Asianet Suvarna News Asianet Suvarna News

ಫ್ಯಾನ್‌ ಫಾಲೋವಿಂಗ್‌ನಲ್ಲಿ ದರ್ಶನ್‌, ಸುದೀಪ್‌ರನ್ನೇ ಹಿಂದೆ ಹಾಕಿದ ಡಾ. ಬ್ರೋ!


ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾನ್‌ ವಾರ್‌ಗಳು ಆಗುತ್ತಲೇ ಇರುತ್ತವೆ. ಇದರ ಲಾಭ ಆಗೋದು ಮಾತ್ರ ಆಯಾ ಸ್ಟಾರ್‌ಗಳಿಗೆ. ಇನ್ಸ್‌ಟಾಗ್ರಾಮ್‌ನಲ್ಲಿ ಎಷ್ಟು ಫಾಲೋವರ್ಸ್‌ ಇದ್ದಾರೆ ಅನ್ನೋದರ ಮೇಲೆ ಸ್ಟಾರ್‌ಗಿರಿ ನಿರ್ಧಾರವಾಗೋ ಕಾಲ ಬಂದ್ರೂ ದೂರವಿಲ್ಲ.

Dr Bro Surpasses Darshan thoogudeepa and kiccha sudeep in Instagram Followers san
Author
First Published Aug 6, 2024, 4:34 PM IST | Last Updated Aug 6, 2024, 4:35 PM IST

ರ್ನಾಟಕದಲ್ಲಿ ಪ್ರಸ್ತುತ ದಿನದ ದೊಡ್ಡ ಸಿನಿಮಾ ಸ್ಟಾರ್‌ ಎಂದರೆ, ಎಲ್ಲರ ನೆನಪಿಗೆ ಬರೋದು ಕಿಚ್ಚ ಸುದೀಪ್‌ ಹಾಗೂ ದರ್ಶನ್‌ ತೂಗುದೀಪ. ಒಬ್ಬರು ತಮ್ಮ ಮುಂದಿನ ಸಿನಿಮಾ ಮ್ಯಾಕ್ಸ್‌ನ ಶೂಟಿಂಗ್‌ ಹಾಗೂ ಅದರ ಕುರಿತಾದ ಕೆಲಸದ ನಿರೀಕ್ಷೆಯಲ್ಲಿದ್ದರೆ, ಇನ್ನೊಂದೆಡೆ ದರ್ಶನ್‌ ತೂಗುದೀಪ ಚಿತ್ರದುರ್ಗದ ಸಾಮಾನ್ಯ ವ್ಯಕ್ತಿ ರೇಣಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ದರ್ಶನ್‌ ಹಾಗೂ ಸುದೀಪ್‌ ವಿಚಾರ ಇದಾದರೆ, ಇನ್ಸ್‌ಟಾಗ್ರಾಮ್‌ನಲ್ಲಿ ಸದ್ದಿಲ್ಲದೆ, ಡಾ. ಬ್ರೋ ಇವರಿಬ್ಬರನ್ನೂ ಹಿಂದಿಕ್ಕಿದ್ದಾರೆ. ಹೌದು, ವಿದೇಶಗಳಲ್ಲಿ ಸುತ್ತಾಟ ಮಾಡುತ್ತಾ  ಅಲ್ಲಿನ ಆಚಾರ ವಿಚಾರ ಪದ್ದತಿಗಳ ಬಗ್ಗೆ ಕನ್ನಡಿಗರಿಗೆ ಅವರದೇ ಭಾಷೆಯಲ್ಲಿ ಅತ್ಯಂತ ಲೋಕಲ್‌ ಆಗಿ ತಿಳಿಸಿಕೊಡುವ ಗಗನ್‌ ಶ್ರೀನಿವಾಸ್‌ ಅಲಿಯಾಸ್‌ ಡಾ.ಬ್ರೋ ಈಗ ಇನ್ಸ್‌ಟಾಗ್ರಾಮ್‌ನಲ್ಲಿ ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ. ಕೆಲವು ಸೋಶಿಯಲ್‌ ಮೀಡಿಯಾ ಪೇಜ್‌ಗಳು ಈ ವಿಚಾರವಾಗಿ ಡಾ. ಬ್ರೋಗೆ ಅಭಿನಂದನೆಗಳನ್ನೂ ಸಲ್ಲಿಸಿವೆ. ಇತ್ತೀಚೆಗೆ ಲೆಬನಾನ್‌ ದೇಶದ ಪ್ರವಾಸಕ್ಕೆ ಹೋಗಿದ್ದ ಡಾ. ಬ್ರೋ ಈ ಕುರಿತಾದ ವಿಡಿಯೋಗಳನ್ನು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಸೋಶಿಯಲ್‌ ಮೀಡಿಯಾದಲ್ಲಿ 203 ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಡಾ. ಬ್ರೋಗೆ 2.7 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ.  ಇನ್ನು ಕಿಚ್ಚ ಸುದೀಪ್‌ ಇನ್ಸ್‌ಟಾಗ್ರಾಮ್‌ನಲ್ಲಿ 401 ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, 2.3 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಕಾಟೇರ ಸಿನಿಮಾದ ಮೂಲಕ ಯಶಸ್ಸು ಕಂಡಿರುವ ದರ್ಶನ್‌ ತೂಗುದೀಪ 505 ಪೋಸ್ಟ್‌ಗಳನ್ನು ಇನ್ಸ್‌ಗ್ರಾಮ್‌ನಲ್ಲಿ ಹಂಚಿಕೊಂಡಿದ್ದು 2.1 ಮಿಲಿಯನ್‌ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆ ಮೂಲಕ ಇನ್ಸ್‌ಟಾಗ್ರಾಮ್‌ನಲ್ಲಿ ಗರಿಷ್ಠ ಫಾಲೋವರ್ಸ್‌ಗಳನ್ನು ಹೊಂದಿರುವ ಲಿಸ್ಟ್‌ನಲ್ಲಿ ಡಾ ಬ್ರೋ ದರ್ಶನ್‌ ಹಾಗೂ ಸುದೀಪ್‌ ಅವರನ್ನೇ ಹಿಂದಿಕ್ಕಿದ್ದಾರೆ.

ಡಾ. ಬ್ರೋ ಸಖತ್‌ ಆಗಿ ಮಿಂಚುತ್ತಿದ್ದಾರೆ. ಯೂಟ್ಯೂಬ್‌ನೊಂದಿಗೆ ಇನ್ಸ್‌ಟಾಗ್ರಾಮ್‌ನಲ್ಲೀ ಅವರ ವಿಡಿಯೋಗಳು ವೈರಲ್‌ ಆಗುತ್ತಿವೆ. ಲೆಬನಾನ್‌ ದೇಶಕ್ಕೆ ಹೋಗಿರುವ ವಿಡಿಯೋಗಳನ್ನು ಪೋಸ್ಟ್‌ ಮಾಡಿರುವ ಡಾ. ಬ್ರೋ ಅಲ್ಲಿ ಬಗೆಬಗೆಯ ತಿನಿಸುಗಳನ್ನು ತಿನ್ನುವ ವಿಡಿಯೋವನ್ನು ಶೇರ್‌ ಮಾಡಿಕೊಂಡಿದ್ದಾರೆ.  ಲೆಬನಾನ್‌ ದೇಶದ ನ ವಿವಿಧ ಭಕ್ಷ್ಯಗಳನ್ನು ಕ್ಯಾಮೆರಾಕ್ಕೆ ತೋರಿಸಿ ತೋರಿಸಿ ಅವರು ತಿಂದಿದ್ದನ್ನು, ಇದನ್ನು ನೋಡಿದ ಅಭಿಮಾನಿಗಳು, ನಮಗೂ ಸ್ವಲ್ಪ ತಂದುಕೊಡಿ ಎಂದಿದ್ರೆ, ಹೊಟ್ಟೆ ಉರಿಸ್ಬೇಡ ಅಣ್ಣೋ ಎಂದು ಇನ್ನು ಕೆಲವರು ಹೇಳ್ತಿದ್ದಾರೆ. ಆದರೆ ಹಲವರು ಹೇಳಿ ಕೇಳಿ ಅದು ಲೆಬನಾನ್​ ಕಣಣ್ಣೋ... ನೀನು ಪ್ಯೂರ್​ ವೆಜ್ಜು. ಅದರಲ್ಲಿ ಬೌ ಬೌ ಇದ್ರೂ ಇರ್ಬೋದು ಎಂದು ತಮಾಷೆ ಮಾಡಿದ್ದರು.

ಬೌ ಬೌ ಮಿಕ್ಸ್​ ಆಗಿರುತ್ತೆ ಹುಷಾರ್​ ಕಣಣ್ಣೋ.... ಹೇಳಿ-ಕೇಳಿ ಅದು... ಡಾ.ಬ್ರೋ ವಿಡಿಯೋಗೆ ಫ್ಯಾನ್ಸ್​ ಹೀಗೊಂದು ಎಚ್ಚರಿಕೆ!

ಮೂಲಭೂತವಾದಿಗಳ ನಾಡಾಗಿರುವ ಲೆಬನಾನ್‌ನಲ್ಲಿ ನಿಂತು ಅಲ್ಲಿನ ಜನರ ಬಗ್ಗೆ ಮಾತನಾಡಿದ್ದಕ್ಕೆ ಎಲ್ಲರೂ ಗಗನ್‌ ಶ್ರೀನಿವಾಸ್‌ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಹಾಗಂತ ಡಾ. ಬ್ರೋಗೆ ಇದು ಹೊಸದೇನಲ್ಲ. ಇದಕ್ಕೂ ಮುನ್ನ ಪಾಕಿಸ್ತಾನ, ಅಫ್ಘಾನಿಸ್ತಾನ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಮಾತನಾಡಿಸಿ ಬಂದಿದ್ದರು. ಅದರಲ್ಲೂ ಅಫ್ಘಾನಿಸ್ತಾನದ ವಿಡಿಯೋಗಳಲ್ಲಿ ಅವರು ಡಾ.ಬ್ರೋ ತಾಲಿಬಾನ್‌ ಉಗ್ರಗಾಮಿಗಳನ್ನು ಮಾತನಾಡಿಸಿದ್ದರು.

ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಲಗ್ಗೆ ಇಟ್ಟು ಬಿಟ್ರಾ ಡಾ.ಬ್ರೋ? ಮೈ ಝುಂ ಎನ್ನುವ ಭಯಾನಕ ದೃಶ್ಯದ ಸೆರೆ...

Latest Videos
Follow Us:
Download App:
  • android
  • ios