ಝಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೂವ ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ ತನ್ನದೇ ಆದ ಇತಿಹಾಸ ಸೃಷ್ಟಿಸಿದೆ. ಈ ಕಾರ್ಯಕ್ರಮದಿಂದ ಅನೇಕ ಪ್ರತಿಭೆಗಳು ಹೊರ ಬಂದು, ಸಿನಿಮಾಗಳಲ್ಲಿ, ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ ಯಶಸ್ವಿ ಗಾಯಕರಾಗಿದ್ದಾರೆ.

ಮೆಗಾ ಆಡಿಷನ್ ಸೀಸನ್ 16ಕ್ಕೆ ಆಡಿಷನ್ ಆರಂಭವಾಗಿದೆ. ಎಲ್ಲೆಡೆಯಿಂದ ಬಾಲ ಪ್ರತಿಭೆಗಳು ಪಾಲ್ಗೊಳ್ಳುತ್ತಿದ್ದು, ಈಜಿಪ್ಟ್ ಬಾಲೆಯೂ ಇದರಲ್ಲಿ ಒಬ್ಬಳು. ಹೌದು, ಈಜಿಪ್ಟ್‌ನಲ್ಲಿಯೇ ಹುಟ್ಟಿ ಬೆಳೆದ ಪರ್ಣಿಕಾ ಯಶೋದರ್, ಇದೀಗ ಬೆಂಗಳೂರಿನ ಶ್ರೀನಗರ ನಿವಾಸಿ. UKG ಓದುತ್ತಿದ್ದು, ಕನ್ನಡದ ಹಾಡು ಕಲಿತು ವೇದಿಕೆ ಏರಿದ್ದಾಳೆ.

 

ಮೂರು ತೀರ್ಪುಗಾರರೂ ಪರ್ಣಿಕಾಳ ಹಾಡೂ ಕೇಳಿ, ಆಕೆಯನ್ನು ವಿಶೇಷ ಸ್ಪರ್ಧಿ ಆಗಿ ಆಯ್ಕಿ ಮಾಡಲಾಗಿದೆ.