ಸತ್ಯ ನಾರಾಯಣ ಸ್ವಾಮಿ ಪೂಜೆ ಸಂಭ್ರಮದಲ್ಲಿ ಪಾರು ಸೀರಿಯಲ್ ನಟಿ ಜನನಿ
ಪಾರು ಸೀರಿಯಲ್ ನಟಿ ಪವಿತ್ರಾ ಬಿ ನಾಯ್ಕ್ ತಮ್ಮ ಮನೆಯಲ್ಲಿ ಸತ್ಯ ನಾರಾಯಣ ಪೂಜೆ ಮಾಡಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಂದೆ ತಾಯಿ ಸಹೋದರಿ ಜೊತೆ ಪೂಜೆ ಮಾಡಿಸಿಕೊಂಡಿದ್ದಾರೆ.
ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ನೋಡುವವರಿಗೆ ಜನನಿ ಚಿರಪರಿಚಿತ. ಅರಸನ ಕೋಟೆ ಅಖಿಲಾಂಡೇಶ್ವರಿ ಎರಡನೇ ಸೊಸೆಯಾಗಿ, ಪ್ರೀತುವಿನ ಪತ್ನಿಯಾಗಿ ನ್ಯಾಚುರಲ್ ಆಗಿ ನಟಿಸುತ್ತಿರುವ ನಟಿಯ ಹೆಸರು ಪವಿತ್ರಾ ಬಿ ನಾಯ್ಕ್.
ಕನ್ನಡ, ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರುವ ಪವಿತ್ರಾ ಬಿ ನಾಯ್ಕ್ (Pavitra B Naik). ಇದೀಗ ತಮ್ಮ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿಸಿದ್ದು, ಈ ಸಂದರ್ಭದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ, ತಾಯಿ ಸಹೋದರಿ ಜೊತೆ ಪೂಜೆ ಮಾಡಿಸಿಕೊಂಡಿದ್ದು, ಸಂಭ್ರಮದ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಪವಿತ್ರಾ ಕರಿಯರ್ ಬಗ್ಗೆ ಮಾತನಾಡೋದಾದರೆ, ಇವರು ನಟನೆಯಲ್ಲಿ ಕರಿಯರ್ ಆಗಿ ಆಯ್ಕೆ ಮಾಡಿದ್ದೇ ವಿಚಿತ್ರ ಸನ್ನಿವೇಶದ ಮೂಲಕ. ನಟನೆ ಬಗ್ಗೆ ಆಸಕ್ತಿಯೇ ಇಲ್ಲದ ಇವರು ಸ್ನೇಹಿತರ ಆಡಿಶನ್‌ಗೆ ಜೊತೆಯಾಗಿ ಹೋದಾಗ, ಚಿತ್ರತಂಡದವರು ಇವರಿಂದಲೂ ಆಡಿಶನ್ ಮಾಡಿಸಲು ಸಿನಿಮಾದಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟರಂತೆ.
ನಟನೆಯ ಬಗ್ಗೆ ಆಸಕ್ತಿಯೇ ಇಲ್ಲದ ಪವಿತ್ರಾ ಇದೀಗ ಕನ್ನಡ ಚಿತ್ರರಂಗ ಸೇರಿ, ಕನ್ನಡ ಕಿರುತೆರೆ, ತೆಲುಗು ಕಿರುತೆರೆಯಲ್ಲೂ ಸಹ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ನ್ಯಾಚುರಲ್ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸಹ ಪಡೆದಿದ್ದಾರೆ.
ಹಿರಿತೆರೆಯ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಪವಿತ್ರ ಲಡ್ಡು, ಸ್ವೇಚ್ಛಾ ಹಾಗೂ ಎಲ್ಲಿ ನನ್ನ ವಿಳಾಸ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಕ್ಷಾ ಬಂಧನ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಅವರು ನಂತರ ‘ಪಾರು’ ಧಾರಾವಾಹಿಯಲ್ಲೂ ಅವಕಾಶ ಗಿಟ್ಟಿಸಿದರು
ಎಂಜಿನಿಯರಿಂಗ್ (engineering) ಪದವಿ ಮುಗಿಸಿರುವ ಪವಿತ್ರಾ, ಸದ್ಯ ಐಟಿ ಕೆಲಸ ಬಿಟ್ಟು, ನಟನೆಯನ್ನೇ ಫುಲ್ ಟೈಮ್ ಜಾಬ್ ಆಗಿ ಸ್ವೀಕರಿಸಿದ್ದಾರೆ. ತೆಲುಗು ಕಿರುತೆರೆಯಲ್ಲೂ ಕಾಣಿಸಿಕೊಂಡಿರುವ ಇವರು ನುವ್ವು ನೇನು ಪ್ರೇಮ ಸೀರಿಯಲ್ ನಲ್ಲಿ ಕನ್ನಡದವರೇ ಆದ ಸ್ವಾಮಿನಾಥನ್ ಅನಂತರಾಮನ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇನ್ನು ಕನ್ನಡದಲ್ಲಿ ಪಾರು ಸೀರಿಯಲ್‌ಗೂ ಮುನ್ನ ಇವರು ರಕ್ಷಾ ಬಂಧನ ಮತ್ತು ಕಾದಂಬರಿ ಸೀರಿಯಲ್‌ನಲ್ಲಿ ನಟಿಸಿದ್ದರು. ಆದರೆ ಇವರಿಗೆ ಅದೃಷ್ಟವೇ ಕೈಹಿಡಿಯಲಿಲ್ಲ. ಎರಡೂ ಸೀರಿಯಲ್ ಕೂಡ ಅರ್ಧದಲ್ಲೇ ನಿಂತಿತ್ತು. ಆದರೆ ಇವರಿಗೆ ಆಗಾಲೆ ಅಭಿಮಾನಿಗಳ ಬಳಗ ಸೃಷ್ಟಿಯಾಗಿತ್ತು.
ಸದ್ಯ ಕನ್ನಡದಲ್ಲಿ ಪಾರು ಸೀರಿಯಲ್ ನಲ್ಲಿ ಬ್ಯುಸಿಯಾಗಿರುವ ಪವಿತ್ರಾ, ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ಟೀವ್. ಇವರು ಹಲವಾರು ರೀಲ್ಸ್ ಮಾಡುತ್ತಾ ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ಟ್ರೆಡಿಶನಲ್ ಫೋಟೋ ಶೂಟ್ ಮಾಡಿಸಿಕೊಂಡು ಫೋಟೋಗಳನ್ನು ಸಹ ಶೇರ್ ಮಾಡ್ತಾರೆ.