Bigg Boss contestants Couple: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟಿ ಅವರ ಪತಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಮದುವೆ, ಖಾಸಗಿ ಬದುಕಿನ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.

Bigg Boss contestants: ಬಿಗ್‌ಬಾಸ್ ಎಂಬ ರಿಯಾಲಿಟಿ ಶೋ ತೆಲಗು, ತಮಿಳು, ಮರಾಠಿ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಇತ್ತೀಚೆಗೆ ಕನ್ನಡದ ಬಿಗ್‌ಬಾಸ್ 11ನೇ ಸೀಸನ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದ್ರೆ ಒಮ್ಮೆ ಬಿಗ್‌ಬಾಸ್ ಮನೆ ಪ್ರವೇಶಿಸಿ ಹೊರ ಬಂದರೆ ಅವರು ಸೆಲಿಬ್ರಿಟಿಯಾಗಿ ಬಿಡುತ್ತಾರೆ. ಅಭ್ಯರ್ಥಿಗಳು ಬಿಗ್‌ಬಾಸ್ ನಿಂದ ಹೊರ ಬರುತ್ತಲೇ ಮಾಧ್ಯಮಗಳು, ಯುಟ್ಯೂಬ್ ಚಾನೆಲ್‌ಗಳು ಸಂದರ್ಶನ ನಡೆಸುತ್ತವೆ. ಇಷ್ಟು ಮಾತ್ರವಲ್ಲ ವಿವಿಧ ಕಾರ್ಯಕ್ರಮಗಳಿಗೆ ಬಿಗ್‌ಬಾಸ್ ಸ್ಪರ್ಧಿಗಳನ್ನು ಆಹ್ವಾನಿಸಿ ಗೌರವಿಸಲಾಗುತ್ತದೆ. ಇತ್ತೀಚೆಗೆ ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿಯ ಗಂಡ ಸಂದರ್ಶನದಲ್ಲಿ ತನಗೆ ಮಕ್ಕಳನ್ನು ಮಾಡಿಕೊಳ್ಳಬೇಕೆಂದು ಅನ್ನಿಸುತ್ತಿದೆ ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲಿಯೇ ಪತ್ನಿಯೂ ಇದ್ದರು. ಕಿರುತೆರೆ ನಟಿಯಾಗಿರುವ ಇವರು ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಸದ್ಯ ಖಾಸಗಿ ವಾಹಿನಿ ಶೋನಲ್ಲಿ ಪತಿ ಜೊತೆ ಭಾಗಿಯಾಗುತ್ತಿದ್ದಾರೆ. 

ಕಿರುತೆರೆ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ಉದ್ಯಮಿ ವಿಕ್ಕಿ ಬಿಗ್‌ಬಾಸ್ ಮನೆಗೆ ಸ್ಪರ್ಧಿಯಾಗಿ ತೆರಳಿದ್ದರು. ಬಗ್‌ಬಾಸ್ ಮನೆಯಲ್ಲಿಯೂ ಅಂಕಿತಾ ಲೋಖಂಡೆ, ತನಗೆ ಪಿರಿಯಡ್ಸ್ ಆಗುತ್ತಿಲ್ಲ ಎಂದು ಪ್ರೆಗ್ನೆಸಿ ಟೆಸ್ಟ್ ಸಹ ಮಾಡಿಸಿಕೊಂಡಿದ್ದರು. ಈ ವಿಷಯವೂ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಂದರ್ಶನದಲ್ಲಿ ಅಂಕಿತಾ ಪತಿ ತನಗೆ ಮಕ್ಕಳು ಮಾಡಿಕೊಳ್ಳಬೇಕೆಂದು ಅನ್ನಿಸುತ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. 

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೊತೆಯಾಗಿ ಮತ್ತೋರ್ವ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಎಲ್ವಿಶ್ ಯಾದವ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಅಂಕಿತಾ ಮತ್ತು ವಿಕ್ಕಿ ಜೊತೆಯಾಗಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಾವು ಮೂರು ವರ್ಷ ಡೇಟ್ ಮಾಡಿ, ನಾಲ್ಕನೇ ವರ್ಷಕ್ಕೆ ಮದುವೆ ಆದೀವಿ. ವಿಕ್ಕಿ ಒಳ್ಳೆಯ ಪತಿ ಎಂದು ಹೇಳಿದರು. ವಿಕ್ಕಿ ನನ್ನ ಸಿನಿಮಾ ಕೆರಿಯರ್‌ನಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಕಥೆ ಚೆನ್ನಾಗಿದ್ರೆ, ಪ್ರೊಡೊಕ್ಷನ್ ಹೌಸ್ ಒಳ್ಳೆಯದಾಗಿದ್ರೆ ಕೆಲಸ ಮಾಡು ಅಂತ ಮಾತ್ರ ಹೇಳುತ್ತಾರೆ.

ಇದೇ ಸಂದರ್ಶನದಲ್ಲಿ ಬಾಲಿವುಡ್‌ನ ತಾರತಮ್ಯದ ಬಗ್ಗೆ ಕೇಳಲಾಗಿತ್ತು. ಬಾಲಿವುಡ್‌ನಲ್ಲಿ ತಾರತಮ್ಯವಿದೆ ಎಂದು ಹೇಳಲ್ಲ. ಅವರದ್ದೇ ಆದ ಕೆಲ ಗುಂಪುಗಳಿವೆ. ತಮ್ಮ ಗುಂಪಿನಲ್ಲಿರೋ ಸದಸ್ಯರೊಂದಿಗೆ ಕೆಲಸ ಮಾಡುತ್ತಾರೆ. ಸಿನಿಮಾ ಮಾಡೋದು ಅಂದ್ರೆ ಅದು ಬ್ಯುಸಿನೆಸ್. ಹಾಗಾಗಿ ತಮ್ಮವರೊಂದಿಗೆ ಕೆಲಸ ಮಾಡಲು ಇಷ್ವಪಡ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ನನ್ನ ಅಭಿಪ್ರಾಯ ಎಂದು ಅಂಕಿತಾ ಲೋಖಂಡೆ ಹೇಳಿದರು.

ಇದನ್ನೂ ಓದಿ: ನಾನು ವರ್ಜಿನ್ ಆಗಿದ್ದೆ, ಆ ಬಗ್ಗೆ ನಂಗೆ ಗೊತ್ತಿರಲಿಲ್ಲ, ಅದು ತಪ್ಪೆಂದು ಅನ್ನಿಸಲಿಲ್ಲ ಎಂದ ನಟಿ

ಕಂಗನಾ ರಣಾವತ್ ನಿರ್ದೇಶನದ ಮಣಿಕರ್ಣಿಕಾ ಸಿನಿಮಾದಿಂದ ತುಂಬಾನೇ ಕಲಿತಿದ್ದೇನೆ. ಕಂಗನಾ ಜೊತೆಗಿನ ಒಡನಾಟ ಸಹ ಚೆನ್ನಾಗಿತ್ತು. ಆದ್ರೆ ಸಿನಿಮಾದ ನಿರ್ಮಾಪಕರು ನನ್ನ ಆಪ್ತ ಗೆಳೆಯರಾಗಿದ್ದರಿಂದ ಹೆಚ್ಚು ಸಂಭಾವನೆ ಪಡೆಯಲಿಲ್ಲ. ಕಿರುತೆರೆ ನಟಿ ಎಂದು ಬಾಲಿವುಡ್‌ನಲ್ಲಿ ಎಂದಿಗೂ ನನ್ನನ್ನು ಪ್ರತ್ಯೇಕವಾಗಿ ನೋಡಿಲ್ಲ. ಕಿರುತೆರೆ ಕಲಾವಿದರು ಸ್ಟಾರ್ ಆಗಿರೋದನ್ನು ನೋಡಿದ್ದೇನೆ ಎಂದು ಅಂಕಿತಾ ಲೋಖಂಡೆ ಹೇಳಿದರು. 

View post on Instagram

ನಿಮ್ಮ ವಯಸ್ಸು 40 ಆಗಿದ್ದು, ಆಲಿಯಾ ಭಟ್ ಅವರ ತಾಯಿ ಪಾತ್ರದಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆ ಕೇಳಲಾಯ್ತು. ನಾನು ಈಗಾಗಲೇ ಪವಿತ್ರಾ ರಿಷ್ತಾ ಧಾರಾವಾಹಿಯಲ್ಲಿ ದೊಡ್ಡವರಿಗೆಲ್ಲಾ ತಾಯಿಯಾಗಿ ನಟಿಸಿದ್ದೇನೆ. ಆದ್ರೆ ಆಲಿಯಾ ಭಟ್‌ಗೆ ನಾನು ತಾಯಿ ರೀತಿ ಕಾಣಿಸಲ್ಲ. ಹಾಗಾಗಿ ತಾಯಿಯಾಗಿ ನಟಿಸಲ್ಲ ಎಂದು ಹೇಳುತ್ತಿದ್ದಂತೆ ಎಲ್ವಿಶ್ ಯಾದವ್, ನೀವು ಈಗ ಮಕ್ಕಳು ಮಾಡಿಕೊಳ್ಳಬೇಕು. ಇಲ್ಲವಾದ್ರೆ ಡೈರೆಕ್ಟ್ ನಿಮಗೆ ಮೊಮ್ಮಕ್ಕಳು ಬರ್ತಾರೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ವಿಕ್ಕಿ, ನಿಮ್ಮ ಮಾತು ಕೇಳುತ್ತಿದ್ದಂತೆ ನನಗೆ ಕೂಡಲೇ ಮಕ್ಕಳು ಮಾಡಿಕೊಳ್ಳುವ ಯೋಚನೆ ಬರುತ್ತಿದೆ ಎಂದರು. ಧಾರಾವಾಹಿಯಲ್ಲಿ ಅಂಕಿತಾ ಲೋಖಂಡೆಗೆ ಮಕ್ಕಳಾಗಿ ನಟಿಸಿದ್ದ ಕಲಾವಿದರು ಇತ್ತೀಚೆಗಷ್ಟೆ ಮದುವೆಯಾಗಿದ್ದು, ಅವರು ಪೋಷಕರಾದ್ರೆ ನೀವು ಅಜ್ಜ-ಅಜ್ಜಿ ಆಗ್ತೀರಿ ಎಂದು ಎಲ್ವಿಶ್ ತಮಾಷೆ ಮಾಡಿದರು.

ಇದನ್ನೂ ಓದಿ: 4 ತಿಂಗಳಲ್ಲಿ 3 ಹಿಟ್; ಇವರೇ ನೋಡಿ 850 ಕೋಟಿ ಲಕ್ಕಿ ಹೀರೋಯಿನ್

YouTube video player