Asianet Suvarna News Asianet Suvarna News

ಗಟ್ಟಿಮೇಳದ ವೇದಾಂತ್​-ಅಮೂಲ್ಯರ ರೊಮ್ಯಾನ್ಸ್​ ಪಯಣ ಹೀಗಿತ್ತು ನೋಡಿ... ವಿಡಿಯೋ ವೈರಲ್​...

ಗಟ್ಟಿಮೇಳ ಸೀರಿಯಲ್​ ಮುಕ್ತಾಯಗೊಂಡಿದ್ದು ಇದರ ನಾಯಕರಾಗಿರುವ ವೇದಾಂತ್​ ಮತ್ತು ಅಮೂಲ್ಯ ಇಬ್ಬರ ಪಯಣ ಹೇಗಿತ್ತು? ವಿಡಿಯೋ ವೈರಲ್​ 
 

Gatti Mela serial has ended and  journey of both Vedanth and Amulya video released suc
Author
First Published Jan 6, 2024, 1:29 PM IST

ಧಾರಾವಾಹಿಗಳಲ್ಲಿ ನಡೆಯುವ ಕಥೆ ಕೇವಲ ಕಥೆ ಮಾತ್ರ, ಅದರಲ್ಲಿ ನಟಿಸುವವರು ನಟರು ಮಾತ್ರ, ಅದೇನೂ ನಿಜ ಜೀವನದ ಕಥೆಯೂ ಅಲ್ಲ, ಪಾತ್ರಧಾರಿಗಳು ಮಾಡುತ್ತಿರುವುದು ನಟನೆ ಮಾತ್ರ ಎಂದು ಸೀರಿಯಲ್​ ಪ್ರಿಯರಿಗೆ ಸಂಪೂರ್ಣ ಅರಿವಿದ್ದರೂ, ಅಂದಿನಿಂದ ಇಂದಿನವರೆಗೂ  ಧಾರಾವಾಹಿಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿಲ್ಲ, ಇಲ್ಲಿ ಬರುವ ಪಾತ್ರಗಳಲ್ಲಿ ತಮ್ಮನ್ನೇ ತಾವು ನೋಡಿಕೊಂಡು, ಕೆಲವೊಮ್ಮೆ ಆ ಪಾತ್ರಗಳೇ ತಾವಾಗಿಬಿಡುವ ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಸೀರಿಯಲ್​ಗಳಲ್ಲಿ ಬರುವ ನಾಯಕರನ್ನು ಹೊರಗಡೆ ಕಂಡಾಗ ಹೊಗಳುವುದು, ವಿಲನ್​ ಪಾತ್ರಧಾರಿಗಳು ಬೇರೆ ಕಡೆ ಸಿಕ್ಕರೂ ತಿರಸ್ಕಾರದಿಂದ ನೋಡುವುದು... ಹೀಗೆ ಸೀರಿಯಲ್​ ಪಾತ್ರಗಳೆಲ್ಲವೂ ನಿಜ ಜೀವನದ ಪಾತ್ರಗಳಂತೆಯೇ ಅಂದುಕೊಂಡು ಅದನ್ನು ಆಸ್ವಾದಿಸುವ ಪ್ರೇಕ್ಷಕ ವರ್ಗ ಇರುವುದು ಸೀರಿಯಲ್​ಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ. ಕೆಲವು ಸೀರಿಯಲ್​ಗಳನ್ನು, ರಿಯಾಲಿಟಿ ಷೋಗಳನ್ನು ದಿನವೂ ಬೈದುಕೊಳ್ಳುತ್ತಲೇ, ಚ್ಯೂಯಿಂಗ್​ ಗಮ್​ನಂತೆ ಎಳೆಯುತ್ತಾರೆ, ಯಾವುದೇ ಸ್ವಾರಸ್ಯವೇ ಇಲ್ಲ ಎಂದೆಲ್ಲಾ ಗೊಣಗುತ್ತಲೇ ಅವುಗಳನ್ನು ಆಸ್ವಾದಿಸುವ ದೊಡ್ಡ ಪ್ರೇಕ್ಷಕ ವರ್ಗ ಅದರಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಒಂದು ಧಾರಾವಾಹಿ ಮುಗಿಯುತ್ತದೆ ಎಂದಾಗ ಹೆಚ್ಚಿನವರಿಗೆ ಏನೋ ಕಳೆದುಕೊಂಡ ಭಾವ.

ಇದೀಗ ಸದಾ ಹೆಚ್ಚಿನ ಜನರ ಮೆಚ್ಚುಗೆಯನ್ನು ಗಳಿಸಿದ್ದ ಗಟ್ಟಿಮೇಳ ಮುಕ್ತಾಯಗೊಂಡಿರುವ ಕಾರಣ, ಇದೇ ರೀತಿಯ ನೋವಿನಲ್ಲಿ ಹಲವು ಪ್ರೇಕ್ಷಕರು ಇದ್ದಾರೆ. ಸದಾ ಟಿಆರ್​ಪಿಯಲ್ಲಿ ಟಾಪ್​ 3ರ ಒಳಗೆ ಒಂದು  ಸ್ಥಾನವನ್ನು ಕಾಯ್ದುಕೊಂಡು ಐದು ವರ್ಷಗಳ ಕಾಲ 1245 ಸಂಚಿಕೆ ಪೂರ್ಣಗೊಳಿಸಿರುವ ಗಟ್ಟಿಮೇಳ ಸೀರಿಯಲ್​ ನಿನ್ನೆ ಅಂದರೆ ಜನವರಿ 5ರಂದು ಮಂಗಳ ಹಾಡಲಾಗಿದೆ. 2019ರ ಮಾರ್ಚ್​ 11ರಿಂದ ಶುರುವಾಗಿದ್ದ ಈ ಸೀರಿಯಲ್​ ಐದು ವರ್ಷಗಳವರೆಗೂ ಜನರನ್ನು ಹಿಡಿದಿಟ್ಟುಕೊಂಡಿರುವುದು ಸುಳ್ಳಲ್ಲ. ಕೆಲವೊಂದು ಪಾತ್ರಗಳಲ್ಲಿ ಬದಲಾವಣೆಯಾದರೂ ಮುಖ್ಯ ಪಾತ್ರಧಾರಿಗಳು ಅವರೇ ಕೊನೆಯವರೆಗೆ ಇದ್ದುದು ಈ ಸೀರಿಯಲ್​ನ ಇನ್ನೊಂದು ಹೈಲೈಟ್​ನಲ್ಲಿ ಒಂದು. ಕಳೆದ  ಜನವರಿ ತಿಂಗಳಲ್ಲಿ 1000 ಸಂಚಿಕೆ ಪೂರೈಸಿದ್ದ ಸೀರಿಯಲ್​ ಕೊನೆಗೂ 1244 ಸಂಚಿಕೆ ಪೂರೈಸಿ ಮುಕ್ತಾಯಗೊಂಡಿದೆ. 

ಅಪ್ಪ-ಅಮ್ಮನ ಅತಿಯಾದ ನಿರೀಕ್ಷೆ, ಮಕ್ಕಳು ನೇಣಿಗೆ ಕೊರಳೊಡ್ಡುವವರೆಗೆ... ಡ್ರಾಮಾ ಜ್ಯೂನಿಯರ್ಸ್​ ಪಾಠವಿದು...

ಸೋಷಿಯಲ್​ ಮೀಡಿಯಾದಲ್ಲಿ ಈ ಸೀರಿಯಲ್​ ಪ್ರೇಮಿಗಳು ತುಂಬಾ ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ಇದರ ಅಂತಿಮ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ, ಗಟ್ಟಿಮೇಳ ಪ್ರೇಮಿಗಳು ವೇದಾಂತ್​ ಮತ್ತು ಅಮೂಲ್ಯ ಅವರನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಬೇಸರಿಸಿದರೆ, ಕೆಲವರು ಐದು ವರ್ಷ ಆದ್ಮೇಲಾದ್ರೂ ಕೊನೆಗೂ ಮುಗಿಸಿದ್ರಲ್ಲ ಎನ್ನುತ್ತಿದ್ದಾರೆ. ಕೊನೆಯ ಕಂತಿನವರೆಗೂ ಒಂದಾದ ಮೇಲೊಂದು ಸಸ್ಪೆನ್ಸ್ ಕಾಯ್ದುಕೊಂಡು ಬಂದ ಸೀರಿಯಲ್​ ಬಗ್ಗೆ ಹಲವರು ಖುಷಿ ಪಡುತ್ತಿದ್ದಾರೆ. 

ಇದೀಗ ಈ ಸೀರಿಯಲ್​ನ ಕ್ಯೂಟ್​ ಜೋಡಿಯಾಗಿರುವ ವೇದಾಂತ್​ ಮತ್ತು ಅಮೂಲ್ಯ ಅವರು ಸೀರಿಯಲ್​ನಲ್ಲಿ ನಡೆದುಬಂದ ಹಾದಿಯ ವಿಡಿಯೊ ಒಂದನ್ನು ಜೀ ಕನ್ನಡ ವಾಹಿನಿ ರಿಲೀಸ್​ ಮಾಡಿದೆ. ಆರಂಭದಿಂದಲೂ ಈ ಐದು ವರ್ಷಗಳಲ್ಲಿ ಈ ಜೋಡಿಯ ಪಯಣ ಹೇಗಿತ್ತು ಎಂದು ಇದರಲ್ಲಿ ತೋರಿಸಲಾಗಿದೆ. ವೇದಾಂತ್​ ಪಾತ್ರಧಾರಿ ರಕ್ಷಿತ್​ ಗೌಡ ಹಾಗೂ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್​ ಅವರ ಕ್ಯೂಟ್​ ಪೇರಿಂಗ್​ ಅನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಅದರ ವಿಡಿಯೊ ಇಲ್ಲಿದೆ ನೋಡಿ.. 

ಕಟ್ಟಡದಿಂದ ಜಿಗಿಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ 'ಅನಿಮಲ್'​ ನಟ: ವಿಡಿಯೋ ವೈರಲ್​

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios