ವಂಚನೆಗೆ ಒಳಗಾಗುತ್ತಿರುವ ಜನರಿಗೆ ಎಚ್ಚರಿಕೆ ಕೊಟ್ಟ ಕಲರ್ಸ್ ಕನ್ನಡ ವಾಹಿನಿ. ಏನಿದು ಓಟಿಟಿ ಕಥೆ?
ಕನ್ನಡ ಕಿರುತೆರೆಯ ಜನಪ್ರಿಯಾ ರಿಯಾಲಿಟಿ ಶೋ ಬಿಗ್ ಬಾಸ್ ಇದೇ ಸಪ್ಟೆಂಬರ್ ತಿಂಗಳಿನಲ್ಲಿ 9ನೇ ಸೀಸನ್ ಆರಂಭಿವಾಗಲಿದೆ. ಇದೇ ಮೊದಲ ಬಾರಿ ಕಲರ್ಸ್ ಕನ್ನಡ ವಾಹಿನಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಅದುವೇ ಬಿಗ್ ಬಾಸ್ ಓಟಿಟಿ. ಆಗಸ್ಟ್ ತಿಂಗಳಿನಲ್ಲಿ 45 ದಿನಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮ ನಡೆಯಲ್ಲಿ ಓಟಿಟಿಯಲ್ಲಿ ಶೋ ಪ್ರಸಾರವಾಗಲಿದೆ. ಓಟಿಟಿಯಾಗಿರುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಿರುವವರಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ.
ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿಸಬೇಕು ಎಂದು ಅನೇಕರು ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಮಾರ್ಗಗಳನ್ನು ಹುಡುಕಿ ಅವಕಾಶಗಳನ್ನು ಪಡೆಯುವ ಯತ್ನ ಮಾಡುತ್ತಿದ್ದಾರೆ. ಹೀಗಾಗಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ಯಕ್ರಮದಲ್ಲಿ ಅವಕಾಶ ಕೊಡಿಸುವೆ ಬನ್ನಿ ಇಷ್ಟು ಹಣ ಕೊಡಿ ಹೀಗೆ ಮಾಡಿ ಎಂದೆಲ್ಲಾ ದಾರಿ ತಪ್ಪಿಸುತ್ತಿದ್ದಾರಂತೆ. ಈ ಕಾರಣಕ್ಕೆ ಕಲರ್ಸ್ ವಾಹಿನಿ ಈ ವಿಚಾರದ ಬಗ್ಗೆ ಎಚ್ಚರಿಕೆ ನೀಡಿದೆ.
ಬೆಳಗ್ಗೆ 9.35 ಆದ್ರೂ ಯಶಸ್ವಿನಿ, ವಂಶಿಕಾ ಮಲಗಿದ್ದಾರೆ ಬಿಗ್ ಬಾಸ್‌ಗೆ ಕಳುಹಿಸಬಹುದು: ಮಾಸ್ಟರ್ ಆನಂದ್
'ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡವು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಷನ್ ನಡೆದಲಾಗುತ್ತಿಲ್ಲ. ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರು ವಿರುದ್ಧ ಪೊಲೀಸರಿಗೆ ದೂರು ಕೊಡಿ. ಪ್ರವೇಶ ಶುಲ್ಕ, ಠೇವಣಿ, ತರಬೇತಿ ಇಂಥ ಯಾವುದೇ ಹೆಸರಿನಲ್ಲೂ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ. ಬಿಗ್ ಬಾಸ್ ಕುರಿತು ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗನ್ನು ಮಾತ್ರ ಪರಿಗಣಿಸಿ'.
ಸಖತ್ ಸ್ಟೈಲಿಶ್ ಆಗಿ ಮಿಂಚಿದ ಕಿಚ್ಚ ಸುದೀಪ್
ಬಿಗ್ ಬಾಸ್ (Bigg Boss) ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಬಹಿರಂಗವಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಅಪ್ ಡೇಟ್ ಹೊರಬಿದ್ದಿದೆ. ಹೌದು, ಇಂದು (ಜುಲೈ 13) ಬಿಗ್ ಬಾಸ್ ಸೀಸನ್ 9ರ ಪ್ರೋಮೋವನ್ನು ಶೂಟ್ ಮಾಡಲಾಗುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 9ನ ಪ್ರೋಮೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಭರ್ಜರಿಯಾಗಿ ಪ್ರೋಮೋ ಶೂಟ್ ನಡೆಯುತ್ತಿದ್ದು ವೈಟ್ ಶರ್ಟ್ ಧರಿಸಿ ಫಾರ್ಮಲ್ಸ್ ನಲ್ಲಿ ಮಿಂಚಿರುವ ಕಿಚ್ಚನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಂದಹಾಗೆ ಇತ್ತೀಚಿಗಷ್ಟೆ ಬಿಗ್ ಬಾಸ್ ಕನ್ನಡ ಸೀಸನ್ 9ಗೆ (BBK9) ತಯಾರಿ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದರು. ಬಿಗ್ ಬಾಸ್ ಆಯೋಜಕರಾಗಿರುವ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಅಪ್ ಡೇಟ್ ನೀಡಿದ್ದರು. ಬಿಗ್ ಮನೆಯ ಕೆಲಸ ಪ್ರಾರಂಭವಾಗಿದೆ ಎಂದು ಹೇಳಿದ್ದರು. ಬಿಗ್ ಬಾಸ್‌ನ ಹೈಲೆಟ್ ಗಳಲ್ಲಿ ಬಿಗ್ ಹೌಸ್ ಕೂಡ ಒಂದು. ಹಾಗಾಗಿ ಆಕರ್ಷಕವಾಗಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗುತ್ತದೆ. ಈಗಾಗಲೇ ಬಿಗ್ ಬಾಸ್ ಮನೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಎಂದು ಮಾಹಿತಿ ನೀಡಿದ್ದರು.
