ಲಾಂಗ್ಫ್ರಾಕ್ನಲ್ಲಿ ನಿವೇದಿತಾ ಮಿಂಚಿಂಗ್: ಯಾಕೋ ಮೇಲಿಂದು ನಿಮಗೆ ಸೂಟೇ ಆಗ್ತಿಲ್ಲ ಅಂತಿದ್ದಾರೆ ಫ್ಯಾನ್ಸ್!
ಬಾರ್ಬಿ ಡಾಲ್ ಹೆಸರಿಗೆ ತಕ್ಕಂತೆ ಲಾಂಗ್ಫ್ರಾಕ್ನಲ್ಲಿ ಮುದ್ದಾಗಿ ಕಾಣಿಸೋ ನಿವೇದಿತಾ ಗೌಡ ಅವರ ಡ್ರೆಸ್ಗೂ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫ್ಯಾನ್ಸ್ ಹೇಳ್ತಿರೋದೇನು?

ಬಾರ್ಬಿಡಾಲ್ ಎಂದೇ ಫೇಮಸ್ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್ ಸಂಖ್ಯೆ ಸಕತ್ ಹೆಚ್ಚಿದೆ. ಇದೇ ಕಾರಣಕ್ಕೆ ಇವರು ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಈಕೆ ಇನ್ಸ್ಟಾಗ್ರಾಮ್ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ. ಟ್ರೋಲ್ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಷಾರ್ಟ್ಸ್ಗಳನ್ನು ಹಾಕಿ ಹಿಂದಿ ಹಾಡಿಗೆ ಸೊಂಟ ಬಳುಕಿಸುತ್ತಿದ್ದ ನಟಿ ಈಗ ಲಾಂಗ್ಫ್ರಾಕ್ ಹಾಕಿಕೊಂಡು ಮಿಂಚಿದ್ದಾರೆ. ಇದಕ್ಕೆ ನೂರಾರು ಮಂದಿ ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಮುಂದೆ ನೀವು ಷಾರ್ಟ್ಸ್ ಹಾಕಬೇಡಿ, ನಿಮಗೆ ಎಲ್ಲರೂ ಬಾರ್ಬಿ ಡಾಲ್ ಅಂತಾರೆ. ಇದೇ ಕಾರಣಕ್ಕೆ ಇಂಥ ಮುದ್ದುಮುದ್ದಾಗಿರೋ ಡ್ರೆಸ್ ಹಾಕಿ ಎನ್ನುತ್ತಿದ್ದಾರೆ. ಆದರೆ ಇನ್ನು ಕೆಲವರು ಮಾತ್ರ ಡ್ರೆಸ್ ಏನೋ ಚೆನ್ನಾಗಿದೆ, ಆದರೆ ಮೇಲಿಂದು ಯಾಕೋ ಡ್ರೆಸ್ಗೆ ಸೂಟೇ ಆಗ್ತಿಲ್ಲ, ಒಂಥರಾ ಕಾಣುತ್ತಿದೆ ಎನ್ನುತ್ತಿದ್ದಾರೆ. ಈ ಡ್ರೆಸ್ ಭಾರಿ ತೂಕದ್ದಿದ್ದು, ನಿವೇದಿತಾ ಅವರ ಶರೀರಕ್ಕಿಂತಲೂ ತುಂಬಾ ವೇಟ್ ಇರುವುದು ತಿಳಿಯುತ್ತದೆ. ನಿವೇದಿತಾ ತೆಳ್ಳಗಿರುವ ಕಾರಣ, ಈ ಡ್ರೆಸ್ನ ಮೇಲಿನ ಭಾಗ ಆಕೆಯ ದೇಹಕ್ಕೆ ಫಿಟ್ ಆದಂತೆ ಕಾಣಿಸುತ್ತಿಲ್ಲ. ಇದೇ ಕಾರಣಕ್ಕೆ ಮೇಲಿಂದು ಚೆನ್ನಾಗಿಲ್ಲ ಎಂದು ಫ್ಯಾನ್ಸ್ ಅಸಮಾಧಾನ ಹೊರಹಾಕುತ್ತಿದ್ದಾರೆ.
ನಿವೇದಿತಾ ಡ್ಯಾನ್ಸ್ ನೋಡಿ ಫ್ಯಾನ್ಸ್ ಗರಂ! ಥೂ ಅದೇನ್ ಬಾಳಂತ ಬಾಳ್ತೀರಾ ಅಂತಿದ್ದಾರೆ ಅಭಿಮಾನಿಗಳು
ಅದೇನೇ ಇದ್ದರೂ, ನಿವೇದಿತಾ ಗೌಡ ಇನ್ಸ್ಟಾಗ್ರಾಮ್ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್ ಆಗಿರುವ ಈಕೆ ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್ಟೈನ್ಮೆಂಟ್ ಕೊಡುತ್ತಿರುತ್ತಾರೆ. ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಗಂಡನ ಜೊತೆಗೂ ಕ್ಯೂಟ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.
ಇತ್ತೀಚೆಗೆ ನಟಿ, ಹಿಂದಿ ಹಾಡೊಂದಕ್ಕೆ ಭರ್ಜರಿ ಸೊಂಟ ಬಳುಕಿಸಿದ್ದರು. ಹಿಂದೊಮ್ಮೆ ಇದೇ ರೀತಿ ಹಿಂದಿ ಹಾಡಿಗೆ ರೀಲ್ಸ್ ಮಾಡಿದಾಗ ನಿನ್ನ ಗಂಡನ ಕನ್ನಡ ಹಾಡು ನಿನಗೆ ಸೇರಲ್ವಾ ಅಂತ ಪ್ರಶ್ನಿಸಿದ್ರು ಫ್ಯಾನ್ಸ್. ಆದರೆ ಇದೀಗ ಚಡ್ಡಿ ತೊಟ್ಟು ಮಾಡಿದ ಈ ಡ್ಯಾನ್ಸ್ ಅಭಿಮಾನಿಗಳನ್ನು ಮತ್ತಷ್ಟು ಸಿಟ್ಟಿಗೆ ಏರಿಸಿದ್ದರು. ಕೆಲವರು ಗೊಂಬೆ ಅಂತೆಲ್ಲಾ ಹೇಳಿ, ಹಾರ್ಟ್ ಇಮೋಜಿ ಹಾಕಿದ್ರೆ ಹಲವರು ನೆಗೆಟಿವ್ ಕಮೆಂಟ್ ಕೊಡುತ್ತಿದ್ದಾರೆ. ಮದುವೆಯಾದ ಹುಡುಗಿ ಹಣೆಗಿಲ್ಲ, ತಾಳಿಯಿಲ್ಲ, ಕಾಲುಂಗುರ ಇಲ್ಲ, ಥೂ ನಮ್ಮ ಸಂಸ್ಕೃತಿಗೇ ನೀವು ಮಾರಕ ಎಂದು ಫ್ಯಾನ್ ಒಬ್ಬ ಹೇಳಿದ್ರೆ, ಇನ್ನೋರ್ವರು ಥೂ ಅದೇನ್ ಬಾಳಂತ ಬಾಳ್ತೀರಾ ಅಂದಿದ್ದಾರೆ. ವಯಸ್ಸಿಗೆ ಮೀರಿದ ಬೆಳವಣಿಗೆ ಆದರೆ ಹೀಗೆ ಆಗೋದು, ಅದೇನು ಬಾಳು ಅಂತಾ ಬದುಕ್ತಾ ಇದ್ದೀರಾ ನೀವೆಲ್ಲ ಎಂದು ಪ್ರಶ್ನಿಸಿದ್ದರು. ಅವರೆಲ್ಲರೂ ಇದೀಗ ಈ ಹೊಸ ಲುಕ್ಗೆ ಫಿದಾ ಆಗಿದ್ದಾರೆ. ಇದನ್ನೇ ಮುಂದುವರೆಸಿ ಆದರೆ ಮೇಲಿಂದ ಸ್ವಲ್ಪ ಫಿಟ್ ಆಗಿರಲಿ ಅಂತಿದ್ದಾರೆ.
ಪತಿಯ ಬರ್ತ್ಡೇಗೆ ರೀಲ್, ಮೈಕ್, ಹೆಡ್ಫೋನ್ ಇರೋ ಕೇಕ್: ನಿವೇದಿತಾರಿಗೆ ಭೇಷ್ ಎಂದ ಫ್ಯಾನ್ಸ್!