ನವೆಂಬರ್ 9 ರಿಂದ ನವೆಂಬರ್ 15ರ ವರೆಗೆ ಸಿನಿ ಪ್ರಿಯರಿಗೆ ಹಬ್ಬ. ಸೂಪರ್ ಹಿಟ್ ಮೂವಿ, ಜನಪ್ರಿಯ ವೆಬ್‌ಸಿರೀಸ್‌ಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ವಾರದ ವಾಚ್‌ಲಿಸ್ಟ್‌ನಲ್ಲಿ ನೀವು ನೋಡಲೇಬೇಕಾದ ಟಾಪ್ ಮೂವಿ, ಸಿರೀಸ್ ಇಲ್ಲಿದೆ.

ಬೆಂಗಳೂರು (ನ.09) ದೇಶಾದ್ಯಂದ ರಾಮಾಯಣ ಪ್ರದರ್ಶನಗೊಳ್ಳುತ್ತಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ನಡುವೆ ಒಟಿಟಿಯಲ್ಲಿ ಈ ವಾರ ಹಬ್ಬ. ಸೂಪರ್ ಹಿಟ್ ಸಿನಿಮಾ, ಜನಪ್ರಿಯ ವೆಬ್‌ಸಿರೀರಿಸ್ ಸೇರಿದಂತೆ ಹಲವು ಮನರಂಜನೆಗಳು ಈ ವಾರ ಸಿಗಲಿದೆ. ನವೆಂಬರ್ 9 ರಿಂದ ನವೆಂಬರ್ 15ರ ವರಗೆ ಒಟಿಟಿ ಪ್ರಿಯರಿಗೆ ಅದ್ಧೂರಿ ಮನರಂಜನೆ ಸಿಗಲಿದೆ. ನವೆಂಬರ್ 2ನೇ ವಾರದಲ್ಲಿ ಒಟಿಟಿಗೆ ಲಗ್ಗೆ ಇಡುತ್ತಿರುವ ಟಾಪ್ ಮೂವಿ ಹಾಗೂ ಸಿರೀಸ್ ಪಟ್ಟಿ ಇಲ್ಲಿದೆ.

1. ಬ್ಲೈಂಡ್ ಗೇಮ್ (Blind Game), ZEE5 (ನವೆಂಬರ್ 11):

ಅರ್ಜುನ್ ರಾಂಪಾಲ್ (Arjun Rampal) ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಿಕಂದರ್ ಸಿಂಗ್ ಪಾತ್ರದಲ್ಲಿ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮನಾಲಿ ಹಿನ್ನೆಲೆಯಲ್ಲಿ ನಡೆಯುವ ಕಳ್ಳತನ ಹಾಗೂ ಅನುಮಾನಾಸ್ಪದ ಆತ್ಮಹತ್ಯೆ ತನಿಖೆಯ ಸುತ್ತ ಈ ಕಥೆ ಸಾಗುತ್ತದೆ.

2. ದಿ ರಿಂಗ್ಸ್ ಆಫ್ ಪವರ್ – ಸೀಸನ್ 3, Amazon Prime (ನವೆಂಬರ್ 11):

ಫ್ಯಾಂಟಸಿ ಪ್ರಿಯರು ಕಾತರದಿಂದ ಕಾಯುತ್ತಿದ್ದ ಹಿಟ್ ಸರಣಿಯ 3ನೇ ಭಾಗ. ಸೌರಾನ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಿಡಲ್ ಅರ್ಥ್ ಸಾಮ್ರಾಜ್ಯ ಎದುರಿಸುವ ಹೊಸ ಭೀಕರ ಸಮರದ ದೃಶ್ಯಗಳನ್ನು ಇದರಲ್ಲಿ ಪ್ರಸಾರ ಮಾಡಲಾಗುತ್ತದೆ.

3. ದಾಯರಾ (Daayra), Netflix (ನವೆಂಬರ್ 13):

ಕ್ರೈಂ ಮತ್ತು ನ್ಯಾಯಾಂಗ ವ್ಯವಸ್ಥೆಯ ಸುತ್ತ ಹೆಣೆದಿರುವ ಭಾರಿ ಕುತೂಹಲಕಾರಿ ಭಾರತೀಯ ಸಸ್ಪೆನ್ಸ್ ಕ್ರೈಂ ಡ್ರಾಮಾ. ಅಪರಾಧ ತನಿಖೆಯ ವೇಳೆ ಬಯಲಾಗುವ ಕರಾಳ ರಹಸ್ಯಗಳು ಈ ಚಿತ್ರದ ಪ್ರಮುಖ ಆಕರ್ಷಣೆ.

4. ಸ್ಟೂಡೆಂಟ್ ಆಫ್ ದಿ ಇಯರ್:ಆಫ್ಟರ್ ಡಾರ್ಕ್ (Student of the Year: After Dark), JioHotstar (ನವೆಂಬರ್ 13):

ಪ್ರಸಿದ್ಧ ಸೆಂಟ್ ತೆರೆಸಾ ಸಂಸ್ಥೆಯಲ್ಲಿ ನಡೆಯುವ ವಿದ್ಯಾರ್ಥಿನಿಯ ನಿಗೂಢ ಕೊಲೆಯ ತನಿಖೆಯನ್ನು ಆಧರಿಸಿದ 6 ಸಂಚಿಕೆಗಳ ಶೋಕಿಂಗ್ ಥ್ರಿಲ್ಲರ್ ಸರಣಿ. ರೀಮಾ ಮಾಯಾ ನಿರ್ದೇಶನದ ಈ ಸರಣಿಯಲ್ಲಿ ಶನಾಯಾ ಕಪೂರ್ ಮತ್ತು ದಿವಿಕ್ ಶರ್ಮಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

5. ಪಾರಿವಾರಿಕ ಮನುರಂಜನ್ (Parivarik ManuRanjan) - SonyLIV (ನವೆಂಬರ್ 13):

ಅಭಿನಯ ರಾಕ್ಷಸ ಪಂಕಜ್ ತ್ರಿಪಾಠಿ (Pankaj Tripathi) ಮತ್ತು ಅದಿತಿ ರಾವ್ ಹೈದರಿ (Aditi Rao Hydari) ನಟನೆಯ ಸುಂದರ ಫ್ಯಾಮಿಲಿ ಡ್ರಾಮಾ ಕಾಮಿಡಿ ಚಿತ್ರ. ವರುಣ್ ವಿ ಶರ್ಮಾ ನಿರ್ದೇಶನದ ಈ ಸಿನಿಮಾ ಇಡೀ ಕುಟುಂಬ ಕುಳಿತು ನೋಡುವಂತಿದೆ.

6. ಹಾರ್ಟ್ ಆಫ್ ದಿ ಬೀಸ್ಟ್ (Heart of the Beast) - BookMyShow Stream/Apple TV (ನವೆಂಬರ್ 10):

  • ಬ್ರ್ಯಾಡ್ ಪಿಟ್ (Brad Pitt) ನಟನೆಯ ಆಕ್ಷನ್ ಅಡ್ವೆಂಚರ್ ಸಿನಿಮಾ. ವಿಮಾನ ಅಪಘಾತದ ನಂತರ ಅಲಾಸ್ಕಾದ ದಟ್ಟ ಕಾಡಿನಲ್ಲಿ ನಾಯಿ ಜೊತೆ ಬದುಕಲು ನಡೆಸುವ ಹೋರಾಟದ ಕಥಾಹಂದರ ಇಲ್ಲಿದೆ.
  • ಬಿಹೈಂಡ್ ಹಿಮಾನ್, ಹಾರ್ಟ್‌ಲ್ಯಾಂಡ್ & ಕಂಕ್ ಆನ್ ಸಿನಿಮಾ (ನೆಟ್‌ಫ್ಲಿಕ್ಸ್/ಆಪಲ್ ಟಿವಿ):
  • ಅಲಿಸಿಯಾಸ್ ಲಾ (Netflix - ನವೆಂಬರ್ 11): ಮೆಕ್ಸಿಕನ್ ಲೀಗಲ್ ಡ್ರಾಮಾ ಸರಣಿ.
  • ಆಲ್ಫ್ರೆಡ್/ಆಲೆನ್ (Netflix - ನವೆಂಬರ್ 12): ಯುವಕ ಮತ್ತು ಏಲಿಯನ್ ನಡುವಿನ ಸ್ನೇಹದ ಸೈನ್ಸ್ ಫಿಕ್ಷನ್ ಕಾಮಿಡಿ.
  • ದಿ ಎಂಪ್ರೆಸ್ – ಸೀಸನ್ 3 (Netflix - ನವೆಂಬರ್ 12): ರಾಯಲ್ ಕೋರ್ಟ್ ರಾಜಕೀಯ ಸರಣಿ.
  • ಮರ್ಡರ್ ಇನ್ ಗಲಿಷಿಯಾ (Netflix - ನವೆಂಬರ್ 13): ಸ್ಪ್ಯಾನಿಷ್ ಮರ್ಡರ್ ಮಿಸ್ಟ್ರಿ.
  • ಕಂಕ್ ಆನ್ ಸಿನಿಮಾ (Netflix - ನವೆಂಬರ್ 15): ಸಿನಿಮಾ ಇತಿಹಾಸದ ಕಾಮಿಡಿ ಸರಣಿ.