ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು | ಸಂಜೆ 6:30ಕ್ಕೆ ಗೌರಿಪುರದ ಗಯ್ಯಾಳಿಗಳು, 7:30 ಕ್ಕೆ ನೇತ್ರಾವತಿ

ಉದಯ ಟಿವಿಯಲ್ಲಿ ಎರಡು ಹೊಸ ಧಾರಾವಾಹಿಗಳು ಇಂದಿನಿಂದ ಆರಂಭಗೊಳ್ಳುತ್ತಿವೆ. ಸಂಜೆ 6:30 ಕ್ಕೆ ಹಾಸ್ಯದ ಲೇಪದೊಂದಿಗೆ ಸಸ್ಪೆನ್ಸ್‌ ಕಥೆ ಇರುವ ಗೌರಿಪುರದ ಗಯ್ಯಾಳಿಗಳು ಹಾಗೂ ಸಂಜೆ 7:30ಕ್ಕೆ ಆಶಾ ಕಾರ್ಯಕರ್ತೆಯೊಬ್ಬಳ ಬದುಕನ್ನಾಧರಿಸಿದ ‘ನೇತ್ರಾವತಿ’ ಧಾರಾವಾಹಿಗಳು ಪ್ರಸಾರವಾಗಲಿವೆ.

Add Asianetnews Kannada as a Preferred SourcegooglePreferred

ಗೌರಿಪುರದ ಗಯ್ಯಾಳಿಗಳು

ಗೌರಿಪುರ ಕಾಲನಿಯ ಮಧ್ಯಮವರ್ಗದ ಗಯ್ಯಾಳಿಗಳ ನಡುವೆ ಗುಲಾಬಿಯಂಥ ಹುಡುಗಿ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬರುವ ಕಥೆ. ಈ ಗಯ್ಯಾಳಿಗಳ ನಡುವೆ ನಡೆಯುವ ಹಾಸ್ಯಮಯ ಪ್ರಸಂಗಗಳು ಹಾಗೂ ಗುಲಾಬಿಯ ನಿಗೂಢ ನಡೆಗಳು ಕಥೆಗೆ ಹೊಸತನದ ಸ್ಪರ್ಶ ನೀಡಿವೆ. ರವಿತೇಜ ನಿರ್ದೇಶನವಿದೆ.

ಡೆಲಿವರಿ ಬಾಯ್‌ ಬೆಂಬಲಕ್ಕೆ ನಿಂತ ನಟಿಯರು..

ನವ್ಯ, ರೋಹಿಣಿ, ದಿವ್ಯ, ವೀಣಾ, ರಚನಾ, ಆರ್ವ ಬಸವಟ್ಟಿ, ರವಿತೇಜ ಮುಖ್ಯಪಾತ್ರಗಳಲ್ಲಿದ್ದಾರೆ. ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ‘ಸುರಾಗ್‌ ಪ್ರೊಡಕ್ಷನ್ಸ್‌’ ಲಾಂಛನದಲ್ಲಿ ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ.

ನೇತ್ರಾವತಿ

ಉತ್ತಮ ಗುಣ ನಡತೆಯ ನೇತ್ರಾವತಿ ಆಶಾ ಕಾರ್ಯಕರ್ತೆಯಾಗಿ ಉದ್ಯೋಗ ಮಾಡುತ್ತಾಳೆ. ಈಗೆ ಮಂಜುನಾಥ ಸ್ವಾಮಿಯ ಭಕ್ತೆ. ವೃತ್ತಿ ಜೀವನದ ಏರಿಳಿತಗಳು ಇವಳನ್ನು ಒಬ್ಬ ಒರಟ ನಾಯಕನ ಮನೆಗೆ ತಂದು ನಿಲ್ಲಿಸುತ್ತದೆ. ಶರೀರದ ಗಾಯಕ್ಕೆ ಮುಲಾಮು ಹಚ್ಚಬಲ್ಲ ನೇತ್ರಾವತಿ, ಆ ಒರಟನ ಮನಸ್ಸಿನ ಗಾಯಕ್ಕೆ ಮದ್ದು ಮಾಡಿ ಅವನಿಗೆ ಸತ್ಯದ ಅರಿವು ಮೂಡಿಸುವುದು ಮುಂದಿನ ಪಯಣ.

"

ಪೂರ್ಣಿಮಾ ಪ್ರೊಡಕ್ಷನ್ಸ್‌ ಲಾಂಛನದಡಿ ‘ನೇತ್ರಾವತಿ’ ಧಾರಾವಾಹಿ ಮೂಡಿಬರಲಿದೆ. ಸಂತೋಷ್‌ಗೌಡ ನಿರ್ದೇಶನದಲ್ಲಿ ದುರ್ಗಾಶ್ರೀ, ಸನ್ನಿ ಮಹಿಪಾಲ್‌, ಸಚಿನ್‌, ಚೈತ್ರಾ ರಾವ್‌, ದಾನಪ್ಪ, ಐಶ್ವರ್ಯ ಮುಂತಾದವರು ಮುಖ್ಯಪಾತ್ರಗಳಲ್ಲಿದ್ದಾರೆ. ಛಾಯಾಗ್ರಹಣ: ದಯಾಕರ್‌, ಸಂಕಲನ: ಗುರುಮೂರ್ತಿ ಹೆಗಡೆ.

ಎರಡು ದಶಕ ನಂತರ ಬಣ್ಣ ಹಚ್ಚುತ್ತಿರುವ ಅಂಜಲಿ

90ರ ದಶಕದಲ್ಲಿ ‘ಅನಂತನ ಆವಾಂತರ’, ‘ತರ್ಲೆ ನನ್ನ ಮಗ’, ‘ನೀನು ನಕ್ಕರೆ ಹಾಲು ಸಕ್ಕರೆ’ ಮುಂತಾದ ಚಿತ್ರಗಳ ನಾಯಕಿಯಾಗಿದ್ದ ಅಂಜಲಿ 22 ವರ್ಷಗಳ ನಂತರ ‘ನೇತ್ರಾವತಿ’ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನೇತ್ರಾವತಿಯ ತಾಯಿ ಭಾಗೀರಥಿ ಪಾತ್ರವನ್ನು ಅಂಜಲಿ ನಿರ್ವಹಿಸಲಿದ್ದಾರೆ.

View post on Instagram
View post on Instagram