ಕಪ್ ಗೆಲ್ಲದ ಡ್ರೋನ್ ಪ್ರತಾಪ್: ಅರ್ಧ ಮೀಸೆ, ಅರ್ಧ ಗಡ್ಡ ಬೋಳಿಸಿದ ಅಭಿಮಾನಿ
ಫ್ಯಾನ್ಸ್ ಅಭಿಮಾನದ ಮುಂದೆ ಎಷ್ಟೋ ಸಲ ಸೆಲೆಬ್ರಿಟಿಗಳೇ ಕಬ್ಜರಾಗಿ ಕಾಣೋದುಂಟು. ಅಭಿಮಾನಿಯೊಬ್ಬ ಕಪ್ ಗೆಲ್ಲದ ಡ್ರೋನ್ ಪ್ರತಾಪ್ ಗಾಗಿ ಅರ್ಧ ಗಡ್ಡ, ಅರ್ಧ ಮೀಸೆ ಬೋಳಿಸಿಕೊಂಡಿದ್ದಾನೆ.
ತಮ್ಮ ನೆಚ್ಚಿನ ಹೀರೋಯಿನ್, ಹೀರೋ, ಸೆಲೆಬ್ರಿಟಿಗಳಿಗಾಗಿ ಫ್ಯಾನ್ಸ್ ಏನೇನೆಲ್ಲ ಮಾಡ್ತಾರೆ. ಕೆಲವೊಮ್ಮೆ ಇದು ಎಕ್ಸ್‌ಟ್ರೀಮ್‌ಗೆ ಹೋಗೋದೂ ಇದೆ. ಇಲ್ಲೊಬ್ಬ ಡ್ರೋನ್ ಪ್ರತಾಪ್ ಅಭಿಮಾನಿ ಅರ್ಧ ಗಡ್ಡ, ಅರ್ಧ ಮೀಸೆ ಬೋಳಿಸಿ ಸುದ್ದಿಯಲ್ಲಿದ್ದಾನೆ. ಪ್ರತಾಪ ಕಪ್ ಗೆದ್ದೇ ಗೆಲ್ತಾನೆ, ಇಲ್ಲಾಂದ್ರೆ ಅರ್ಧ ಗಡ್ಡ, ಅರ್ಧ ಮೀಸೆ ಬೋಳಿಸ್ತೀನಿ ಅಂತ ಅಭಿಮಾನಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಓಪನ್ ಚಾಲೆಂಜ್ ಮಾಡಿದ್ದ. ಪ್ರತಾಪ್ ಕಪ್ ಸಮೀಪಕ್ಕೆ ಹೋದರೂ ಕಪ್ ಗೆಲ್ಲಲಾಗಲಿಲ್ಲ. ಅಷ್ಟಕ್ಕೂ ಹೆಚ್ಚಿನವರಿಗೆ ಡ್ರೋನ್ ಎರಡನೇ ಸ್ಥಾನ ಪಡೆಯುವ ನಂಬಿಕೆಯೂ ಇರಲಿಲ್ಲ. ಕೆಲವರು ಮಾತ್ರ ಡ್ರೋನ್ ಅವ್ರೇ ಅತೀ ಹೆಚ್ಚು ಓಟಿಂದ ಬಿಗ್ ಬಾಸ್ ಕಪ್‌ಗೆ ಮುತ್ತಿಡ್ತಾರೆ ಅಂದುಕೊಂಡಿದ್ದರು. ಓಟಿನ ಕಾರಣಕ್ಕೋ ಏನೋ ಡ್ರೋನ್ ಕಪ್ ಪಡೆಯಲು ಒಂದು ಹೆಜ್ಜೆಯಷ್ಟೇ ಬಾಕಿ ಇರುವಾಗ ಕಪ್ ವಂಚಿತರಾದರು. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ. ಡ್ರೋನ್ ಕಪ್ ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿದ್ದ ಒಬ್ಬ ಅಭಿಮಾನಿಯಂತೂ ಈ ಘಟನೆ ನಡೆದಾಗ ಪದೇ ಪದೇ ತನ್ನ ಗಡ್ಡ, ಮೀಸೆಯತ್ತ ನೋಡ್ಕೊಂಡಿದ್ದೂ ಆಯ್ತು.
ಬಿಗ್ ಬಾಸ್ ಕನ್ನಡ ಸೀಸನ್ 10 ಅದ್ದೂರಿಯಾಗಿ ತೆರೆ ಕಂಡಿದೆ. ಎರಡು ದಿನಗಳು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಅಲ್ಲಿಂದ ಹೊರ ಬಂದಿದ್ದಾರೆ. ನಿರೀಕ್ಷಿಸದೆಯೇ ಇರದ ಒಂದು ಗೆಲುವು ಡ್ರೋನ್ ಪ್ರತಾಪ್‌ಗೆ ಸಿಕ್ಕಿದ್ದು, ಅಭಿಮಾನಿಗಳು ಸಕತ್ ಪಾರ್ಟಿ ಮಾಡುತ್ತಿದ್ದಾರೆ ಆದರೆ, ಇಲ್ಲೊಬ್ಬ ಅಭಿಮಾನಿ ಮಾತ್ರ ಡ್ರೋನ್ ಪ್ರತಾಪ್ ಸೋಲಿಗೆ ಸಕತ್ ಶಾಕ್‌ಗೆ ಒಳಗಾಗಿದ್ದಾರೆ. ಬಿಗ್ ಬಾಸ್ ಫಿನಾಲೆಯಲ್ಲಿ ಗೆಲುವು ಡ್ರೋನ್ ಪ್ರತಾಪ್‌ಗೆನೇ ಎಂದು ಹೇಳಿಕೊಂಡಿದ್ದ ಈ ಅಭಿಮಾನಿ ವಿಭಿನ್ನವಾದ ಚಾಲೆಂಜ್ ಮಾಡಿದ್ದರು. ಡ್ರೋನ್ ಪ್ರತಾಪ್ ವಿನ್ ಆಗದೇ ಹೋದರೆ ತಮ್ಮ ಮೀಸೆ ಮತ್ತು ಗಡ್ಡವನ್ನು ಅರ್ಧ ಬೋಳಿಸಿಕೊಳ್ಳುತ್ತೇನೆ ಎಂದಿದ್ದರು. ಅದರಂತೆಯೇ ಮಾಡಿಬಿಟ್ಟಿದ್ದಾರೆ.
ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಜೊತೆಗೆ ಯಾವಾಗ ಡೇಟ್ ಹೋಗ್ತೀರಾ? ನಮ್ರತಾಗೌಡಗೆ ಫ್ಯಾನ್ಸ್ ಪ್ರಶ್ನೆ!
ವೋಟಿಂಗ್ ಲೆಕ್ಕಾಚಾರದ ಪ್ರಕಾರ ಈ ಸೀಸನ್ ವಿಜೇತರಾಗಿ ಕಾರ್ತಿಕ್ ಮಹೇಶ್ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಒಂದು ಮೆಟ್ಟಿಲಿನ ಅಂತರದಲ್ಲಿ ಡ್ರೋನ್ ಪ್ರತಾಪ್‌ಗೆ ಬಿಗ್‌ಬಾಸ್ ಟ್ರೋಫಿ ಜಸ್ಟ್ ಮಿಸ್ ಆಗಿದೆ. ರನ್ನರ್ ಅಪ್ ಸ್ಥಾನ ಕೂಡ ಅವರಿಗೆ ಅನಿರೀಕ್ಷಿತವೇ. ಆದರೆ, ಅಭಿಮಾನಿಗಳಿಗೆ, ದೊಡ್ಮನೆಯಿಂದ ಹೊರಗೆ ಇರುವವರಿಗೆ ಡ್ರೋನ್ ಮೇಲೆ ಇದ್ದ ಪ್ರೀತಿ ಎಂತಹದ್ದು ಎಂಬುದು ವೋಟಿಂಗ್ ಮೂಲಕ ಸಾಬೀತಾಗಿದೆ. ಘಟಾನುಘಟಿ ಸ್ಪರ್ಧಿಗಳ ನಡುವೆ ಧ್ವನಿಯೇ ಇದಲ್ಲದಂತೆ ಇದ್ದ, ಪ್ರತಿ ಬರಿ ಕಣ್ಣೀರು ಹಾಕುತ್ತಾ ಇದ್ದ ಡ್ರೋನ್ ಪ್ರತಾಪ್ ಸೈಲೆಂಟ್ ಆಗಿಯೇ ಜನರ ಮನಸ್ಸಿಗೆ ಕನ್ನ ಹಾಕಿರುವುದಂತು ಸತ್ಯ. ಅದಕ್ಕೆ ಅವರಿಗೆ ಬಂದಿರುವ ವೋಟುಗಳೇ ಸಾಕ್ಷಿ.
ಡ್ರೋನ್ ಪ್ರತಾಪ್ ಅಭಿಮಾನಿಗಳಲ್ಲಿ ಒಬ್ಬರಾದ ಅಭಿರಾಜ್ ಎನ್ನುವವರು ತಮ್ಮ ಸೋಶೀಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಅವರಿಗಾಗಿ ಒಂದು ಸವಾಲು ಹಾಕಿದ್ದರು. ಫಿನಾಲೆಯಲ್ಲಿ ಈ ಬಾರಿ ಪ್ರತಾಪ್ ಅವರೇ ಗೆಲ್ಲುತ್ತಾರೆ. ನನ್ನ ಮಾತು ಸತ್ಯವಾಗುತ್ತದೆ. ಕರಿ ಸಿಂಹ, ಕರಿ ಚಿರತೆ ಪ್ರತಾಪ್ ವಿನ್ ಆಗೇ ಆಗುತ್ತಾರೆ. ನನ್ನ ಮಾತು ಸುಳ್ಳಾದರೇ ನಾನು ನನ್ನ ಅರ್ಧ ಮೀಸೆ ಮತ್ತು ದಾಡಿಯನ್ನು ತೆಗೆಯುತ್ತೇನೆ ಎಂದಿದ್ದರು. ಅದೇ ರೀತಿ ಪ್ರತಾಪ್ ಬಿಗ್ ಬಾಸ್ ವಿನ್ನರ್ ಅಗದೇ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಎಲ್ಲರಿಗೂ ಒಳಿತಾಗಲಿ, ಬಂದಿರೋ ಹಣ ಬಡವರಿಗೆ ಕೊಡ್ತಿನಿ ಎಂದ ಬಿಗ್‌ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್
ಹೀಗಾಗಿ ಅಬಿರಾಜ್ ತಮ್ಮ ಮೀಸೆ ಮತ್ತು ಗಡ್ಡ ಬೊಳಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ಹಸಿ ಮೆಣಸಿನಕಾಯಿ ತಿನ್ನುವ ಚಾಲೆಂಜ್ ಕೂಡ ಹಾಕಿದ್ದರು. ಕೊಟ್ಟ ಮಾತಿನಂತೆ ಹಸಿ ಮೆಣಸಿನಕಾಯಿ ತಿಂದು ಕಣ್ಣೀರು ಹರಿಸಿದ್ದಾರೆ. ಈತನ ಹುಚ್ಚಾಟಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ಕೆಲಸವನ್ನು ಮೆಚ್ಚಿದರೆ, ಮತ್ತೆ ಕೆಲವರು ಡೋಂಗಿ ಪ್ರತಾಪ್‌್ನನ್ನು ನಂಬಿದರೇ ಇದೆ ಗತಿ ಎಂದು ಅಣಕವಾಡಿದ್ದಾರೆ.