ತೋಟಕ್ಕೆ ಅಪ್ಪನ ಕೈಯಿಂದ್ಲೇ ಡ್ರೋನ್ ಹಾರಿಸ್ತೀನಿ, ತಂಗಿ ಮದ್ವೆ ಮಾಡ್ತೀನಿ, ಅಮ್ಮಂಗೆ ಚಿನ್ನದ ಬಳೆ ಕೊಡಿಸ್ತೀನಿ...
ಡ್ರೋನ್ ಪ್ರತಾಪ್ ತಮ್ಮ ಮುಂದಿನ ಯೋಜನೆ ಕುರಿತು ತನಿಷಾ ಅವರ ಬಳಿ ಹೇಳಿಕೊಂಡಿದ್ದಾರೆ. ಅಪ್ಪ-ಅಮ್ಮ ಮತ್ತು ತಂಗಿ ಕುರಿತು ಅವರು ಹೇಳಿದ್ದೇನು?
ಬಿಗ್ಬಾಸ್ ಮನೆಯಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದ ಟಾಸ್ಕ್ ಭರಾಟೆ ಈಗ ತಗ್ಗಿದೆ. ಬಿಗ್ಬಾಸ್ ಶುರುವಾಗಿ ಒಂದೂವರೆ ತಿಂಗಳಾದ ಮೇಲೆ ಈ ಟಾಸ್ಕ್ನಿಂದಾಗಿ ಪರಸ್ಪರ ಸ್ಪರ್ಧಿಗಳು ಕೈಕೈ ಮಿಲಾಯಿಸುವ ಸ್ಥಿತಿಗೆ ಬಂದಿತ್ತು. ಎರಡು ತಂಡಗಳಾಗಿರುವ ಗಜಕೇಸರಿ ತಂಡ ಹಾಗೂ ಸಂಪತ್ತಿಗೆ ಸವಾಲ್ ತಂಡಗಳ ನಡುವೆ ಫೈಟಿಂಗ್ ಭರ್ಜರಿಯಾಗಿ ನಡೆದಿತ್ತು. ಗಜಕೇಸರಿ ತಂಡದಲ್ಲಿ ಡ್ರೋನ್ ಪ್ರತಾಪ್, ಸಿರಿ, ಸಂಗೀತಾ, ವಿನಯ್, ಸ್ನೇಹಿತ್ ಹಾಗೂ ನಮ್ರತಾ ಇದ್ದರೆ, ಇನ್ನೊಂದು ತಂಡವಾಗಿರುವ ಸಂಪತ್ತಿಗೆ ಸವಾಲ್ನಲ್ಲಿ ವರ್ತೂರು ಸಂತೋಷ್, ಮೈಕಲ್, ತನಿಷಾ, ತುಕಾಲಿ ಸಂತೋಷ್, ಕಾರ್ತಿಕ್ ಹಾಗೂ ನೀತು ಇದ್ದಾರೆ. ಇಷ್ಟು ದಿನ ಫ್ರೆಂಡು ಫ್ರೆಂಡು ಅಂದುಕೊಂಡೆ ಕಾರ್ತಿಕ್ ಹಾಗೂ ತನಿಷಾ ಜೊತೆಯಲ್ಲಿದ್ದ ಸಂಗೀತ ಈಗ ವಿನಯ್ ಟೀಂ ಸೇರಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ಬೇರೆ ಬೇರೆ ಟೀಮ್ ಸೇರಿಕೊಂಡು ಆಟವಾಡಿದ್ರು. ಎರಡೂ ಗುಂಪುಗಳ ನಡುವೆ ಏನೇನೋ ಹಂಗಾಮಾಗಳು ನಡೆಯುತ್ತಿವೆ.
ಇದರ ನಡುವೆ ಇದೀಗ, ಗುಂಪುಗಾರಿಕೆ ಭಾರಿ ಜೋರಾಗಿಯೇ ನಡೆಯುತ್ತಿದೆ. ಡ್ರೋನ್ ಮಾಡುವುದಾಗಿ ಹೇಳಿ ಹಲವರನ್ನು ನಂಬಿಸಿ ಮೋಸ ಮಾಡಿರೋ ಆರೋಪ ಹೊತ್ತು ಬಿಗ್ಬಾಸ್ ಹೊರಗಡೆ ಇದಾಗಲೇ ಸಾಕಷ್ಟು ಹೆಸರು ಕೆಡಿಸಿಕೊಂಡಿರೋ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಯಲ್ಲಿ ಸಕತ್ ಒಳ್ಳೆಯ ಮನುಷ್ಯನಾಗಿರಲು ಟ್ರೈ ಮಾಡುತ್ತಿರುವುದು ಮೊದಲಿನಿಂದಲೂ ಕಂಡುಬರುತ್ತಿದೆ. ತಾವಾಯಿತು ತಮ್ಮ ಕೆಲಸವಾಯಿತು ಎಂದುಕೊಂಡು ಯಾರ ತಂಟೆಗೂ ಹೆಚ್ಚು ಹೋಗದೇ, ಸನ್ನಡತೆಯನ್ನು ತೋರಲು ಟ್ರೈ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣಕ್ಕೆ ಇವರಿಗೆ ಇದಾಗಲೇ ಅನೇಕ ಮಂದಿ ಡ್ರೋನ್ ಪ್ರತಾಪ್ ಫ್ಯಾನ್ಸ್ ಪೇಜ್ ಮೂಲಕ ಅಭಿಮಾನಿಗಳು ಸಪೋರ್ಟ್ ಮಾಡುತ್ತಿದ್ದಾರೆ. ಇವರೇ ಗೆಲ್ಲಬೇಕು ಎನ್ನುತ್ತಿದ್ದಾರೆ.
ಹೋಗಲೇ ಅಂತ ಮಾತಾಡ್ಬೇಡಿ, ಅತಿಯಾಯ್ತು ನಿಂದು ಪ್ರತಾಪ್... ಅತ್ತ ಟಾಸ್ಕ್ ಜಟಾಪಟಿ... ಇತ್ತ ಫ್ಯಾನ್ಸ್ ಬ್ಯಾಟಿಂಗ್!
ಇದೀಗ ಡ್ರೋನ್ ತಮ್ಮ ಮುಂದಿನ ಪ್ಲ್ಯಾನ್ ಕುರಿತು ತಿಳಿಸುತ್ತಿದ್ದಾರೆ. ಇದಾಗಲೇ ಬಿಗ್ಬಾಸ್ ಆರಂಭದಲ್ಲಿಯೇ ತಮ್ಮ ಅಪ್ಪನ ಜತೆಗೆ ಕಳೆದ ಮೂರು ವರ್ಷಗಳಿಂದ ಮಾತನಾಡಿಲ್ಲ ಎಂಬ ವಿಚಾರವನ್ನು ಪ್ರತಾಪ್ ಹೇಳಿಕೊಂಡಿದ್ದರು. ಅದರ ನಡುವೆಯೇ ಪತ್ರದ ಟಾಸ್ಕ್ನಲ್ಲಿ ಅವರಿಗೆ ಮನೆಯಿಂದ ಬಂದ ಪತ್ರವೂ ಸಿಕ್ಕಿರಲಿಲ್ಲ. ಕೊನೆಗೆ ಅಪ್ಪನನ್ನು ನೋಡಬೇಕು ಎಂದು ಗೋಳೋ ಎಂದು ಅತ್ತಿದ್ದರು. ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಪ್ರತಾಪ್ ಅವರ ತಂದೆಯಿಂದ ಫೋನ್ ಬಂದಾಗ ಬಿದ್ದು ಬಿದ್ದು ಅತ್ತಿದ್ದರು ಪ್ರತಾಪ್. ಇದೀಗ ಅಪ್ಪನಿಗಾಗಿ ಏನಾದರೂ ಮಾಡಲು ಹಂಬಲ ಇದೆಯಂತೆ ಪ್ರತಾಪ್ ಅವರಿಗೆ.
ಈ ವಿಷಯವನ್ನು ಇನ್ನೋರ್ವ ಸ್ಪರ್ಧಿ ತನಿಷಾಗೆ ಹೇಳಿದ್ದಾರೆ ಪ್ರತಾಪ್. ಇಲ್ಲಿಂದ ಹೋದ ಮೇಲೆ ಏನು ಮಾಡುತ್ತೀರಿ ಎಂದು ತನಿಷಾ ಕೇಳಿದಾಗ, ಡ್ರೋನ್ ಪ್ರತಾಪ್ ದೊಡ್ಡ ಲಿಸ್ಟ್ ಹೇಳಿದ್ದಾರೆ. ಮೊದಲಿಗೆ ಅಮ್ಮನಿಗೆ ಎರಡು ಚಿನ್ನದ ಬಳೆ ಕೊಡಿಸುವೆ. ತಂಗಿಯೂ ಮದುವೆ ವಯಸ್ಸಿಗೆ ಬಂದಿದ್ದಾಳೆ. ಆಕೆಗೂ ಒಳ್ಳೆಯ ಗಂಡು ನೋಡಿ ಮದುವೆ ಮಾಡುತ್ತೇನೆ ಎಂದಿದ್ದಾರೆ ಪ್ರತಾಪ್. ನಂತರ ಅಪ್ಪನ ಕುರಿತು ಮಾತನಾಡಿದ ಅವರು, ನಾನು ಒಮ್ಮೆ ಅಪ್ಪನನ್ನು ಮುಟ್ಟಿ ಮಾತನಾಡಿಸಬೇಕು. ಜತೆಗೆ ಅಪ್ಪನ ತೋಟದಲ್ಲಿ ನಾನೇ ಮಾಡಿದ ಡ್ರೋನ್ ಇದೆ, ಅದನ್ನೇ ಬಳಕೆ ಮಾಡ್ತಿನಿ. ನನ್ನ ಕಡೆಯಿಂದ ಏನಾದರೂ ಮಷಿನ್ ಮಾಡಿ ಕೊಡುವ ಪ್ಲ್ಯಾನ್ ಇದೆ. ಅವರ ಕೈಗೆ ಡ್ರೋನ್ ಕೊಟ್ಟು ಹಾರಿಸ್ತಿನಿ. ಅದು ಹೇಗೆ ವರ್ಕ್ ಆಗುತ್ತೆ ಎಂದು ಅವರಿಂದಲೇ ತೋರಿಸ್ತಿನಿ ಎಂದಿದ್ದಾರೆ.