ಅಮೃತಧಾರೆ ಸೀರಿಯಲ್​  ಮೂಡ್​ನಲ್ಲಿರೋ ಗೌತಮ್​ ಉರ್ಫ್​ ರಾಜೇಶ್​ ನಟರಂಗ, ರಿಯಲ್​ ಹೆಂಡ್ತಿ ಹೆಸ್ರನ್ನೂ ಕನ್​ಫ್ಯೂಸ್ ಮಾಡಿಕೊಂಡದ್ದು ಇದ್ಯಾ? ದಂಪತಿ ಹೇಳಿದ್ದೇನು? 

ಮದುವೆ ಲೇಟ್​ ಆದ್ರೇನಂತೆ, ಗೌತಮ್​ನಂಥ ಗಂಡ ಸಿಕ್ಕರೆ ಎಂಥ ಹೆಣ್ಣು ಕೂಡ ಫುಲ್​ ಖುಷ್​ ಆಗಿ ಇರ್ತಾಳೆ, ಅದೇ ರೀತಿ ಭೂಮಿಕಾಳಂತ ಹೆಂಡ್ತಿ ಸಿಕ್ರೆ ಎಂಥ ಗಂಡಸೂ ರೊಮ್ಯಾಂಟಿಕ್​ ಆಗುತ್ತಾನೆ ಎನ್ನುವ ಸೀರಿಯಲ್ಲೇ ಜೀ ಕನ್ನಡದ ಅಮೃತಧಾರೆ. ಮಧ್ಯ ವಯಸ್ಸಿನ ನವಿರಾದ ಪ್ರೇಮ ಕಥೆಯನ್ನು ಹೊಂದಿರುವ ಈ ಸೀರಿಯಲ್​ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿ ಸೊಸೆಯ ಮುಂದೆ ವಿಲನ್​ ಅತ್ತೆಯದ್ದೇ ಮೇಲುಗೈಯಾದ್ರೆ ಇಲ್ಲಿ ಉಲ್ಟಾ ಆಗಿರುವ ಕಾರಣದಿಂದಲೂ ಇದು ಜನರನ್ನು ಹಿಡಿದಿಟ್ಟುಕೊಂಡಿದೆ. ಅದರಲ್ಲಿಯೂ ಇವರಿಬ್ಬರೂ ಗುಲಾಬಿ ಹೂವು ಹಿಡಿದು ಮಾಡಿಕೊಂಡ ಪ್ರೇಮ ನಿವೇದನೆಗೆ ಹದಿಹರೆಯದವರೂ ನಾಚಿಕೊಂಡದ್ದು ಇದ್ದೆ. ಅಬ್ಬಾ ಎಂಥ ಸುಂದರ ಲವ್​ ಸ್ಟೋರಿ ಎಂದುಕೊಂಡದ್ದು ಇದೆ. ಲವ್​ ಪ್ರಪೋಸ್​ ಮಾಡುವುದು ಹೇಗೆ ಎಂದು ಇಬ್ಬರೂ ಆರಂಭದಲ್ಲಿ ಪ್ರಾಕ್ಟೀಸ್​ ಮಾಡುತ್ತಿದ್ದ ಸಂದರ್ಭದಲ್ಲಿ, ನನ್ನ ಜೀವನದಲ್ಲಿ ನಿಮ್ಮಂಥವರ ಆಗಮನವಾಗಿ ಚಂದ್ರನಿಗೆ ಸೂರ್ಯನ ಕಿರಣ ಬಿದ್ದು, ಪ್ರಜ್ವಲಿಸಿ ಬಿಡುವ ಶಕ್ತಿ ಬಂದ ಹಾಗೆ ಆಯ್ತು, ನಿಮ್ಮ ಸಾಂಗತ್ಯ ಪಡೆದ ನಾನೇ ಪುಣ್ಯವಂತೆ ಎಂದಿದ್ದಳು ಭೂಮಿಕಾ. ಅದು ಒಂದು ಜನ್ಮದ್ದಲ್ಲ. ಏಳೇಳು ಜನ್ಮದ ಇಂಟರೆಸ್ಟ್ ಸಮೇತ ಸಿಕ್ಕಿರುವ ಪುಣ್ಯ. ನಾನು ನಿಮ್ಮನ್ನು ಎಲ್ಲರಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಹುಚ್ಚಿ ತರ ಪ್ರೀತಿಸುತ್ತೇನೆ ಎಂದಾಗ ಪ್ರೇಕ್ಷಕರು ರೋಮಾಂಚನಗೊಂಡಿದ್ದರು.

ಅದೇ ಇನ್ನೊಂದೆಡೆ ಬರೀ ಬಿಜಿನೆಸ್​ ಎಂದು ರೊಮಾನ್ಸ್​ ಗೊತ್ತಿಲ್ಲದೇ ಇದ್ದ ಡುಮ್ಮಾ ಸರ್​ ಕೂಡ ಭೂಮಿಕಾಳಿಗೆ ಲವ್​ ಪ್ರಪೋಸ್ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದ. ಒಟ್ಟಿನಲ್ಲಿ, ದಿನಪೂರ್ತಿ ಸೆಟ್​ನಲ್ಲಿ ಭೂಮಿಕಾ ಅವ್ರೇ ಭೂಮಿಕಾ ಅವ್ರೇ ಎನ್ನುತ್ತಲೇ ಜಪಿಸುತ್ತಿರುವ ಗೌತಮ್​ ಉರ್ಫ್​ ರಾಜೇಶ್​ ನಟರಂಗ ಅವರು, ರಿಯಲ್​ ಲೈಫ್​ ಹೆಂಡತಿ ಚೈತ್ರಾ ಅವರಿಗೂ ಬಾಯ್ತಪ್ಪಿ ಭೂಮಿಕಾ ಅವ್ರೇ ಕಾಫಿ ಮಾಡಿಕೊಡಿ ಅಂದದ್ದು ಇದ್ಯಾ? ಈ ಕುತೂಹಲದ ಪ್ರಶ್ನೆಗೆ ಅಷ್ಟೇ ಹಾಸ್ಯದಿಂದ ರಾಜೇಶ್​ ಅವರು ಹೀಗೆ ಉತ್ತರಿಸಿದ್ದಾರೆ ನೋಡಿ... ಅಂದಹಾಗೆ, ಕೀರ್ತಿ ಎಂಟರ್​ಟೇನ್​ಮೆಂಟ್​ ಕ್ಲೀನಿಕ್​ ಚಾನೆಲ್​ನಲ್ಲಿ ರಾಜೇಶ್​ ನಟರಂಗ ಮತ್ತು ಅವರ ಪತ್ನಿ ಚೈತ್ರಾ ಸಂದರ್ಶನ ನೀಡಿದ್ದು, ಅದರಲ್ಲಿ ಕೀರ್ತಿ ಅವರು ಕೇಳಿರುವ ಈ ಪ್ರಶ್ನೆಗೆ ರಾಜೇಶ್​ ಅವರು ತುಂಬಾ ಕುತೂಹಲದ ಉತ್ತರ ಕೊಟ್ಟಿದ್ದಾರೆ.

ನನ್ನ ಮದ್ವೆಯಾಗೋಕೆ ಯಾರೂ ಸಿದ್ಧನೇ ಇರ್ಲಿಲ್ಲ, ಜಿಗುಪ್ಸೆ ಹುಟ್ಟೋಗಿತ್ತು... ನಟ ರಾಜೇಶ್​ ರಿಯಲ್​ ಲೈಫ್​ ಸ್ಟೋರಿ ಕೇಳಿ...

ನೀವು ಮನೆಗೆ ಹೋದಾಗಲೂ ಬಾಯ್ತಪ್ಪಿ ಭೂಮಿಕಾ ಅಂತೀರಾ ಎಂಬ ಪ್ರಶ್ನೆಗೆ, ಇಲ್ಲಪ್ಪಾ ಹಾಗೇನಿಲ್ಲ ಎಂದರು. ಆಗ ಚೈತ್ರಾ ಅವರು, ಇಲ್ಲಾ ಆ ವಿಷಯದಲ್ಲಿ ಇವ್ರು ತುಂಬಾ ಹುಷಾರು ಎಂದು ತಮಾಷೆ ಮಾಡಿದ್ದಾರೆ. ಆಗ ರಾಜೇಶ್​, ತುಂಬಾ ಸ್ವಿಚ್​ ಆನ್​ ಸ್ವಿಚ್​ ಆಫ್​ ಗೊತ್ತು. ಎಲ್ಲಿ ಆನ್​ ಮಾಡ್​ಬೇಕು, ಎಲ್ಲಿ ಆಫ್​ ಮಾಡ್ಬೇಕು ಎನ್ನೋದು ಗೊತ್ತು. ಹೆಸರು-ಗಿಸರು ಎಲ್ಲಾ ನೆನಪು ಇರಲ್ಲ. ಡಿಸಪಿಯರ್​ ಮೆಸೇಜ್​ ಥರ ಹೆಸ್ರುಗಳೇ ಮರೆತು ಹೋಗುತ್ತೆ ನನಗೆ, ಮುಖ ಮಾತ್ರ ನೆನೆಪು ಇರುತ್ತೆ. ಅದಕ್ಕಾ ಆ ಕನ್​ಫ್ಯೂಷನ್​ ಬರಲ್ಲ. ಇನ್ನು ಬೇಕಾದ್ರೆ ನಿನ್ನ ಹೆಸರೇನೇ ಎಂದು ಹೆಂಡ್ತಿನ ಕೇಳ್ತೀನಿ, ಆದ್ರೆ ಕನ್​ಫ್ಯೂಸ್​ ಆಗಲ್ಲ ಎಂದಿದ್ದಾರೆ. 

ಇನ್ನು ರಾಜೇಶ್ ನಟರಂಗ ಕುರಿತು ಹೇಳುವುದಾದರೆ, ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್‌ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್‌, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.

ಆಯಸ್ಸು ಗಟ್ಟಿ ಇದ್ರೆ ಹೀಗೂ ಆಗತ್ತೆ! ವಾಟರ್​ ಟ್ಯಾಂಕ್​ ಬಿದ್ದರೂ ಮಹಿಳೆ ಜಸ್ಟ್​ ಮಿಸ್​: ಶಾಕಿಂಗ್​ ವಿಡಿಯೋ ವೈರಲ್

View post on Instagram