Asianet Suvarna News Asianet Suvarna News

ಮೊದಲ ಕಂದನ ನಿರೀಕ್ಷೆಯಲ್ಲಿ 'ಭಾಗ್ಯಲಕ್ಷ್ಮಿ' ಸೀರಿಯಲ್​ ವಿಲನ್​ ಶ್ರೇಷ್ಠಾ ಬೇಬಿ ಬಂಪ್​ ಷೋ

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ವಿಲನ್​ ಶ್ರೇಷ್ಠಾ ಪಾತ್ರಧಾರಿಯಾಗಿದ್ದ ಗೌತಮಿ ಗೌಡ ಅವರು ಮೊದಲ ಕಂದನ ನಿರೀಕ್ಷೆಯಲ್ಲಿದ್ದು ಬೇಬಿ ಬಂಪ್​ ಷೋ ಮಾಡಿಸಿಕೊಂಡಿದ್ದಾರೆ. 
 

Gautami Gowda of  Bhagyalakshmi serial baby bump show viral suc
Author
First Published Oct 8, 2023, 1:52 PM IST

ಚಿ ಸೌ ಸಾವಿತ್ರಿ, ತಾಯವ್ವ, ಚೆಲುವಿ, ಚೆಲಿಸುವ ಮೋಡಗಳು, ಭಾಗ್ಯಲಕ್ಷ್ಮೀ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿ ಮನೆಮಾತಾಗಿರುವ ನಟಿ  ಗೌತಮಿ ಗೌಡ ಅಮ್ಮನಾಗುತ್ತಿದ್ದಾರೆ. ತಮ್ಮ ಮೊದಲ ಕಂದನ ನಿರೀಕ್ಷೆಯಲ್ಲಿರುವ ನಟಿ, ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ, ‘ಮಳೆ’, ‘ಜೆಸ್ಸಿ’, ‘ಅಂಬಿ ನಿಂಗ್ ವಯಸ್ಸಾಯ್ತೋ’ ಮುಂತಾದ ಸಿನಿಮಾಗಳಲ್ಲಿಯೂ  ಮಿಂಚಿದ್ದಾರೆ ನಟಿ ಗೌತಮಿ ಗೌಡ. 2018ರಲ್ಲಿ  ಜಾರ್ಜ್ ಕ್ರಿಸ್ಟಿ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಇವರು, ಈಗ ಮೊದಲ ಕಂದನ ನಿರೀಕ್ಷೆಯಲಿದ್ದಾರೆ. 2018ರ ಆಗಸ್ಟ್ 17 ರಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ತಿರುಮಲಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಿಂದೂ ಸಂಪ್ರದಾಯದಂತೆ ಗೌತಮಿ ಗೌಡ - ಜಾರ್ಜ್ ಕ್ರಿಸ್ಟಿ ವಿವಾಹ ಮಹೋತ್ಸವ ಜರುಗಿತು. ಆಗಸ್ಟ್ 19 ರಂದು ಚರ್ಚ್ ವೆಡ್ಡಿಂಗ್ ನಡೆಯಿತು. ಅದೇ ದಿನ ಸಂಜೆ ಆರತಕ್ಷತೆ ನೆರವೇರಿತ್ತು. 

 ನಮ್ಮ ಸಂತೋಷವನ್ನ ಹೆಚ್ಚಿಸಲು ಪುಟಾಣಿ ಬರುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ನಟಿ ಗೌತಮಿ ಗೌಡ ಬರೆದುಕೊಂಡಿದ್ದು, ಬೇಬಿ ಬಂಪ್​ ಷೋ ಮಾಡಿದ್ದಾರೆ. ಪತಿಯ ಜೊತೆಗಿನ ಫೋಟೋಗಳನ್ನೂ ಶೇರ್​ ಮಾಡಿಕೊಂಡಿದ್ದಾರೆ.  ನಟಿ ಆಶಾ ಅಯ್ಯನಾರ್, ಶರ್ಮಿಳಾ ಚಂದ್ರಶೇಖರ್, ರಾಧಿಕಾ ಶ್ರವಂತ್, ಕೃತಿಕಾ ಸೇರಿದಂತೆ ಅನೇಕ ತಾರೆಯರು ನಟಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ದಂಪತಿಗೆ ಶುಭ ಕೋರುತ್ತಿದ್ದಾರೆ.  

ಬಿಗ್​ಬಾಸ್​ ವೇದಿಕೆಯಲ್ಲಿ ಡ್ರೋಣ್​ ಪ್ರತಾಪ್​ ಪ್ರತ್ಯಕ್ಷ! ಕಾಗೆ ಹಾರಿಸೋಕೆ ರೆಡಿನಾ ಅಂತಿದ್ದಾರೆ ನೆಟ್ಟಿಗರು

ಇವರು ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದರೂ ಇವರಿಗೆ ಹೆಚ್ಚು ಹೆಸರು ತಂದುಕೊಟ್ಟಿದ್ದ ಧಾರಾವಾಹಿ ಭಾಗ್ಯಲಕ್ಷ್ಮಿ.  ಲೇಡಿ ವಿಲನ್ ಶ್ರೇಷ್ಠ ಪಾತ್ರದಲ್ಲಿ ಗೌತಮಿ ಗೌಡ ಕಾಣಿಸಿಕೊಂಡಿದ್ದರು. ಆದರೆ ಕಳೆದ ಏಪ್ರಿಲ್​ನಲ್ಲಿ ಇವರು  ಇದ್ದಕ್ಕಿದ್ದಂತೆ ಹೊರ ನಡೆದರು.  'ನನ್ನ ವೈಯಕ್ತಿಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಇಂದು ಹೊರ ಬರಬೇಕಾಯಿತ್ತು. ಇಷ್ಟು ದಿನ ನೆಗೆಟಿವ್ ಪಾತ್ರದಲ್ಲೂ ನನ್ನ ಒಪ್ಪಿ ಹರಸಿದ ನಿಮ್ಮಲ್ಲರಿಗೂ ನನ್ನ ಧನ್ಯವಾದಗಳು' ಎಂದು ಗೌತಮಿ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. 'ತುಂಬಾ ಕಷ್ಟದ ನಿರ್ಧಾರ ಆದರೆ ಅನಿವಾರ್ಯ ಪರಿಸ್ಥಿತಿ. ಆದಷ್ಟು ಬೇಗ ನಿಮಗೆ ಹೇಳುತ್ತೇನೆ. ನಗುನಗುತಾ ಹೊರ ಬಂದಿದ್ದೇನೆ. ಬೇರೆ ಯಾವುದೇ ಕಾರಣ ಇಲ್ಲ. ಇನ್ನು ಮುಂದೆಯೂ ನಿಮ್ಮ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ' ಎಂದಿದ್ದರು. ಇವರು ಏಕೆ ಧಾರಾವಾಹಿ ಬಿಟ್ಟು ಬಂದಿದ್ದರು ಎಂದು ತಲೆ ಕೆಡಿಸಿಕೊಂಡಿದ್ದ ಫ್ಯಾನ್ಸ್​ಗೆ ಈಗ ಅಸಲಿ ಕಾರಣ ತಿಳಿದುಬಂದಿದೆ. 

ಅಂದಹಾಗೆ ಗೌತಮಿ ಅವರಿಗೆ ಹತ್ತು ಹನ್ನೆರಡು ವರ್ಷಗಳ ಕೆಳಗೆ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಸೀರಿಯಲ್ ಚಿ ಸೌ ಸಾವಿತ್ರಿ ಸೀರಿಯಲ್‌  ಸಖತ್ ಪ್ರಸಿದ್ಧಿ ತಂದುಕೊಡ್ತು.  ಈ ಸೀರಿಯಲ್‌ ಬಳಿಕ ತಾಯ್ಯವ್ವ, ಚೆಲುವಿ, ಚಲಿಸುವ ಮೋಡಗಳು, ಅಮ್ಮ ನಿನಗಾಗಿ ಸೇರಿದಂತೆ ಒಂದಿಷ್ಟು ಸೀರಿಯಲ್‌ಗಳಲ್ಲಿ ನಟಿಸಿದರು.  ಗುರು ಸಿನಿಮಾದಲ್ಲಿ ಒಂದೊಳ್ಳೆ ಪಾತ್ರ ಮಾಡಿದರು. ಕೋಟಿಗೊಬ್ಬ 2, ಅಂಬಿ ನಿನಗೆ ವಯಸ್ಸಾಯ್ತು ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು. ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಮಿಂಚಿದರು. ಕುಣಿಯೋಣು ಬಾ, ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸಿಂಗ್ ಸ್ಟಾರ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ನಟನೆ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಬಿಗ್‌ಬಾಸ್‌ ಸೀಸನ್ 3ನಲ್ಲಿ ದೊಡ್ಡ ಮನೆಗೂ ಹೋಗಿ ಬಂದರು.  

India vs Australia: ಡಾ. ಬ್ರೋ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​ ನೀಡಿದ ಸ್ಟಾರ್​ ಸ್ಪೋರ್ಟ್​ನಿಂದ ಕುತೂಹಲದ ಮಾಹಿತಿ

  

Follow Us:
Download App:
  • android
  • ios