾಗಿದ್ದರೂ ಪತಿ-ಪತ್ನಿಯಾಗಿ ಬಾಳುತ್ತಿಲ್ಲ. ಹಾಗೆಂದು ಇಬ್ಬರ ನಡುವೆ ತಮಗೆ ಅರಿವಿಲ್ಲದೇ ಪ್ರೀತಿ ಮೊಳಗುತ್ತಿದೆ ಎಂದು ತಿಳಿದುಕೊಳ್ಳದಷ್ಟೂ ದಡ್ಡರಲ್ಲ. ಆದರೆ ಅದನ್ನು ಒಪ್ಪಿಕೊಳ್ಳುತ್ತಿಲ್ಲವಷ್ಟೇ. ಇದೇ ಕಾರಣಕ್ಕೆ ಸಣ್ಣಪುಟ್ಟ ವಿಷಯಕ್ಕೂ ಇಬ್ಬರಿಗೂ ಭಿನ್ನಾಭಿಪ್ರಾಯ ಬಂದು ಜಗಳವಾಡುವುದು ನಡೆದೇ ಇದೆ.
ಈ ಪಾತ್ರಗಳಿಗೆ ಭೂಮಿಕಾ ಮತ್ತು ಗೌತಮ್ ಪಾತ್ರಕ್ಕೆ ಪ್ರೇಕ್ಷಕರು ಮರುಳಾಗಿದ್ದಾರೆ. ಇದೇ ಕಾರಣಕ್ಕೆ ಟಿಆರ್ಪಿಯಲ್ಲಿಯೂ ಈ ಸೀರಿಯಲ್ ಮುಂದಿದೆ. ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಂತೆ ಮಾಡುವ ಸೀರಿಯಲ್ಗಳು ಅದ್ಯಾವುದೋ ತಿರುವಿನಲ್ಲಿ ಕೆಲವೊಂದು ಅಸಂಬದ್ಧ ಎನ್ನುವ ದೃಶ್ಯಗಳನ್ನು ಸೇರಿಸಿ ಪ್ರೇಕ್ಷಕರಿಗೆ ನಿರಾಸೆ ಮಾಡುವುದು ಉಂಟು. ಅದರಲ್ಲಿಯೂ ಧಾರಾವಾಹಿಗಳ ಕೆಲವು ಪಾತ್ರಗಳು ಇದೇ ಕಾರಣಕ್ಕೆ ಇಷ್ಟ ಎಂದು ಧಾರಾವಾಹಿ ಪ್ರಿಯರು ಅಂದುಕೊಳ್ಳುವ ಸಂದರ್ಭದಲ್ಲಿ ಆ ಪಾತ್ರಗಳಿಗೆ ಸೂಟ್ ಆಗದ ಕೆಲವೊಂದು ದೃಶ್ಯಗಳನ್ನು ಸೇರಿಸಿದರೆ ನಿಜಕ್ಕೂ ಅದು ಪ್ರೇಕ್ಷಕರಿಗೆ ಸಹ್ಯ ಎನಿಸುವುದೇ ಇಲ್ಲ. ಇದೀಗ ಅಮೃತಧಾರೆ ಸೀರಿಯಲ್ನ ಬಿಡುಗಡೆಯಾಗಿರುವ ಪ್ರೊಮೋ ನೋಡಿ, ಈ ಧಾರಾವಾಹಿ ಪ್ರಿಯರು ತುಂಬಾ ಬೇಸರಿಸಿಕೊಂಡಿದ್ದಾರೆ.
ಸಂಸಾರಿ ಆಗೋದೆಂದ್ರೆ ಸುಮ್ನೇನಾ? 'ಅಮೃತಧಾರೆ' ಪ್ರೋಮೋ ನೋಡಿ ಬ್ಯಾಚುಲರ್ ಲೈಫ್ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್!
ನಾಯಕ ಗೌತಮ್ನ ಕೆಲವು ವಿಷಯಗಳು ನಾಯಕಿ ಭೂಮಿಕಾಗೆ ಇಷ್ಟವಾಗುವುದಿಲ್ಲ, ಹಾಗೆಯೇ ಗೌತಮ್ಗೂ ಕೂಡ. ಆದರೆ ಪರಸ್ಪರ ಅವರು ಈ ವಿಷಯಗಳನ್ನು ಹೇಳಿಕೊಂಡಿರುವುದಿಲ್ಲ. ಅದರಲ್ಲಿಯೂ ಗೌತಮ್ ಚಿತ್ರ-ವಿಚಿತ್ರವಾಗಿ ಗೊರಕೆ ಹೊಡೆಯುವುದು ಭೂಮಿಕಾ ನಿದ್ದೆಯನ್ನೇ ಹಾಳು ಮಾಡಿದೆ. ಆದರೆ ಆಕೆ ಎಂದಿಗೂ ಇದನ್ನು ಗಂಡನಿಗೆ ಹೇಳಿರುವುದಿಲ್ಲ. ಹಾಗೆಂದು ಭೂಮಿಕಾಳ ಮನಸ್ಸಿನಲ್ಲಿ ಗೌತಮ್ ಬಗ್ಗೆ ಏನು ಇದೆ ಎಂದು ತಿಳಿದುಕೊಳ್ಳಲು ಗೌತಮ್ನ ಅಚ್ಚುಮೆಚ್ಚಿನ ಗೆಳೆಯ ಆಕೆಗೆ ಕೊಟ್ಟ ಪಾನೀಯದಲ್ಲಿ ಸ್ವಲ್ಪ ಮದ್ಯ ಬೆರೆಸುತ್ತಾನೆ. ಮದ್ಯವೆಂದು ತಿಳಿಯದ ಭೂಮಿಕಾ ಅದನ್ನು ಕುಡಿದು ತನ್ನ ಗಂಡನ ಗೊರಕೆಯ ಬಗ್ಗೆ ಹೇಳುತ್ತಾಳೆ.
ಇದನ್ನು ಹಾಸ್ಯದ ರೂಪದಲ್ಲಿ ಸೀನ್ ಕ್ರಿಯೇಟ್ ಮಾಡಲಾಗಿದ್ದರೂ, ಇದಕ್ಕೆ ತುಂಬಾ ನೆಗೆಟಿವ್ ಕಮೆಂಟ್ಗಳು ಬರುತ್ತಿವೆ. ಗಂಡ ಪಾರ್ಟಿಯಲ್ಲಿ ಮದ್ಯ ಸೇವನೆ ಮಾಡುತ್ತಾನೆ ಎನ್ನುವ ಕಾರಣಕ್ಕೇ ಅವನ ಜೊತೆ ಹೋಗಲು ಭೂಮಿಕಾ ಒಪ್ಪಿಕೊಂಡಿರುವುದಿಲ್ಲ. ಹಾಗೂ ಹೀಗೂ ಆಕೆಯನ್ನು ಸಮಾಧಾನ ಪಡಿಸಿ ಗೌತಮ್ ಕರೆದುಕೊಂಡು ಹೋಗಿರುತ್ತಾನೆ. ಈಗ ನೋಡಿದ್ರೆ ಆಕೆಗೆ ಮದ್ಯ ಸೇವನೆ ಮಾಡಿಸಿರುವುದು ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದೆ. ಗಂಡನ ಬಗ್ಗೆ ನಾಯಕಿಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಈ ರೀತಿಯ ಚೀಪ್ ಗಿಮಿಕ್ ಮಾಡಿರುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಭೂಮಿಕಾ ಪಾತ್ರಧಾರಿಯ ಕ್ಯಾರೆಕ್ಟರೇ ಬೇರೆ. ಇಂಥ ಕ್ಯಾರೆಕ್ಟರ್ಗೆ ಈ ರೀತಿ ಮೋಸ ಮಾಡಿರುವುದು ಸರಿಯಲ್ಲ ಎಂದು ಹಲವರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಹೆಣ್ಣಿನ ಮೇಲೆರಗಲು ಬಂದವನಿಗೆ ಒದ್ದು ಬುದ್ಧಿ ಕಲಿಸಿದ ಸಹನಾ, ಅತ್ತೆಗೂ ಹಿಂಗೆ ಬುದ್ಧಿ ಕಲಿಸೆಂದ ನೆಟ್ಟಿಗರು!