ಆಟೋ ರಾಜ ಡ್ರೋನ್​ ಪ್ರತಾಪ್​: ಇದನ್ನೂ ನೀನೇ ರೆಡಿ ಮಾಡಿದ್ದಾ ಅಂತ ಕೇಳೋದಾ ನೆಟ್ಟಿಗರು?

ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​ ಆಟೋ ಓಡಿಸಿ ಆಟೋ ಚಾಲಕರಿಗೆ ಶುಭಾಶಯ ಕೋರಿದ್ದಾರೆ. ಇದರ ವಿಡಿಯೋ ನೋಡಿ ಏನೆಲ್ಲಾ ಕಮೆಂಟ್​ ಮಾಡಿದ್ರು ನೋಡಿ... 
 

Drone Pratap of Bigg Boss fame drove the auto and greeted the auto drivers suc

ಈಗ ಬಿಗ್​ಬಾಸ್​​ ಖ್ಯಾತಿಯ ಡ್ರೋನ್​ ಪ್ರತಾಪ್​ದ್ದೇ ಹವಾ. ಇವರಿಗಾಗಿ ಫ್ಯಾನ್ಸ್​ ಪೇಜ್​ ಅಸಂಖ್ಯ ಹುಟ್ಟುಕೊಂಡಿದೆ. ಪ್ರತಾಪ್​ ಎಲ್ಲಿ ಹೋದರೂ ಅದರ ಬಗ್ಗೆ ಅಪ್​ಡೇಟ್​ ಕೊಡುತ್ತಲೇ ಇರುತ್ತಾರೆ. ಅದೇ ರೀತಿ ಬಿಗ್​ಬಾಸ್​ ಮನೆಗೆ ಹೋಗಿ ಬಂದ ಮೇಲೆ ಇವರ ಅಭಿಮಾನಿಗಳ ಬಳಗ ಬಹುದೊಡ್ಡದಾಗಿಯೇ ಇದೆ. ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್​ಗೆ, ಬಿಗ್​ಬಾಸ್​ ಕೃಪೆಯಿಂದಾಗಿ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ. 

ಇದೀಗ ಡ್ರೋನ್​ ಪ್ರತಾಪ್​ ಆಟೋ ಓಡಿಸಿದ್ದು, ಅದರ ವಿಡಿಯೋ ಅನ್ನು ಫ್ಯಾನ್ಸ್​ ಪೇಜ್​ ಶೇರ್​ ಮಾಡಿಕೊಂಡಿದೆ. ಆಟೋ ರಾಜ ಶಂಕರ್​ನಾಗ್​ ಅವರಿಗೆ ಜೈ ಎನ್ನುವ ಮೂಲಕ ಆಟೋ ಓಡಿಸುವ ಎಲ್ಲರಿಗೂ ಪ್ರತಾಪ್​ ಶುಭ ಹಾರೈಸಿದ್ದಾರೆ. ಇವರ ಈ ವಿಡಿಯೋಗೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದು, ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ನಿಮ್ಮ ಒಳ್ಳೆಯ ಗುಣ ನಿಮ್ಮನ್ನು ಕಾಪಾಡುತ್ತದೆ ಎಂದಿದ್ದಾರೆ. ಯಾರು ಏನೇ ಅಂದರೂ ಕ್ಯಾರೇ ಮಾಡಬೇಡಿ ಎಂದೆಲ್ಲಾ ಹೇಳಿದ್ದಾರೆ. ಆದರೆ ಒಂದಿಷ್ಟು ಮಂದಿ ಇವರ ಕಾಲೆಳೆದಿದ್ದಾರೆ. ಡ್ರೋನ್​ ಹೇಗೆ ಓಡಿಸಿದ್ದೆ ಎಂದು ಹಿಂದೊಮ್ಮೆ ಹೇಳುವಾಗ ಪ್ರತಾಪ್​, 100 ಮೀಟರ್​  ಹೋಯ್ತು, ಮುನ್ನೂರು ಮೀಟರ್ ಹೋಯ್ತು, ಆರುನೂರು ಮೀಟರ್ ಹೋಯ್ತು ಎಂದೆಲ್ಲಾ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಈಗ ಆಟೋ ಹೀಗೆಲ್ಲಾ ಓಡಿತು ಎಂದು  ಹೇಳೋಕ್ಕೆ ಇಷ್ಟಪಡ್ತಿನಿ ಎಂದು ಕಮೆಂಟ್​ ಮಾಡಲಾಗಿದೆ. ಇನ್ನು ಕೆಲವರು ಏನಾದ್ರೂ ಓಡಿಸಪ್ಪಾ, ರೀಲ್​ ಮಾತ್ರ ಬಿಡಬೇಡಪ್ಪಾ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರಂತೂ ಈ ಆಟೋನೂ ನೀನೇ ರೆಡಿ ಮಾಡಿದ್ದಾ ಅಂತ ಕಾಲೆಳೆಯುತ್ತಿದ್ದಾರೆ!

ನೆಲದ ಮೇಲೆಯೇ ಅನ್ನಪ್ರಸಾದ ಸ್ವೀಕರಿಸಿದ ಡ್ರೋನ್​ ಪ್ರತಾಪ್​: ಆಹಾ! ಎರಡು ಕಣ್ಣು ಸಾಲದು ಎಂದ ಫ್ಯಾನ್ಸ್​

 
ಇದೇ  7ರಂದು ಡ್ರೋನ್​ ಪ್ರತಾಪ್​ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು.  ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ  ಮಹದೇಶ್ವರ ಬೆಟ್ಟಕ್ಕೆ  ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು,  ಅನ್ನ ಪ್ರಸಾದವನ್ನು ಬರಿಯ ನೆಲದ ಮೇಲೆ ತಿಂದು ಹರಕೆ ತೀರಿಸಿದ್ದರು. ತಟ್ಟೆಯ ಸಹಾಯವಿಲ್ಲದೆ, ನೆಲದ ಮೇಲೆಯೇ ಸೇವಿಸಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. ಅವರ ಫ್ಯಾನ್ಸ್​ ಪೇಜ್​ನಿಂದ ಈ ವಿಡಿಯೋ ಶೇರ್​ ಆಗಿದ್ದು, ಅಭಿಮಾನಿಗಳು ಪ್ರತಾಪ್​ಗೆ ಜೈಜೈಕಾರ ಹಾಕುತ್ತಿದ್ದಾರೆ.  ಇಂಥ ದೃಶ್ಯ ನೋಡಲು ಎರಡು ಕಣ್ಣು ಸಾಲದು ಎನ್ನುತ್ತಿದ್ದಾರೆ. ಇನ್ನು ಕೆಲವರು ಮುಂದಿನ ಎಲೆಕ್ಷನ್​ಗೆ ಟಿಕೆಟ್​ ಗ್ಯಾರೆಂಟಿ ಎನ್ನುತ್ತಿದ್ದಾರೆ. 
 
ಅಂದಹಾಗೆ, ಡ್ರೋನ್​ ಪ್ರತಾಪ್​ ಕೆಲ ವರ್ಷಗಳ ಹಿಂದೆ ತುಂಬಾ ಆರೋಪ, ಟೀಕೆಗಳಿಗೆ ಗುರಿಯಾದವರು. ತಾವೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡು ಹಲವರನ್ನು ಯಾಮಾರಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಬಲ್ಲ ಚಾಣಾಕ್ಷತೆ ಇವರಿಗೆ ಇದೆ.  ಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್‌ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್‌ ಅಪ್‌ ಕೂಡ ಆದರು.

ಡ್ರೋನ್​ ಪ್ರತಾಪ್​ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು? 

 

Latest Videos
Follow Us:
Download App:
  • android
  • ios