Asianet Suvarna News Asianet Suvarna News

ಅಂಗಿ ಹರ್ಕೊಂಡು ರಾಂಗ್ ನಂಬರ್ ಕೊಟ್ಟ 'ಬಿಗ್ ಬಾಸ್' ಆದಂ ಪಾಷಾ; ತಿರುಗುಬಾಣವಾದ ಸುಳ್ಳು ದೂರು!

ಆ್ಯಡಂ ಪಾಷ ದೂರು ಹಿನ್ನಲೆ ತನಿಖೆ ನಡೆಸಿದ್ದ ಪೊಲೀಸ್ಟೀಮ್‌ಗೆ ಎಫ್ ಐ ಆರ್ ದಾಖಲಿಸುವ ವೇಳೆ ಆ್ಯಡಂ ಪಾಷ ರಾಂಗ್ ನಂಬರ್ ಕೊಟ್ಟಿರೋದು ಗಮನಕ್ಕೆ ಬಂದಿದೆ. ಕೂಲಂಕೂಶವಾಗಿ ತನಿಖೆ ನಡೆಸಿದ ಪೊಲೀಸರಿಗೆ ಆ್ಯಡಂ ಪಾಷ ಸುಳ್ಳು ದೂರು ಕೊಟ್ಟಿರೋದು ಸಾಬೀತಾಗಿದೆ..

Former Bigg Boss Kannada contestant Adam Pasha files false complaint srb
Author
First Published Feb 17, 2024, 1:26 PM IST

ಬೆಂಗಳೂರಲ್ಲಿ  ಬಿಗ್ ಬಾಸ್ ಸ್ಪರ್ಧಿಗೆ ದೌರ್ಜನ್ಯವಾಗಿದೆ ಎಂದು ಆರೋಪಿಸಲಾಗಿತ್ತು. ಮಾಜಿ ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ (Adam Pasha), ವಾಟರ್ ಟ್ಯಾಂಕ್ ಲಾರಿ ಚಾಲಕನೋರ್ವ ಅತಿವೇಗವಾಗಿ ಬರ್ತಿದ್ದನ್ನ ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ಆಡಂ ಪಾಷಾ ದೂರನ್ನು ಸಹ ದಾಖಲು ಮಾಡಿದ್ದರು.

ಬಿಗ್ ಬಾಸ್ ಸ್ಪರ್ಧಿ ಆ್ಯಡಂ ಪಾಷನಿಂದ ತಮ್ಮ ಮೇಲೆ ಲಾರಿ ಚಾಲಕ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ಕೊಟ್ಟಿದ್ದರು. ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ವ್ಯಾಲಂಕೇಣಿ ಬ್ರಿಡ್ಜ್ ಬಳಿ ಘಟನೆ ನಡೆದಿರೋದಾಗಿ ದೂರು ದಾಖಲಿಸಿದ್ದರು. ಹೀಗಾಗಿ ಎಫ್ ಐ ಆರ್ ಕೂಡ ದಾಖಲು ಮಾಡಲಾಗಿತ್ತು. ಆದರೆ, ದೂರು ಕೊಟ್ಟ ಆ್ಯಡಂ ಪಾಷ ವಿರುದ್ದವೇ ಕ್ರಮಕ್ಕೆ ಪೊಲೀಸರು ಮುಂದಾಗಿದ್ದರು ಎನ್ನಲಾಗಿದೆ. 

ಪ್ರತಿ ಅಮಾವಾಸ್ಯೆಗೆ 15 ಮಕ್ಕಳ ನರಬಲಿ; ರವಿಶಂಕರ್ ಗುರೂಜಿ ಬಗ್ಗೆ ಹೇಳಿದ್ರಾ ಅಗ್ನಿ ಶ್ರೀಧರ್!?

ಬಳಿಕ, ಆ್ಯಡಂ ಪಾಷ ದೂರು ಹಿನ್ನಲೆ ತನಿಖೆ ನಡೆಸಿದ್ದ ಪೊಲೀಸ್ಟೀಮ್‌ಗೆ ಎಫ್ ಐ ಆರ್ ದಾಖಲಿಸುವ ವೇಳೆ ಆ್ಯಡಂ ಪಾಷ ರಾಂಗ್ ನಂಬರ್ ಕೊಟ್ಟಿರೋದು ಗಮನಕ್ಕೆ ಬಂದಿದೆ. ಕೂಲಂಕೂಶವಾಗಿ ತನಿಖೆ ನಡೆಸಿದ ಪೊಲೀಸರಿಗೆ ಆ್ಯಡಂ ಪಾಷ ಸುಳ್ಳು ದೂರು ಕೊಟ್ಟಿರೋದು ಸಾಬೀತಾಗಿದೆ ಎನ್ನಲಾಗಿದೆ. ಆ್ಯಡಂ ಪಾಷಾ ತನ್ನ ಬಟ್ಟೆಗಳನ್ನ ತಾನೇ ಹರಿದುಕೊಂಡು ಠಾಣೆಗೆ ಹೋಗಿ ದೂರು ಕೊಟ್ಟಿರೋದು ಬಯಲಾಗಿದೆ.  ಸಿಸಿಟಿವಿಯಲ್ಲಿ ಆ್ಯಡಂ ಪಾಷ ಕಳ್ಳಾಟ ಬಯಲಾಗಿದ್ದು, ಇದೀಗ ಕೇಸ್ ಉಲ್ಟಾ ತಿರುಗತೊಡಗಿದೆ. ಆ್ಯಡಂಗೇ ಇದು ತಿರುಗುಬಾಣ ಆಗಲಿದೆ.

ಅಗ್ನಿ ಶ್ರೀಧರ್ 'ಕ್ರೀಂ' ನೈಜ ಕಥೆಯ ಸಿನಿಮಾ; ರಾಜಕೀಯದಲ್ಲೂ ಸೃಷ್ಟಿಸಲಿದೆಯಾ ಅಲ್ಲೋಲಕಲ್ಲೋಲ..!?

ಇದೀಗ ಸಿಸಿಟಿವಿಯ ಒರಜಿನಾಲಿಟಿ ರಿಪೋರ್ಟ್ ಗೆ ಕಳಿಸಿರೋ ಪೊಲೀಸ್ರು, ಸುಳ್ಳು ದೂರು ಕೊಟ್ಟ ಹಿನ್ನಲೆ ಆ್ಯಡಂಪಾಷನನ್ನು ಕೋರ್ಟ್ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ ಎನ್ನಲಾಗಿದೆ. 19 ನೇ ತಾರೀಖು ಕೋರ್ಟ್ ಮುಂದೆ ಹಾಜರು ಪಡಿಸಲು ಸಿದ್ದತೆ ನಡೆಸಲಾಗಿದೆ. ನ್ಯಾಯಾಧೀಶರ ಮುಂದೆ ಪೊಲೀಸರು '164' ಸ್ಟೇಮೆಂಟ್ ಮಾಡಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ '164' ನಂತರ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಸೂಚನೆ ಬಂದಿದೆ ಎನ್ನಲಾಗಿದೆ. 

ಚಿನ್ನದಂಥ ಮಾತು ಹೇಳಿದ್ರು ನಟ ಚಿಕ್ಕಣ್ಣ; ಹೊಡಿರಲೇ ಚಪ್ಪಾಳೆ ಎಂದ್ಬಿಟ್ರು ಅಲ್ಲಿದ್ದ ರೈತ!

Follow Us:
Download App:
  • android
  • ios