ನಮಸ್ಕಾರ ದೇವ್ರೂ ಅನ್ನೋ ಡಾ ಬ್ರೋ ಹಿಂದಿನ ನೋವಿನ ಕಥೆ ನಿಮಗೊತ್ತಾ?

ಡಾ ಬ್ರೋ ಅರ್ಥಾತ್ ಗಗನ್ ಶ್ರೀನಿವಾಸ್ ಇವತ್ತು ವ್ಲಾಗರ್ ಆಗಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಆದರೆ ಅವರ ಈ ಸಾಧನೆಗೆ ಚಿಕ್ಕ ವಯಸ್ಸಲ್ಲೇ ಆದ ಅವಮಾನ, ನೋವು ಸಹ ಕಾರಣವಂತೆ. ಏನಿದರ ಹಿಂದಿನ ಕಥೆ..

famous kannada vlogger Gagan shreenivas painful story bni

ಗಗನ್ ಶ್ರೀನಿವಾಸ್ ಅಂದರೆ ಎಷ್ಟು ಜನಕ್ಕೆ ಗೊತ್ತಾಗುತ್ತೋ ಗೊತ್ತಿಲ್ಲ. ಆದರೆ ಡಾ ಬ್ರೋ ಅಂದ್ರೆ ಸಾಕು, ಪುಟ್ಟ ಮಕ್ಕಳಿಂದ ಮುದುಕರವರೆಗೆ ಎಲ್ಲರ ಮುಖದಲ್ಲೂ ನಗು, ಈತ ನಮ್ ಹುಡುಗನೇ ಅನ್ನುವ ಆತ್ಮೀಯ ಭಾವ. ಆದರೆ ಡಾ ಬ್ರೋ ಮಟ್ಟಿಗೆ ಯಶಸ್ವಿ ಆಗಲು ಈ ಮಟ್ಟಿನ ಜನಪ್ರಿಯತೆ ಪಡೆಯಲು ಅವರು ಪಟ್ಟ ಕಷ್ಟ, ನೋವು, ಅವಮಾನಗಳೂ ಒಂದು ಕಾರಣ ಅನ್ನೋದು ಬಹಳ ಮಂದಿಗೆ ಗೊತ್ತಿಲ್ಲ. ಇವತ್ತು ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ಗಗನ್ ಅದನ್ನು ಮರೆತಿಲ್ಲ. ಅವರು ತಮ್ಮ ನೋವನ್ನು ತೋಡಿಕೊಂಡ ಹಳೇ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅದನ್ನು ಕಂಡು ಜನ ಥರಾವರಿ ಕಮೆಂಟ್ ಮಾಡ್ತಿದ್ದಾರೆ. ಹೆಚ್ಚಿನವರು ಡಾ ಬ್ರೋ ಹಾದುಬಂದ ಅವಮಾನ, ನೋವಿನ ಹಾದಿಯನ್ನು ಅಚ್ಚರಿಯಿಂದ ಕಂಡು ಸಮಾಧಾನದ ಮಾತುಗಳನ್ನು ಹೇಳಿದರೆ ಇನ್ನೊಂದಿಷ್ಟು ಜನ ತಮ್ಮ ಎಂದಿನ ಕೆಟ್ಟ ಮನಸ್ಥಿತಿಯಲ್ಲಿ ಲೇವಡಿ ಮಾಡೋ ರೀತಿ ಕಮೆಂಟ್ ಮಾಡಿದ್ದಾರೆ.

ಅಂದಹಾಗೆ ಗಗನ್ ಶ್ರೀನಿವಾಸ್ ಕೆಳ ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದವರು. ಈಗ ಅವರ ವಯಸ್ಸು 23 ವರ್ಷ. ‌ತಂದೆ ಶ್ರೀನಿವಾಸ, ತಾಯಿ ಪದ್ಮಾ, ತಮ್ಮ ಚಂದನ್‌, ಅವನಿಗೆ 13 ವರ್ಷ. ಬೆಂಗಳೂರಿನ ಹೊರವಲಯದ ಊರಲ್ಲಿ ಹುಟ್ಟಿ ಬೆಳೆದ ಗಗನ್ ಕುಟುಂಬಕ್ಕೆ ಅವರ ಬಾಲ್ಯದಿಂದಲೇ ಹೇಳಿಕೊಳ್ಳುವಂತಹ ಅನುಕೂಲ ಇರಲಿಲ್ಲ. ಹಾಗಂತ ಊಟಕ್ಕೆ ತಿಂಡಿಗೆ ಸಮಸ್ಯೆ ಇರಲಿಲ್ಲ. ಇವರು ಚಿಕ್ಕ ವಯಸ್ಸಿನಿಂದಲೇ ದೇವಸ್ಥಾನದ ಪೌರೋಹಿತ್ಯ, ಸಂಧ್ಯಾವಂದನೆ, ಹೋಮ ಹವನಗಳಲ್ಲಿ ಭಾಗಿ ಆಗುತ್ತಿದ್ದರು. ಇದರಲ್ಲಿಯೇ ಇವರ ಬಾಲ್ಯ ಕಳೆಯಿತು. ಜೊತೆಗೆ ಯಾರದ್ದಾದರೂ ಮದುವೆ, ಗೃಹಪ್ರವೇಶ ಇದ್ದರೆ ಅಲ್ಲಿ ಇವರ ಹಾಜರಿ ಇರುತ್ತಿತ್ತು. ಇವರು ಬೆಳೆದು ಬಂದಿದ್ದೇ ಆ ರೀತಿ.

ಅರೆರೆ! ಇಲ್ಲಿ ನಿಂತು ಡಾ.ಬ್ರೋ ಇದೇನ್‌ ಮಾಡ್ತಿದ್ದಾರೆ? ಚೀನಾದಲ್ಲಿ ನಕ್ಕು ನಗಿಸುವ ಆಟವಿದು!

ಫಸ್ಟ್‌ ಪಿಯು ಸೈನ್ಸ್‌ ಫೇಲ್‌ ಆದ ಬಳಿಕ ಕಾಮರ್ಸ್‌ ಮಾಡಿದರು. ಅದಾದ ಮೇಲೆ ಈ ಕೆಲಸ (work)  ಶುರು. ಹದಿನಾರು ವರ್ಷಕ್ಕೇ ಡ್ರೈವಿಂಗ್ ಲೈಸನ್ಸ್ (driving licence) ಇಲ್ಲದಿದ್ದರು ಟ್ಯಾಕ್ಸಿ ಓಡಿಸಿ ಸಂಪಾದನೆ ಮಾಡುತ್ತಿದ್ದರು. ಅನೇಕ ಮಂದಿಯ ಕೈ ಕೆಳಗೆ ದುಡಿದಿದ್ದರು. ಹೀಗೆ ದುಡಿಯುತ್ತ ಬದುಕಿನ ನಿರ್ವಹಣೆ ಎಷ್ಟು ಕಷ್ಟ ಅಂತ ಗೊತ್ತಾಗಿದೆ. ದುಡಿಮೆಯ ದಾರಿಯಲ್ಲೂ ಇವರಿಗೆ ಅನೇಕ ಅವಮಾನಗಳಾಗಿವೆ. ಅನೇಕರಿಂದ ವಿಪರೀತ ಬೈಗುಳ, ಹೊಡೆತ, ಅವಮಾನ ಅನುಭವಿಸಿ ನರಕಯಾತನೆಯಲ್ಲಿ ದಿನ ದೂಡಿದ್ದಾರೆ. ಬಾಲ್ಯದಲ್ಲೇ (childhood) ಇಂಥಾ ದಿನಗಳನ್ನು ಕಳೆದ ಮೇಲೆ ಅವರಿಗೆ ಈ ಥರದ ಬದುಕಿನ ಬಗ್ಗೆ ಜಿಗುಪ್ಸೆ ಬಂದಿದೆ. ಏನೇ ಮಾಡಿದರೂ ಸ್ವತಂತ್ರವಾಗಿ ಕೆಲಸ ಮಾಡಬೇಕು, ಯಾರ ಕೈಕೆಳಗೂ ದುಡಿಯಬಾರದು ಅನ್ನೋದು ಅವರ ಜೀವನದ ಮಂತ್ರವಾಯಿತು. ಆಗ ಕೈ ಹಿಡಿದದ್ದು ಯೂಟ್ಯೂಬ್ (youtube). ಸೈಬರ್ ಕೆಫೆಗೆ ಹೋಗಿ ಹತ್ತು ರುಪಾಯಿ ಕೊಟ್ಟು ಯೂಟ್ಯೂಬ್‌ನಲ್ಲಿ ಕಾಮಿಡಿ (comedy) ವೀಡಿಯೋ ಅಪ್‌ಲೋಡ್ ಮಾಡ್ತಿದ್ದ ಹುಡುಗ ಆ ಕಾಲದಲ್ಲೇ ಯೂಟ್ಯೂಬ್‌ನಿಂದ ದುಡ್ಡು ಮಾಡಬಹುದು ಅನ್ನೋದನ್ನು ಕಂಡುಕೊಂಡರು. ಶುರುವಲ್ಲಿ ಯೂಟ್ಯೂಬ್‌ನಿಂದ ಬರೋ ಹಣವನ್ನ ಹೇಗೆ ಕಲೆಕ್ಟ್ ಮಾಡಬೇಕು ಅನ್ನೋದು ಕೂಡ ಇವರಿಗೆ ಗೊತ್ತಿರಲಿಲ್ಲವಂತೆ. ಆದರೆ ಈಗ ಇವರು ಯೂಟ್ಯೂಬ್‌ನಿಂದ ಅತ್ಯಧಿಕ ಸಂಭಾವನೆ ಪಡೆಯೋ ಕನ್ನಡಿಗನಾಗಿ ಗುರುತಿಸಿಕೊಂಡಿದ್ದಾರೆ.

ಸದ್ಯ ಚೀನಾ ದೇಶಕ್ಕೆ ಹೋಗಿ ಕನ್ನಡಿಗರಿಂದ ಕೊಂಚ ಉಗಿಸ್ಕೊಂಡರೂ ಗಗನ್ ಆ ದೇಶದ ದರ್ಶನ ಮಾಡಿಸೋದರಲ್ಲಿ ಹಿಂದೆ ಬಿದ್ದಿಲ್ಲ. ಚೀನಾದ (china) ಮಹಾಗೋಡೆ, ಅಲ್ಲಿನ ಸ್ಥಿತಿ ಗತಿ, ಬಡತನ, ಬದುಕು ಇವನ್ನೆಲ್ಲ ಕಟ್ಟಿಕೊಟ್ಟಿದ್ದಾರೆ.

ಕಣ್ಣೀರು ಮಹಿಳೆಯ ವೀಕ್​ನೆಸ್​ ಅಲ್ಲ, ಅದು ಶಕ್ತಿ: ಅಂತರಪಟ ಡೈಲಾಗ್​ಗೆ ಫ್ಯಾನ್ಸ್​ ಫುಲ್​ ಖುಷ್​

Latest Videos
Follow Us:
Download App:
  • android
  • ios