ಇತ್ತೀಚೆಗೆ ಸ್ಯಾಂಡಪ್ ಕಾಮಿಡಿ ಮಾಡುತ್ತಿರುವವರು, ಸಂದರ್ಶನದಲ್ಲಿ ಮಾತನಾಡುವವರು, ರಿಯಾಲಿಟಿ ಶೋ ಮಾಡುತ್ತಿರುವವರು ನೀಡಿದ ಕೆಲ ಹೇಳಿಕೆಗಳು ಭಾರೀ ವೈರಲ್ ಆಗುತ್ತಿವೆ, ವಿವಾದ ಹುಟ್ಟುಹಾಕುತ್ತಿವೆ. ಈಗ ಬಿಗ್ ಬಾಸ್ ವಿಜೇತರೊಬ್ಬರು ಹೇಳಿದ ಹೇಳಿಕೆಯಿಂದ ರಿಯಾಲಿಟಿ ಶೋ ಆಫರ್ ತಪ್ಪಿ ಹೋಗುವುದಾ ಎಂಬ ಪ್ರಶ್ನೆ ಶುರುವಾಗಿದೆ.
ಇತ್ತೀಚೆಗೆ ಸಮಯ್ ಸಾರಥ್ಯದಲ್ಲಿ ನಡೆಸಲಾಗುತ್ತಿದ್ದ ʼಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋʼನಲ್ಲಿ ಲೈಂಗಿಕತೆ ಕುರಿತು ರಣವೀರ್ ಅಲ್ಹಾಬಾದಿಯಾ ಕೇಳಿದ ಅಸಭ್ಯ ಪ್ರಶ್ನೆ ವಿರುದ್ಧ ಅನೇಕರು ತಿರುಗಿಬಿದ್ದಿದ್ದರು. ಈ ಬಗ್ಗೆ ದೊಡ್ಡ ಚರ್ಚೆಯಾಗಿ ರಣವೀರ್ ಅವರನ್ನು ಪೊಲೀಸ್ ವಿಚಾರಣೆ ಮಾಡಲಾಗಿತ್ತು. ಈಗ ಬಿಗ್ ಬಾಸ್ ಸ್ಪರ್ಧಿ ಎಲ್ವಿಶ್ ಯಾದವ್ ಅವರ ಒಂದು ಮಾತು ಕೂಡ ಸಮಸ್ಯೆ ಮಾಡುವ ಕಾಣ್ತಿದೆ. ಅಷ್ಟೇ ಅಲ್ಲದೆ ಅವರು ಶೋನಿಂದ ಹೊರಗಡೆ ಹೋಗ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಯಾರು ಆ ʼಬಿಗ್ ಬಾಸ್ʼ ಸ್ಪರ್ಧಿ?
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಎಲ್ವಿಶ್ ಯಾದವ್ ಅವರು ಬಿಗ್ ಬಾಸ್ ಸ್ಪರ್ಧಿ ರಜತ್ ದಲಾಲ್ ಅವರ ಜೊತೆಗೆ ಒಂದು ಪಾಡ್‌ಕಾಸ್ಟ್ ಮಾಡಿದ್ದರು. ಅಲ್ಲಿ ಮಿಸ್ ಅರುಣಾಚಲ ಹಾಗೂ ಬಿಗ್ ಬಾಸ್ 18 ಸ್ಪರ್ಧಿ ಚುಮ್ ದರಂಗ್ ಅವರ ಬಗ್ಗೆ ಬಳಸಿದ ಪದ ಕಾಂಟ್ರವರ್ಸಿ ಆಗಿತ್ತು. ಈ ಬಗ್ಗೆ ಎಲ್ವಿಶ್ ಯಾದವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಕ್ಕಳು ಮಾಡಿಕೊಳ್ಳಬೇಕೆಂದು ಅನ್ನಿಸ್ತಿದೆ ಎಂದ ಬಿಗ್‌ಬಾಸ್ ಸ್ಪರ್ಧಿ, ಕಿರುತೆರೆ ನಟಿಯ ಗಂಡ
ಎಲ್ವಿಶ್ ಯಾದವ್ ಹೇಳಿದ್ದೇನು?
ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಎಲ್ವಿಶ್ ಯಾದವ್ "ನನ್ನ ಒಂದು ಪಾಡ್‌ಕಾಸ್ಟ್‌ನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರನ್ನು ನೋಯಿಸುವ ಅಥವಾ ಯಾರನ್ನು ಅವಮಾನ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಗೌರವದಲ್ಲಿ ನಾನು ನಂಬಿಕೆಯಿಟ್ಟಿದ್ದೇನೆ. ಎಲ್ಲರನ್ನು ನಾನು ಪ್ರೀತಿಸುತ್ತೇನೆ, ನಾನು ಆಡಿದ ಮಾತನ್ನು ತಪ್ಪಾಗಿ ತಿಳಿದುಕೊಂಡಿದ್ದು, ಅರ್ಥೈಸುವಂತೆ ಮಾಡಿದ್ದು ನೋಡಿದ್ರೆ ಬೇಸರ ಆಗುತ್ತದೆ. ನಾನು ಎಂದಿಗೂ ಪಾಸಿಟಿವಿಟಿಯಲ್ಲಿ ನಂಬಿಕೆ ಇಟ್ಟಿದ್ದೇನೆ" ಎಂದು ಬರೆದುಕೊಂಡಿದ್ದರು.
ಎಲ್ವಿಶ್ ಏನು ಹೇಳಿದ್ರು?
ರಜತ್ ದಲಾಲ್ ಜೊತೆಗಿನ ಸಂದರ್ಶನದಲ್ಲಿ "ಕರಣ್‌ಬೀರ್‌ಗೆ ಕೋವಿಡ್ ಆಗಿರಬಹುದು. ಅದನ್ನು ಬಿಟ್ಟರೆ ಚುಮ್ ಅವರನ್ನು ಯಾರು ಇಷ್ಟಪಡ್ತಾರೆ? ಯಾರು ಅಷ್ಟು ಕೆಟ್ಟ ಅಭಿರುಚಿ ಹೊಂದಿರುತ್ತಾರೆ? ಚುಮ್ ಹೆಸರಿನಲ್ಲಿ ಅಸಹ್ಯ ಇದೆ" ಎಂದು ಎಲ್ವಿಶ್ ಯಾದವ್ ಹೇಳಿದ್ದರು. ಚುಮ್ ಅವರು ʼಗಂಗೂಬಾಯಿ ಕಾಥಿಯವಾಡಿʼ ಸಿನಿಮಾದಲ್ಲಿ ನಟಿಸಿದ್ದರು.
Laughter Chefs 2 ಶೋ
Laughter Chefs 2 ಶೋನಲ್ಲಿ ಎಲ್ವಿಶ್ ಯಾದವ್ ಕೂಡ ಸ್ಪರ್ಧಿ. ಈ ಶೋನಿಂದ ಅವರನ್ನು ಕೈಬಿಡಲು ಒತ್ತಾಯಿಸಲಾಗುತ್ತಿದೆ. Federation of Western India Cine Employees ಅಧ್ಯಕ್ಷ ಬಿಎನ್ ತಿವಾರಿ ಅವರು ಎಲ್ವಿಶ್ ಅವರನ್ನು ಶೋನಿಂದ ಹೊರಗಡೆ ಹಾಕಿ ಎಂದು ಹೇಳಿಕೆ ನೀಡಿದ್ದಾರೆ.
ಡ್ರೋನ್ ಪ್ರತಾಪ್ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್
ಎಲ್ವಿಶ್ ಯಾದವ್ ಸ್ಪರ್ಧಿ!
ʼಬಿಗ್ ಬಾಸ್ʼ ಶೋ ಮೂಲಕ ದೊಡ್ಡ ಖ್ಯಾತಿ ಗಳಿಸಿದ ಎಲ್ವಿಶ್ ಯಾದವ್ ಅವರು ಈಗಾಗಲೇ ಸಾಕಷ್ಟು ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ. ಈ ಮಧ್ಯೆಯೂ ಅವರನ್ನು ಇಷ್ಟಪಡುವ ವರ್ಗ ಇದೆ.
ಎಲ್ವಿಶ್ ಯಾದವ್ ಯಾರು?
‘ಬಿಗ್ ಬಾಸ್ ಒಟಿಟಿ ಸೀಸನ್ 2’ ವಿಜೇತ ಆಗಿರೋ ಎಲ್ವಿಶ್ ಯಾದವ್ ಅವರು ಯುಟ್ಯೂಬರ್ ಕೂಡ ಹೌದು, ಗಾಯಕರೂ ಹೌದು. ಹರಿಯಾಣ ಮೂಲದ ಎಲ್ವಿಶ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಹದಿನೈದು ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್ ಇದ್ದಾರೆ. ಎಲ್ವಿಶ್ ಅವರು ಲಿಸ್ಟ್ ಹೇಳುವಷ್ಟರ ಮಟ್ಟಿಗೆ ಕಾಂಟ್ರವರ್ಸಿ ಮಾಡಿಕೊಂಡಿರೋದಂತೂ ಹೌದು.
