ಯಾರೂ ಹೋಗದ ದೇಶಕ್ಕೆ ಕಾಲಿಟ್ಟ Dr Bro; ವಿಡಿಯೋ ಮಾಡಿದ್ದಕ್ಕೆ ಜಗಳಕ್ಕೆ ಬಿದ್ದ ಜನ!

ಅದು ಈಗಷ್ಟೇ ಸ್ವತಂತ್ರವಾಗಿರೋ ಸೌತ್‌ ಸುಡಾನ್ ದೇಶ. ಈ ದೇಶಕ್ಕೆ ಎಂಟ್ರಿ ಕೊಡೋದೆ ಕಷ್ಟ, ಇನ್ ವೀಡಿಯೋ ಮಾಡಿದ್ರೆ ಬಿಟ್ ಬಿಡ್ತಾರಾ? ವೀಡಿಯೋ ಮಾಡಲು ಹೋದ ಬ್ರೋ ಸಾಹೇಬ್ರಿಗೆ ಏನಾಯ್ತು ನೋಡಿ..

 

Dr bro visited South Sudan

ಲೈವ್ಲೀ ಮಾತು, ನಮ್ ನಿಮ್ಮಂಥ ಥಾಟ್, ಎಲ್ಲರ ಜೊತೆ ಬೆರೆಯೋ ಒಳ್ಳೆ ಮನ್ಸು. ಇದು ನಮ್ ಡಾ ಬ್ರೋ. ಅತೀ ಚಿಕ್ಕ ವಯಸ್ಸಲ್ಲಿ ದೇಶ ದೇಶ ಸುತ್ತಿ ಕನ್ನಡಿಗರಿಗೆ ಜಗತ್ತು ತೋರಿಸ್ತೀನಿ ಅಂತ ಓಡಾಡ್ತಿರೋ ಈ ೨೩ರ ಹುಡುಗ ಸದ್ಯ ಸೌತ್ ಸುಡಾನ್ ಗೆ ವಿಸಿಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಸ್ವತಂತ್ರವಾದ ದೇಶ. ಇದಕ್ಕೂ ಮೊದಲು ನಡೆದ ಅಂತರ್‌ ಯುದ್ಧದಲ್ಲಿ ಸುಮಾರು ೪ ಲಕ್ಷ ಸತ್ತುಹೋಗಿದ್ದಾರೆ. ೪೦ ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ನದೀ ಪ್ರವಾಹ, ಬಡತನ, ಕಿತ್ತು ತಿನ್ನೋ ಹಸಿವಿನ ನಡುವೆ ಬದುಕ್ತಿರೋ ಈ ದೇಶದ ಜನರ ಲೈಫನ್ನು ಬಹಳ ಹತ್ತಿರದಿಂದ ತುಂಬಾ ರಿಸ್ಕ್ ಇಟ್ಕೊಂಡು ತೋರಿಸಿದ್ದಾರೆ ಡಾ ಬ್ರೋ.

ಸದ್ಯ ಇಲ್ಲಿಗೆ ಫಾರಿನರ್ಸ್ ವಿಸಿಟ್ ಮಾಡೋದೇ ಬಲು ಕಷ್ಟ. ಅಂಥದ್ರಲ್ಲಿ ವೀಡಿಯೋ ಮಾಡೋದು ಊಹಿಸಲೂ ಆಗದ ಮಾತು. ಆದರೆ ಅಸಾಧ್ಯವಾದದ್ದನ್ನೇ ಮಾಡ್ತೀನಿ ಅಂತ ಹೊರಡೋ ಡಾ ಬ್ರೋ ಅದ್ಹೇಗೆ ಸಾಹಸ ಮಾಡಿದ್ರು, ಆ ಸಾಹಸದಲ್ಲಿ ಅವರಿಗೆ ಏನಾಯ್ತು ಅನ್ನೋದೇ ರೋಚಕ ಸಂಗತಿ. 'ದೇವರ ಮೇಲೆ ಭಾರ ಹಾಕಿ ಬಂದಿದ್ದೀನಿ' ಅನ್ನುತ್ತಾ ಅಲ್ಲಿನ ಬದುಕನ್ನ ಕಟ್ಟಿಕೊಡ್ತಾರೆ. ಅಷ್ಟೇ ಅಲ್ಲ, ಆ ದೇಶದ ಬಗ್ಗೆಯು ತಿಳಿಸಿಕೊಡ್ತಾರೆ. ಅವರು ವಿಸಿಟ್ ಮಾಡಿರೋದು ಸೌತ್ ಸುಡಾನ್ ರಾಜಧಾನಿ ಬುಜಾ ಅನ್ನುವಲ್ಲಿಗೆ. ನಮ್ ಬೆಂಗಳೂರಿನ ಸ್ಲಂ ಏರಿಯಾಗೆ ವಿಸಿಟ್ ಮಾಡಿದ್ರೆ ಹೇಗಿರುತ್ತೋ ಹಾಗೆ ಆ ದೇಶದ ರಾಜಧಾನಿ ಇದೆ. ಬೀದಿಗಳಲ್ಲಿ ಕಾಣೋದು ಬರೀ ಬಡತನ. ಹಾಗಂತ ದೇಶದಲ್ಲಿ ಸಂಪನ್ಮೂಲ ಇದೆ. ಯಥೇಚ್ಛ ಪೆಟ್ರೋಲ್‌ ಸಿಗುತ್ತೆ. ಅದನ್ನು ಬಾಚಿ ಬಾಚಿ ಬೇರೆ ದೇಶಗಳಿಗೆ ಎಕ್ಸ್‌ಪೋರ್ಟ್ ಮಾಡ್ತಾರೆ. ಆ ಹಣವನ್ನು ಕೆಲವೇ ಕೆಲವರು ಕಬಳಿಸ್ತಾರೆ. ಹಾಗಾಗಿ ಈ ದೇಶದಲ್ಲಿ ಮಿಡಲ್ ಕ್ಲಾಸ್ ಅನ್ನೋ ವರ್ಗನೇ ಇಲ್ಲ. ಇರೋದು ಆಗರ್ಭ ಶ್ರೀಮಂತರು, ಅತೀ ಬಡವರು.

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ರಾಧಿಕಾ ರಾವ್

ಡಾ ಬ್ರೋ ಓಡಾಡಿದ ಬೀದಿಗಳಲ್ಲಿ ಜನ ಎಂಎಲ್ ಲೆಕ್ಕದಲ್ಲಿ ಅಡುಗೆ ಎಣ್ಣೆ ಮಾರ್ತಾರೆ. ಸಣ್ಣ ಸ್ಟಾಲ್‌ಗಳಲ್ಲಿ ಗುಡ್ಡೆ ಹಾಕಿದ ಈರುಳ್ಳಿಯಲ್ಲಿ ಒಂದು ಈರುಳ್ಳಿ ಖರೀದಿಸಲೂ ಒದ್ದಾಡುವ ಜನ, ಯಾರ ಮೈಯಲ್ಲೂ ಸರಿಯಾದ ಬಟ್ಟೆ ಇಲ್ಲ. ನದಿ ಇರುವ ಕಾರಣ, ಅಲ್ಲಿಂದ ಮೀನು ಹಿಡಿದು ವರ್ಷಪೂರ್ತಿ ಅದನ್ನೇ ತಿನ್ನುತ್ತಾರೆ.

ಡಾ ಬ್ರೋ ಬಹಳ ಭಯದಲ್ಲಿ ಈ ಬೀದಿಗಳಲ್ಲಿ ಓಡಾಡ್ತಾರೆ. ನೋಡು ನೋಡ್ತಿರೋ ಹಾಗೆ ಯಾರಾದರೂ ಕ್ಯಾಮರ ಕಿತ್ತುಕೊಳ್ಳೋ ಭಯ. ಇನ್ನೊಂದು ಕಡೆ ವೀಡಿಯೋ ಮಾಡೋದಕ್ಕೆ ಬೈಯ್ಯುವ ಜನ. ನೋಡು ನೋಡ್ತಿದ್ದ ಹಾಗೆ ನಾಲ್ಕೈದು ಜನ ಒಟ್ಟು ಸೇರ್ತಾರೆ. ಆಗ ಅಲ್ಲಿಂದ ಎಸ್ಕೇಪ್ ಆಗಬೇಕು. ಇಲ್ಲಾಂದ್ರೆ ಆ ಜನ ಏನ್ ಮಾಡ್ತಾರೆ ಅಂತ ಅವ್ರಿಗೂ ಗೊತ್ತಿರಲ್ಲ. ಇಲ್ಲಿ ಜನ ಲೂಟಿ ಮಾಡ್ಕೊಂಡು ತಿನ್ನೋದೇ ಜಾಸ್ತಿ. ಸುಮಾರು ಅರವತ್ತ ನಾಲ್ಕು ಬುಡಕಟ್ಟುಗಳ ಜನ ಇಲ್ಲಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗಲ್ಲ. ಅವರ ಮೇಲೆ ಇವರ ದಾಳಿ ನಡೆಯುತ್ತಲೇ ಇರುತ್ತದೆ. ಅವರ ಮೇಲೆ ಇವರ ದಾಳಿ ಮಾಮೂಲಿ. ಮಾರಾಕಾಸ್ತ್ರಗಳೆಲ್ಲ ಇವರ ಬಳಿ ಇದೆ. ಆದರೆ ಹೊಟ್ಟೆಗೆ ಬೇಕಾದ ಹಿಟ್ಟಿಲ್ಲ. ಬೆಳೆಯೋ ಸೌಲಭ್ಯ ಇದ್ದರೂ ಬೆಳೆಯದೇ ಪಕ್ಕದ ದೇಶಗಳಿಂದ ಎಲ್ಲವನ್ನೂ ಆಮದು ಮಾಡ್ಕೊಳ್ತಾರೆ.

ಅಮೃತಧಾರೆ : ಮದ್ವೆಗೂ ಮೊದ್ವೇ ವಾಂತಿ ಮಾಡ್ಕೊಂಡು ಬಿಟ್ಳಲ್ಲಾ ಗೌತಮ್‌ ತಂಗಿ ಮಹಿಮಾ! ಮುಂದ?

ಫೋನ್ ಚಾರ್ಜ್ ಮಾಡ್ಕೊಳ್ಳೋದಕ್ಕೂ ಒಂದು ಅಂಗಡಿ ಇದೆ. ಅಲ್ಲಿ ಮೊಬೈಲ್ ಚಾರ್ಜ್ ಮಾಡಿದ್ದಕ್ಕೆ ದುಡ್ಡು ಕೊಡಬೇಕು. ಆ ಮೊಬೈಲ್‌ಗಳೋ ಭಾರೀ ಗಟ್ಟಿ,'ಇದು ನೆಲಕ್ಕೆ ಬಿದ್ರೆ ನೆಲನೇ ಒಡೆಯುತ್ತೆ' ಅಂತಾರೆ ಬ್ರೋ.

ದಾರಿಯುದ್ದಕ್ಕೂ ಜನ ಉಗುದ್ರೂ ಉಗಿಸ್ಕೊಂಡು, ಪ್ರಾಣಭಯದಲ್ಲಿ ನಾಲ್ಕು ಜನ ಸೇರಿದ ಕೂಡಲೇ ಎಸ್ಕೇಪ್ ಆಗಿ ಬಹಳ ಅಂದರೆ ಬಹಳ ಕಷ್ಟದಲ್ಲಿ ವೀಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ ಬ್ರೋ. ಇದನ್ನೆಲ್ಲ ನೋಡಿದ ನೆಟ್ಟಿಗರು, 'ನಿನ್ನಂಥೋರು ಯಾರೂ ಇಲ್ವಲ್ಲೋ' ಅಂತಿದ್ದಾರೆ.

Latest Videos
Follow Us:
Download App:
  • android
  • ios