Asianet Suvarna News Asianet Suvarna News

ನಿವೇದಿತಾ ಡ್ಯಾನ್ಸ್​ ನೋಡಿ ಫ್ಯಾನ್ಸ್​ ಗರಂ! ಥೂ ಅದೇನ್ ಬಾಳಂತ ಬಾಳ್ತೀರಾ ಅಂತಿದ್ದಾರೆ ಅಭಿಮಾನಿಗಳು

ನಟಿ ನಿವೇದಿತಾ ಗೌಡ ಅವರು ಪತಿ ಚಂದನ್​ ಶೆಟ್ಟಿ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ರೆ ಫ್ಯಾನ್ಸ್​ ಇದನ್ನು ನೋಡಿ ಗರಂ ಆಗಿದ್ದಾರೆ. ಥಹರೇವಾಗಿ ಕಮೆಂಟ್ಸ್​ ಮಾಡುತ್ತಿದ್ದಾರೆ. 
 

Actress Nivedita Gowda took a big step with her husband Chandan Shetty trolled suc
Author
First Published Sep 21, 2023, 4:12 PM IST

ಸೋಷಿಯಲ್ ಮೀಡಿಯಾದಲ್ಲಿ  ಸಕತ್​ ಆ್ಯಕ್ಟಿವ್ ಆಗಿರುವ ಬಿಗ್​ಬಾಸ್​ ಸ್ಪರ್ಧಿ ನಿವೇದಿತಾ ಗೌಡ, ಕನ್ನಡ ಕಿರುತೆರೆ ಮನೋರಂಜನಾ ಲೋಕದಲ್ಲಿ ಮಿಂಚುತ್ತಾ ಪ್ರೇಕ್ಷಕರಿಗೆ ಭರ್ಜರಿ ಎಂಟರ್​ಟೈನ್​ಮೆಂಟ್ ಕೊಡುತ್ತಿರುತ್ತಾರೆ.  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.     ಬಾರ್ಬಿ ಡಾಲ್ ಎಂದೇ ಕರೆಸಿಕೊಳ್ತಿರೋ ನಿವೇದಿತಾ ಗೌಡ ಏನೇ ಮಾಡಿದ್ರೂ ಅದು ಸುದ್ದಿಯಾಗುತ್ತೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಪತಿಯ ಬರ್ತ್​ಡೇಗೆ ರೀಲ್​, ಮೈಕ್​, ಹೆಡ್​ಫೋನ್ ಇರೋ ಕೇಕ್​​: ನಿವೇದಿತಾರಿಗೆ ಭೇಷ್​ ಎಂದ ಫ್ಯಾನ್ಸ್​!

ಇದೀಗ ನಟಿ, ಹಿಂದಿ ಹಾಡೊಂದಕ್ಕೆ ಭರ್ಜರಿ ಸೊಂಟ ಬಳುಕಿಸಿದ್ದಾರೆ. ಹಿಂದೊಮ್ಮೆ ಇದೇ ರೀತಿ ಹಿಂದಿ ಹಾಡಿಗೆ ರೀಲ್ಸ್​ ಮಾಡಿದಾಗ ನಿನ್ನ ಗಂಡನ ಕನ್ನಡ ಹಾಡು ನಿನಗೆ ಸೇರಲ್ವಾ ಅಂತ ಪ್ರಶ್ನಿಸಿದ್ರು ಫ್ಯಾನ್ಸ್​. ಆದರೆ ಇದೀಗ ಚಡ್ಡಿ ತೊಟ್ಟು ಮಾಡಿದ ಈ ಡ್ಯಾನ್ಸ್​ ಅಭಿಮಾನಿಗಳನ್ನು ಮತ್ತಷ್ಟು ಸಿಟ್ಟಿಗೆ ಏರಿಸಿದೆ. ಕೆಲವರು ಗೊಂಬೆ ಅಂತೆಲ್ಲಾ ಹೇಳಿ, ಹಾರ್ಟ್​ ಇಮೋಜಿ ಹಾಕಿದ್ರೆ ಹಲವರು ನೆಗೆಟಿವ್​ ಕಮೆಂಟ್​ ಕೊಡುತ್ತಿದ್ದಾರೆ. ಈಕೆ ಡ್ಯಾನ್ಸ್​ ಮಾಡುವಾಗ ಜೊತೆಯಾದ ಪತಿ ಚಂದನ್​ ಶೆಟ್ಟಿಯನ್ನೂ ಸೇರಿಸಿ ಬೈಯುತ್ತಿದ್ದಾರೆ. ಮದುವೆಯಾದ ಹುಡುಗಿ ಹಣೆಗಿಲ್ಲ, ತಾಳಿಯಿಲ್ಲ, ಕಾಲುಂಗುರ ಇಲ್ಲ, ಥೂ ನಮ್ಮ ಸಂಸ್ಕೃತಿಗೇ ನೀವು ಮಾರಕ ಎಂದು ಫ್ಯಾನ್​ ಒಬ್ಬ ಹೇಳಿದ್ರೆ, ಇನ್ನೋರ್ವರು ಥೂ ಅದೇನ್ ಬಾಳಂತ ಬಾಳ್ತೀರಾ ಅಂದಿದ್ದಾರೆ.  ವಯಸ್ಸಿಗೆ ಮೀರಿದ ಬೆಳವಣಿಗೆ ಆದರೆ ಹೀಗೆ ಆಗೋದು, ಅದೇನು ಬಾಳು ಅಂತಾ ಬದುಕ್ತಾ ಇದ್ದೀರಾ ನೀವೆಲ್ಲ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಲೈಕ್ ಕೊಡೋ ಬದ್ಲು ಚೆನ್ನಾಗಿ  ಹೊಡಿಬೇಕು ಅನ್ನಿಸ್ತಿದೆ ಎಂದು ಇನ್ನೋರ್ವ ಫ್ಯಾನ್​ ಹೇಳಿದ್ದಾರೆ.
  
ಚಂದನ್​ ಶೆಟ್ಟಿ ಅವರು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 'ಎಲ್ರ ಕಾಲೆಳೆಯುತ್ತೆ ಕಾಲ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದವರು ಇವರು. ಇದೀಗ ಹೀರೊ ಪಟ್ಟಕ್ಕೆ ಏರಿದ್ದಾರೆ. ಸದ್ಯ ಯಾವುದೂ ಚಿತ್ರ ರಿಲೀಸ್​ ಆಗಿಲ್ಲ. ಆದರೆ ಈಗಲೇ ಮೂರನೇ ಸಿನಿಮಾಗೆ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ.  'ಎಲ್ರ ಕಾಲೆಳೆಯುತ್ತೆ ಕಾಲ', 'ಸೂತ್ರಧಾರಿ' ಸಿನಿಮಾಗಳ ನಂತರ ಈಗ ಹೊಸದೊಂದು ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದು, ಕಳೆದ ವರ ಮಹಾಲಕ್ಷ್ಮೀ ಹಬ್ಬದಂದು ಅವರ ಹೊಸ ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಹೊಸ ಚಿತ್ರಕ್ಕೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಎಂದು ಹೆಸರಿಡಲಾಗಿದೆ. ಸಂಪೂರ್ಣ ಕಥೆ ಒಂದು ಕಾಲೇಜಿನ ಸುತ್ತವೇ ನಡೆಯಲಿದೆಯಂತೆ. ಆ ಕಾರಣಕ್ಕಾಗಿ ಈ ಟೈಟಲ್​. ಈ ಹಿಂದೆ ಶ್ರೀಮುರಳಿ, ಅಕುಲ್ ಬಾಲಾಜಿ, ಶ್ರೀಕಿ ನಟಿಸಿದ್ದ 'ಲೂಸ್‌ಗಳು' ಸಿನಿಮಾವನ್ನು ನಿರ್ದೇಶಿಸಿದ್ದ ಅರುಣ್ ಅಮುಕ್ತ ಅವರು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ತೋಬಾ ತೋಬಾ ಹಾಡಿಗೆ ಬಳುಕಿದ ನಿವೇದಿತಾ: ಗಂಡನ ಕನ್ನಡ ಹಾಡೆಂದ್ರೆ ನಿಂಗೆ ಅಲರ್ಜಿನಾ ಎಂದ ಫ್ಯಾನ್ಸ್​!

Follow Us:
Download App:
  • android
  • ios