ಕರಿಮಣಿ ಸೀರಿಯಲ್ ಫೈಟಿಂಗ್ ಸೀನ್ ಶೂಟಿಂಗ್ ಹೇಗಿತ್ತು ಗೊತ್ತಾ? ಮೈ ಝುಂ ಎನ್ನಿಸುವ ವಿಡಿಯೋ ರಿಲೀಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್ನ ಫೈಟಿಂಗ್ ಶೂಟಿಂಗ್ನ ರೋಚಕ ವಿಡಿಯೋ ಬಿಡುಗಡೆ ಮಾಡಲಾಗಿದೆ.
ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ. ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್ ನಡೆಯುತ್ತದೆ. ಫೈಟಿಂಗ್ ದೃಶ್ಯದ ಮೇಕಿಂಗ್ ವಿಡಿಯೋ ಇದಾಗಿದೆ.
ಅಂಥದ್ದೇ ಒಂದು ಶೂಟಿಂಗ್ ದೃಶ್ಯದ ವಿಡಿಯೋ ಇದೀಗ ಬಿಡುಗಡೆ ಮಾಡಲಾಗಿದೆ. ಇದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್ನ ಶೂಟಿಂಗ್ ದೃಶ್ಯ. ಖ್ಯಾತ ಸ್ಟಂಟ್ ಮಾಸ್ಟರ್ ರವಿವರ್ಮ ಅವರು ಈ ಧಾರಾವಾಹಿಯಲ್ಲಿ ಒಂದು ಸೂಪರ್ ಸೀನ್‌ಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಮೈಸೂರಿನ ಅಶ್ವಿನ್ ನಾಯಕನಾಗಿ ಮಿಂಚುತ್ತಿದ್ದು ಅವರ ಫೈಟಿಂಗ್ ಇದೆ. ಈ ಫೈಟಿಂಗ್ ದೃಶ್ಯದ ಕುರಿತು ರವಿವರ್ಮ ಅವರು ಮಾತನಾಡಿದ್ದು, ಯಾವ ಸಿನಿಮಾಕ್ಕೂ ಕಡಿಮೆ ಇಲ್ಲದಂತೆ ಫೈಟಿಂಗ್ ಶೂಟಿಂಗ್ ಮಾಡಲಾಗಿದೆ. ಅದೇ ಮಾದರಿಯಲ್ಲಿಯೇ ಶೂಟಿಂಗ್ ಮೂಡಿಬಂದಿದೆ ಎಂದು ಹೇಳಿದ್ದಾರೆ. ಅಶ್ವಿನ್ ಅವರು ಕೂಡ ತುಂಬಾ ಚೆನ್ನಾಗಿ ಸ್ಟಂಟ್ ಮಾಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಸೀತಾ ಮದ್ವೆ ನಿಲ್ಲಿಸಲು ರಾಮನ ಭರ್ಜರಿ ಫೈಟಿಂಗ್! ಶೂಟಿಂಗ್ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್
ಕೆಲ ದಿನಗಳ ಹಿಂದೆ ಶುರುವಾಗಿದೆ ಈ ಸೀರಿಯಲ್. ಅಂದಹಾಗೆ ಈ ಸೀರಿಯಲ್ ಕಥೆ ಚುಟುಕಾಗಿ ಹೇಳುವುದಾದರೆ, ತಾಯಿಯಿಲ್ಲದ ನಾಯಕಿ ಸಾಹಿತ್ಯ ಪದವಿ ಪಡೆಯುವ ಸಂದರ್ಭದಲ್ಲಿ ಶ್ರೀಮಂತ ಕರ್ಣನ ಭೇಟಿಯಾಗುತ್ತದೆ. ಈ ಸಂದರ್ಭದಲ್ಲಿ ಕೆಲವೊಂದು ಘಟನೆಗಳಿಂದ ಅವಳ ಬದುಕು ಬದಲಾಗಿ ಕೆಲವೊಂದು ರಹಸ್ಯಗಳು ಆಕೆಗೆ ತಿಳಿಯುತ್ತದೆ. ಸಾಹಿತ್ಯ ಪಾತ್ರವನ್ನು ಸ್ಪಂದನಾ ಸೋಮಣ್ಣ ಮಾಡಿದ್ದಾರೆ. ಕರ್ಣನಾಗಿ ಅಶ್ವಿನ್ ನಟಿಸಿದ್ದಾರೆ.
ಅದೇ ಇನ್ನೊಂದೆಡೆ, ತನ್ನ ಸ್ನೇಹಿತನ ಬದುಕನ್ನು ಉಳಿಸಬೇಕು ಅಂತ ಕರ್ಣ ಗಟ್ಟಿ ಮನಸ್ಸು ಮಾಡುತ್ತಾನೆ. ಆದರೆ ಅವನು ಸಾಹಿತ್ಯಾಳೇ ತನ್ನ ಸ್ನೇಹಿತನಿಗೆ ಮೋಸ ಮಾಡಿದ್ದು ಅಂತ ಕರ್ಣ ತಪ್ಪು ತಿಳಿದುಕೊಂಡಿರುತ್ತಾನೆ. ಹೀಗಾಗಿ ಸಾಹಿತ್ಯ ಮದುವೆಯ ದಿನದಂದು “ನಮ್ಮಿಬ್ಬರಿಗೂ ಮದುವೆ ಆಗಿದೆ, ವಿಚ್ಛೇದನ ಪತ್ರಕ್ಕೆ ಸಹಿ ಹಾಕು” ಅಂತ ಹೇಳುತ್ತಾನೆ. ಈ ಮಾತಿನಿಂದ ಸಾಹಿತ್ಯ ಬದುಕು ಬದಲಾಗುತ್ತದೆ. ಇದೇ ರೀತಿ, ಹೀಗೆ ಸಂಪ್ರದಾಯ, ಪ್ರೀತಿ ಮತ್ತು ಆಘಾತಕಾರಿ ದ್ರೋಹಗಳ ಸಂಕೀರ್ಣವಾದ ಚಿತ್ರಣವನ್ನು ‘ಕರಿಮಣಿ’ ಧಾರಾವಾಹಿ ಮೂಲಕ ಹೇಳಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ್ದ ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಅವರು, ಕರಿಮಣಿ ಸೀರಿಯಲ್ ಮೂಲಕ, ಕೆಲವೊಂದು ಸಂದೇಶ ನೀಡಲಾಗಿದೆ. ನಾವು ಮಾಡುವ ಆಯ್ಕೆಗಳು ಮತ್ತು ಅವು ಸಡಿಲಿಸುವ ಪರಿಣಾಮಗಳ ಪ್ರಬಲ ಪರಿಶೋಧನೆಯಾಗಿದೆ. ಈ ವಿಶಿಷ್ಟ ಪ್ರದರ್ಶನವು ನಮ್ಮ ವೀಕ್ಷಕರೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ ಮತ್ತು ಅಳಿಸಲಾಗದ ಗುರುತನ್ನು ಬಿಡುತ್ತದೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.
ಆ್ಯಕ್ಸಿಡೆಂಟ್ ಶೂಟಿಂಗ್ನಲ್ಲಿ ಸೀರಿಯಲ್ ನಟರಿಗೂ ಈ ಪರಿ ರಿಸ್ಕಾ? ಮೈ ಜುಂ ಎನ್ನಿಸುವ ವಿಡಿಯೋ ವೈರಲ್