ಈ ಬಸ್ ತುಂಬಾ ಪುಟಾಣಿ ಪ್ರತಿಭೆಗಳು... ಕಂಡಕ್ಟರ್ ಮಾಸ್ಟರ್ ಆನಂದ್, ಡ್ರೈವರ್ ರಚಿತಾ ರಾಮ್...
ಡ್ರಾಮಾ ಜ್ಯೂನಿಯರ್ಸ್ ಸೀಸನ್ 5 ಶುರುವಾಗಲಿದ್ದು, ಮಕ್ಕಳನ್ನು ಹೊತ್ತ ಬಸ್ ಹೊರಟಿದ್ದು, ಅದರ ಪ್ರೊಮೋ ರಿಲೀಸ್ ಆಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಡ್ರಾಮಾ ಜ್ಯೂನಿಯರ್ಸ್ ಜನಮನ್ನಣೆ ಗಳಿಸಿದೆ. ಇದಾಗಲೇ ನಾಲ್ಕು ಸೀಸನ್ಗಳು ಮುಗಿದಿದ್ದು, 5ನೇ ಸೀಸನ್ತ್ತ ದಾಪುಗಾಲು ಇಟ್ಟಿದೆ. ಇದಾಗಲೇ ಹಲವಾರು ಪ್ರತಿಭೆಗಳು ತಮ್ಮ ಅದ್ಭುತ ಪ್ರತಿಭೆಗಳ ಮೂಲಕ ಜನಮನ ಗೆದ್ದಿದ್ದಾರೆ. ಪುಟಾಣಿ ಪ್ರತಿಭೆಗಳಿಗೆ ಜನರು ಫಿದಾ ಆಗಿದ್ದಾರೆ. ಇದೀಗ ಐದನೇ ಸೀಸನ್ ಶುರುವಾಗಲಿದ್ದು, ಅದರ ಪ್ರೊಮೋ ಒಂದು ಬಿಡುಗಡೆಯಾಗಿದೆ. ಹೊರಟಿದೆ ಪುಟಾಣಿ ಪ್ರತಿಭೆಗಳು ತುಂಬಿರೋ ಬಸ್ಸು ಡ್ರಾಮಾ ಜೂನಿಯರ್ಸೆ ಇವರ ಕೇರ್ ಆಫ್ ಅಡ್ರೆಸ್ಸು ಹೆಸರಿನಲ್ಲಿ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಇದೇ 18ರಿಂದ ಡ್ರಾಮಾ ಜ್ಯೂನಿಯರ್ಸ್ ಸೀಸನ್-5 ಶುರುವಾಗಲಿದೆ.
ಈಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ಒಂದು ಬಸ್ಸಿನ ತುಂಬೆಲ್ಲಾ ಬೇರೆ ಬೇರೆ ವೇಷ ತೊಟ್ಟ ಪುಟಾಣಿ ಮಕ್ಕಳನ್ನು ಕಾಣಬಹುದು. ಅದರಲ್ಲಿ ಕಂಡಕ್ಟರ್ ಮಾಸ್ಟರ್ ಆನಂದ್ ಆಗಿದ್ದು, ಡ್ರೈವರ್ ರಚಿತಾ ರಾಮ್ ಆಗಿದ್ದಾರೆ. ಈ ವಿಡಿಯೋದ ಕೊನೆಯಲ್ಲಿ ಚಿತ್ರನಟಿ ಲಕ್ಷ್ಮಿ ಹಾಗೂ ನಟ ರವಿಚಂದ್ರನ್ ಅವರ ಎಂಟ್ರಿ ಕೂಡ ಆಗಲಿದ್ದು, ಪ್ರೋಮೋ ಸಕತ್ ವೈರಲ್ ಆಗುತ್ತಿದೆ. ಈ ಪ್ರೊಮೋ ಮಾಡಿದವರ ತಲೆಗೆ ಫ್ಯಾನ್ಸ್ ಭೇಷ್ ಭೇಷ್ ಎನ್ನುತ್ತಿದ್ದು, ಮಕ್ಕಳ ಪ್ರತಿಭೆಯನ್ನು ನೋಡಲು ತಾವು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಅವಳ ಡ್ರೆಸ್ಗೆ ರಕ್ತದ ಕಲೆ, ಮುಂದೆ?... 'ಅಂತರಪಟ' ಕೊಟ್ಟ ಒಳ್ಳೆಯ ಮೆಸೇಜ್ಗೆ ಮೆಚ್ಚುಗೆಗಳ ಮಹಾಪೂರ
ಅಂದಹಾಗೆ ಕಳೆದ ಬಾರಿ ನಡೆದ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4, 23 ವಾರಗಳ ಕಾಲ ನಡೆದಿತ್ತು. ‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 4’ ವಿನ್ನರ್ (Drama Juniors Season 4 winners) ಆಗಿ ಸಮೃದ್ಧಿ ಎಸ್. ಮೊಗವೀರ್ ಹೊರಹೊಮ್ಮಿದ್ದಳು. ಮೂಲತಃ ಕುಂದಾಪುರದ ಸಮೃದ್ಧಿ ಆಕರ್ಷಕ ಟ್ರೋಫಿ ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಳು. ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದರು. ಮನಸೆಳೆಯುವ ಅಭಿನಯದ ಮೂಲಕ ಹೈಲೈಟ್ ಆಗಿದ್ದ 15 ಮಕ್ಕಳು ಫೈನಲ್ಗೆ ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದರು. ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ಅಲ್ಲದೇ, ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಜೀ ಕನ್ನಡ ವಾಹಿನಿ ಕಡೆಯಿಂದ ಗೌರವಿಸಲಾಯಿತು.
ಇದೀಗ ಡ್ರಾಮಾ ಜ್ಯೂನಿಯರ್ ಸೀಸನ್ 5ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಪ್ರೋಮೋದಲ್ಲಿನ ಪುಟಾಣಿ ಮಕ್ಕಳನ್ನು ನೋಡಿದರೆ ಒಬ್ಬರಿಗಿಂತ ಒಬ್ಬರು ಬೆಸ್ಟ್ ಆ್ಯಕ್ಟರ್ಸ್ ಎಂದು ಗುರುತಿಸಬಹುದು. ಕಾಂಪಿಟೇಷನ್ ಬಹಳ ಟಫ್ ಇರಲಿದೆ. ಚಿತ್ರತಾರೆಯರಾದ ರವಿಚಂದ್ರನ್, ಜೂಲಿ ಲಕ್ಷ್ಮೀ, ರಚಿತಾ ರಾಮ್ ಈ ಷೋನ ತೀರ್ಪುಗಾರರಾಗಿದ್ದು, ಮಾಸ್ಟರ್ ಆನಂದ್ ಈ ಷೋನ ನಿರೂಪಕರಾಗಿದ್ದಾರೆ. ಈ ಬಾರಿಯೂ ಅವರೇ ಮುಂದುವರೆಯಲಿದ್ದಾರೆ ಎಂದು ಪ್ರೊಮೋ ನೋಡಿದರೆ ತಿಳಿಯಬಹುದು.
ಚಿರು ಪುತ್ರನ ಡ್ಯಾನ್ಸ್‌ಗೆ ಮನಸೋತ ನೆಟ್ಟಿಗರು: ಭವಿಷ್ಯದ ಸ್ಟಾರ್ ನಟ ಫಿಕ್ಸ್ ಎಂದ ಫ್ಯಾನ್ಸ್