ಡಾ. ಬ್ರೋ ಬಿಟ್ಟು ಹೊರಟು ಹೋದ ವರ್ಷದಿಂದ ಸಾಥ್ ಕೊಟ್ಟ ಗೆಳೆಯ... ಭಾವುಕರಾದ ಗಗನ್

ಕನ್ನಡದ ಖ್ಯಾತ ಯೂಟ್ಯೂಬರ್ ಡಾ. ಬ್ರೋ ಆಲಿಯಾಸ್ ಗಗನ್ ಶ್ರೀನಿವಾಸ್ ಪ್ರವಾಸಗಳಿಗೆ ಒಂದು ವರ್ಷದಿಂದ ಸಾಥ್ ಕೊಟ್ಟಿದ್ದ ಗೆಳೆಯ ಇದೀಗ ಗಗನ್ ಬಿಟ್ಟು ಹೋಗಿರೋದಾಗಿ ಗಗನ್ ತಿಳಿಸಿದ್ದಾರೆ. 
 

Dr Bros drone which he used for 1 year got crashed pav

ಕನ್ನಡದ ಜನಪ್ರಿಯ ಯೂಟ್ಯೂಬರ್ ಗಗನ್ ಶ್ರೀನಿವಾಸ್ (Gagan Srinivas) ಆಲಿಯಾಸ್ ಡಾ ಬ್ರೋ ಸದ್ಯ ವಿದೇಶದಲ್ಲಿ ಟ್ರಾವೆಲ್ ಮಾಡುತ್ತಾ, ಎಂಜಾಯ್ ಮಾಡುತ್ತಲಿದ್ದಾರೆ. ಕಳೆದ ತಿಂಗಳು ಗಗನ್ ನೈಜೀರಿಯಾವನ್ನು ಎಕ್ಸ್ ಪ್ಲೋರ್ ಮಾಡಿ, ಅಲ್ಲಿನ ಸಂಸ್ಕೃತಿ, ಆಚರಣೆ, ಜನರು, ಪ್ರದೇಶಗಳ ಬಗ್ಗೆ ಜನರಿಗೆ ತಿಳಿಸಿಕೊಟ್ಟಿದ್ದರು. ಸದ್ಯ ಗಗನ್ ನೇಪಾಳದಲ್ಲಿದ್ದು, ಅಲ್ಲಿನ ಸುಂದರ ತಾಣಗಳನ್ನು ನೋಡುತ್ತಾ, ವಿಡಿಯೋ ಮಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಇದರ ಮಧ್ಯೆ ಗಗನ್ ವಿಡಿಯೋ ಒಂದನ್ನು ಶೇರ್ ಮಾಡಿ ಹೋದ ಹೊರಟು ಹೋದ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅಷ್ಟಕ್ಕೂ ಗಗನ್ ಅವರೊಂದಿಗೆ ಆಗಿದ್ದಾದರೂ ಏನು ನೋಡೋಣ.  

ಡಾ.ಬ್ರೋ 2025ರಲ್ಲಿ ನಮ್ಮ ಕೈಗೆ ಸಿಗೊಲ್ವಾ; ಇದೇನಿದು ಹೊಸ ರೆಸಲೂಷನ್!

ವಿಡೀಯೋ ಪೋಸ್ಟ್ ಮಾಡಿ, ಅದರ ಜೊತೆಗೆ ವಾಯ್ಸ್ ಓವರ್ ನೀಡಿರುವ ಗಗನ್, ಒಂದು ವರ್ಷದ ಹಳೆಯ ಸ್ನೇಹಿತನ ಈ ಪರಿಸ್ಥಿತಿಗೆ ಕಾರಣ ಎನ್ನುತ್ತಾ, ಕಾರಣ ಬಿಚ್ಚಿಡುತ್ತಾ ಹೋಗಿದ್ದಾರೆ. ಎಂದಿನಂತೆ ದ್ವಿಚಕ್ರ ವಾಹನ ಏರಿ ಅಲೆಯುತ್ತಿದ್ದೆ, ಸ್ವಚ್ಚ ಆಗಸ, ಎತ್ತರದ ಪರ್ವತಗಳು, ಇವೆಲ್ಲದರ ಮಧ್ಯೆ ಭೂಮಿ ಮೇಲಿನ ಸ್ಮಶಾನದಂತ ಜಾಗವನ್ನು ಸವೆಯುತ್ತಿದ್ದಾಗ, ಗಗನ್ ಅವರ ಡ್ರೋನ್ (drone crashed) ಬಿದ್ದು ತುಂಡಾಗಿದೆ. ಹಳೆ ಸ್ನೇಹಿತನ ಕಾಲು ಮುರಿದಿತ್ತು ಎಂದು ಹೇಳಿದ್ದಾರೆ. ಹೀಗೆ ನನ್ನ ಒಂದು ವರ್ಷದ ಸ್ನೇಹಿತ ಮುಳುಗುವ ಸೂರ್ಯನೊಂದಿಗೆ ಹೊರಟು ಹೋದ ಎಂದು ಹೇಳಿದ್ದಾರೆ. ಅಂದರೆ ಗಗನ್ ಅವರ ಪ್ರವಾಸಕ್ಕೆ ಕಳೆದ ಒಂದು ವರ್ಷದಿಂದ ಸಾತ್ ಕೊಟ್ಟ  ಸ್ನೇಹಿತ ಈಗ ಇನ್ನಿಲ್ಲ ಎನ್ನುವಂತೆ ಪೋಸ್ಟ್ ಹಾಕಿದ್ದಾರೆ. ಜೊತೆಗೆ ಕೊನೆಗೆ ಶ್ರದ್ಧಾಂಜಲಿ ಫೋಟೊ ಹಾಕಿ, ಎಲ್ಲಿ ಮರೆಯಾದೆ ವಿಠಲ ಏಕೆ ದೂರಾದೆ ಎನ್ನುವ ಹಾಡನ್ನು ಕೂಡ ತಮಾಷೆಯಾಗಿ ಹಾಕಿದ್ದಾರೆ. 

ನೈಜೀರಿಯಾ ಫೈಟರ್‌ಗಳ ಮುಂದೆ ತೊಡೆತಟ್ಟಿ ಗೂಸಾ ತಿಂದ ಡಾಕ್ಟರ್ ಬ್ರೋ..

ಗಗನ್ ವಿಡಿಯೋ ನೋಡಿ ಅನೇಕ ಜನರು ಕಾಮೆಂಟ್ ಮಾಡಿದ್ದು, ನಿಮ್ಮ ಸಮಸ್ಯೆ ಪರಿಹಾರಕ್ಕೆ ಡ್ರೋನ್ ಪ್ರತಾಪ್ (Drone Prathap) ಅವರನ್ನು ಸಂಪರ್ಕಿಸಿ ಎಂದಿದ್ದಾರೆ. ನಿಮ್ಮ ಸಮಸ್ಯೆಯನ್ನು ಪ್ರತಾಪ್ ಸರಿ ಮಾಡಿಕೊಡ್ತಾನೆ ಟೆನ್ಶನ್ ಮಾಡ್ಬೇಡಿ ಎಂದರೆ, ಇನ್ನೂ ಕೆಲವರು ಕೊಪ್ಪಳ ಜಾತ್ರೆಗೆ ಬನ್ನಿ. ಮತ್ತೆ ಕೆಲವರು ಹೊಸ ವರ್ಷದಲ್ಲಿ ಹೊಸ ಡ್ರೋನ್ ಬರಲಿ ಎಂದು ಹಾರೈಸಿದ್ದಾರೆ. 

 

Latest Videos
Follow Us:
Download App:
  • android
  • ios