* ಕೊರೋನಾ ಕಾಲದಲ್ಲಿ  ಬೈಯುತ್ತಾ ಬೆಂಗಳೂರು ತೊರೆದವರಿಗೊಂದು ಹಾಡು* ಶನಿವಾರ ಸಂಜೆ  6ಕ್ಕೆ  ಲೋಕಾರ್ಪಣೆ* ಯುವ ಪ್ರತಿಭೆ ತಿಮ್ಮೇಗೌಡ ಹೊಸ ಪ್ರಯತ್ನ* ಯೂಟ್ಯೂಬ್ ನಲ್ಲಿ ಟ್ಯೂನ್ ಮಾಡಲು ಮರೆಯಬೇಡಿ

ಬೆಂಗಳೂರು(ಜೂ. 05) ಜೀವನ ಕಟ್ಟಿಕೊಳ್ಳಲು ನಗರಕ್ಕೆ ಬರುವುದು ತಪ್ಪಲ್ಲ, ಬಂದು ಪರಿಶ್ರಮದಿಂದ ದುಡಿಯುವುದು ತಪ್ಪಲ್ಲ.. ಹಣ ಗಳಿಸುವುದು ತಪ್ಪೇ ಅಲ್ಲ.. ಆದರೆ ಸಂಕಷ್ಟದ ಸಂದರ್ಭವೊಂದು ಎದುರಾದಾಗ ತನಗೆ ಇಷ್ಟು ವರ್ಷ ಆಶ್ರಯ ನೀಡಿದ್ದ, ಊರಿನಲ್ಲಿ ಮನೆ ಕಟ್ಟಲು ಬೇಕಾದ ಬಂಡವಾಳ ದುಡಿತಕ್ಕೆ ಕಾರಣವಾಗಿದ್ದ ಮಹಾನಗರವನ್ನೇ ಬಾಯಿಗೆ ಬಂದಂತೆ ಬೈದರೆ ಹೇಗೆ?

ಕೊರೋನಾ ವಕ್ಕರಿಸಿತು, ಕಾಡಿತು, ಬದುಕು ಕಸಿದುಕೊಂಡಿತು.. ಒಪ್ಪತ್ತಿನ ಊಟಕ್ಕೆ ಸಂಕಷ್ಟ ತಂದಿತು... ಇದು ಕೊರೋನಾದ ಒಂದು ಮುಖ. ಆದರೆ ಇದೇ ಕಾರಣಕ್ಕೆ ಬೆಂಗಳೂರನ್ನು ತೊರೆದವರು ಹಲವು ಮಂದಿ. ರೋಗದ ಭಯಕ್ಕೆ ಸುರಕ್ಷಿತ ತಾಣ ಎಂದೂ ತಮ್ಮೂರಿಗೆ ಹೋಗಿರಬಹುದು.. ಇದೂ ತಪ್ಪಲ್ಲ.. ಆದರೆ!

ಜೀವನದದಲ್ಲಿ ಕಂಡಿದ್ದ ಕನಸುಗಳಿಗೆ ಆಶ್ರಯ ನೀಡಿದ್ದ ಬೆಂಗಳೂರನ್ನು ಬೈದುಕೊಂಡು ಜಾಗ ಬಿಟ್ಟವರಿಗೆ ಬಿಸಿ ಮುಟ್ಟಿಸುವ ಸಣ್ಣ ಪ್ರಯತ್ನವೇ Don't Blame Bengaluru'. ಬೆಂಗಳೂರನ್ನು ಬೈದುಕೊಂಡು ಜಾಗ ಖಾಲಿ ಮಾಡಿದವರಿಗೆ ತಿಳಿವಳಿಕೆಯೊಂದಿಗೆ ಆತ್ಮವಿಮರ್ಶಗೆ ಹಚ್ಚುವ ಯತ್ನವೇ Don't Blame Bengaluru'. ನಮ್ಮ ಎಚ್ಚರಿಕೆ ಮೀರಿ ನಡೆದುಕೊಂಡು ವ್ಯವಸ್ಥೆ ಹಳಿಯುತ್ತ ಕಾಲುಕಿತ್ತವರ ಕಾಲೆಳೆಯುವುದೇ Dont Blame Bengaluru.

ಕೊರೋನಾ ವಾರಿಯರ್ಸ್ ಗೆ ಸುಶೀಲ್ ಸಾಗರ್ ತಂಡದ ಧನ್ಯವಾದ

ನಟ ವಸಿಷ್ಠ ಸಿಂಹ, ಅನಿರುದ್ಧ್, ನಟಿ ಪ್ರಣೀತಾ ಸುಭಾಷ್, ಸೋನುಗೌಡ, ಹರ್ಷಿಕಾ ಪೂಣಚ್ಚ, ರೂಪಿಕಾ, ಗಾಯಕರಾದ ಅನುರಾಧಾ ಭಟ್, ಡಾ. ಶಮಿತಾ ಮಲ್ನಾಡ್, ಸಂತೋಷ್ ವೆಂಕಿ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖರ ಬಳಿ ಸಂಗೀತ ಅಧ್ಯಯನ ಮಾಡಿರುವ ತಿಮ್ಮೇಗೌಡರ ಮೊದಲ ಪ್ರಯೋಗ ಇದು . ಹಾಡಿಗೆ ದನಿಯನ್ನು ಅಶ್ವಿನ್ ಶರ್ಮಾ ನೀಡಿದ್ದರೆ ಸಂಗೀತ ನಿರ್ಮಾಣ ಪಂಕಜ್ ಲಲ್ಗೆ ಅವರದ್ದು. ಕ್ರಿಯೆಟಿವ್ ಹೆಡ್ ಆಗಿ ಅಭಿಷೇಕ್ ಕಾರ್ಯನಿರ್ವಹಿಸಿದರೆ ಪ್ರೋಡಕ್ಷನ್ ಜವಾಬ್ದಾರಿಯನ್ನು ಮಮತಾ ಮರ್ದಳಾ ಹೊತ್ತುಕೊಂಡಿದ್ದು ಕಿರಣ್ ಎಡಿಟಿಂಗ್ ಕೆಲಸ ಮಾಡಿ ಮುಗಿಸಿದ್ದಾರೆ. 

YouTube video player

Don't Blame Bengaluru' ಹಾಡು ಯೂಟ್ಯೂಬ್ ನಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಕುರಿ ಖ್ಯಾತಿಯ ಆರ್‌ಜೆ ಸುನೀಲ್ ಮಾತುಗಳನ್ನೇ ಆಧಾರವಾಗಿಟ್ಟುಕೊಂಡು ಯುವ ಪ್ರತಿಭೆ ತಿಮ್ಮೇಗೌಡ ಸಾಹಿತ್ಯ-ಸಂಗೀತ- ಸಂಯೋಜನೆಯಲ್ಲಿ Don't Blame Bengaluru' ಹಾಡು ಯೂಟ್ಯೂಬ್ ನಲ್ಲಿ ತೆರೆಕಾಣಲಿದೆ. ಜೂನ್ 5 ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರ ಬೈದವರಿಗೆ ಹುಳಿ-ಉಪ್ಪು-ಖಾರ ಸೇರಸಿ ಬುದ್ಧಿ ಹೇಳುವ ಕೆಲಸವಾಗಲಿದೆ. ಹಾಂ.. ಟ್ಯೂನ್ ಮಾಡಲು ಮರೆಯಬೇಡಿ.. ಮೆಚ್ಚುಗೆಯಾಗುತ್ತದೆ ಎಂದು ನಂಬಿದ್ದೇವೆ.. ಮೆಚ್ಚುಗೆಯಾದರೆ ಅಪ್ಪಿ-ಒಪ್ಪಿಕೊಂಡು ಹಾರೈಸಿ.. ಆಶೀರ್ವದಿಸಿ.. ಒಪ್ಪಿಗೆಯಾಗದಿದ್ದರೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ.. ಕೊನೆಯದಾಗಿ ಮತ್ತೊಮ್ಮೆ ಹೇಳ್ತಿದ್ದೇವೆ Don't Blame Bengaluru'!