Asianet Suvarna News Asianet Suvarna News

Dr.Bro : ಹೊಸ ಕಂಪನಿ ಆರಂಭಿಸಿದ ಡಾ.ಬ್ರೋ, ಟ್ರಾವೆಲ್ ವೀಡಿಯೋ ನಿಲ್ಲಿಸಬೇಡಿ ಎಂದ ಫ್ಯಾನ್ಸ್!

ಡಾ. ಬ್ರೋ  ಪ್ರವಾಸದ ವಿಡಿಯೋ ಮೂಲಕವೇ ವಿಶ್ವದಾದ್ಯಂತ ಕನ್ನಡಿಗರನ್ನು ಸೆಳೆದ ಯುಟ್ಯೂಬರ್ ಗಗನ್. ಕಾಡಿನಿಂದ ನಾಡಿನವರೆಗೆ ಎಲ್ಲರ ಪರಿಚಯ ಮಾಡಿಸ್ತಿರುವ ಗಗನ್ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಅಭಿಮಾನಿಗಳ ಸಂಪೂರ್ಣ ಬೆಂಬಲ ಸಿಕ್ಕಿದೆ. 
 

Dr. Bro gagan started a new company named go pravasa roo
Author
First Published Aug 17, 2024, 4:25 PM IST | Last Updated Aug 17, 2024, 6:33 PM IST

ಡಾಕ್ಟರ್ ಬ್ರೋ (Dr. Bro)  ಕನ್ನಡಿಗರ ಪ್ರಸಿದ್ಧ ಯುಟ್ಯೂಬ್ ಚಾನೆಲ್ (Youtube Channel). ವಿಶ್ವದ ಮೂಲೆ ಮೂಲೆಯನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಕನ್ನಡಿಗರಿಗೆ ತೋರಿಸುತ್ತಿರುವ ಡಾ. ಬ್ರೋ ಪ್ರಸಿದ್ಧಿಯ ಗಗನ್, ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರವಾಸದ ಮೂಲಕವೇ ಪ್ರಸಿದ್ಧಿ ಪಡೆದಿರುವ ಗಗನ್, ಈಗ ತಮ್ಮ ಜೊತೆ ಸಾಮಾನ್ಯ ಜನರಿಗೂ ವಿಶ್ವವನ್ನು ಸುತ್ತಲು ಅವಕಾಶ ಮಾಡಿಕೊಡ್ತಿದ್ದಾರೆ. ಬೆಂಗಳೂರಿನಲ್ಲಿ ಡಾ. ಬ್ರೋ ಹೊಸ ಕಚೇರಿ ಶುಭಾರಂಭ ಕಂಡಿದೆ. 

ವಿಜಯನಗರದಲ್ಲಿ ಡಾಕ್ಟರ್ ಬ್ರೋ, ಗೋ ಪ್ರವಾಸ (gopravasa) ಹೆಸರಿನ ಕಚೇರಿ ತೆರೆದಿದ್ದಾರೆ. 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿಯೇ ಡಾ. ಬ್ರೋ ಅವರ ಕಚೇರಿ ಉದ್ಘಾಟನೆಯಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಕಚೇರಿ ಮುಂದೆ ನಿಂತಿರುವ ಪೋಸ್ಟ್ ಹಾಕಿದ ಗಗನ್, 78ನೇ ಸ್ವಾತಂತ್ರ್ಯ ದಿನದಂದು 🇮🇳 ಗೋ ಪ್ರವಾಸದ ಹೊಸ ಆಫೀಸ್ ಅನ್ನು ವಿಜಯನಗರದಲ್ಲಿ ತೆರೆಯಲಾಗಿದೆ. ಪ್ರಯಾಣದ ಉತ್ಸಾಹಿ ಜನರ ಭಾಗವಾಗಲು ನನಗೆ ಖುಷಿಯಾಗ್ತಿದೆ ಎಂದು ಶೀರ್ಷಿಕೆ ಹಾಕಿದ್ದಾರೆ.

ಮಸ್ತ್​ ಮಸ್ತ್​ ಹುಡುಗಿ ಬಂದ್ಲು... ಉಪ್ಪಿ ಗೆಟಪ್​ನಲ್ಲಿ ಆರ್ಯವರ್ಧನ್​ ಗುರೂಜಿ ಡಾನ್ಸ್​ ಹೇಗಿದೆ? ಇಲ್ಲಿದೆ ವಿಡಿಯೋ

ಡಾ. ಬ್ರೋ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಅಪ್ಪಟ ಕನ್ನಡಿಗನ ಯುಟ್ಯೂಬ್ ಚಾನೆಲ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈಗ ಹೊಸ ಬ್ಯುಸಿನೆಸ್ ಗೂ ಬೆಂಬಲ ನೀಡುವುದಾಗಿ ಅಭಿಮಾನಿಗಳು ಭರವಸೆ ನೀಡಿದ್ದಾರೆ. ನಿಮ್ಮ ಕೆಲಸಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದ ಜನರು, ಗಗನ್ ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಬಟನ್ ಒತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಟ್ರಾವೆಲ್ ವಿಡಿಯೋ ಮಾಡೋದನ್ನು ನಿಲ್ಲಿಸಬೇಡಿ ಅಂತ ಮನವಿ ಕೂಡ ಮಾಡಿದ್ದಾರೆ. 

ಸ್ವಾತಂತ್ರ್ಯ ದಿನದಂದು ಗೋ ಪ್ರವಾಸ ಕಂಪನಿ ಉದ್ಘಾಟನೆಯಾದ್ರೂ ಡಾ. ಬ್ರೋ ಗಗನ್, ಇದಕ್ಕಿಂತ ಮೊದಲೇ ಅನೇಕ ಪ್ರವಾಸಿಗರಿಗೆ ತಮ್ಮ ಪ್ಲಾನ್ ರುಚಿ ತೋರಿಸಿದ್ದಾರೆ. ಈ ಹಿಂದೆ ಗೋ ಪ್ರವಾಸದ ಟೀಂ ಜೊತೆ ಪ್ರವಾಸಕ್ಕೆ ಹೋಗಿ ಬಂದ 100ಕ್ಕೂ ಹೆಚ್ಚು ಮಂದಿ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆ ರೇಟಿಂಗ್ಸ್ ಕೂಡ ನೀಡಿದ್ದಾರೆ. ಗೋ ಪ್ರವಾಸ ತಂಡದ ಮುಂದಿನ ಟೂರ್, ಥೈಲ್ಯಾಂಡ್. 

ಇನ್ಸ್ಟಾಗ್ರಾಮ್ ನಲ್ಲಿ ಗಗನ್, ಥೈಲ್ಯಾಂಡ್ ಟ್ರಿಪ್ ಬಗ್ಗೆ ಇತ್ತೀಚಿಗಷ್ಟೆ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 26ರಿಂದ ಸೆಪ್ಟೆಂಬರ್ 30ರವರೆಗೆ ಥೈಲ್ಯಾಂಡ್ ಗೆ ಹೋಗುವ ಅವಕಾಶವನ್ನು ಗೋ ಪ್ರವಾಸ ನೀಡ್ತಿದೆ. 20 ಸಾವಿರ ರೂಪಾಯಿ ನೀಡಿ ಪ್ಯಾಕೇಜ್ ಬುಕ್ ಮಾಡ್ಬೇಕು. 65 ಸಾವಿರಕ್ಕೆ ಥೈಲ್ಯಾಂಡ್ ಸುತ್ತಿ ಬರಬಹುದು ಎಂದಿದ್ದಾರೆ ಗಗನ್. ಕನ್ನಡದ ಮ್ಯಾನೇಜರ್ ಜೊತೆ ಕ್ಯಾಮರಾಮೆನ್ ಕೂಡ ಈ ಪ್ರವಾಸದಲ್ಲಿ ಪ್ರವಾಸಿಗರ ಜೊತೆಗಿರ್ತಾರೆ. ಗೋ ಪ್ರವಾಸಕ್ಕೆ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಯಾಕೆಂದ್ರೆ ಗಗನ್ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಯಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ. 

ಗಗನ್ ತಂಡ ಹಿಂದೆ ಬಾಲಿ ಟ್ರಿಪ್ ಕೈಗೊಂಡಿತ್ತು. ಅದ್ರ ವಿಡಿಯೋವನ್ನು ಕೂಡ ಗಗನ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಗಗನ್, ಪ್ರವಾಸಿಗರ ಜೊತೆ ಸ್ಕಂದಗಿರಿಗೆ ಹೋಗಿದ್ರು.  ಡಾಕ್ಟರ್ ಬ್ರೋ ಗೋ ಪ್ರವಾಸದಲ್ಲಿ ಬ್ಯುಸಿ ಇರುವ ಕಾರಣ ಯುಟ್ಯೂಬ್ ನಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿಲ್ಲ. ನಾಲ್ಕು ವಾರಗಳ ಹಿಂದೆ ಹಿಸ್ ಬುಲ್ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದರು. 

tamanna beauty tips : ತಮನ್ನಾ ತರ ಬ್ಯೂಟಿಫುಲ್ ಆಗಬೇಕು ಅಂದ್ರೆ ಸಿಂಪಲ್, ಮುಖಕ್ಕೆ ಎಂಜಲು ಹಚ್ಕೊಳ್ಳಿ!?

ಗಗನ್, ಡಾಕ್ಟರ್ ಬ್ರೋ ಹೆಸರಿನಲ್ಲಿ 2018ರಲ್ಲಿ ಯುಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ಆರಂಭದಲ್ಲಿ ಹಾಸ್ಯದ ವಿಡಿಯೋ ಹಾಕ್ತಿದ್ದ ಅವರು ನಂತ್ರ ಪ್ರವಾಸದ ವಿಡಿಯೋ ಹಂಚಿಕೊಳ್ಳಲು ಶುರು ಮಾಡಿದ್ರು. ಗಗನ್ ವಿಡಿಯೋ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿರುತ್ತಾರೆ. ಅವರು ಸ್ವಲ್ಪದಿನ ಕಾಣಲಿಲ್ಲ ಎಂದ್ರೂ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹಬ್ಬುತ್ತೆ. ಬಿಗ್ ಬಾಸ್ ಹಿಂದಿನ ಸರಣಿಯಲ್ಲಿ ಅವರು ಕಾಣಿಸಿಕೊಳ್ತಾರೆ ಎನ್ನುವ ಸುದ್ದಿ ಇತ್ತು. ಈ ಬಾರಿಯಾದ್ರೂ ಅವರಿಗೆ ಅವಕಾಶ ಸಿಗುತ್ತಾ ಎಂಬ ಆಸೆಯೊಂದು ಅಭಿಮಾನಿಗಳಲ್ಲಿದೆ. 

Latest Videos
Follow Us:
Download App:
  • android
  • ios